13/09/2023
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು
Yellow gangs (Kannada ,2022, MX player)
ಗೆಳೆಯರೊಬ್ಬರು ಪೋಸ್ಟ್ ಹಾಕದಿದ್ರೆ ಈ ಸಿನಿಮಾ ಬಂದಿರುವುದೇ ನನಗೆ ಗೊತ್ತಾಗುತ್ತಿರಲಿಲ್ಲ.
ಒಳ್ಳೆಯ ನಿರ್ದೇಶಕ ಮತ್ತು ಗಟ್ಟಿಯಾದ ಚಿತ್ರಕಥೆ ಇದ್ದರೆ ಕಡಿಮೆ ಬಡ್ಜೆಟ್ ಇದ್ದರೂ ಸಿನಿಮಾ ಹೇಗೆ ಕೂರಿಸಿಕೊಂಡು ನೋಡುತ್ತದೆ ಎಂಬುದಕ್ಕೆ ಸಾಕ್ಷಿ ಈ ಸಿನಿಮಾ.
ಡ್ರಗ್ ಡೀಲ್ ಒಂದು ನಡೆದಿದೆ. ಡ್ರಗ್ ಕೊಂಡೊಯ್ದ ಡೀಲರ್‌ಗಳ ಗಾಡಿ ಅಪಘಾತಕ್ಕೀಡಾಗಿದೆ. ಪೋಲಿಸರಿಗೆ ಅಷ್ಟು ದೊಡ್ಡ ಮೊತ್ತದ ಹಣ ಎಲ್ಲಿ ಹೋಯಿತು ಎಂಬ ಪ್ರಶ್ನೆ? ಇತ್ಲಾಗಿ ವಿರೋಧಿ ಗ್ಯಾಂಗ್‌ಗಳೂ ಇದರ ಹಿಂದಿದ್ದಾರೆ. ಇದರ ನಡುವೆ ಪೋಲಿಸೊಬ್ಬನ ಪ್ರಣಯ ಅವನಿಗೆ ರೌಡಿಯೊಬ್ಬ ವಹಿಸಿದ ಕೆಲಸ, ನಡುವೆ ಜ್ಯುವೆಲ್ಲರಿ ಷಾಪೊಂದರಿಂದ ಚಿನ್ನ ಕದಿಯುವ ಸ್ಕೀಮು ಇವೆಲ್ಲ ಹೇಗೆ ಒಂದಕ್ಕೊಂದು ಕನೆಕ್ಟ್ ಆಗಿದೆ ಎಂಬುದನ್ನು ಸಿನಿಮಾ ನೋಡಿ ತಿಳಿಯಬೇಕು.
ಸಂಭಾಷಣೆಗಳು ,ಪಾತ್ರಗಳ ತೋರಿಸಿದ ರೀತಿ, ಚಂದ ಕಾಣುವ ನಾಯಕಿ ಪಾತ್ರ , ಕತೆ ತಗೊಂಡು ಹೋದ ರೀತಿ ಇಷ್ಟವಾಗುತ್ತದೆ.
ಸ್ಲೋ ಮೋಷನ್‌ಗಳು ಕೊಂಚ ಜಾಸ್ತಿಯಾಯಿತು ಅನಿಸಿದರೂ ಸಿನಿಮಾಗೆ ಅದು ಜಾಸ್ತಿ ಅನಿಸಲಿಲ್ಲ.
ಒಂದು ಕಡೆಯಿಂದ 'ನೇರಮ್' ಸಿನಿಮಾವನ್ನೂ ಇನ್ನೊಂದು ಕಡೆಯಿಂದ 'ಜಿಲ್ ಜಂಗ್ ಜುಕ್' ಸಿನಿಮಾವನ್ನೂ ಇದು ನೆನಪಿಸಿತು.
ಬಹಳ ಒಳ್ಳೆಯ ಪ್ರಯತ್ನ.
ಒಳ್ಳೆ ಬಂಡವಾಳ ಹೂಡುವವರು ಸಿಕ್ಕರೆ ನಿರ್ದೇಶಕರಿಗೆ ಕೆಲಸ ಗೊತ್ತಿರುವ ಕಾರಣ ಇನ್ನೂ ಪ್ರಚಂಡ ಸಿನಿಮಾಗಳ ತೆಗೆಯಬಲ್ಲರು ಅನಿಸಿತು
ರೇಟಿಂಗ್ 8/10.
ಇದು MX player app ಅಲ್ಲಿ ಫ್ರೀಯಾಗಿ ಸಿಗುತ್ತಿದೆ.