ವಾಯ್ಸ್ ಆಫ್ ಕರ್ನಾಟಕ." Voice of karanataka"

  • Home
  • India
  • Bangalore
  • ವಾಯ್ಸ್ ಆಫ್ ಕರ್ನಾಟಕ." Voice of karanataka"

ವಾಯ್ಸ್  ಆಫ್  ಕರ್ನಾಟಕ." Voice of karanataka" Karanataka Daily News

Celebrating my 5th year on Facebook. Thank you for your continuing support. I could never have made it without you. 🙏🤗🎉
11/02/2025

Celebrating my 5th year on Facebook. Thank you for your continuing support. I could never have made it without you. 🙏🤗🎉

ಅಹಿಂಸಾ ಪರಮ ಧರ್ಮ ಎನ್ನುವ ಉದಾತ್ತ ಮೌಲ್ಯಗಳನ್ನು ಜೀವಿಸುವ ,ಜಗತ್ತಿಗೆ ಶಾಂತಿ ಹಾಗೂ ಅಹಿಂಸೆಯ ಭೋಧನೆಯನ್ನು ಮಾಡುವ ಜಿನಧರ್ಮದ ಪೂಜ್ಯ ಮುನಿಗಳನ್ನ...
09/07/2023

ಅಹಿಂಸಾ ಪರಮ ಧರ್ಮ ಎನ್ನುವ ಉದಾತ್ತ ಮೌಲ್ಯಗಳನ್ನು ಜೀವಿಸುವ ,ಜಗತ್ತಿಗೆ ಶಾಂತಿ ಹಾಗೂ ಅಹಿಂಸೆಯ ಭೋಧನೆಯನ್ನು ಮಾಡುವ ಜಿನಧರ್ಮದ ಪೂಜ್ಯ ಮುನಿಗಳನ್ನು ಹಿಂಸಾತ್ಮಕವಾಗಿ ಹತ್ಯೆಗೈದ ನರ ರೂಪಿ ರಾಕ್ಷಸರನ್ನು ತಕ್ಷಣ ಕಠಿಣಾತಿ ಕಠಿಣ ಶಿಕ್ಷೆಗೆ ಗುರಿ ಪಡಿಸಿ ನಿಜವಾದ ಸಾವಿಗೆ ಕಾರಣ ಏನು ಅಂತ ಪ್ರಾಮಾಣಿಕ ತನಿಖೆ ಮಾಡಿಸಿ. ಸಮಾಜದ ಸಾಧು, ಸಂತರಾದಿ ಮುನಿಗಳಿಗೆ ಸರ್ಕಾರ ಸೂಕ್ತ ರಕ್ಷಣೆ ಒದಗಿಸಬೇಕೆಂದು ಸರ್ಕಾರವನ್ನು ಆಗ್ರಹಿಸುತ್ತೆವೆ.

ಪೂಜ್ಯ ಕಾಮಕುಮಾರ ನಂದಿ ಮಹಾರಾಜ ಮುನಿಗಳ ಆತ್ಮಕ್ಕೆ ಮೋಕ್ಷ ಪ್ರಾಪ್ತಿಯಾಗಲೆಂದು ಪ್ರಾರ್ಥಿಸುತ್ತೇವೆ.

ಧನ್ಯವಾದಗಳು
Voice of Karnataka.

ಜಂಗಲ್ ಬುಕ್‌ನ ಮೋಗ್ಲಿ ಪಾತ್ರಕ್ಕೆ ಸ್ಫೂರ್ತಿಯಾದರು ಈ ಮನುಷ್ಯ.ಇವನ ಹೆಸರು ದಿನಸಾನಿಚಾರ್  ಮತ್ತು ಇವರು 1895 ರಲ್ಲಿ ನಿಧನರಾದರು.1867 ರಲ್ಲಿ, ...
07/07/2023

ಜಂಗಲ್ ಬುಕ್‌ನ ಮೋಗ್ಲಿ ಪಾತ್ರಕ್ಕೆ ಸ್ಫೂರ್ತಿಯಾದರು ಈ ಮನುಷ್ಯ.

ಇವನ ಹೆಸರು ದಿನಸಾನಿಚಾರ್ ಮತ್ತು ಇವರು 1895 ರಲ್ಲಿ ನಿಧನರಾದರು.

