News star Kannada

News star Kannada ರಾಜಕೀಯ, ಕ್ರೀಡೆ, ಮನರಂಜನೆ, ತಂತ್ರಜ್ಞಾನ, ಆರೋಗ್ಯ ಮತ್ತು ಇನ್ನೂ ಹೆಚ್ಚಿನವುಗಳ ಇತ್ತೀಚಿನ ಸುದ್ದಿಗಳಿಗಾಗಿ A Small Mirror Of Karnataka. Culture

27/08/2026

ಮತ್ತೆ ಒಂದಾದರಾ ಮಂಜು–ಲೀಲಾ..?
ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮಂಜು ಹಾಗೂ ಲೀಲಾ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ರಾಮಣ್ಣ ಮಿಲಿಟ್ರಿ ಹೋಟೆಲ್‌ನಲ್ಲಿ ಮಂಜು, ಲೀಲಾ ಹಾಗೂ ಕೆಲ ರೀಲ್ಸ್ ಮಾಡುವ ವ್ಯಕ್ತಿಗಳು ಒಟ್ಟಿಗೆ ಕಾಣಿಸಿಕೊಂಡಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಇದರಿಂದ ಮಂಜು–ಲೀಲಾ ಮತ್ತೆ ಒಂದಾದರಾ? ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿದೆ.
ಆದರೆ, ಈ ವಿಡಿಯೋ ಯಾವ ಸಂದರ್ಭದ್ದು? ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ವಿಡಿಯೋ ವೈರಲ್… ಸತ್ಯವೇನು ಎಂಬುದು ಮಾತ್ರ ಕುತೂಹಲ!

27/08/2026

ಆನೇಕಲ್ ಕ್ರೀಡಾಂಗಣದಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ವಿರೋಧ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ

TO DAY SILVER  PRICE           #ಬೆಳ್ಳಿಬೆಲೆ  #ಇಂದಿನಬೆಳ್ಳಿಬೆಲೆ  #ಬೆಳ್ಳಿದರ  #ಬೆಳ್ಳಿಸುದ್ದಿ                          #ಕರ್ನಾಟಕ...
27/08/2026

TO DAY SILVER PRICE

#ಬೆಳ್ಳಿಬೆಲೆ #ಇಂದಿನಬೆಳ್ಳಿಬೆಲೆ #ಬೆಳ್ಳಿದರ #ಬೆಳ್ಳಿಸುದ್ದಿ #ಕರ್ನಾಟಕಸುದ್ದಿ #ಕನ್ನಡಸುದ್ದಿ

27/08/2026

ಏರ್‌ಪೋರ್ಟ್‌ನಲ್ಲಿ ಕಸ್ಟಮ್ಸ್ ಕಾರ್ಯಾಚರಣೆ: ಬಾಯಿಯಲ್ಲಿ ಚಿನ್ನದ ಕ್ಯಾಪ್ಸುಲ್ ಸಾಗಾಟಕ್ಕೆ ಯತ್ನ

ಬೆಂಗಳೂರು: ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಅಕ್ರಮವಾಗಿ ಚಿನ್ನ ಸಾಗಿಸಲು ಯತ್ನಿಸಿದ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ದುಬೈನಿಂದ ಇಂಡಿಗೋ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಿದ್ದ ಮೊಹಮ್ಮದ್ ಸಿರಾಜ್ ಎಂಬಾತ ಬಾಯಿಯಲ್ಲಿ ಚಿನ್ನದ ಎರಡು ಕ್ಯಾಪ್ಸುಲ್‌ಗಳನ್ನು ಅಡಗಿಸಿಕೊಂಡು ಸಾಗಿಸಲು ಯತ್ನಿಸಿದ್ದಾನೆ ಎನ್ನಲಾಗಿದೆ. ಸುಮಾರು 82 ಗ್ರಾಂ ತೂಕದ ಚಿನ್ನವನ್ನು ಕ್ಯಾಪ್ಸುಲ್ ರೂಪದಲ್ಲಿ ಸಾಗಿಸಲು ಯತ್ನಿಸಿದ್ದ ಆರೋಪಿಯು, ಬೆಂಗಳೂರಿನಿಂದ ಗಾಜಿಯಾಬಾದ್‌ಗೆ ತೆರಳಲು ಟಿಕೆಟ್ ಬುಕ್ ಮಾಡಿದ್ದ ಎನ್ನಲಾಗಿದೆ.

