Manu16

Manu16 ❤️ಹೆಮ್ಮೆಯ ಕನ್ನಡಿಗ💛
🫶RCB FOREVER🫶
💕Kannada Film Industry💕
🇮🇳ಪ್ರಜಾಕಿಯ 🇮🇳
Cricket🏏Cinema🎥Trending Topics🎭
“ಮನು ಮನಸ್ಸಿನ ಮಾತುಗಳು✍️
💌[email protected]💌

15/08/2026

ಮನೆ ದೇವ್ರು❤️🙏 Manu16

15/08/2026

Happy Independence Day ಅರ್ಥ ಅಯ್ತು ಅನ್ಸುತ್ತೆ😀🤔 Manu16

ಭಾರತದ ಮಾಜಿ ವೇಗಿ ಹಾಗೂ 'ದಾವಣಗೆರೆ ಎಕ್ಸ್‌ಪ್ರೆಸ್‌' ಖ್ಯಾತಿಯ ಆರ್. ವಿನಯ್ ಕುಮಾರ್ ಅವರನ್ನು ಕರ್ನಾಟಕ ಸೀನಿಯರ್ ಪುರುಷರ ಕ್ರಿಕೆಟ್ ತಂಡದ ನೂತ...
14/08/2026

ಭಾರತದ ಮಾಜಿ ವೇಗಿ ಹಾಗೂ 'ದಾವಣಗೆರೆ ಎಕ್ಸ್‌ಪ್ರೆಸ್‌' ಖ್ಯಾತಿಯ ಆರ್. ವಿನಯ್ ಕುಮಾರ್ ಅವರನ್ನು ಕರ್ನಾಟಕ ಸೀನಿಯರ್ ಪುರುಷರ ಕ್ರಿಕೆಟ್ ತಂಡದ ನೂತನ ಮುಖ್ಯ ಕೋಚ್ (Head Coach) ಆಗಿ ನೇಮಕ ಮಾಡಲಾಗಿದೆ. 2026-27ರ ದೇಶೀಯ ಕ್ರಿಕೆಟ್ ಋತುವಿಗಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಈ ಅಧಿಕೃತ ಪ್ರಕಟಣೆ ಹೊರಡಿಸಿದೆ.

ವಿನಯ್ ಕುಮಾರ್ ನಾಯಕತ್ವದಲ್ಲಿ ಕರ್ನಾಟಕ ತಂಡ ಸತತವಾಗಿ 2 ಬಾರಿ ರಣಜಿ ಟ್ರೋಫಿ (2013-14, 2014-15), ಇರಾನಿ ಕಪ್ ಹಾಗೂ ವಿಜಯ ಹಜಾರೆ ಟ್ರೋಫಿಗಳನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿತ್ತು.ಭಾರತ ತಂಡದ ಪರ ಇವರು 1 ಟೆಸ್ಟ್, 31 ಏಕದಿನ (ODI) ಮತ್ತು 9 ಟಿ20 ಪಂದ್ಯಗಳನ್ನು ಆಡಿದ್ದಾರೆ.

ವಿನಯ್ ಕುಮಾರ್ ಅವರ ಈ ಹೊಸ ಜವಾಬ್ದಾರಿಯು ಕರ್ನಾಟಕ ತಂಡವನ್ನು ದೇಶೀಯ ಕ್ರಿಕೆಟ್‌ನಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿಸುವ ನಿರೀಕ್ಷೆ ಮೂಡಿಸಿದೆ.
Manu16

14/08/2026

Shanti Kranti Re Release😍🙁 Manu16 Ravichandran

ರವಿಚಂದ್ರನ್ ಅವರ ತಮ್ಮ ಬಾಲಾಜಿ ಅವರು,ಶಾಂತಿ ಕ್ರಾಂತಿ ಚಿತ್ರ ರೀ ರಿಲೀಸ್ ಮಾಡಬೇಕಂದರೆ 8 ರಿಂದ 10 ತಿಂಗಳು ಬೇಕಾಗುತ್ತದೆ,ಏಕೆಂದರೆ ಚಿತ್ರವನ್ನ ...
13/08/2026

