
05/08/2025
ಖ್ಯಾತ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಕರಿಯ ಚಲನಚಿತ್ರದ ನಿರ್ಮಾಪಕ ದಿವಂಗತ ಶ್ರೀಯುತ ಆನೇಕಲ್ ಬಾಲ್ರಾಜ್ ರವರ ಪುತ್ರ ಸಂತೋಷ್ ಬಾಲ್ರಾಜ್ ನಿಧನವನ್ನು ಹೊಂದಿದ್ದಾರೆ.
ಕರಿಯ 2,ಕೆಂಪ, ಗಣಪ, ಎಂಬ ಹಿಟ್ ಚಲನಚಿತ್ರಗಳನ್ನ ನೀಡಿ ಜನರ ಮನ ಗೆದ್ದು ಮನೆ ಮಗ ಎಂದೆನಿಸಿಕೊಂಡಂತ ಸಂತೋಷ್ ಬಾಲರಾಜ್ 34 ವಯಸ್ಸಿನ ಅಸು ಪಾಸಿನಲ್ಲಿ ಜಾಂಡೀಸ್ ಕಾಯಿಲೆಗೆ ತುತ್ತಾಗಿ ಬನಶಂಕರಿಯ ಅಪ್ಪೋಲೋ ಹಾಸ್ಪಿಟಲ್ ಗೆ ದಾಖಲಾಗಿ ಚಿಕಿತ್ಸೆ ಫಲಕಾರಿ ಯಾಗದೆ ಇಂದು ಕೊನೆಯುಸಿರನ್ನು ಎಳೆದಿದ್ದಾರೆ.
ಇವರಿಗೆ ಒಬ್ಬರು ಸಹೋದರಿದ್ದು ತಾಯಿ ಜೀವಂತವಾಗಿದ್ದಾರೆ. ಆದರೆ ಕಳೆದ ವರ್ಷ ತಂದೆ ಬಾಲರಾಜ್ ತೀರಿಕೊಂಡಿದ್ದರು . ಇವರು ಆನೇಕಲ್ಲಿನ ವರು ಡಿ ಬಾಸ್ ದರ್ಶನ್ ರವರ ಕರಿಯ ಚಲನಚಿತ್ರಕ್ಕೆ ನಿರ್ಮಾಪಕ ರಾಗಿದ್ದವರು . ಸಂತೋಷ್ ಬಾಲರಾಜ್ ರವರ ಇನ್ನೆರಡು ಚಲನಚಿತ್ರಗಳು ಬಿಡುಗಡೆಗೊಳ್ಳಬೇಕಿದೆ ಆ ಚಲನಚಿತ್ರಗಳು ಯಾವು ಎಂದರೆ ಬರ್ಕಿ, ಸತ್ಯಂ. ಎರಡು ಚಲನಚಿತ್ರಗಳು ಯಶಸ್ಸು ಕಾಣಲಿ ಎಂದು ಹಾರೈಸುವ ಮತ್ತು ಇಹಲೋಕ ತ್ಯಜಿಸಿದ ಸಂತೋಷ್ ಬಾಲ್ರಾಜ್ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ದೇವರಲ್ಲಿ ಪ್ರಾರ್ಥಿಸುವ ಬೆಸ್ಟ್ ನ್ಯೂಸ್ ಕನ್ನಡ.