NF News Media

  • Home
  • NF News Media

NF News Media Contact information, map and directions, contact form, opening hours, services, ratings, photos, videos and announcements from NF News Media, Media/News Company, .

03/08/2024
21/07/2024

ಎಸ್ ಎಸ್ ಘಾಟಿಯಲ್ಲಿ ವೈಭವಪೂರಿತ ಗುರುಪೂರ್ಣಿಮೆ ಆಚರಣೆ.

ದೊಡ್ಡಬಳ್ಳಾಪುರ (ತೂಬಗೆರೆ): ತಾಲ್ಲೂಕಿನ ಎಸ್ ಎಸ್ ಘಾಟಿರಸ್ತೆಯಲ್ಲಿರುವ ಸಾಯಿಬಾಬಾ ಮಂದಿರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಗುರುಪೂರ್ಣಿಮೆಯನ್ನು ವೈಭವದಿಂದ ಆಚರಣೆ ಮಾಡಲಾಗುತ್ತಿದೆ. ಗುರುಪೂರ್ಣಿಮೆಗೂ ಮುನ್ನ ಮೂರು ದಿನ ಮುಂಚಿತವಾಗಿಯೇ ಸಿದ್ಧತೆ ಮಾಡಿದ್ದು, ಮಂದಿರವು ವಿವಿಧ ಪುಷ್ಪ, ವಿದ್ಯುತ್‌ ದೀಪಗಳಿಂದ ಕಂಗೊಳಿಸುತ್ತಿದೆ. ಗುರುಪೂರ್ಣಿಮೆ ಆಚರಣೆ ಪ್ರಯುಕ್ತ ವಿವಿಧ ಪೂಜೆ. ಅಭಿಷೇಕ, ಭಜನೆ, ಪ್ರಸಾದ ಸೇರಿದಂತೆ ಸಕಲ ವ್ಯವಸ್ಥೆ ಮಾಡಲಾಗಿತ್ತು. ಶಿರಡಿ ಸಾಯಿಬಾಬಾಬಾ ಮಂದಿರ ಭಕ್ತರ ಆರಾಧನೆಯ ಕೇಂದ್ರವಾಗಿದೆ.

ಇನ್ನೂ ಪ್ರತಿ ಗುರುವಾರ, ಗುರುಪೂರ್ಣಿಮೆ, ಮತ್ತು ಹಬ್ಬದ ದಿನಗಳಲ್ಲಿ ಸಾವಿರಾರು ಭಕ್ತರು ಈ ಮಂದಿರಕ್ಕೆ ಬಂದು ಶಿರಡಿ ಸಾಯಿಬಾಬಾ ದರ್ಶನ ಪಡೆದು, ಪ್ರಸಾದ ಸ್ವೀಕರಿಸಿ ಕೃತಾರ್ಥ ಭಾವನೆ ಹೊಂದುತ್ತಾರೆ. ಮಂದಿರಕ್ಕೆ ಬರುವ ಭಕ್ತರಿಗೆ ಸಕಲ ಅನುಕೂಲತೆ ಕಲ್ಪಿಸಿದೆ.

*ಆಚಾರ್ಯ ವಿನಯ್ ವಿನೇಕರ್ ಪ್ರವಚನ:*
ಶ್ರೀ ಸಾಯಿವಿನಯ ವಿಶ್ವಧಾಮದಲ್ಲಿರು ಶ್ರೀ ಶಿರಡಿ ಸಾಯಿಬಾಬಾ ದೇವಾಲಯದಲ್ಲಿ ಗುರೂ ಪೂರ್ಣಿಮಾ ಅಂಗವಾಗಿ ವಿಶೇಷ ಹೋಮ ಹವನಗಳು ನಡೆದವು.
ಆಚಾರ್ಯ ವಿನಯ್ ವಿನೇಕರ್ ಭಾಗವಹಿಸಿ ಭಕ್ತಾದಿಗಳಿಗೆ ಪ್ರವಚನ ನೀಡಿದರು

