25/09/2025
ಆನೇಕಲ್ ಪಟ್ಟಣದಲ್ಲಿರುವ ಆನೇಕಲ್ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ 2024-25ನೇ ಸಾಲಿನ ಸರ್ವ ಸದಸ್ಯರ ಸಾಮಾನ್ಯ ಸಭೆಯನ್ನು ಆಯೋಜಿಸಲಾಗಿತ್ತು.
ಇನ್ನು ಸಾಮಾನ್ಯ ಸಭೆಯ ಅಧ್ಯಕ್ಷತೆಯನ್ನು ಆನೇಕಲ್ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷರಾದ ಹೆನ್ನಾಗರ ಹಾಪ್ ಕಾಮ್ಸ್ ಬಾಬುರೆಡ್ಡಿ ರವರು ವಹಿಸಿದ್ದರು.
ಇನ್ನು ಸಭೆಯಲ್ಲಿ ಸಂಘದ ಸದಸ್ಯರು ತಮ್ಮ ತಮ್ಮ ಸಮಸ್ಯೆಯನ್ನು ಹೇಳಿಕೊಂಡ ದೃಶ್ಯ ಕಂಡು ಬಂತು ಹಾಗೆಯೇ ಸಂಘದ ಅಧ್ಯಕ್ಷರಾದ ಹಾಪ್ ಕಾಮ್ಸ್ ಬಾಬುರೆಡ್ಡಿ ರವರು ಮಾತನಾಡಿ ಸಂಘದ ಸದಸ್ಯರು ತಿಳಿಸಿರುವ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆ ಹರಿಸುತ್ತೇವೆ ಎಂದು ಭರವಸೆ ನೀಡಿದರು.
ಇನ್ನು ಸಾಮಾನ್ಯ ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಮುನಿಚೌಡಪ್ಪ. ನಿರ್ದೇಶಕರುಗಳಾದ ವೆಂಕಟಸ್ವಾಮಿ. ರಾಮಕೃಷ್ಣಪ್ಪ. ತಿಲಕ್ ಕುಮಾರ್. ವಿನೀತ್. ಮುರಳಿಕೃಷ್ಣ, ಮಂಜುನಾಥ್. ಗಿರಿಜಮ್ಮ. ನೇತ್ರ ದನುಂಜಯ್ಯ. ಶಿವಾನಂದ. ಹರೀಶ್. ಬಿಜೆ ಆಂಜಿನಪ್ಪ. ವೆಂಕಟೇಶ್. ಮುಖ್ಯ ಕಾರ್ಯ ನಿರ್ವಾಹಣಾದಿಕಾರಿ ತಿಲಕ್ ಮತ್ತು ಗಣ್ಯರು ಹಾಗೂ ಸಿಬ್ಬಂದಿ ವರ್ಗದವರು ಮತ್ತು ಸಂಘದ ಸದಸ್ಯರು ಬಾಗವಹಿಸಿದ್ದರು.