ರವಿಚಂದ್ರನ್ ಅವರ ತಮ್ಮ ಬಾಲಾಜಿ ಅವರು,
ಶಾಂತಿ ಕ್ರಾಂತಿ ಚಿತ್ರ ರೀ ರಿಲೀಸ್ ಮಾಡಬೇಕಂದರೆ
8 ರಿಂದ 10 ತಿಂಗಳು ಬೇಕಾಗುತ್ತದೆ,
ಏಕೆಂದರೆ ಚಿತ್ರವನ್ನ ಈಗಿನ ಕಾಲಕ್ಕೆ ರೆಡಿ ಮಾಡಬೇಕು
ಪ್ರಿಂಟ್ ರೆಡಿ ಮಾಡಿಸಬೇಕು,ಕಲರ್ ಮಾಡಿಸಬೇಕು,ಸೆನ್ಸಾರ್ ಮಾಡಿಸಬೇಕು.ಮ್ಯೂಸಿಕ್ ಬಿಜಿಮ್ ಅಪ್ಡೇಟ್ ಮಾಡಿಸಬೇಕು,
ತುಂಬಾ ಕೆಲಸಗಳಿವೆ ಇದಕ್ಕೆ ತುಂಬಾ ಸಮಯ ಹಿಡಿಯುತ್ತದೆ ಆದ್ದರಿಂದ ಸಧ್ಯಕ್ಕೆ ಶಾಂತಿ ಕ್ರಾಂತಿ ಚಿತ್ರ ರಿಲೀಸ್ ಮಾಡೋಕೇ ಸಾಧ್ಯವಾಗುದಿಲ್ಲಾ,
ಒಟ್ಟಿನಲ್ಲಿ ರಿಲೀಸ್ ಮಾಡೇ ಮಾಡುತೇವೆ ಸಧ್ಯಕ್ಕಿಲ್ಲಾ ಎಂದಿದ್ದಾರೆ,

ಅಭಿಮಾನಿಗಳ ಒತ್ತಾಸೆಗೆ ನಿಂತು ಸಿನಿಮಾ ಮರು
ಬಿಡುಗಡೆ ಚಟುವಟಿಕೆಗೆ ಚಿಂತಿಸಿದ ನಿಮ್ಮ ಮನದಾಳಕ್ಕೆ ಧನ್ಯವಾದಗಳು ಬಾಲಾಜಿ ಸರ್ ,
ಸೋಶಿಯಲ್ ಮೀಡಿಯಾ ಟ್ರೆಂಡ್ ಆಗಿಂದಾಗಲೇ ಬದಲಾವಣೆ ಆಗುತ್ತಿರುತ್ತದೆ, ಏನೇ ಮಾಡಿದರೂ ಯೋಚಿಸಿ ನೋಡ್ಕೊಂಡ್ ಮಾಡಿ ಸರ್,ಮತ್ತೆ ರವಿಮಾಮ
ಕೈ ಸುಟ್ಟುಕೊಳ್ಳದೆ ಇರಲಿ ಅಷ್ಟೇ❤️🙏

ಶಾಂತಿ ಕ್ರಾಂತಿ ರೀ ರಿಲೀಸ್ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ
ಕಾಮೆಂಟ್ ಬಾಕ್ಸ್ ನಿಮ್ದೇ👇

Manu16Ravichandran

13/08/2026

Prajwal Revanna Using Mobile Phone in Jail Manu16

ಕನ್ನಡ ಚಿತ್ರರಂಗವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ 'ರಾಕಿಂಗ್ ಸ್ಟಾರ್' ಯಶ್ ಅವರ ಯಶಸ್ಸಿನ ಪಯಣ ನಿರಂತರವಾಗಿ ಸಾಗುತ್ತಿದೆ. 'ಕೆಜಿಎಫ್' ಸರಣಿಯ...
13/08/2026