ಡೆಂಗ್ಯೂ ಗೆ ಆಹ್ವಾನ ನೀಡುತ್ತಿದೆ  ತೂಬಗೆರೆ ಪಂಚಾಯತಿ ಎಲ್ಲಿ ನೋಡಿದರೂ ಕಸದ ರಾಶಿ ಪಂಚಾಯತಿಯಲ್ಲಿ ಕಸ ಶೇಖರಣಾ ವಾಹನವಿದ್ದರು ಚಾಲ್ತಿಯಲ್ಲಿಲ್ಲಾ ...
17/07/2024

ಡೆಂಗ್ಯೂ ಗೆ ಆಹ್ವಾನ ನೀಡುತ್ತಿದೆ ತೂಬಗೆರೆ ಪಂಚಾಯತಿ ಎಲ್ಲಿ ನೋಡಿದರೂ ಕಸದ ರಾಶಿ ಪಂಚಾಯತಿಯಲ್ಲಿ ಕಸ ಶೇಖರಣಾ ವಾಹನವಿದ್ದರು ಚಾಲ್ತಿಯಲ್ಲಿಲ್ಲಾ ಮಾಸಿಕ ಬಿಲ್ ಡಿಸೇಲ್ ಎಲ್ಲಾ ಖರ್ಚುವೆಚ್ಚಗಳು ಯಥಾಸ್ಥಿತಿ ನಡೆಯುತ್ತಿವೆ ಆದರೆ ಕಸ ಮಾತ್ರ ನಿಮ್ಮಗೆಲ್ಲಿ ಬೇಕೊ ಅಲ್ಲ ಹಾಕಿಕೊಳ್ಳಿ ನಾಚಿಕೆಗೆಟ್ಟ ಪಂಚಾಯತಿ ಆಕ್ರಮಗಳಿಗೆ ಯಾವ ಪಂಚಾಯತಿ ಮೊದಲು ಎಂದು ಬಹುಮಾನಕ್ಕೆ ಆರ್ಜಿ ಆಹ್ವಾನಿಸಿದರೆ ರಾಜ್ಯದ ಮೊದಲನೇ ಬಹುಮಾನ ಇದೆ ಪಂಚಾಯತಿಗೆ ಬರುತ್ತದೆ

16/07/2024

*ತೂಬಗೆರೆಯಲ್ಲಿ ಪಾರಂಪರಿಕ ಭೂತ ನೆರಿಗೆ ಆಚರಿಸಲು ಸಿದ್ಧತೆ*

ದೊಡ್ಡಬಳ್ಳಾಪುರ(ತೂಬಗೆರೆ): ತಾಲೂಕಿನ ತೂಬಗೆರೆ ಗ್ರಾಮದಲ್ಲಿ 600 ವರ್ಷಗಳಿಂದ ಆಚರಿಸಿಕೊಂಡು ಬಂದಿರುವ ಪಾರಂಪರಿಕ ಜನಪದ ಆಚರಣೆ ಭೂತ ನೆರಿಗೆ ಇದೇ ತಿಂಗಳ ಗುರುವಾರ ದಿನಾಂಕ 18 ರ ಮಧ್ಯಾಹ್ನ 3 ಗಂಟೆಗೆ ನಡೆಸಲು ಇಲ್ಲಿನ ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಾಲಯಲ್ಲಿ ಭೂತ ನೆರಿಗೆ ಆಚರಣಾ ಸಮಿತಿ ಸಭೆ ನೆಡೆಸಿ ತೀರ್ಮಾನಿಸಲಾಯಿತು.

ಪ್ರತಿವರ್ಷದಂತೆ ಈ ವರ್ಷವೂ ಸಹ ಆಷಾಢ ಮಾಸದ ಏಕಾದಶಿಯಾದ ಮಾರನೇ ದಿನವಾದ ದ್ವಾದಶಿಯಂದು ಭೂತ ನೆರಿಗೆ ಹಬ್ಬವನ್ನು ಆಚರಿಸಲು ಸಜ್ಜಾಗಿದ್ದಾರೆ.
ಕರಿಯಣ್ಣ - ಕೆಂಚಣ್ಣರ ವೇಷಧಾರಿಯಾದವರ ಮೇಲೆ ಭೂತ ಆಹ್ವಾನಿಸಿ, ಆರ್ಭಟಿಸುತ್ತವೆ. ಈ ವೇಳೆ, ಇವರ ಹಸಿವು ತಣಿಸುವ ಕೆಲಸ ಆಗುತ್ತದೆ. ವೇಷಧಾರಿಗಳು ಮನೆಗೆ ಬಂದರೆ ಮನೆಯಲ್ಲಿನ ದ್ವೆವ್ವ ಪಿಶಾಚಿಗಳು ಓಡಿ ಹೋಗುತ್ತವೆ ಎಂಬ ನಂಬಿಕೆಯೂ ಇದೆ.