1867 ರಲ್ಲಿ, ಬೇಟೆಗಾರರ ​​ಗುಂಪು 6 ವರ್ಷದ ಕಾಡು ಹುಡುಗನನ್ನು ಕಂಡುಹಿಡಿದರು, ಅವರು ಹಸಿ ಮಾಂಸವನ್ನು ತಿನ್ನಲು ಆದ್ಯತೆ ನೀಡಿದರು, ಎರಡು ಕಾಲುಗಳ ಮೇಲೆ ನಿಲ್ಲಲು ತೊಂದರೆ ಹೊಂದಿದ್ದರು,
ತೋಳದಂತೆ ಗೊಣಗುತ್ತಿದ್ದರು ಮತ್ತು ಹಲ್ಲುಗಳನ್ನು ಹರಿತಗೊಳಿಸಲು ಮೂಳೆಗಳನ್ನು ಕಡಿಯುತ್ತಿದ್ದರು.
ಅವರು ಎಂದಿಗೂ ಮಾತನಾಡಲು ಕಲಿಯಲೇ ಇಲ್ಲಾ ಮತ್ತು ಜಂಗಲ್ ಬುಕ್‌ನ ಮೋಗ್ಲಿ ಪಾತ್ರಕ್ಕೆ ಸ್ಫೂರ್ತಿಯಾದರು

ಧನ್ಯವಾದಗಳು
Voice of Karnataka
Connecting people.

29/06/2023

ದಯವೇ ಧರ್ಮದ ಮೂಲವಯ್ಯಾ.....!

ಯಾಕೆ ನಂದಿನಿ ಹಾಲಿನ  ಬಣ್ಣದ ಬಣ್ಣದ ಪ್ಯಾಕೆಟಗಳು....?ಸರಿಯಾದ ಮಾಹಿತಿ ತಿಳಿಯಿರಿ ಬೇರೆಯವರಿಗೆ ತಿಳಿಸಿ ಹೇಳಿರಿ.ಎಲ್ಲಾದಕ್ಕೂ ನೀಲಿ ಪ್ಯಾಕೆಟ್ಟೇ...
19/06/2023

ಯಾಕೆ ನಂದಿನಿ ಹಾಲಿನ ಬಣ್ಣದ ಬಣ್ಣದ ಪ್ಯಾಕೆಟಗಳು....?

ಸರಿಯಾದ ಮಾಹಿತಿ ತಿಳಿಯಿರಿ ಬೇರೆಯವರಿಗೆ ತಿಳಿಸಿ ಹೇಳಿರಿ.

ಎಲ್ಲಾದಕ್ಕೂ ನೀಲಿ ಪ್ಯಾಕೆಟ್ಟೇ ಸರಿಯಲ್ಲ

ಕರ್ನಾಟಕದ ನಂದಿನಿ ಹಾಲು ಸಂಘದವರು ವೆರ್-ವೆರೈಟಿ ಹಾಲಿನ ಪ್ಯಾಕೆಟ್ಗಳನ್ನ ಮಾಡಿ ಜನರಿಗೆಲ್ಲಾ ಸಿಗೋ ಹಾಗೆ ಮಾಡಿದ್ದಾರೆ.

ಹಸಿರು, ಹಳದಿ, ಕೆಂಪು, ನೀಲಿ ಅಂತ ಬೇರೆ ಬೇರೆ ಬಣ್ಣದ ಪ್ಯಾಕೆಟ್ಗಳು ಕರ್ನಾಟಕದ ಮೂಲೆ ಮೂಲೆಯಲ್ಲೂ ಸಿಗ್ತವೆ.

ಯಾವ ಉಪಯೋಗಕ್ಕೆ ಯಾವ ಬಣ್ಣದ ಪ್ಯಾಕೆಟ್ ತರ್ಬೇಕು ಅನ್ನೋ ಪ್ರಶ್ನೇನ ಎಲ್ಲರೂ ಹಾಕಿಕೊಳ್ಳೋದಿಲ್ಲ. ಎಲ್ಲರೂ ಯಾವುದು ಕೊಂಡ್ಕೋತಾರೋ ಅದನ್ನೇ ತರೋದು ವಾಡಿಕೆ. ಅದು ಸಾಮಾನ್ಯವಾಗಿ ನೀಲಿ ಬಣ್ಣದ ಪ್ಯಾಕೆಟ್ಟೇ ಆಗಿರುತ್ತೆ!

