Suddi Manthana - ಸುದ್ದಿ ಮಂಥನ

Suddi Manthana - ಸುದ್ದಿ ಮಂಥನ Explore hidden talents & unexplored things, temples, historical places, persons etc,..

ಗೊರೂರು ಶಿವೇಶ್ ಸರ್.. Gorur GBS sir 💐
30/10/2024

ಗೊರೂರು ಶಿವೇಶ್ ಸರ್.. Gorur GBS sir 💐

'ಅಮರ . . . ಮಧುರ . . . ಸ್ನೇಹ' ವಿಶೇಷ ಬರಹ-ಗೊರೂರು ಶಿವೇಶ್ ಮುಂದೆ ಪ್ರೌಢಶಾಲೆಗೆ ಕಾಲಿರಿಸಿದಾಗ ಸೆಕ್ಷನ್‍ಗಳು ಬದಲಾವಣೆಯಾಗಿ ಭೇಟಿಗಳ ಸಂಖ್...

ಕನ್ನಡ - ಕರ್ನಾಟಕ ರಾಜ್ಯೋತ್ಸವದ ಈ ಸಂದರ್ಭದಲ್ಲಿ ಕನ್ನಡ ತಾಯಿ ಭಾಷೆಯ ಜನರಲ್ಲಿ ಒಂದು ಪ್ರೀತಿ ಪೂರ್ವಕ ಮನವಿ........ಕನ್ನಡಕ್ಕಾಗಿ ಕೈ ಎತ್ತು ಅ...
27/10/2024

ಕನ್ನಡ - ಕರ್ನಾಟಕ ರಾಜ್ಯೋತ್ಸವದ ಈ ಸಂದರ್ಭದಲ್ಲಿ ಕನ್ನಡ ತಾಯಿ ಭಾಷೆಯ ಜನರಲ್ಲಿ ಒಂದು ಪ್ರೀತಿ ಪೂರ್ವಕ ಮನವಿ........

ಕನ್ನಡಕ್ಕಾಗಿ ಕೈ ಎತ್ತು ಅದೇ ಕಲ್ಪ ವೃಕ್ಷ........

ನೀವು ಹಿಂದೂ ಆಗಿರಿ, ಮುಸ್ಲಿಂ ಆಗಿರಿ, ಕ್ರಿಶ್ಚಿಯನ್ ಆಗಿರಿ, ಬೌದ್ದರಾಗಿರಿ, ಜೈನರಾಗಿರಿ, ಬಸವ ಧರ್ಮದವರಾಗಿರಿ, ಸಿಖ್ ಆಗಿರಿ, ಪಾರ್ಸಿಯಾಗಿರಿ ಅಥವಾ ಇನ್ಯಾವುದೇ ಧರ್ಮದವರಾಗಿರಿ.....

ನೀವು ಕಾಂಗ್ರೇಸ್ ಆಗಿರಲಿ, ಬಿಜೆಪಿ ಆಗಿರಲಿ, ಜೆಡಿಎಸ್ ಆಗಿರಲಿ, ಕಮ್ಯುನಿಸ್ಟ್ ಆಗಿರಲಿ, ಸಮಾಜವಾದಿ ಪಕ್ಷ ಆಗಿರಲಿ, ಸಂಯುಕ್ತ ಜನತಾದಳ ಆಗಿರಲಿ, ಬಿಎಸ್ಪಿ ಆಗಿರಲಿ, ಎಎಪಿ ಆಗಿರಲಿ, ಕೆ ಆರ್ ಎಸ್ ಆಗಿರಲಿ, ಪ್ರಜಾಕೀಯ ಆಗಿರಲಿ, ಜೆ ಪಿ ಪಕ್ಷದವರಾಗಿರಲಿ ಅಥವಾ ಇನ್ಯಾವುದೇ ಪಕ್ಷದವರಾಗಿರಿ,.....

ನೀವು ಪರಿಶಿಷ್ಟ ಜಾತಿಯವರಾಗಿರಿ, ಪಂಗಡದವರಾಗಿರಿ, ಬ್ರಾಹ್ಮಣರಾಗಿರಿ, ಲಿಂಗಾಯತರಾಗಿರಿ, ಒಕ್ಕಲಿಗರಾಗಿರಿ, ಕುರುಬರಾಗಿರಿ, ವಾಲ್ಮೀಕಿ ಸಮುದಾಯದವರಾಗಿರಿ, ವಿಶ್ವಕರ್ಮದವರಾಗಿರಿ, ತಿಗಳರಾಗಿರಿ, ಯಾದವರಾಗಿರಿ ಅಥವಾ ಯಾವುದೇ ಜಾತಿಯವರಾಗಿರಿ,......