ಈ ಕುರಿತು ಮಾತನಾಡಿ ಮಾಹಿತಿ ನೀಡಿದ ಭೂತ ನೆರಿಗೆ ಆಚರಣಾ ಸಮಿತಿಯ ಚಿದಾನಂದ ಗುರೂಜಿ, ವಿಷ್ಣುವಿನ ದ್ವಾರಪಾಲಕರಾದ ಜಯ-ವಿಜಯರು ಶಾಪಕ್ಕೆ ಗುರಿಯಾಗಿ ಕಲಿಯುಗದಲ್ಲಿ ಕರಿಯಣ್ಣ ಕೆಂಚಣ್ಣರಾಗಿ ಭೂಲೋಕಕ್ಕೆ ಬರುತ್ತಾರೆ ಎಂಬ ಐತಿಹಾಸಿಕ ಹಿನ್ನೆಲೆ ಇದೆ. ಸುಮಾರು ಐದು ನೂರು ವರ್ಷಗಳ ಇತಿಹಾಸವಿರುವ ಈ ಭೂತನೆರಿಗೆ ಹಬ್ಬ ಇಂದಿಗೂ ಸಹ ತೂಬಗೆರೆ ಹಾಗೂ ಕಲ್ಲುಕೋಟೆ ಗ್ರಾಮದಲ್ಲಿ ನಡೆದುಕೊಂಡು ಬರುತ್ತಿದೆ. ಭೂತನೆರಿಗೆ ಹಬ್ಬದಲ್ಲಿ ಕರಿಯಣ್ಣ ಮತ್ತು ಕೆಂಚಣ್ಣ ವೇಷಧಾರಿಗಳು ಒಂದು ಕೈಯಲ್ಲಿ ಭೂತದ ಮುಖ ಹೋಲುವ ವರ್ತುಲಾಕಾರದ ನೆರಿಗೆ ಹಿಡಿದಿರುತ್ತಾರೆ. ಮತ್ತೊಂದು ಕೈಯಲ್ಲಿ ಕತ್ತಿ ಹಿಡಿದಿರುತ್ತಾರೆ. ಲಕ್ಷ್ಮಿನರಸಿಂಹಸ್ವಾಮಿ ಭಕ್ತರು ಕೆಂಚಣ್ಣ-ಕರಿಯಣ್ಣರ ಮುಂದೆ ವಿಷ್ಣುವಿನ ನಾಮಸ್ಮರಣೆ ಮತ್ತು ಗುಣಗಾನ ಮಾಡುತ್ತಾ ಇವರನ್ನು ಕೆಣಕುತ್ತಾರೆ. ವಿಷ್ಣುವಿನ ನಾಮಸ್ಮರಣೆ ಸಹಿಸದ ಈ ಕರಿಯಣ್ಣ ಮತ್ತು ಕೆಂಚಣ್ಣ ಭಕ್ತರ ಮೇಲೆ ಕೋಪಗೊಂಡು ಅವರೆಡೆಗೆ ನುಗ್ಗುತ್ತಾರೆ. ಕೋಪಗೊಂಡ ಕರಿಯಣ್ಣ ಕೆಂಚಣ್ಣರನ್ನು ಸಮಾಧಾನ ಮಾಡಲು ಇತರರು ಅವರ ಬಾಯಿಗೆ ಬಾಳೆ ಹಣ್ಣಿನ, ಹಲಸಿನ ಹಣ್ಣಿನಿಂದ ತಯಾರಿಸಿದ ರಸಾಯನವನ್ನು ತಿನ್ನಿಸುತ್ತಾರೆ. ಆವೇಶಕ್ಕೆ ಒಳಗಾದ ಈ ಭೂತಗಳು ಆ ಸಂದರ್ಭದಲ್ಲಿ ಏನು ಕೊಟ್ಟರೂ ತಿನ್ನುತ್ತಾರೆ ಎಂಬುದು ಜಾನಪದರ ನಂಬಿಕೆ. ಕೆಲವು ಗ್ರಾಮಗಳಲ್ಲಿ ನಡೆಯುವ ಈ ಹಬ್ಬದಲ್ಲಿ ಕರಿಯಣ್ಣ ಮತ್ತು ಕೆಂಚಣ್ಣರ ಬಾಯಿಗೆ ಕುರಿ-ಕೋಳಿಗಳನ್ನು ನೀಡುತ್ತಾರೆ. ಇವುಗಳ ರಕ್ತ ಹೀರುವುದರೊಂದಿಗೆ ಕರಿಯಣ್ಣ-ಕೆಂಚಣ್ಣ ಶಾಂತರಾಗುತಾರೆ ಎನ್ನುವುದು ಈ ಭಾಗದ ಭಕ್ತರ ನಂಬಿಕೆ ಆದ್ದರಿಂದ ತೂಬಗೆರೆ ಸುತ್ತ ಮುತ್ತಲಿನ ಸಕಲ ಆಸ್ತಿಕರು ಈ ಆಚರಣೆಯಲ್ಲಿ ಪಾಲ್ಗೊಳ್ಳಲು ಮನವಿ ಮಾಡಿದರು.

