14/01/2023
*ಸಂಕ್ರಾಂತಿ ಹಬ್ಬದಂದು ಅನುದಾನಿತ ನೌಕರರ ಕ್ರಾಂತಿ
*ಪ್ರಾಣಬಿಟ್ಟೇವು ಪಿಂಚಣಿ ಬಿಡೆವು
*ಅನುದಾನಿತ ನೌಕರರ ಕೂಗು ಸರ್ಕಾರಕ್ಕೆ ಕೇಳುತ್ತಿಲ್ಲವೇ
*100ನೇ ದಿನ ತಲುಪಿದ ಹೋರಾಟ
*ನಿವೃತ್ತಿಯ ನಂತರ ನಮಗೆ ದಾರಿಯಾವುದು? ಮನೆಯೋ... ಬೀದಿಯೋ...
*ಸರ್ಕಾರಿ ಮತ್ತು ಅನುದಾನಿತ ನೌಕರರ ಮಧ್ಯೆ ಯಾಕೆ ತಾರತಮ್ಯ
ಅನುದಾನಿತ ಶಾಲಾ ಕಾಲೇಜುಗಳ ನೌಕರರಿಂದ ಬೆಂಗಳೂರಿನ ಸ್ವತಂತ್ರ ಉದ್ಯಾನವನದಲ್ಲಿ ನಡೆಯುತ್ತಿರುವ ಹೋರಾಟ. ತುಮಕೂರು ನಿಂದ ಬೆಂಗಳೂರಿಗೆ ಪಾದಯಾತ್ರೆ ಮೂಲಕ ಸ್ವತಂತ್ರ ಉದ್ಯಾನವನದಲ್ಲಿ ಹೋರಾಟದ ಕ್ರಾಂತಿ ಹಬ್ಬಿದೆ,
ಹೋರಾಟದ ದಿನಗಳು ಕಳೆಯುತ್ತಾ ನೂರುನೇಯ ದಿನ ಬಂದಾಯಿತು. ಸಂಕ್ರಾಂತಿ ಹಬ್ಬದಂದು ನೂರನೇ ದಿನ ಹೋರಾಟ ನಡೆಯುತ್ತಿದೆ ಆದರೂ ಸಹ ಇಲ್ಲಿಯವರೆಗೆ ಯಾವುದೇ ಶಿಕ್ಷಣ ಮಂತ್ರಿ ಆಗಲಿ ಅಥವಾ ಮುಖ್ಯಮಂತ್ರಿಯಾಗಲೀ ಸರ್ಕಾರದ ಯಾವುದೇ ಪ್ರತಿನಿಧಿಯಾಗಲಿ ಅನುದಾನಿತ ನೌಕರರ ಕೂಗಿಗೆ ಸ್ಪಂದಿಸದ ಸರ್ಕಾರ.
ತುಮಕೂರು ನಿಂದ ಬೆಂಗಳೂರಿನವರೆಗೆ ಪಾದಯಾತ್ರೆ, ರಕ್ತದಾನ, ಅರೆಬೆತ್ತಲೆ ಪಾದಯಾತ್ರೆ ಮತ್ತು ಶಾಂತಿಯುತವಾದ ಹೋರಾಟವು 100ನೆ ದಿನ ತಲುಪಿದರು ಅಧಿಕೃತ ಆದೇಶ ಮಾಡದ ಬೇಜವಾಬ್ದಾರಿ ತೋರುತ್ತಿರುವ ಸರ್ಕಾರ. ಶಿಕ್ಷಣ ಕ್ಷೇತ್ರದಿಂದ ಆಯ್ಕೆಯಾದ ಪ್ರತಿನಿಧಿಗಳ ಕೂಗು ನೌಕರರ ಪರವಾಗಿ ಬೇಡಿಕೆಗಳಿಗೆ ಪರವಾಗಿ ಇದ್ದರು ಮನ್ನಣೆ ನೀಡದ ವಿಧಾನಪರಿಷತ್ತು ಮತ್ತು ವಿಧಾನಸಭೆ ಸುಮಾರು 30-40 ವರ್ಷ ಸೇವೆ ಮಾಡಿ 40 ರಿಂದ 60 ಸಾವಿರ ಸರ್ಕಾರದ ವೇತನ ಪಡೆದು 60 ವಯಸ್ಸಿನ ನಂತರ ಕೈಯಲ್ಲಿ ಬಿಡಿ ಕಾಸು ಇಲ್ಲದೆ ಯಾವುದೇ ಪಿಂಚಣಿ ಅಥವಾ ಆರೋಗ್ಯ ವಿಮೆ ಇಲ್ಲದೆ ಬೀದಿ ಪಾಲಾಗುತ್ತಿದ್ದಾರೆ ಭಾರತ ರಾಷ್ಟ್ರದ ಕನಿಷ್ಠ ಪ್ರಜೆಗೂ ಸಿಗುವ ಸೌಲಭ್ಯಗಳಿಂದಲೂ ವಂಚಿತರಾಗಿ ಬೀದಿ ಪಾಲಾಗಿರುವ ಅನುದಾನಿತ ನೌಕರರ ಕೂಗು...
ಸರ್ಕಾರಕ್ಕೆ ಕಣ್ಣಿದ್ದರೂ ಕುರುಡರಂತೆ ಕಿವಿ ಇದ್ದರು ಕಿವುಡರಂತೆ ವರ್ತಿಸುತ್ತಿದ್ದಾರೆ...