ನೀವು ವೈದ್ಯರಾಗಿರಿ, ಶಿಕ್ಷಕರಾಗಿರಿ, ಭಿಕ್ಷುಕರಾಗಿರಿ, ಕೂಲಿಯಾಗಿರಿ, ವಕೀಲರಾಗಿರಿ, ಆರಕ್ಷಕರಾಗಿರಿ, ಲೆಕ್ಕ ಪರಿಶೋಧಕರಾಗಿರಿ, ರಾಜಕಾರಣಿಯಾಗಿರಿ, ಅಧಿಕಾರಿಯಾಗಿರಿ, ರೈತರಾಗಿರಿ, ಕಾರ್ಮಿಕರಾಗಿರಿ ಅಥವಾ ಯಾರೇ ಆಗಿರಿ........

ಕರ್ನಾಟಕದ ಶಾಶ್ವತ ನಿವಾಸಿಗಳಾಗಿದ್ದರೆ, ತಾಯಿ ಭಾಷೆ ಕನ್ನಡದ ವಿಷಯ ಬಂದಾಗ ದಯವಿಟ್ಟು ಕನ್ನಡಿಗರಾಗಿರಿ ಮತ್ತು ಒಕ್ಕೊರಲಿನಿಂದ ಕನ್ನಡ ಪರ ಧ್ವನಿ ಎತ್ತಿ. ಅದು ಹಿಂದಿ ಏರಿಕೆ ಇರಬಹುದು, ಸಂಸ್ಕೃತಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇರಬಹುದು, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡದ ಕಡೆಗಣನೆ ಇರಬಹುದು, ರಾಜಕೀಯ ಕಾರಣಗಳಿಗಾಗಿ ಕರ್ನಾಟಕದ ಹಕ್ಕುಗಳು ಮೇಲಿನ ಹಲ್ಲೆ ಇರಬಹುದು ಅಥವಾ ಯಾವುದೇ ವಿಷಯವಿರಲಿ ಎಲ್ಲಾ ಭಿನ್ನಾಭಿಪ್ರಾಯಗಳ ನಡುವೆ ಕನ್ನಡ ಪರ ಸರ್ವ ಸಮ್ಮತ ಅಭಿಪ್ರಾಯ ಮೂಡುವಂತೆ ಕಾರ್ಯನಿರ್ವಹಿಸಿ.

ಏಕೆಂದರೆ.....

ಕರ್ನಾಟಕ ಎಂಬುದೇನು
ಹೆಸರೇ ಬರಿಯ ಮಣ್ಣಿಗೆ,
ಮಂತ್ರ ಕಣಾ ಶಕ್ತಿ ಕಣಾ
ತಾಯಿ ಕಣಾ ದೇವಿ‌ ಕಣಾ
ಬೆಂಕಿ ಕಣಾ ಸಿಡಿಲು ಕಣಾ
ಕಾವ ಕೊಲುವ ಒಲವ ಬಲವಾ
ಪಡೆದ ಚೆಲುವ ಚೆಂಡಿ ಕಣಾ
ಋಷಿಯ ಕಾಣ್ಬ ಕಣ್ಣಿಗೆ,
ರಾಷ್ಟ್ರ ಕವಿ ಕುವೆಂಪು....

ತಾಯಿ ಭಾಷೆ ಉಳಿಯದಿದ್ದರೆ ನಮ್ಮ ಬದುಕು ಸಹಜವಾಗಿ ಉಳಿಯುವುದು ಕಷ್ಟ. ಅದು ಅಸಹಜವಾಗಿ ಬೆಳೆಯುತ್ತದೆ.
ಉದಾಹರಣೆಗೆ, ಇತ್ತೀಚಿನ ವರ್ಷಗಳಲ್ಲಿ ಕಂಪ್ಯೂಟರ್ ಮತ್ತು ಮೊಬೈಲ್‌ ತಂತ್ರಜ್ಞಾನದ ಇಂಟರ್ ನೆಟ್ ಎಂಬ ಮಾಹಿತಿಯ ಭಾಷೆ ಹೆಚ್ಚು ಬೆಳವಣಿಗೆ ಹೊಂದುತ್ತಿರುವ ಸಮಯದಲ್ಲಿ ಸ್ವಲ್ಪ ಹಳೆಯ ಪೀಳಿಗೆಯ ಯಾವುದೇ ಕ್ಷೇತ್ರದ ದೊಡ್ಡ ದೊಡ್ಡ ವಿದ್ವಾಂಸರು, ಚಿಂತಕರು, ಜ್ಞಾನಿಗಳೇ ಈ ತಂತ್ರಜ್ಞಾನದ ಮುಂದೆ ಅನಕ್ಷರಸ್ಥರಂತೆ ಕಾಣುತ್ತಿದ್ದಾರೆ. ಕಾರಣ ಈ ಗ್ಯಾಜೆಟ್ ಭಾಷೆಯಲ್ಲಿ ಸಣ್ಣ ಮಕ್ಕಳೇ ನುರಿತವರಂತೆ ಉಪಯೋಗಿಸುತ್ತಾರೆ.