ಆದರೆ ನಂದಿನಿ ಹಾಲ್ನ ಸರಿಯಾಗಿ ಬಳಸಬೇಕು, ಅದರಿಂದ ಆದಷ್ಟು ಹೆಚ್ಚು ಉಪಯೋಗ ಪಡ್ಕೋಬೇಕು ಅನ್ನೋದಾದರೆ ಕೆಳಗಿನ ಮಾಹಿತಿ ಗಮನದಲ್ಲಿಡಿ...

1. ಹಂಗೇ (ಕಾಯಿಸದೆ) ಕುಡಿಯಕ್ಕೆ:

ಬೆಳಗ್ಗೆ ಎದ್ದು ಹಾಲು ಕಾಯಿಸಿ ಕುಡಿಯಕ್ಕೆ ಟೈಮ್ ಇಲ್ವಾ? ಹಾಗಾದರೆ ನಂದಿನಿ ಗುಡ್ ಲೈಫ್ ಮಿಲ್ಕ್ ಪ್ಯಾಕೆಟ್ ತೊಗೊಂಡು ಹಾಗೆಯೇ ಕುಡಿಬೋದು.

ಯಾಕೆ ಗೊತ್ತಾ? ಈ ಹಾಲನ್ನು ಪ್ಯಾಕೆಟಿಗೆ ಹಾಕೋ ಮುಂಚೆನೇ 137 ಡಿಗ್ರಿ ಸೆಲ್ಶಿಯಸ್ ತಾಪಮಾನದಲ್ಲಿ 4 ನಿಮಿಷಗಳ ತನಕ ಕಾಯಿಸಿ ತಕ್ಷಣವೇ ತಣ್ಣಗೆ ಮಾಡಿರುತ್ತಾರೆ. ಅದ್ದರಿಂದ ಈ ಹಾಲಿನಲ್ಲಿ ಬ್ಯಾಕ್ಟೀರಿಯಾ ಬೆಳೆಯಕ್ಕೆ ಅವಕಾಶವಿಲ್ಲ. ಟೆಟ್ರಾ ಪ್ಯಾಕಿನಲ್ಲಿ ಹಾಕುವುದರಿಂದ ಹೊರಗಿನ ಯಾವ ಉಷ್ಣಾಂಶದಿಂದ ಹಾಲು ಒಡೆಯುವುದಿಲ್ಲ.

2. ಕಾಯಿಸಿ ಕುಡಿಯಲು:

ಉಕ್ಕು ಬರುವ ತನಕ ಕಾಯಿಸಿಕೊಂಡು ಕುಡಿಯುವುದಕ್ಕೆ ನಂದಿನಿಯ ಯಾವ ಬಣ್ಣದ ಪ್ಯಾಕೆಟ್ ಬೇಕಾದರೂ ತರಬಹುದು.

3. ಕಾಫಿ ಅಥವಾ ಟೀ ಮಾಡಕ್ಕೆ:

ನಂದಿನಿಯ ಹಸಿರು ಬಣ್ಣದ ಪ್ಯಾಕೆಟ್- ಹೊಮೊಜಿನೈಸೆಡ್, ಪಾಸ್ಚರೀಕರಿಸಿದ ಹಸುವಿನ ಹಾಲು ತಂದು ಮಾಡಿದರೆ ಹಾಲು ಒದಗುತ್ತದೆ. ಹೆಚ್ಚು ಲೋಟ ಕಾಫಿ/ಟೀ ಮಾಡಬಹುದು. ರುಚಿಯೂ ಚೆನ್ನ.