ಮಂತ್ರವಾದಿ ಆನಂದ ಸ್ವಾಮಿ, ದಾಸಯ್ಯ ಕುಟುಂಬದ ಶ್ರೀನಿವಾಸ, ಆನಂದ, ಮುಖಂಡರಾದ ಪುಟ್ಟಣ್ಣ, ವೆಂಕಟೇಶಪ್ಪ, ಹಾಗೂ ಯುವ ಮುಖಂಡ ಉದಯ ಆರಾಧ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

07/07/2024

ಸರ್ಕಾರಿ ಅದಿಕಾರಿಯಾದ ಮಂಜೇಶ್ ನನ್ನು ಉದ್ದೆಶ ಪೂರ್ವಕವಾಗಿ ಪೋಲೀಸ್ ಎಫ್ ಐ ಆರ್ ನಲ್ಲಿ ಕಾಮನ್ ಮ್ಯಾನ್ ಎಂದು ನಮ್ಮೂದಿಸಿ ಅವನನ್ನು ಬಂಧಿಸದೆ ಕಾಲಹರಣ ಮಾಡುತ್ತಿರುವ ಹಲಗೂರು ಪೋಲೀಸ್ ಥಾಣಾಧಿಕಾರಿಗಳ ವಿರುದ್ದ ರೊಚ್ಚಿಗೆದ್ದ ದಲಿತ ಸಂಘಟನೆಗಳು

ಮುಗ್ಗರಿಸಿ ಬಿದ್ದರೂ ಮುಖಕ್ಕೆ ಮಣ್ಣು ಹತ್ತಿಲ್ಲ ಎಂದು ವಾದಿಸುವುದು ಸಿಎಂ ಸಿದ್ದರಾಮಯ್ಯ ಅವರ ಜಾಯಮಾನ!!ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ಹಗರಣ ನಡೆ...
06/07/2024

ಮುಗ್ಗರಿಸಿ ಬಿದ್ದರೂ ಮುಖಕ್ಕೆ ಮಣ್ಣು ಹತ್ತಿಲ್ಲ ಎಂದು ವಾದಿಸುವುದು ಸಿಎಂ ಸಿದ್ದರಾಮಯ್ಯ ಅವರ ಜಾಯಮಾನ!!

ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ಹಗರಣ ನಡೆದೇ ಇಲ್ಲ ಎಂದು ವಾದಿಸಿದ್ದರು, ಹಗರಣ ಸಾಬೀತಾದ ತಕ್ಷಣ ಬಿ. ನಾಗೇಂದ್ರ ಅವರಿಂದ ರಾಜೀನಾಮೆ ಕೊಡಿಸಿ ತಾವು ಬಚಾವಾದರು.