ನಾನು ಕಂಡಂತೆ ಮೊಬೈಲಿನಲ್ಲಿ ಎರಡು/ಮೂರು ವರ್ಷದ ಮಗು ಯೂಟ್ಯೂಬ್ ತಾನೇ ತೆಗೆದು ನೋಡುತ್ತದೆ. ಐದು ವರ್ಷದ ಮಗು ಸ್ವಿಗ್ಗಿ ಜೊಮೋಟೋ ಸ್ಲಿಪ್ ಕಾರ್ಟ್ ಅಮೆಜಾನ್ ಉಪಯೋಗಿಸಿಕೊಂಡು ಊಟ ತರಿಸಿಕೊಳ್ಳುತ್ತದೆ. ಕೆಲವರು ಅವರ ಅಪ್ಪ ಅಮ್ಮ ಅಜ್ಜ ಅಜ್ಜಿಗೆ ರೈಲ್ವೆ ಟಿಕೆಟ್, ಔಷಧಿ ಮತ್ತು ಇತರ ಅವಶ್ಯಕ ವಸ್ತುಗಳನ್ನು ಖರೀದಿಸಿ ಕೊಡುತ್ತಾರೆ. ಇನ್ನೂ ಹೆಚ್ಚಿನ ಮಾಹಿತಿ ನೀಡುತ್ತಾರೆ. ಸಾಮಾಜಿಕ ಜಾಲತಾಣಗಳನ್ನು ಸುಲಭವಾಗಿ ಉಪಯೋಗಿಸುತ್ತಾರೆ. ಅಂದರೆ ಹೊಸ ಭಾಷೆ ಅಥವಾ ನಮ್ಮದಲ್ಲದ ಭಾಷೆ ಸೃಷ್ಟಿಯಾದಾಗ ಅದು ನಮ್ಮನ್ನು ಅನಾಥ ಪ್ರಜ್ಞೆಗೆ ದೂಡುತ್ತದೆ.

ಒಂದು ವೇಳೆ ನೀವು ಹೊಸ ಭಾಷೆಯನ್ನು ನಿಧಾನವಾಗಿ ಕಲಿಯಬಹುದು ಎಂದೇ ಭಾವಿಸಿ. ಆಗಲೂ ಸಹ ಸಂಪರ್ಕ ಸುಲಭವಾಗಬಹುದು. ಆದರೆ ಸ್ವಾಭಾವಿಕ ಸಂಸ್ಕೃತಿ ನಮ್ಮಿಂದ ಮರೆಯಾಗುತ್ತದೆ. ಬದುಕು ಅಸಹಜವೆನಿಸಿ ಭಾರವಾಗುತ್ತದೆ.
ಆದ್ದರಿಂದ ನಮ್ಮಗಳ ನಡುವೆ ಎಷ್ಟೇ ಸೈದ್ದಾಂತಿಕ ಭಿನ್ನಾಭಿಪ್ರಾಯ ಅಥವಾ ಇನ್ನೇನೆ ಅಭಿಪ್ರಾಯ ಭೇದಗಳು ಇದ್ದರೂ ದಯವಿಟ್ಟು ಕನ್ನಡ ತಾಯಿ ಭಾಷೆಯನ್ನು ಉಳಿಸೋಣ, ಬೆಳೆಸೋಣ ಮತ್ತು ಬದುಕಿನ ಭಾಗವಾಗಿ ಅಳವಡಿಸಿಕೊಳ್ಳೋಣ. ದಕ್ಷಿಣದ ಭಾಷೆಗಳಲ್ಲಿ ಕನ್ಬಡವೇ ಸ್ವಲ್ಪ ನಮ್ಮವರಿಂದಲೇ ನಿರ್ಲಕ್ಷ್ಯಕ್ಕೆ ಒಳಗಾಗಿದೆ.

ಏಕೆಂದರೆ.......