ವಿಮಾನ ನಿಲ್ದಾಣದಲ್ಲಿ ಸ್ಕ್ರೀನಿಂಗ್ ನಡೆಸುತ್ತಿದ್ದ ವೇಳೆ ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದ ಆರೋಪಿ, ಬಳಿಕ ವಶಕ್ಕೆ ಪಡೆಯಲಾಗಿದೆ. ಹೆಚ್ಚಿನ ವಿಚಾರಣೆಗಾಗಿ ಆರೋಪಿಯನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸರ ವಶಕ್ಕೆ ಕಸ್ಟಮ್ಸ್ ಅಧಿಕಾರಿಗಳು ಒಪ್ಪಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

#ಬೆಂಗಳೂರು #ವಿಮಾನನಿಲ್ದಾಣ #ಚಿನ್ನಕಳ್ಳಸಾಗಣೆ #ಕಸ್ಟಮ್ಸ್ #ದೇವನಹಳ್ಳಿ #ಕರ್ನಾಟಕಸುದ್ದಿ

TO DAY GOLD PRICE                                     #ಕರ್ನಾಟಕಸುದ್ದಿ  #ಚಿನ್ನದಬೆಲೆ  #ಇಂದಿನಚಿನ್ನದಬೆಲೆ  #ಚಿನ್ನದದರ  #ಚಿನ್ನದದ...
27/08/2026

TO DAY GOLD PRICE

#ಕರ್ನಾಟಕಸುದ್ದಿ #ಚಿನ್ನದಬೆಲೆ #ಇಂದಿನಚಿನ್ನದಬೆಲೆ #ಚಿನ್ನದದರ #ಚಿನ್ನದದರಇಂದು

ಹಾವೇರಿಕೈ ಶಾಸಕನಿಗೆ ಟ್ರಾಫಿಕ್ ಪೊಲೀಸರಿಂದ ದಂಡದ ಶಾಕ್.ಹೆಲ್ಮೆಟ್ ಇಲ್ಲದೆ ಬುಲೆಟ್ ರೈಡ್.ಪೊಲೀಸರಿಂದ ಫೈನ್.ಶಾಸಕ ಪ್ರಕಾಶ್ ಕೋಳಿವಾಡ್ ಗೆ 500 ರ...
26/08/2026

ಹಾವೇರಿ

ಕೈ ಶಾಸಕನಿಗೆ ಟ್ರಾಫಿಕ್ ಪೊಲೀಸರಿಂದ ದಂಡದ ಶಾಕ್.

ಹೆಲ್ಮೆಟ್ ಇಲ್ಲದೆ ಬುಲೆಟ್ ರೈಡ್.ಪೊಲೀಸರಿಂದ ಫೈನ್.

ಶಾಸಕ ಪ್ರಕಾಶ್ ಕೋಳಿವಾಡ್ ಗೆ 500 ರೂಪಾಯಿ ದಂಡ.

ರಾಣೇಬೆನ್ನೂರು ಕ್ಷೇತ್ರದ ಶಾಸಕ ಪ್ರಕಾಶ್ ಕೋಳಿವಾಡ್.

ಹೆಲ್ಮೆಟ್ ಇಲ್ಲದೆ ಬುಲೆಟ್ ಬೈಕ್ ಚಲಾಯಿಸಿದ ಆರೋಪ.

ರಾಣೇಬೆನ್ನೂರು ಟ್ರಾಫಿಕ್ ಪೊಲೀಸರಿಂದ ನೋಟಿಸ್..

ಆಗಸ್ಟ್ 25ರಂದು ಶಾಸಕನಿಂದ ನಿಯಮ ಉಲ್ಲಂಘನೆ.

500 ದಂಡದ ನೋಟಿಸ್ ನೇರವಾಗಿ ಶಾಸಕರ ಮನೆ ಬಾಗಿಲಿಗೆ.

ನೋಟಿಸ್ ಆಧಾರಿಸಿ 500 ದಂಡ ಪಾವತಿಸಿದ ಪ್ರಕಾಶ್ ಕೋಳಿವಾಡ್.

ನೋಟಿಸ್ ನೀಡಿರೋ ಬಗ್ಗೆ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೆ.

SP ಮೇಡಂ ಅವರು ನನಗೆ ನೋಟಿಸ್ ನೀಡಿದ್ದಾರೆ...

ಅವರು ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ,ಗೌರವಿಸುತ್ತೇನೆ ಎಂದ ಶಾಸಕ.

ವಿದ್ಯಾರಣ್ಯಪುರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಪುಡಿರೌಡಿಗಳ ದಾಂಧಲೆ ಪ್ರಕರಣ.ಲಾಂಗು ಮಚ್ಚು ಹಿಡಿದು ಅಟ್ಟಹಾಸ ಮೆರೆದಿದ್ದ ಪುಂಡರು ಅರ...
26/08/2026

ವಿದ್ಯಾರಣ್ಯಪುರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಪುಡಿರೌಡಿಗಳ ದಾಂಧಲೆ ಪ್ರಕರಣ.