ಬಡವರು-ದಲಿತರು-ಹಿಂದುಳಿದವರಿಗೆ ಸೇರಬೇಕಾಗಿದ್ದ ಜಾಗವನ್ನು ಪತ್ನಿ ಹೆಸರಿನಲ್ಲಿ ಕಬಳಿಸಿ, ಈಗ ಬಾವ-ಬಾಮೈದ ಎಂಬ ಕತೆ ಹೇಳುತ್ತಿದ್ದಾರೆ.

ತಪ್ಪು ಮಾಡಿ ಸಿಲುಕಿ ಹಾಕಿಕೊಂಡರೂ, ತಪ್ಪೇ ಮಾಡಿಲ್ಲ ಎಂದು ಮೊಂಡು ವಾದ ಮಾಡುವ ಏಕೈಕ ರಾಜಕಾರಣಿ ಎಂದರೇ ಅದು ಸಿದ್ದರಾಮಯ್ಯನವರು

06/07/2024

ಈ ಹಿಂದೆ ಅರ್ಕಾವತಿ ಹಗರಣ ನಡೆಸಿ ಮಧ್ಯಮ ವರ್ಗದವರ ಮನೆಯ ಕನಸಿಗೆ ಕೊಳ್ಳಿ ಇಟ್ಟಿದ್ದ ಸಿದ್ದರಾಮಯ್ಯನವರು ತಮ್ಮ ಶ್ರೀಮತಿಯವರಿಗೆ ಮಾತ್ರ ದೊಡ್ಡ ಮೊತ್ತದ ಪರಿಹಾರವನ್ನೂ, ಚಿನ್ನದ ಬೆಲೆ ಇರುವ ಜಾಗವನ್ನೂ ಪರಿಹಾರ ರೂಪದಲ್ಲಿ ಪಡೆದುಕೊಂಡಿದ್ದಾರೆ.
ಆಡಳಿತ ನಡೆಸಲು ದುಡ್ಡಿಲ್ಲ ಎಂಬ ನೆಪ ಹೇಳುತ್ತಾ ಹಾಲಲ್ಲೂ ಮೂರು ರೂಪಾಯಿ, ಪೆಟ್ರೋಲಲ್ಲಿ ಮೂರು ರೂಪಾಯಿ ಪೀಕುತ್ತ, ಅತ್ತ ಹೆಂಡತಿ ಹೆಸರಲ್ಲಿ ಪರಿಹಾರ ಪಡೆಯುವುದು ಭ್ರಷ್ಟಾಚಾರ ಮಾತ್ರ ಅಲ್ಲ, ಹೊಣೆಗೇಡಿತನವೂ ಹೌದು, ಹಣದ ಹಪಾಹಪಿ ಎಂಬುದೂ ನಿಜ.

04/07/2024
ದಲಿತರ ಮೇಲೆ ಹಲ್ಲೆ ಮಾಡಿದ ಆನೇಕಲ್ ನಗರ ಯೋಜನೆ ಜಂಟಿ ನಿರ್ದೇಶಕ ಮಂಜೇಶ್.ಬಿ  ಜೈಲು ಪಾಲು…..!ಮಂಡ್ಯ: ಸದಾ ಹಣದ ಮದದಲ್ಲಿ ತೆಲುತ್ತಿರುವ ಮಂಜೇಶ್....
03/07/2024

ದಲಿತರ ಮೇಲೆ ಹಲ್ಲೆ ಮಾಡಿದ ಆನೇಕಲ್ ನಗರ ಯೋಜನೆ ಜಂಟಿ ನಿರ್ದೇಶಕ ಮಂಜೇಶ್.ಬಿ ಜೈಲು ಪಾಲು…..!

