Nanna kanasu vlog mamatha

Nanna kanasu vlog mamatha hello friends ,
please follow our page for health and beauty tips videos
(8)

09/08/2025

ಜ್ಞಾನ ಮುದ್ರೆ

08/08/2025

🙏🙏🙏

08/08/2025

ಸರ್ವರಿಗೂ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು ದೇವರು ನಿಮ್ಮೆಲ್ಲರಿಗೂ ಉತ್ತಮವಾದ ಆರೋಗ್ಯ ಐಶ್ವರ್ಯವನ್ನು ಕೊಟ್ಟು ಕಾಪಾಡಲಿ🙏🙏🙏🙏

06/08/2025

ಒಂದು ಚಮಚ ಸೇವಿಸಿ ಕನ್ನಡಕವನ್ನೇ ತೆಗೆದು ಬಿಸಾಕುತ್ತಿರಾ! ನಿಮ್ಮ ಕಣ್ಣಿನ ದೃಷ್ಟಿ ಹೆಚ್ಚುತ್ತದೆ improve eyesight

"ಒಂದು ಅದ್ಭುತವಾದ ನೀತಿ ಕಥೆ"ಒಮ್ಮೆ, ಶ್ರೀಕೃಷ್ಣದೇವರಾಯ ತನ್ನ ಸಾಕು ನಾಯಿಯೊಂದಿಗೆ ದೊಡ್ಡ ದೋಣಿಯಲ್ಲಿ ಪ್ರಯಾಣಿಸುತ್ತಿದ್ದನು. ನಾಯಿ ಬೊಗಳುತ್ತಾ...
06/08/2025

"ಒಂದು ಅದ್ಭುತವಾದ ನೀತಿ ಕಥೆ"

ಒಮ್ಮೆ, ಶ್ರೀಕೃಷ್ಣದೇವರಾಯ ತನ್ನ ಸಾಕು ನಾಯಿಯೊಂದಿಗೆ ದೊಡ್ಡ ದೋಣಿಯಲ್ಲಿ ಪ್ರಯಾಣಿಸುತ್ತಿದ್ದನು. ನಾಯಿ ಬೊಗಳುತ್ತಾ ಗದ್ದಲ ಮಾಡುತ್ತಿತ್ತು,ನಾಯಿಯನ್ನು ನಿಯಂತ್ರಿಸಲು ಅವರೊಂದಿಗೆ ಆ ದೋಣಿಯಲ್ಲಿದ್ದ ಯಾರಿಗೂ ಸಾಧ್ಯವಾಗಲಿಲ್ಲ . ತೆನಾಲಿ ರಾಮಕೃಷ್ಣ ಮುಂದೆ ಬಂದು, "ಮಹಾರಾಜರು ನನಗೆ ಅವಕಾಶ ನೀಡಿದರೆ, ನಾನು ನಾಯಿಯನ್ನು ನಿಯಂತ್ರಿಸುತ್ತೇನೆ" ಎಂದು ಹೇಳಿದರು. ರಾಯರು ಸರಿ ಎಂದರು.

