19/01/2024
ಶ್ರೀ ಕಾರಿಂಜೇಶ್ವರ ದೇವಸ್ಥಾನ, ಬಂಟ್ವಾಳ.
ಹಿಂದೂ ಪುರಾಣಗಳಲ್ಲಿ ನಾಲ್ಕು ಯುಗಗಳನ್ನು ಉಲ್ಲೇಖಿಸಿರುವ ಪ್ರಸಿದ್ಧ ಶಿವ ದೇವಾಲಯವು, ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕು, ಕಾರಿಂಜ ಎಂಬ ಸ್ಥಳದಲ್ಲಿರುವ ಶ್ರೀ ಕಾರಿಂಜೇಶ್ವರ ದೇವಸ್ಥಾನವಾಗಿದೆ. ಇದು ಸಮುದ್ರ ಮಟ್ಟದಿಂದ 1000 ಅಡಿಗಳಷ್ಟು ಎತ್ತರದಲ್ಲಿದ್ದು, ಬೆಟ್ಟದ ಮೇಲಿನಿಂದ ಸುತ್ತಮುತ್ತಲಿನ ಭವ್ಯವಾದ ಮನಮೋಹಕ ನೋಟವನ್ನು ನೀಡುತ್ತದೆ. ಕಾರಿಂಜೇಶ್ವರ ಬೆಟ್ಟದಲ್ಲಿರುವ ಗಧಾ ತೀರ್ಥ, ಜನು ತೀರ್ಥ, ಹಂದಿ ತೀರ್ಥ, ಅಂಗುಷ್ಟ ತೀರ್ಥ ಎಂಬ ಕೊಳಗಳು ವರ್ಷವಿಡೀ ಬತ್ತದಿರುವುದು ವಿಶಿಷ್ಟ ಮತ್ತು ವಿಶೇಷವಾಗಿದೆ. ಕೋತಿಗಳಿಗೆ ಪ್ರಸಾದ ಕೊಡುವುದು ಮತ್ತು ಶಿವರಾತ್ರಿಯಲ್ಲಿ ನಡೆಯುವ 4 ದಿನಗಳ ಹಬ್ಬ ಇಲ್ಲಿ ವಿಶೇಷವಾಗಿ ವಿಜೃಂಭಣೆಯಿಂದ ನಡೆಯುತ್ತದೆ.