ಮಂಡ್ಯ: ಸದಾ ಹಣದ ಮದದಲ್ಲಿ ತೆಲುತ್ತಿರುವ ಮಂಜೇಶ್.ಬಿ ನಾನು ಏನು ಮಾಡಿದರು ನಡೆಯುತ್ತೆ ಎಂದು ದುರಹಂಕಾರ ನೆತ್ತಿಗೇರಿ ದಲಿತರ ಮೇಲೆ ಹಲ್ಲೆ ನಡೆಸಿ ಜಾತಿನಿಂದನೆ ಮಾಡಿದ್ದಲ್ಲದೇ ಹಲ್ಲೆ ನಡೆಸಿದ ಆಪಾದನೆ ಹಿನ್ನಲೆಯಲ್ಲಿ ಬಿಬಿಎಂಪಿ ಮಾಜಿ ನಗರಯೋಜನಾ ಜಂಟಿ ನಿರ್ದೇಶಕ ಮತ್ತು ಹಾಲಿ ಆನೇಕಲ್ ನಗರ ಯೋಜನಾ ಪ್ರಾಧಿಕಾರದ ಅಧಿಕಾರಿಯಾಗಿರುವ ಸ್ವಾಮಿ ಎಂದು ಹೆಸರಾಗಿರುವ ಮಂಜೇಶ್ ಬಿ ಅವರ ವಿರುದ್ಧ ಹಲಗೂರು ಗ್ರಾಮದ ಪೋಲಿಸ್ ಠಾಣೆ ಯಲ್ಲಿ ಜಾತಿನಿಂದನೆ ಕೇಸ್ ದಾಖಲಾಗಿದೆ.

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಜೋಗಿಪುರ ಗ್ರಾಮದ ಸರ್ವೆ ನಂಬರ್ 52ರ ಸರ್ಕಾರಿ ಭೂಮಿಯಲ್ಲಿ ಮಂಜೇಶ್ ಅಲಿಯಾಸ್ ಮಂಜು ಮತ್ತು ರಾಜಾ ಅಲಿಯಾಸ್ ಆಸಿಡ್ ರಾಜಾ ಎನ್ನುವವರು ಗುಂಡಿ ಹೊಡೆಯುತ್ತಿದ್ದರಂತೆ.ಅಲ್ಲಿಂದ ಹಾದು ಹೋಗುತ್ತಿದ್ದ ಸೋಮಣ್ಣ ಭೋವಿ ಹಾಗೂ ಸಂಗಡಿಗರು ಅದನ್ನು ಪ್ರಶ್ನಿಸಿದ್ದಾರೆ.ಅಷ್ಟೇ..ಕೋಪಗೊಂಡ ಮಂಜೇಶ್ ಹಾಗೂ ರಾಜಾ, ಸೋಮಣ್ಣ ಭೋವಿ ಹಾಗೂ ಸಂಗಡಿಗರನ್ನು ಅವರ ಜಾತಿ ಹಿಡಿದು ನಿಂದಿಸಲಾರಂಭಿಸಿದ್ದಾರಂತೆ.ಅದನ್ನು ಪ್ರಶ್ನಿಸಿದ್ದಕ್ಕೆ ದೊಣ್ಣೆ ಹಾಗು ಕಲ್ಲುಗಳಿಂದಲೂ ಹಲ್ಲೆ ನಡೆಸಿದ್ದಾರೆನ್ನಲಾಗಿದೆ.

ಸ್ಥಳೀಯ ಸೋಮಣ್ಣ ಹಾಗು ಸಂಗಡಿಗರು ಹಲಗೂರು ಠಾಣೆಗೆ ನೀಡಿದ ದೂರಿನ ಹಿನ್ನಲೆಯಲ್ಲಿ ಮಂಜೇಶ್ ಹಾಗು ರಾಜಾ ಅವರ ಮೇಲೆ ಜಾತಿನಿಂದನೆ ಕೇಸ್ ಹಾಕಲಾಗಿದೆ.ಎಫ್ ಐ ಆರ್ ದಾಖಲಿಸಲಾಗಿದ್ದು ಹೆಚ್ಚಿನ ವಿಚಾರಣೆಗೆ ಹಲಗೂರು ಠಾಣೆಗೆ ಕರೆದೊಯ್ಯಲಾಗಿದೆಯಂತೆ.