ತೆನಾಲಿ ರಾಮಕೃಷ್ಣ ತಕ್ಷಣ ನಾಯಿಯನ್ನು ನದಿಗೆ ಎಸೆದುಬಿಟ್ಟ. ನಾಯಿ ಜೀವ ಭಯದಿಂದ ಈಜುತ್ತಲಿತ್ತು. ಸ್ವಲ್ಪ ಸಮಯದ ನಂತರ, ತೆನಾಲಿ ರಾಮಕೃಷ್ಣ ನಾಯಿಯನ್ನು ಮತ್ತೆ ದೋಣಿಯೊಳಗೆ ಕರೆತಂದರು. ಅಷ್ಟೇ,,!ನಾಯಿ ಒಂದು ಮೂಲೆಗೆ ಹೋಗಿ ಬೊಗಳದೆ, ಗಲಾಟೆ ಮಾಡದೆ ಕುಳಿತಿತು. ಆಶ್ಚರ್ಯಚಕಿತರಾದ ರಾಯರು, "ರಾಮಕೃಷ್ಣರೇ, ನೀವು ಏನು ತಂತ್ರ ಮಾಡಿದಿರಿ?" ನಾಯಿ ಈಗ ತೆಪ್ಪಗೆ ಕುಳಿತಿದೆ ಎಂದು ಕೇಳಿದರು. ರಾಮಕೃಷ್ಣ ನಗುತ್ತಾ ಹೇಳಿದ, "ಮಹಾರಾಜ, ಈ ಜಗತ್ತಿನಲ್ಲಿ, ಪ್ರತಿಯೊಬ್ಬರೂ ತಮ್ಮ ಪ್ರಸ್ತುತ ಪರಿಸ್ಥಿತಿಯಿಂದ ತೃಪ್ತರಾಗುವುದಿಲ್ಲ ಮತ್ತು ಇನ್ನೂ ಹೆಚ್ಚಿನದನ್ನು ಹಂಬಲಿಸುತ್ತಾರೆ. ನೀರಿಗೆ ಎಸೆದ ನಂತರ, ನಾಯಿಯು ತಾನು ಮೊದಲು ಎಷ್ಟು ಸುರಕ್ಷಿತ ಎಂದು ಅರಿತುಕೊಂಡಿತು ಮತ್ತು ಅದಕ್ಕೆ ಜ್ಞಾನೋದಯವಾಯಿತು." "ಅದರoತೆಯೇ, ನಾವು ನಮ್ಮ ಮಕ್ಕಳಿಗೆ ಎಷ್ಟೇ ಸೌಲಭ್ಯಗಳನ್ನು ಒದಗಿಸಿದರೂ, ಅವರು ಅವುಗಳ ಮೌಲ್ಯವನ್ನು ಅರ್ಥಮಾಡಿಕೊಳ್ಳುವುದಿಲ್ಲ. ಆದ್ದರಿಂದ, ಯಾವುದೇ ಸೌಲಭ್ಯಗಳಿಲ್ಲದೆ ಬದುಕುವ ಸಮಾಜದಲ್ಲಿ ಎದುರಿಸಬೇಕಾದ ಕಷ್ಟಗಳ ಬಗ್ಗೆ ಅವರುಗಳಿಗೆ ಪರಿಚಯವಾಗುವಂತೆ ಬೆಳೆಸಬೇಕು ಎಂದನು.

06/08/2025

ಹೊಟ್ಟೆಯ ಭಾಗದ ಬೊಜ್ಜು ಕರಗಲು ಈ ಎಣ್ಣೆಯಿಂದ ಮಸಾಜ್ ಮಾಡಿ ನೀವೇ ಮನೆಯಲ್ಲಿ ತಯಾರಿಸಿಕೊಳ್ಳಬಹುದು ಹೊಟ್ಟೆ ಭಾಗದಲ್ಲಿರುವ ಸ್ಟ್ರೆಚ್ ಮಾರ್ಕ್ಸ್ ಕೂಡ ನಿವಾರಣೆ ಆಗುತ್ತೆ

05/08/2025
(ದೇವರು ಪ್ರತ್ಯಕ್ಷನಾಗಿ ನಮಗೆ ಹೀಗೂ ಹೇಳಬಹುದು)ಉಳ್ಳವರು ಶಿವಾಲಯವ ಮಾಡುವರು ನಾನೇನು ಮಾಡಲಿ ಬಡವನಯ್ಯ🙏🙏.    ದೇವರು ಯಾವಾಗಲೂ ನನಗೆ ಇದೇ ರೀತಿ ಪ...
04/08/2025

(ದೇವರು ಪ್ರತ್ಯಕ್ಷನಾಗಿ ನಮಗೆ ಹೀಗೂ ಹೇಳಬಹುದು)

ಉಳ್ಳವರು ಶಿವಾಲಯವ ಮಾಡುವರು ನಾನೇನು ಮಾಡಲಿ ಬಡವನಯ್ಯ🙏🙏.

