14/10/2025
ಹೇಗಿದ್ದೀರಾ ಫ್ರೆಂಡ್ಸ್? ತಿಂಡಿ ಆಯಿತಾ.. ಏನು ತಿಂಡಿ?
ನನಗೆ ಊದಲು ದೋಸೆ (ಸಿರಿಧಾನ್ಯ ) - ಬೀನ್ಸ್ ಪಲ್ಯ
ಸಿಹಿ ಗೆಣಸು ಬೇಯಿಸಿದ್ದು
ಪೇರಳೆ
ಡ್ರೇಗನ್ ಹಣ್ಣು
ಪಪ್ಪಾಯ ಹಣ್ಣು
ಬಾಳೆಹಣ್ಣು
ಒಂದು ಪೋಷಕಾಂಷಭರಿತ ಉಪಹಾರ ಅನ್ನಬಹುದೇ ಇದನ್ನು? 🥄🥄🥄🥰👌👌😋
ಸಿರಿಧಾನ್ಯ ಊದಲು ದೋಸೆ
ರಾತ್ರಿಯೇ 1ಕಪ್ ಊದಲು, ಅದರ ಜೊತೆಗೆ 2 ದೊಡ್ಡ ಚಮಚ ಹುರುಳಿ ಕಾಳು, 2 ದೊಡ್ಡ ಚಮಚ ಹೆಸರು ಕಾಳು, 1ಚಮಚ ಅಲಸಂಡೆ ಕಾಳು, 2ದೊಡ್ಡ ಚಮಚ ರಾಗಿ ಚೆನ್ನಾಗಿ ತೊಳೆದು ಎಲ್ಲವನ್ನೂ ಒಟ್ಟಿಗೆ ನೆನೆಯಲು ಹಾಕಿದೆ. 1 Tspn ಮೆಂತೆ ತೊಳೆದು ಬೇರೇನೇ ನೆನೆ ಹಾಕಿದೆ.
ಬೆಳಿಗ್ಗೆ ನೆನೆಸಿದ ಮೆಂತೆ ನೀರು ಸಮೇತ ಮಿಕ್ಸಿ ಜಾರಿಗೆ ಹಾಕಿದೆ. ನಂತರ ಊದಲು ಹಾಗೂ ಕಾಳುಗಳನ್ನು ಕೂಡಾ ತೊಳೆದು ಮಿಕ್ಸಿ ಜಾರಿಗೆ ಹಾಕಿದೆ. ರುಚಿಗೆ ಉಪ್ಪು, ಸ್ವಲ್ಪ ನೀರು, 1/4ಕಪ್ ತೆಂಗಿನ ತುರಿ ಹಾಕಿ ನುಣ್ಣಗೆ ರುಬ್ಬಿ ಬೌಲ್ ಗೆ ಹಾಕಿ ಅದಕ್ಕೆ ತುರಿದ 1/4ಕಪ್ ತೆಂಗಿನ ತುರಿ ಸೇರಿಸಿ ಎಣ್ಣೆ ಸವರಿ ಬಿಸಿಯಾದ ಕಾವಲಿಗೆ ಅರ್ಧ ಸೌಟು ಹಿಟ್ಟು ಹಾಕಿ ಮುಚ್ಚಳ ಮುಚ್ಚಿ ಬೇಯಿಸಿ ತಿರುಗಿಸಿ ಹಾಕಿ ಮತ್ತೆ ಬೇಯಿಸಿ ಕಾವಲಿಯಿಂದ ತೆಗೆಯುವಾಗ ಸ್ವಲ್ಪ ತುಪ್ಪ ಸವರಿಕೊಂಡೆ.. ತಿನ್ನಲು ಆರೋಗ್ಯಕರ ಹಾಗೂ ಅಷ್ಟೇ ರುಚಿಯೂ.... 🥰