ಬುಧವಾರ ದಿನಾಂಕ 26-06-2024 ರಂದೇ ಸೋಮಣ್ಣ ಭೋವಿ ಠಾಣೆಗೆ ದೂರು ನೀಡಿದ್ದಾರೆ.ಈ ಸಂಬಂಧ ಮಂಜೇಶ್ ಗೆ ನೊಟೀಸ್ ಜಾರಿ ಉತ್ತರ ಬಯಸಲಾಗಿತ್ತು.ಆದ್ರೆ ಉತ್ತರಿಸಿದ್ದಕ್ಕೆ ಪೊಲೀಸರು ಸ್ಟೇಷನ್ ಗೆ ಕರೆತಂದಿದ್ದಾರಂತೆ. ಕಲಂ 323,324,504,506,34 ಐಪಿಸಿ,ಎಸ್ ಸಿ ಎಸ್ಟಿ ಅಟ್ರಾಸಿಟಿ ಕೇಸ್ ಗಳನ್ನು ಹಾಕಲಾಗಿದೆ.ಸಧ್ಯ ಮಂಜೇಶ್ ಪೊಲೀಸರ ವಶದಲ್ಲಿದ್ದಾರೆ ಎನ್ನಲಾಗ್ತಿದೆ.ಬಂಧನವಾದ್ರೆ ಅಮಾನತು ಸಾಧ್ಯತೆ: ಮಂಜೇಶ್ ವಿರುದ್ದ ಜಾತಿನಿಂದನೆಯಂಥ ಗಂಭೀರ ಆಪಾದನೆ ಇರುವುದರಿಂದ ಬಂಧನವಾಗುವ ಸಾಧ್ಯತೆಯಿದೆ. ಜಾತಿನಿಂದನೆ ನಾನ್ ಬೇಲಬಲ್ ಕೃತ್ಯವಾಗಿರುವುದರಿಂದ ಒಂದಷ್ಟು ದಿನ ಜೈಲಿನಲ್ಲಿರಬೇಕಾಗಬಹುದು.ಹಾಗೇನಾದ್ರೂ ಆಗಿದ್ದಲ್ಲಿ ಸರ್ಕಾರಿ ನೌಕರರ ಸೇವಾನಿಯಮಾವಳಿ ಪ್ರಕಾರ ಮಂಜೇಶ್ ಅಮಾನತ್ತುಗೊಳ್ಳುವ ಸಾಧ್ಯತೆಗಳಿವೆಯಂತೆ.