ದೇವರು ಯಾವಾಗಲೂ ನನಗೆ ಇದೇ ರೀತಿ ಪೂಜೆ ಸಲ್ಲಿಸಬೇಕು ಎಂಬುವ ನಿಯಮವನ್ನ ಮಾಡೇ ಇಲ್ಲ ಅಥವಾ ಇದೇ ಒಂದು ಸ್ಥಳಕ್ಕೆ ಬಂದು ನನ್ನ ಪೂಜಿಸಬೇಕು ಎಂಬುವ ನಿಯಮವನ್ನು ಹೇಳಿಲ್ಲ ಆದರೂ ಈ ದೇವಸ್ಥಾನ ಎನ್ನುವುದು ಒಂದು ವ್ಯವಹಾರ ಆಗಿ ಹೋಗಿದೆ ಒಂದು ರೀತಿ ನಾವೆಲ್ಲರೂ ಮೂಡರೆ ಆಗಿಬಿಟ್ಟಿದ್ದೇವೋ ಏನು ಎಂದು ನನಗೆ ಬಹಳಷ್ಟು ಸಲ ಅನ್ನಿಸುತ್ತೆ....

ಬಸವಣ್ಣನವರು ಹೇಳಿದ ಮಾತು ಎಂದು ಸುಳ್ಳಲ್ಲ ಎನ್ನ ಕಾಲೇ ಕಂಬ ದೇಹವೇ ದೇಗುಲ ಶಿರವೇ ಹೊನ್ನ ಕಳಸವಯ್ಯ...
ಅಕ್ಷರಸಹ ಇದು ಸತ್ಯ ಆದರೆ ಇದನ್ನ ಅರಿತು ಬಾಳುವವರೆಷ್ಟು ಇದನ್ನ ಜೀವನದಲ್ಲಿ ರೂಡಿಸುವವರೆಷ್ಟು ಅತಿ ಕಡಿಮೆ ಅತಿ ವಿರಳ ಎನಿಸುತ್ತದೆ.....

ಯಾವುದೇ ಒಂದು ವಿಷಯವನ್ನು ತೆಗೆದುಕೊಂಡರೆ ಅದರ ಬಗ್ಗೆ ಪರವಾಗಿ ಮಾತನಾಡುವವರು ವಿರೋಧವಾಗಿ ಮಾತನಾಡುವವರು ಇಬ್ಬರೂ ಇರುತ್ತಾರೆ ಹೀಗಿದ್ದಾಗ ಯಾವುದೇ ಒಂದು ತೀರ್ಮಾನಕ್ಕೆ ಬರಲು ಅಥವಾ ಸಮಾಜದಲ್ಲಿ ಪ್ರತಿಯೊಬ್ಬರು ಒಂದನ್ನೇ ಪಾಲಿಸಲು ಸಾಧ್ಯವಾಗುವುದಿಲ್ಲ....
ಸಮಾಜದಲ್ಲಿ ನಡೆಯುತ್ತಿರುವ ಕೆಲವೊಂದು ಘಟನೆಗಳಿಗೆ ಈ ರೀತಿ ಮನಸ್ಥಿತಿಗಳೇ ಕಾರಣ ಒಳ್ಳೆಯ ವಿಷಯಗಳ ಬಗ್ಗೆ ಪರವಾಗಿ ಎಲ್ಲರೂ ನಿಲ್ಲಬೇಕು ಅಗತ್ಯವಿಲ್ಲದ ಕೆಟ್ಟ ವಿಷಯಗಳಿಗೆ ಎಲ್ಲರೂ ವಿರೋಧವಾಗಿ ನಿಲ್ಲಬೇಕು ಆಗ ಮಾತ್ರ ಸಮಾಜ ಬದಲಾಗುತ್ತೆ ಮನುಷ್ಯ ಬದಲಾಗಲಿ ಎಂದು ಬಯಸುತ್ತಾನೆ ಹೊರತು ತಾನು ಬದಲಾಗಬೇಕು ಎಂದು ಯೋಚಿಸುವುದಿಲ್ಲ ....