ಲಾಂಗು ಮಚ್ಚು ಹಿಡಿದು ಅಟ್ಟಹಾಸ ಮೆರೆದಿದ್ದ ಪುಂಡರು ಅರೆಸ್ಟ್.

ಹೆಚ್.ಎಂ.ಟಿ.ಲೇಔಟ್ 6ನೇ ಬ್ಲಾಕ್ ನಲ್ಲಿ ನಡೆದಿದ್ದ ಪುಡಾರಿಗಳ ದಾಂಧಲೆ.

ಆರು ಜನ ಆರೋಪಿಗಳನ್ನ ಬಂಧಿಸಿದ ವಿದ್ಯಾರಣ್ಯಪುರ ಪೊಲೀಸರು.

ಅಂಬಣ್ಣ @ಅಂಬಿ (24),ಅಜಯ್ @ ಅಮಾವಾಸೆ. (23), ರಾಹುಲ್ @ ಅಮಾವಾಸೆ(19), ಶಿವಕುಮಾರ್ (19), ಗಣೇಶ್(19), ಸಾಯಿಕಿರಣ್ (18) ಬಂಧಿತ ಆರೋಪಿಗಳು.

ಏರಿಯಾದಲ್ಲಿ ಹವ ಮೇಂಟೇನ್ ಮಾಡಲು ಕೃತ್ಯ ಎಸಗಿದ್ದ ಪುಡಿರೌಡಿಗಳು.

ಸದ್ಯ ಬಂಧಿತರಿಂದ ಎರಡು ಆಟೋ,ಲಾಂಗು ಮಚ್ಚುಗಳು ವಶಕ್ಕೆ ಪಡೆದ ಪೊಲೀಸರು.

ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು!

ಚಿಕ್ಕಬಳ್ಳಾಪುರಲಂಚಕ್ಕೆ ಬೇಡಿಕೆ ಇಟ್ಟಿದ್ದ ಅಧಿಕಾರಿ ಲೋಕ ಬಲೆಗೆಜಂಗಮಕೋಟೆ ನಾಡಕಚೇರಿಯ ಸೆಕ್ರೆಟರಿ ಮೋಹನ್ ಕುಮಾರ್ 7 ಲಕ್ಷಕ್ಕೆ ಬೇಡಿಕೆ ಇಟ್ಟಿದ...
26/08/2026

ಚಿಕ್ಕಬಳ್ಳಾಪುರ

ಲಂಚಕ್ಕೆ ಬೇಡಿಕೆ ಇಟ್ಟಿದ್ದ ಅಧಿಕಾರಿ ಲೋಕ ಬಲೆಗೆ

ಜಂಗಮಕೋಟೆ ನಾಡಕಚೇರಿಯ ಸೆಕ್ರೆಟರಿ ಮೋಹನ್ ಕುಮಾರ್

7 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಅಧಿಕಾರಿ

ಜಮೀನಿಗೆ ಖಾತೆ ಮಾಡಿಕೊಡಲು 7 ಲಕ್ಷಕ್ಕೆ ಬೇಡಿಕೆ‌ ಇಟ್ಟಿದ್ದ ಅಧಿಕಾರಿ

3 ಲಕ್ಷ ಹಣ ಮುಂಗಡ ಹಣ ನೀಡುವಂತೆ ಒತ್ತಾಯಿಸಿದ್ದ ಸೆಕ್ರೆಟರಿ

ಬೇಡಿಕೆ ಇಟ್ಟಿದ್ದ ಆರೋಪದಡಿ ಸೆಕ್ರೆಟರಿ ವಿರುದ್ದ ಪ್ರಕರಣ ದಾಖಲು

ರೈತ ಬೈರೇಗೌಡ ನೀಡಿರುವ ದೂರಿನ‌ ಆಧಾರದ ಮೇಲೆ ದೂರು ದಾಖಲು

ಚಿಕ್ಕಬಳ್ಳಾಪುರ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಬೆಳಗಾವಿ: ವಾಟ್ಸಾಪ್ ಸ್ಟೇಟಸ್‌ಗೆ ಫೋಟೋ ಹಾಕಿದ್ದಕ್ಕೆ ವ್ಯಕ್ತಿಯೊಬ್ಬನನ್ನು ಕೊಡಲಿಯಿಂದ ಕೊಚ್ಚಿ ಭೀಕರವಾಗಿ ಹ*ತ್ಯೆ ಮಾಡಿರುವ ಘಟನೆ ಬೆಳಗಾವಿ ಜಿ...
26/08/2026

ಬೆಳಗಾವಿ: ವಾಟ್ಸಾಪ್ ಸ್ಟೇಟಸ್‌ಗೆ ಫೋಟೋ ಹಾಕಿದ್ದಕ್ಕೆ ವ್ಯಕ್ತಿಯೊಬ್ಬನನ್ನು ಕೊಡಲಿಯಿಂದ ಕೊಚ್ಚಿ ಭೀಕರವಾಗಿ ಹ*ತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಕಲ್ಲೋಳಿ ಗ್ರಾಮದಲ್ಲಿ ನಡೆದಿದೆ.