4. ಗಟ್ಟಿ ಕಾಫಿ ಮಾಡಕ್ಕೆ:

ನಂದಿನಿಯ ತುಸು ನೇರಳೆ ಬಣ್ಣದ ಪ್ಯಾಕೆಟ್ ಅಂದರೆ ನಂದಿನಿ ಸಮೃದ್ಧಿ ಪಾಸ್ಚರೀಕರಿಸಿದ ಹಾಲು ತಂದು ಗಟ್ಟಿ ಕಾಫಿ ಮಾಡಿಕೊಳ್ಳಬಹುದು. ಪೂರ್ತಿ ಕೆನೆಯ ಅಂಶ ಈ ಹಾಲಿನಲ್ಲಿ ಇರೋ ಹಾಗೆ ಮಾಡಿರುತ್ತಾರೆ. ಆದ್ರೇನೂ ಕೆನೆ-ಕೆನೆ ಕಟ್ಟಿಕೊಳ್ಳುವುದಿಲ್ಲ. ಯಾಕಂದ್ರೆ ಹೊಮೊಜಿನೈಸ್ಡ್ ಹದಕ್ಕೆ ಮಾಡಿರುತ್ತಾರೆ.

5. ಗಟ್ಟಿ ಮೊಸರು ಮಾಡಕ್ಕೆ:

ನಂದಿನಿಯ ಸ್ಪೆಶಲ್ ಹಸಿರು ಬಣ್ಣದ ಪ್ಯಾಕೆಟ್ ಅಂದರೆ ಸ್ಪೆಶಲ್ ಟೋನ್ಡ್ ಮಿಲ್ಕ್ ಪ್ಯಾಕೆಟ್ ತೊಗೊಳ್ಳಿ.

6. ಪಾಯಸ ಅಥವಾ ಹಾಲಿನಿಂದ ಮಾಡುವ ಸಿಹಿ ಪದಾರ್ಥಗಳಿಗೆ:

ನಂದಿನಿಯ ತುಸು ನೇರಳೆ ಬಣ್ಣದ ಪ್ಯಾಕೆಟ್ ಅಂದರೆ ನಂದಿನಿ ಸಮೃದ್ಧಿ ಪಾಸ್ಚರೀಕರಿಸಿದ ಹಾಲು ತಂದರೆ ತುಂಬಾ ಚೆನ್ನಾಗಿ ಆಗತ್ತೆ. "ಮಿಲ್ಕ್ ಮೈಡ್" ತರುವ ಬದಲು.

7. ಪುಟ್ಟ ಮಕ್ಕಳಿಗೆ:

ನಂದಿನಿಯ ಹಸಿರು ಬಣ್ಣದ ಪ್ಯಾಕೆಟ್- ಹೊಮೊಜಿನೈಸೆಡ್, ಪಾಸ್ಚರೀಕರಿಸಿದ ಹಸುವಿನ ಹಾಲು ತಂದರೆ ಒಳ್ಳೆಯದು. ಯಾಕಂದ್ರೆ ಬೇರೆ ಪ್ಯಾಕೆಟ್ನಲ್ಲಿ ಹಸು ಹಾಲಿನ ಜೊತೆ ಎಮ್ಮೆ ಹಾಲು ಸೇರಿಕೊಂಡಿರತ್ತೆ.

8. ಹಿರಿಯರಿಗೆ:

ನಂದಿನಿಯ ಗುಡ್ ಲೈಫ್ ಸ್ಲಿಮ್ಡ್ ಸ್ಕಿಮ್ ಮಿಲ್ಕ್ ಪ್ಯಾಕೆಟ್ ಕೂಡ ತೊಗೊಬಹುದು. ಇದರಲ್ಲಿ ಹೆಸರೇ ಹೇಳುವಂತೆ ಕೊಬ್ಬಿನಂಶ ಕಡಿಮೆ ಇರುವುದರಿಂದ ವಯಸ್ಸಾದವರಿಗೆ ಜೀರ್ಣಿಸಿಕೊಳ್ಳಲು ಸುಲಭ.

ಇದಲ್ಲದೆ ಹಳದಿ/ಕಿತ್ತಳೆ ಬಣ್ಣದ ಪ್ಯಾಕೆಟ್ - ಪಾಸ್ಚರೀಕರಿಸಿದ ಡಬಲ್ ಟೋನ್ಡ್ ಮಿಲ್ಕ್ ಪ್ಯಾಕೆಟ್ ತೊಗೊಳ್ಳಿ. ಯಾಕಂದ್ರೆ ಇದರಲ್ಲೂ ಕಡಿಮೆ ಕೊಬ್ಬಿನಂಶ ಇರತ್ತೆ.