ಕನ್ನಡ ಚಿತ್ರರಂಗವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ 'ರಾಕಿಂಗ್ ಸ್ಟಾರ್' ಯಶ್ ಅವರ ಯಶಸ್ಸಿನ ಪಯಣ ನಿರಂತರವಾಗಿ ಸಾಗುತ್ತಿದೆ. 'ಕೆಜಿಎಫ್' ಸರಣಿಯ ಅಭೂತಪೂರ್ವ ಯಶಸ್ಸಿನ ನಂತರ ಬಾಲಿವುಡ್ ಹಾಗೂ ಹಾಲಿವುಡ್ ಅಂಗಳದಲ್ಲೂ ತಮ್ಮದೇ ಆದ ಛಾಪು ಮೂಡಿಸುತ್ತಿರುವ ಯಶ್, ಪ್ರಸ್ತುತ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿರುವ 'ರಾಮಾಯಣ' ಮತ್ತು 'ಟಾಕ್ಸಿಕ್' ಸಿನಿಮಾಗಳ ಮೂಲಕ ಪ್ರೇಕ್ಷಕರ ಎದುರು ಬರಲು ಸಜ್ಜಾಗಿದ್ದಾರೆ. ಈ ಎರಡೂ ಬೃಹತ್ ವೆಂಚರ್‌ಗಳಿಗೆ ನಟನೆಯ ಜೊತೆಗೆ ಸ್ವತಃ ಯಶ್ ಅವರೇ ನಿರ್ಮಾಪಕರಾಗಿಯೂ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ಈ ಸಿನಿಮಾಗಳ ಪ್ರಚಾರ ಮತ್ತು ತಯಾರಿಯ ಮಧ್ಯೆಯೇ ನಟ ಯಶ್ ಭಾರತದ ಅತ್ಯಂತ ಜನಪ್ರಿಯ ಹಾಗೂ ಪ್ರತಿಷ್ಠಿತ ಟಿವಿ ಸಂದರ್ಶನ ಕಾರ್ಯಕ್ರಮವಾದ 'ಆಪ್ ಕಿ ಅದಾಲತ್' (Aap Ki Adalat) ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ್ದಾರೆ. 'ಇಂಡಿಯಾ ಟಿವಿ'ಯಲ್ಲಿ ಪ್ರಸಾರವಾಗುವ ಹಾಗೂ ಖ್ಯಾತ ಪತ್ರಕರ್ತ ರಜತ್ ಶರ್ಮಾ ಅವರು ನಡೆಸಿಕೊಡುವ ಈ ಕಾರ್ಯಕ್ರಮದ ಕಟಕಟೆ ಏರಿದ ಮೊದಲ ಕನ್ನಡಿಗ ಎಂಬ ಅಪರೂಪದ ಗೌರವಕ್ಕೆ ಯಶ್ ಭಾಜನರಾಗಿದ್ದಾರೆ.

ಈ ಹಿಂದೆ ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಟಲ್ ಬಿಹಾರಿ ವಾಜಪೇಯಿ, ರಾಹುಲ್ ಗಾಂಧಿ ಅವರಂತಹ ರಾಜಕೀಯ ದಿಗ್ಗಜರು ಹಾಗೂ ಸಲ್ಮಾನ್ ಖಾನ್, ಶಾರುಖ್ ಖಾನ್, ಪ್ರಿಯಾಂಕಾ ಚೋಪ್ರಾ ಅವರಂತಹ ಬಾಲಿವುಡ್‌ನ ಖ್ಯಾತನಾಮರು ಭಾಗವಹಿಸಿದ್ದಾರೆ.

ಐಶ್ವರ್ಯಾ ರೈ, ದೀಪಿಕಾ ಪಡುಕೋಣೆ, ಸುನೀಲ್ ಶೆಟ್ಟಿ ಅವರಂತಹ ಕನ್ನಡ ಮೂಲದ ತಾರೆಯರು ಹಿಂದೆ ಈ ಶೋನಲ್ಲಿ ಕಾಣಿಸಿಕೊಂಡಿದ್ದರೂ, ಅವರಲ್ಲರೂ ಬಾಲಿವುಡ್‌ನಲ್ಲಿ ಬೆಳೆದವರು. ಆದರೆ ಸಂಪೂರ್ಣವಾಗಿ ಕನ್ನಡ ಚಿತ್ರರಂಗದಲ್ಲೇ ಬೆಳೆದು, ರಂಗಭೂಮಿಯಿಂದ ಬಂದ ಅಪ್ಪಟ ಕನ್ನಡದ ಪ್ರತಿಭೆಯಾಗಿ ಭಾರತೀಯ ಚಿತ್ರರಂಗವನ್ನು ಪ್ರತಿನಿಧಿಸಿ ಈ ಶೋನಲ್ಲಿ ಭಾಗವಹಿಸಿರುವುದು ಯಶ್ ಅವರ ಹೆಗ್ಗಳಿಕೆಯಾಗಿದೆ.
Manu16 Yash