ಕಲ್ಲೋಳಿ ಗ್ರಾಮದ ರಮೇಶ ಬಂಟ್ರೋಳಿ ಕೊಲೆಯಾದ ವ್ಯಕ್ತಿ. ಬನಪ್ಪ ಒಡೆಯರ್ ಹಾಗೂ ಆತನ ಪತ್ನಿ ಲಕ್ಷ್ಮೀ ಒಡೆಯರ್ ಕೊಲೆ ಆರೋಪಿಗಳಾಗಿದ್ದು, ಘಟನೆ ಸಂಬಂಧ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ರಮೇಶ ಹಾಗೂ ಲಕ್ಷ್ಮೀ ಒಡೆಯರ್ ಜೊತೆಯಾಗಿ ಫೋಟೋ ತೆಗೆಸಿಕೊಂಡಿದ್ದರು ಎನ್ನಲಾಗಿದೆ. ಈ ಫೋಟೋವನ್ನು ರಮೇಶ ತನ್ನ ವಾಟ್ಸಾಪ್ ಸ್ಟೇಟಸ್‌ನಲ್ಲಿ ಹಾಕಿದ್ದ. ಇದರಿಂದ ರಮೇಶ ಹಾಗೂ ಲಕ್ಷ್ಮೀ ನಡುವೆ ಅನೈತಿಕ ಸಂಬಂಧವಿದೆ ಎಂದು ಬನಪ್ಪ ಒಡೆಯರ್ ದಂಪತಿಗೆ ಅನುಮಾನ ಮೂಡಿತ್ತು ಎನ್ನಲಾಗಿದೆ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ರಮೇಶನನ್ನು ಜಮೀನಿಗೆ ಕರೆಸಿಕೊಂಡು ಕೊಡಲಿಯಿಂದ ಕೊಚ್ಚಿ ಹತ್ಯೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಘಟನೆ ಘಟಪ್ರಭಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಅನಧಿಕೃತವಾಗಿ ಪಾರ್ಕಿಂಗ್  ಮಾಡಿರುವ 382 ವಾಹನಗಳಿಗೆ ನೋಟಿಸ್ ಜಾರಿ...ಮೈಸೂರು ಮಹಾನಗರ ಪಾಲಿಕೆಯಿಂದ ಕ್ರಮ...ಮೈಸೂರು ನಗರದ ಸಾರ್ವಜನಿಕ ರಸ್ತೆಗಳ...
26/08/2026

ಅನಧಿಕೃತವಾಗಿ ಪಾರ್ಕಿಂಗ್ ಮಾಡಿರುವ 382 ವಾಹನಗಳಿಗೆ ನೋಟಿಸ್ ಜಾರಿ...ಮೈಸೂರು ಮಹಾನಗರ ಪಾಲಿಕೆಯಿಂದ ಕ್ರಮ...

ಮೈಸೂರು ನಗರದ ಸಾರ್ವಜನಿಕ ರಸ್ತೆಗಳು, ಪಾದಚಾರಿ ಮಾರ್ಗಗಳು ಹಾಗೂ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ದೀರ್ಘಕಾಲದಿಂದ ಅನಧಿಕೃತವಾಗಿ ನಿಲುಗಡೆ ಮಾಡಿರುವ ಹಾಗೂ ಬಳಕೆಯಲ್ಲಿಲ್ಲದ ವಾಹನಗಳನ್ನು ತೆರವುಗೊಳಿಸಲು ಮೈಸೂರು ಮಹಾನಗರ ಪಾಲಿಕೆಯ ವತಿಯಿಂದ ಕ್ರಮ ಕೈಗೊಳ್ಳಲಾಗಿದೆ.