9. ಕೊಬ್ಬು ಇಳಿಸಕ್ಕೆ:

ಕೊಬ್ಬು ಕರಗಬೇಕು ಅಂತ ಹಾಲು ಕುಡಿಯೋದನ್ನ ನಿಲ್ಲಿಸಬಿಟ್ಟರೆ ಬೇರೆ ಪೌಷ್ಟಿಕಾಂಶಗಳ ಕೊರತೆ ಉಂಟಾಗತ್ತೆ.

ಇದಕ್ಕೆ ಸುಲಭವಾಗಿ ಸಿಗುವ ನಂದಿನಿಯ ಹಳದಿ/ಕಿತ್ತಳೆ ಬಣ್ಣದ ಪ್ಯಾಕೆಟ್ - ಪಾಸ್ಚರೀಕರಿಸಿದ ಡಬಲ್ ಟೋನ್ಡ್ ಮಿಲ್ಕ್ ಪ್ಯಾಕೆಟ್ ತೊಗೊಳ್ಳಿ. ಯಾಕಂದ್ರೆ ಇದರಲ್ಲಿ ಕಡಿಮೆ ಕೊಬ್ಬಿನಂಶ ಇರತ್ತೆ.

10. ಬೆಳೆಯುವ ಮಕ್ಕಳಿಗೆ:

ಕಿತ್ತಳೆ ಬಣ್ಣದ ನಂದಿನಿಯ ಶುಭಂ ಪ್ಯಾಕೆಟ್...

ಅಥವಾ ಸಂಪೂರ್ಣ ಸ್ಟ್ಯಾಂಡರ್ಡೈಸ್ಡ್ ಮಿಲ್ಕ್ ಪ್ಯಾಕೆಟ್ ತೊಗೊಳ್ಳಿ.

ಯಾಕಂದ್ರೆ ಇದರಲ್ಲಿ ಬೆಳೆಯುವ ಮಕ್ಕಳಿಗೆ ಬೇಕಾಗುವ ಕೊಬ್ಬಿನಂಶ ಇರತ್ತೆ. ಅವರ ದಿನ ನಿತ್ಯದ ಚಟುವಟುಕೆಗಳಿಗೆ ಸಾಕಷ್ಟು ಶಕ್ತಿ ಕೊಡತ್ತೆ.

11. ಬರೀ ಹಸುವಿನ ಹಾಲು ಬೇಕು ಅನ್ನುವವರಿಗೆ:

ನಂದಿನಿಯ ಹಸಿರು ಬಣ್ಣದ ಪ್ಯಾಕೆಟ್- ಹೊಮೊಜಿನೈಸೆಡ್, ಪಾಸ್ಚರೀಕರಿಸಿದ ಹಸುವಿನ ಹಾಲು ತಂದರೆ ಒಳ್ಳೆಯದು. ಯಾಕಂದ್ರೆ ಬೇರೆ ಪ್ಯಾಕೆಟ್ನಲ್ಲಿ ಹಸು ಹಾಲಿನ ಜೊತೆ ಎಮ್ಮೆ ಹಾಲು ಸೇರಿಕೊಂಡಿರತ್ತೆ.

12. ಫಿಟ್ನೆಸ್ ಬಗ್ಗೆ ಹೆಚ್ಚು ಕಾಳಜಿ ಇರುವವರಿಗೆ:

ನ್ಂದಿನಿ ಸ್ಮಾರ್ಟ್ ಡಬಲ್ ಟೋನ್ಡ್ ಹೊಮೊಜಿನೈಸೆಡ್ ಮಿಲ್ಕ್ ಪ್ಯಾಕೆಟ್ ತೊಗೊಳ್ಳಿ.

13. ತುಂಬಾ ದಿನ ಇಟ್ಟುಕೊಳ್ಳಬೇಕಾದರೆ:

ಪ್ರವಾಸಕ್ಕೆ ಹೋಗ್ಬೇಕು, ಮಕ್ಕಳಿಗೆ ಹಾಲು ಸಿಗಲ್ವಲ್ಲಾ ಅಂತ ಚಿಂತೆ ಬಂದರೆ ನಂದಿನಿಯ ಗುಡ್ ಲೈಫ್ ಟೆಟ್ರಾ ಪ್ಯಾಕ್ ತೊಗೊಳ್ಳಿ. 10 ದಿನದ ತನಕ ಹಾಲನ್ನು ಹಾಗೆ ಕುಡಿಯಬಹುದು. ಕಾಯಿಸುವುದೂ ಬೇಡ. ಟೆಟ್ರಾ ಪ್ಯಾಕಿನಲ್ಲಿ ಇರುವುದರಿಂದ ಹಾಲು ಒಡೆಯುವುದಿಲ್ಲ.