ಮಹಾ ಖತರ್ನಾಕ್ ಮಂಜೇಶ್ ಬಂಧನದ ಹಿನ್ನಲೆಯಲ್ಲಿ ಸ್ಥಳೀಯರಿಂದ ಮಂಜೇಶ್ ಅಕ್ರಮ ಹಾಗೂ ಬೇನಾಮಿ ಸಂಪತ್ತಿನ ಬಗ್ಗೆ ತನಿಖೆ ನಡೆಸುವಂತೆಯೂ ಕೋರಿದ್ದಾರೆ.ಸ್ಥಳೀಯರ ಪ್ರಕಾರ ಮಂಜೇಶ್ ತನ್ನ ಬೇನಾಮಿ ಸಂಪಾದನೆಯನ್ನೆಲ್ಲಾ ಮಂಡ್ಯ ಹಾಗೂ ಸುತ್ತಮುತ್ತಲಲ್ಲಿ ಇನ್ವೆಸ್ಟ್ ಮಾಡಿದ್ದಾರೆ.ಒಂದು ಸಮಗ್ರ ತನಿಖೆಯಾದ್ರೆ ಅದೆಲ್ಲವೂ ಹೊರಬರಲಿದೆ ಎಂದು ಒತ್ತಾಯಿಸಿದ್ದಾರೆ.
ಮಂಜೇಶ್ ಕೇವಲ SSLC ವಿದ್ಯಾಭ್ಯಾಸ ಮಾಡಿದ್ದು ಡಿಪ್ಲೊಮೊ ಮಾಡಿದ್ದೇನೆಂದು ತನ್ನ ತಂದೆ ಮರಣದ ಸಲುವಾಗಿ ಅನುಕoಪದ ಆಧಾರದಲ್ಲಿ ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಂಡು ಬಿಬಿಎಂಪಿ ನಗರ ಯೋಜನೆ ವಿಭಾಗದಲ್ಲಿ ಮಾಡಬಾರದ ಎಲ್ಲಾ ಅನಾಚಾರ ಮಾಡಿ ನೂರಾರು ಕೋಟಿ ಅಕ್ರಮ ಸಂಭಾವನೆ ಮಾಡಿದ್ದಾರಂತೆ ಅದು ಸಾಲದೇ ತನ್ನ ಹೆಂಡತಿ ಸಂಬಂದಿ ಹೆಸರಿನಲ್ಲೂ ಅಕ್ರಮ ಅಸ್ತಿ ಮತ್ತು ರಾಜಾಜಿನಗರದಲ್ಲಿನ ತನ್ನ ಮಾವನ ಹೆಸರಿನಲ್ಲೂ ಸಾಕಷ್ಟು ಅಕ್ರಮ ಆಸ್ತಿ ಮಾಡಿರುವ ಅನುಮಾನ ಇದೆ ಮತ್ತು ತನ್ನ ಮಗ ಸುಮಾರು ವರ್ಷದಿಂದ MBBS ಅಭ್ಯಾಸ ಮಾಡುತ್ತಿದ್ದು ಇನ್ನೂ ಮುಗಿದಿಲ್ಲ ಅವರು ಅತ್ಯoತ್ತ ಐಶಾರಾಮಿ ಕಾರುಗಳಲ್ಲಿ ಓಡಾಟ ಮಾಡಿಕೊಂಡು, ಗೆಸ್ಟ್ ಹೌಸ್ ನಲ್ಲಿ ರಾಜಾಭೋಗ ಇವೆಲ್ಲವೂ ಮಂಜೇಶ್ ಗೆ ಎಲ್ಲಿಂದ ಬಂತು. ಬಿಬಿಎಂಪಿ ಯಲ್ಲಿ ಸುಮಾರು ವರ್ಷಗಳ ಕಾಲ ಒಂದೇ ಆಯಕಕಟ್ಟಿನಲ್ಲಿ ಸ್ಥಳ ನಿಯಕ್ತಿಯಾಗಿ ಬಾರಿ ಭ್ರಷ್ಟಾಚಾರ ಮಾಡಿದ್ದಾರೆ ಮತ್ತು ತನ್ನದೇ ಟೀಮ್ ಕಟ್ಟಿಕೊಂಡು ಬಿಬಿಎಂಪಿ ನಗರ ಯೋಜನೆ ವಿಭಾಗದಲ್ಲಿ ಅಕ್ರಮ ನಡೆಸಿದ್ದಾರೆ.
ತನ್ನ ಅಜ್ಜಿಯ ಹೆಸರಿನಲ್ಲಿ ಅಕ್ರಮ ಬೇನಾಮಿ ಆಸ್ತಿ ಇಟ್ಟು ಇಲಾಖೆ ತನಿಖೆಯು ನಡೆಯುತ್ತಿದೆ ಮಂಜೇಶ್ ನ ಅಕ್ರಮ ಪುರಾಣ ಎಷ್ಟು ಕೊಂಡಾಡಿದರು ಈ ಕಾಲಕ್ಕೆ ಮುಗಿಯಲ್ಲ. ಕೇವಲ SSLC ವಿದ್ಯಾಬ್ಯಾಸ ಹೊಂದಿ ನಗರ ಯೋಜನೆ ಗಂದ ಗಾಳಿಯು ತಿಳಿದಿಲ್ಲದ ಈ ವ್ಯಕ್ತಿ ವಿದ್ಯಾವಂತ ಅಧಿಕಾರಿಗಳನ್ನು ಗೋಳಾಡಿಸಿದ್ದು ಬೇಕಾದಷ್ಟು ಬಿಡಿ. ಅಕ್ರಮ ಸಂಪಾದನೆ ಹಣದಿಂದ ತಾನು ಏನು ಮಾಡಿದರು ನನಗೆ ಏನೂ ಆಗುವುದಿಲ್ಲ ಎಂಬ ಗರ್ವದಲ್ಲಿ ದಲಿತರ ಮೇಲೆ ಹಲ್ಲೆ ಮಾಡಿ ಪೊಲೀಸ್ ವಶಕ್ಕೆ ಸಿಲುಕಿರುವ ಇವನ ಕೃತ್ಯದ ಮೇಲೆ ತನಿಖೆ ನಡೆಯುತ್ತಿದೆ.

Address


Alerts

Be the first to know and let us send you an email when NF News Media posts news and promotions. Your email address will not be used for any other purpose, and you can unsubscribe at any time.

Contact The Business

Send a message to NF News Media:

  • Want your business to be the top-listed Media Company?

Share