ಪಾಲಿಕೆಯ ವ್ಯಾಪ್ತಿಯಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಒಟ್ಟು 382ಅನುಪಯುಕ್ತ ವಾಹನಗಳನ್ನು ಗುರುತಿಸಲಾಗಿದ್ದು, ಸದರಿ ವಾಹನಗಳ ಮೇಲೆ ನೋಟಿಸ್ ಅಂಟಿಸಲಾಗಿದೆ. ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾದ ಶ್ರೀಮತಿ ಸವಿತಾ ಎಂ.ಕೆ. ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸಾರ್ವಜನಿಕ ರಸ್ತೆಗಳು ಹಾಗೂ ಪಾದಚಾರಿ ಮಾರ್ಗಗಳಲ್ಲಿ ಇಂತಹ ವಾಹನಗಳನ್ನು ನಿಲುಗಡೆ ಮಾಡುವುದರಿಂದ ಸಾರ್ವಜನಿಕ ಸಂಚಾರಕ್ಕೆ ಅಡಚಣೆ ಉಂಟಾಗುವುದರೊಂದಿಗೆ, ನಗರದ ಸ್ವಚ್ಛತೆ ಮತ್ತು ಸೌಂದರ್ಯಕ್ಕೂ ಧಕ್ಕೆಯಾಗುತ್ತಿದೆ. ಅಲ್ಲದೆ, ಕೆಲವು ವಾಹನಗಳು ತ್ಯಾಜ್ಯ ಸಂಗ್ರಹಣೆ, ಅಕ್ರಮ ಚಟುವಟಿಕೆ ಹಾಗೂ ಸೊಳ್ಳೆ ಸೇರಿದಂತೆ ರೋಗವಾಹಕಗಳ ಉತ್ಪತ್ತಿಗೆ ಕಾರಣವಾಗುವ ಸಾಧ್ಯತೆಯಿದೆ.ಹೀಗಾಗಿನೋಟಿಸ್ ಅಂಟಿಸಿದ ದಿನಾಂಕದಿಂದ 7 ದಿನಗಳೊಳಗಾಗಿ ಸಂಬಂಧಪಟ್ಟ ವಾಹನದ ಮಾಲೀಕರು ತಮ್ಮ ವಾಹನವನ್ನು ಸದರಿ ಸ್ಥಳದಿಂದ ತೆರವುಗೊಳಿಸಬೇಕು. ನಿಗದಿತ ಅವಧಿಯೊಳಗೆ ವಾಹನವನ್ನು ತೆರವುಗೊಳಿಸದಿದ್ದಲ್ಲಿ, ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮ, 1976ರ ಕಲಂ 127 ಹಾಗೂ ಮೈಸೂರು ಮಹಾನಗರ ಪಾಲಿಕೆಯ ಉಪವಿಧಿಗಳು ಮತ್ತು ಪಾಲಿಕೆ ಪರಿಷತ್ತಿನ ನಿರ್ಣಯದನ್ವಯ, ವಾಹನವನ್ನು ಅನುಪಯುಕ್ತ ವಾಹನವೆಂದು ಪರಿಗಣಿಸಿ ಟೋಯಿಂಗ್ ಮೂಲಕ ತೆರವುಗೊಳಿಸಲಾಗುವುದು. ವಾಹನ ತೆರವು ಹಾಗೂ ಸಾಗಾಣಿಕೆ ವೆಚ್ಚವನ್ನು ಸಂಬಂಧಪಟ್ಟ ವಾಹನದ ಮಾಲೀಕರಿಂದ ವಸೂಲಿ ಮಾಡಲಾಗುವುದು. ಅಗತ್ಯವಿದ್ದಲ್ಲಿ ವಾಹನವನ್ನು ಹರಾಜು ಅಥವಾ ಸ್ಕ್ರ್ಯಾಪ್ ಮಾಡುವ ಕ್ರಮವನ್ನೂಕೈಗೊಳ್ಳಲಾಗುವುದು.

ವಾಹನ ಮಾಲೀಕರು ಪಾಲಿಕೆಯ ಕ್ರಮಕ್ಕೆ ಅವಕಾಶ ನೀಡದೆ, ನಿಗದಿತ ಅವಧಿಯೊಳಗೆ ತಮ್ಮ ವಾಹನಗಳನ್ನು ಸ್ವಯಂಪ್ರೇರಿತವಾಗಿ ತೆರವುಗೊಳಿಸಿ ಸಾರ್ವಜನಿಕ ರಸ್ತೆ ಮತ್ತು ಸ್ಥಳಗಳನ್ನು ಮುಕ್ತವಾಗಿಡಲು ಸಹಕರಿಸುವಂತೆ ಆಯುಕ್ತರು ಮನವಿ ಮಾಡಿದ್ದಾರೆ...

Address

Banglore
Bangalore
562100

Alerts

Be the first to know and let us send you an email when News star Kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to News star Kannada:

Shortcuts

Share