ಕಾಣೆ ಆಗಿದ್ದಾರೆ.ಶ್ರೀಮತಿ ಕಸ್ತೂರಿ ಕುಪೇಂದ್ರ ಬಿರಾದಾರಸಾ। ರೇವೂರ ತಾ।। ಅಷ್ಟಲಪುರ ಜಿ।। ಕಲಬುರ್ಗಿಇವರು ದಿನಾಂಕ 11-03-2023 ರಂದು ಹುಬ್ಬಳ್ಳ...
18/06/2023

ಕಾಣೆ ಆಗಿದ್ದಾರೆ.
ಶ್ರೀಮತಿ ಕಸ್ತೂರಿ ಕುಪೇಂದ್ರ ಬಿರಾದಾರ
ಸಾ। ರೇವೂರ ತಾ।। ಅಷ್ಟಲಪುರ ಜಿ।। ಕಲಬುರ್ಗಿ
ಇವರು ದಿನಾಂಕ 11-03-2023 ರಂದು ಹುಬ್ಬಳ್ಳಿ ರೇಲ್ವೆ ನಿಲ್ದಾಣದಲ್ಲಿ ಕಾಣೆಯಾಗಿದ್ದಾರೆ. ವಯಸ್ಸು 45 ವರ್ಷ ಎತ್ತರ ಸುಮಾರು 4.5 ಅಡಿ ಸಾಧಾರಣ ಶಲೀರ, ಮುಖ ಚಹರೆ ದಪ್ಪ ಮೂಗು ಉದ್ದ ಮುಖ ಗೋಧಿ ಮೈ ಬಣ್ಣ ಅಗಲವಾದ ಹಣೆ ತಲೆಯಲ್ಲಿ ಕಪ್ಪು-ಬಿಳಿ ಬಣ್ಣದ ಕೂದಲು, ಕಾಣೆಯಾದ ದಿನ ಹಸಿರು ಬಣ್ಣದ ಸೀರೆ ತೊಟ್ಟಿದ್ದು ಕೈಯಲ್ಲಿ ಕಪ್ಪು ಬಣ್ಣದ ಬ್ಯಾಗ ಇದ್ದು ಇವರು ಬುದ್ಧಿಮಾಂಧ್ಯಲಿದ್ದು, ಈ ಮೇಲ್ಕಾಣಿಸಿದ ಮಹಿಳೆ ಅಥವಾ ಹೋಲಿಕೆ ಇದ್ದ ಯಾರಾದರೂ ಕಂಡಲ್ಲಿ ಈ ಕೆಳಗೆ ಕಾಣಿಸಿದ ದೂರವಾಣಿ ಸಂಖ್ಯೆಗೆ ಸಂಪರ್ಕಿಸಲು ಏನಂತಿ ಅಥವಾ ವಾಟ್ಸ್ ಆಪ್ ಮೂಲಕ ಪೋಟೊ ಕಳಿಸಬೇಕಾಗಿ ವಿನಂತಿ. ಹುಡುಕಿ ಕೊಟ್ಟವರಿಗೆ ಸೂಕ್ತ ಬಹುಮಾನ ಕೊಡಲಾಗುವುದು.
so: 9008435317,8668829521

ಧನ್ಯವಾದಗಳು
VOICE OF KARNATAKA

15/06/2023

ಇದು ಸವಾಲ್ ಅಂದರೆ ಸವಾಲಪ್ಪಾ......!

Address

Bangalore

Telephone

+917676376221

Website

Alerts

Be the first to know and let us send you an email when ವಾಯ್ಸ್ ಆಫ್ ಕರ್ನಾಟಕ." Voice of karanataka" posts news and promotions. Your email address will not be used for any other purpose, and you can unsubscribe at any time.

Contact The Business

Send a message to ವಾಯ್ಸ್ ಆಫ್ ಕರ್ನಾಟಕ." Voice of karanataka":

Share