29/07/2025
ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಹಿಂದೆ ನಡೆದ ಅಪರಾಧ ಕೃತ್ಯಗಳಿಗೆ ಸಂಬಂಧಿಸಿ ಹೂತು ಹಾಕಲಾಗಿದೆ ಎನ್ನಲಾದ ಮೃತದೇಹಗಳನ್ನು ಹೊರ ತೆಗೆಯವ ಕಾರ್ಯ ಮಂಗಳವಾರ ಬಿಗಿ ಪೊಲೀಸ್ ಭದ್ರತೆಯೊಂದಿಗೆ ಆರಂಭವಾಯಿತು. ಧರ್ಮಸ್ಥಳದ ಸ್ನಾನ ಘಟ್ಟದ ಸಮೀಪದ ನೇತ್ರಾವತಿ ನದಿ ಪಕ್ಕದ ಕಾಡಿನಲ್ಲಿ ಶವಗಳನ್ನು ಹೂತಿಡಲಾಗಿದೆ ಎನ್ನಲಾದ ಜಾಗವನ್ನು ಏಳೆಂಟು ಕಾರ್ಮಿಕರು ಜೋರು ಮಳೆಯ ನಡುವೆಯೇ ನೆಲವನ್ನು ಅಗೆದರು. ಈ ಪ್ರಕರಣದ (ಸಂಖ್ಯೆ 39/2025) ಸಾಕ್ಷಿ ದೂರುದಾರ ವ್ಯಕ್ತಿಯೂ ಮುಸುಕು ಧರಿಸಿ ಸ್ಥಳದಲ್ಲಿ ಹಾಜರಿದ್ದರು.
#ಧರ್ಮಸ್ಥಳಪ್ರಕರಣ #ನೆಲಅಗೆಯುವಕಾರ್ಯಶುರು #ಉತ್ಖನನಆರಂಭ