ದೇವರೇನಾದರೂ ಪ್ರತ್ಯಕ್ಷನಾದರೆ ಅವನು ಹೇಳುವ ಮಾತು ಹೀಗಿರಬಹುದು ಎಂದು ನನಗನಿಸುತ್ತೆ .....🤔🤔🤔
ಮನುಷ್ಯ ನಿನಗೆ ಎಲ್ಲವನ್ನೂ ಕೊಟ್ಟಿದ್ದೇನೆ ನಾನಾದರೂ ನಿರಾಕಾರ ರೂಪ ನಿನಗೆ ದೇಹವನ್ನು ಕೊಟ್ಟಿದ್ದೇನೆ ಆದರೂ ನೀನು ಮಾತ್ರ ಮೂಢನಾಗಿ ಬದುಕುತ್ತಿರುವೆ ಅನ್ಯರನ್ನ ನೋಡಿ ಏನು ತಿಳಿಯದೆ ಅವರನ್ನು ಅನುಸರಿಸುತ್ತಿರುವೆ .... ನೀವೆಲ್ಲರೂ ನಿಮ್ಮ ಆತ್ಮಸಾಕ್ಷಿಯನ್ನ ಮೆಚ್ಚಿಸುವಂತೆ ನಡೆದುಕೊಂಡರೆ ಸಾಕಿತ್ತು ಈ ಸಮಾಜ ಒಳ್ಳೆಯ ದಿಕ್ಕಿನೆಡೆಗೆ ನಡೆಯುತ್ತಿತ್ತು ಆದರೆ ನಿರಾಕಾರನಾದ ನನ್ನನ್ನೇ ದೂಷಿಸುತ್ತ ಜೀವನ ನಡೆಸುತ್ತಿದ್ದೀರಾ ಎಲ್ಲದಕ್ಕೂ ನನ್ನನ್ನೇ ಹೊಣೆ ಮಾಡುತ್ತಿದ್ದೀರಾ ಎಲ್ಲವನ್ನು ಕೊಟ್ಟ ನಾನು ನಿಮ್ಮಿಂದ ದೋಷಣೆಗೆ ಒಳಗಾಗಬೇಕು , ಆದರೆ ಆರೋಗ್ಯಕರ ಶರೀರ ಬುದ್ಧಿ ವಿವೇಚನೆ ಎಲ್ಲವನ್ನು ಪಡೆದಿದ್ದರು ಕಾಮ ಕ್ರೋಧಾ ಮದ ಮತ್ಸರವನ್ನ ತುಂಬಿಕೊಂಡು ಬದುಕುತ್ತಿದ್ದೀರಾ.... ಎಲ್ಲಾ ಪ್ರಾಣಿಗಳಿಗಿಂತ ಮನುಷ್ಯ ಶ್ರೇಷ್ಠ ಎನ್ನುವ ಮಾತು ಅಕ್ಷರಸಹ ಸುಳ್ಳಾಗಿ ಹೋಗಿದೆ....
ಎಲ್ಲಾ ನೀವೇ ಮಾಡಿಕೊಂಡಿರುವುದು ಎಲ್ಲನೂ ನೀವೇ ಅನುಭವಿಸಬೇಕು ಮತ್ತೆ ಎಲ್ಲವನ್ನ ನೀವಾಗಿ ನೀವೇ ಸರಿಪಡಿಸಿಕೊಳ್ಳಬೇಕು ನನ್ನನ್ನ ಇದರಲ್ಲಿ ಎಳೆದು ತರಬೇಡಿ ...
ಎಂದು ಹೇಳಬಹುದು ಅನಿಸುತ್ತೆ ಅಲ್ಲವೇ 🙏🙏🙏

🖊 ಮಮತ ಕುಮಾರ್

Address

Bangalore

Alerts

Be the first to know and let us send you an email when Nanna kanasu vlog mamatha posts news and promotions. Your email address will not be used for any other purpose, and you can unsubscribe at any time.

Contact The Business

Send a message to Nanna kanasu vlog mamatha:

Share

Category