13/08/2026

Yash Aap ki Adalat ಶೋ ಗೆ ಹೋಗಿರೋದಕ್ಕೆ ಇಷ್ಟ್ಟು buildup ಬೇಕಾ🤔🤔 Yash Manu16

ನಟಿ ರಿಷಿಕಾ ಸಿಂಗ್ ಅವರು ನಟ ಯಶ್ ಅವರ ಮುಂಬರುವ ಚಿತ್ರ 'ಟಾಕ್ಸಿಕ್' ನ ಟ್ರೇಲರ್ ಅನ್ನು ಕಟುವಾಗಿ ಟೀಕಿಸಿ ವಿವಾದ ಸೃಷ್ಟಿಸಿದ್ದಾರೆ. ಸಾಮಾಜಿಕ ಮ...
13/08/2026

ನಟಿ ರಿಷಿಕಾ ಸಿಂಗ್ ಅವರು ನಟ ಯಶ್ ಅವರ ಮುಂಬರುವ ಚಿತ್ರ 'ಟಾಕ್ಸಿಕ್' ನ ಟ್ರೇಲರ್ ಅನ್ನು ಕಟುವಾಗಿ ಟೀಕಿಸಿ ವಿವಾದ ಸೃಷ್ಟಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಅವರು ಯಶ್ ವಿರುದ್ಧ ಅತ್ಯಂತ ಆಕ್ರೋಶ ಹೊರಹಾಕಿದ್ದಾರೆ.

"ಹೆಣ್ಮಕ್ಳಿಗೆ ಅಂದ ಇದ್ರೆ ಚಂದ, ಗಂಡು ಮಕ್ಳಿಗೆ ಮರ್ಯಾದೆ ಇದ್ರೆ ಚೆಂದ ಕಂದ. ಇದೇನು ಪ್ಯಾಂಟ್ ಬಿಚ್ಕೊಂಡು ಆಗ್ಬಿಟ್ಟಿದ್ದೀಯ ಮಂಗ"
ಹೆಂಗಸರಿಗೆ ರೆಸ್ಪೆಕ್ಟ್ ಇರಲಿ, ಇಲ್ಲಾಂದ್ರೆ ಕರ್ನಾಟಕದಿಂದ ಜಾಗ ಖಾಲಿ ಮಾಡಿಸಿಬಿಡ್ತೀವಿ" ಎಂದು ಯಶ್‌ಗೆ ನೇರ ವಾರ್ನಿಂಗ್ ನೀಡಿದ್ದಾರೆ.

ನಮ್ಮವರೇ ನಮ್ಮವರು ಬೆಳೆಯೋದನ್ನ ಸಹಿಸೋಲ್ಲಾ ಅನ್ನೋದಕ್ಕೆ ಇದೊಂದು ಉದಾರಣೆ ಅಷ್ಟೇ,

ಇನ್ನು ಫಿಲಂ ರಿಲೀಸ್ ಆಗಿಲ್ಲಾ ಆಗಲೇ ಈ ಲೆವೆಲ್ ಗೆ ಬೇಕಾ,
ಕನ್ನಡ ಚಿತ್ರರಂಗಕ್ಕೆ
100 ಕೋಟಿ
1000 ಕೋಟಿ ಕೊಟ್ಟಿದು ಇದೆ ಯಶ್ ಅವರು
ಕನ್ನಡ ಚಿತ್ರರಂಗವನ್ನ ಇಂಟರ್ನ್ಯಾಷನಲ್ ಲೆವೆಲ್ ತಕೊಂಡು ಹೋಗ್ತಾ ಇದಾರೆ,
ಆದರೇ ಬೆಂಬಲಿಸಿ ಇಲ್ಲವಾದರೆ ಸ್ವಲ್ಪ ಸಮಾಧಾನವಾಗಿ ಫಿಲಂ ರಿಲೀಸ್ ಆಗೋವರೆಗೂ ಇರಿ🙏

ಇದರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ
ಕಾಮೆಂಟ್ ಬಾಕ್ಸ್ ನಿಮ್ದೇ👇
Manu16Yash

09/08/2026

Cauvery Issue😡😡
Karnataka vs Tamilnadu🤝
Share this video to tamilnadu people❤️💛 Manu16

Address

Bangalore

Website

Alerts

Be the first to know and let us send you an email when Manu16 posts news and promotions. Your email address will not be used for any other purpose, and you can unsubscribe at any time.

Contact The Business

Send a message to Manu16:

Shortcuts

Share