ನಾನು ನಕ್ಕಾಗ ನಗಿಸಿದ್ದು ಕನ್ನಡ,
ನಾನು ಅತ್ತಾಗ ಅಳಿಸಿದ್ದು ಕನ್ನಡ,
ನಾನು ಪ್ರೀತಿಸಿದಾಗ ಮೂಡಿದ್ದು ಕನ್ನಡ,
ನಾನು ಪ್ರೇಮಿಸಿದಾಗ ಅರಳಿದ್ದು ಕನ್ನಡ,
ನಾನು ಕಾಮಿಸಿದಾಗ ಕನಲಿದ್ದು ಕನ್ನಡ,

ನನ್ನ ಖುಷಿಗೆ ಜೊತೆಯಾಗಿದ್ದು ಕನ್ನಡ,
ನನ್ನ ಕೋಪಕ್ಕೆ ಸೇರಿಕೊಂಡಿದ್ದು ಕನ್ನಡ,
ನನ್ನ ಖಿನ್ನತೆ ವ್ಯಕ್ತಪಡಿಸಿದ್ದು ಕನ್ನಡ,
ನನ್ನ ಭಕ್ತಿಯೂ ಕನ್ನಡ,
ನನ್ನ ಶಕ್ತಿಯೂ ಕನ್ನಡ
ನನ್ನ ಮುಕ್ತಿಯೂ ಕನ್ನಡ,

ನನ್ನಲ್ಲಿ ಅರಿವು ಮೂಡಿಸಿದ್ದು ಕನ್ನಡ,
ನನ್ನಲ್ಲಿ ಅಹಂಕಾರ ಬೆಳೆಸಿದ್ದೂ ಕನ್ನಡ,
ನನ್ನಲ್ಲಿ ಹೆಮ್ಮೆ ಬೆಳಗಿಸಿದ್ದೂ ಕನ್ನಡ,
ನನ್ನಲ್ಲಿ ಕೀಳರಿಮೆ ತಂದದ್ದೂ ಕನ್ನಡ,
ನನ್ನಲ್ಲಿ ಅಭಿಮಾನ ಸೇರಿಸಿದ್ದು ಕನ್ನಡ,

ನನಗೆ ದೃಷ್ಟಿಯಾಗಿ ಕಂಡದ್ದು ಕನ್ನಡ,
ನನಗೆ ಧ್ವನಿಯಾಗಿ ಕೇಳಿದ್ದು ಕನ್ನಡ,
ನನಗೆ ವಾಸನೆಯಾಗಿ ಗ್ರಹಿಸಿದ್ದು ಕನ್ನಡ,
ನನಗೆ ರುಚಿಯಾಗಿ ಸವಿದದ್ದು ಕನ್ನಡ,
ನನಗೆ ಸ್ಪರ್ಶವಾಗಿ ಮುಟ್ಟಿದ್ದು ಕನ್ನಡ,

ಮಾತು ಕಲಿಸಿದ್ದು ಕನ್ನಡ,
ವಿದ್ಯೆ ನೀಡಿದ್ದು ಕನ್ನಡ ,
ಉದ್ಯೋಗ ದೊರಕಿಸಿದ್ದು ಕನ್ನಡ,
ಬದುಕು ದಯಪಾಲಿಸಿದ್ದು ಕನ್ನಡ,
ನಮ್ಮ ನಿಮ್ಮ ಗೆಳೆತನಕ್ಕೆ ಸಾಕ್ಷಿಯಾದದ್ದು ಕನ್ನಡ,

ನಾನು ಕನ್ನಡ - ನೀವೂ ಕನ್ನಡ,
ಅವನೂ ಕನ್ನಡ - ಅವಳೂ ಕನ್ನಡ,
ಎಲ್ಲವೂ ಕನ್ನಡ - ಎಲ್ಲರೂ ಕನ್ನಡ,
ಎಲ್ಲೆಲ್ಲೂ ಕನ್ನಡ - ಎಂದೆಂದೂ ಕನ್ನಡ,
ನಮ್ಮೆಲ್ಲರ ಜೀವನವೇ,

ಕನ್ನಡ ಕನ್ನಡ ಕನ್ನಡ........

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ - ಮನೆಗಳಲ್ಲಿ - ಮತಗಳಲ್ಲಿ - ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9844013068......

25/10/2024

ಸರ್ಕಸ್ ಅಲ್ಲಿ ಪ್ರಾಣಿಗಳು ಮಾಯಾವಾಗಿವೆ..
ಆದ್ರೆ ಇಲ್ಲಿ ಟಿವಿ ಷೋ ಗಳಲ್ಲಿ ಮನುಷ್ಯರೇ ಪ್ರಾಣಿಗಳಿಗಿಂತ ಹೀನಾಯವಾಗಿ ಬಳಸಿಕೊಳ್ಳುತ್ತಿದ್ದಾರೆ😢!

Vergin cocunut oil doctor organic
18/09/2024

Vergin cocunut oil doctor organic

oil

ಅಕ್ಷರ ಸಾಹಿತ್ಯ,ಅನುಭವ ಸಾಹಿತ್ಯ,ಅನುಭಾವ ಸಾಹಿತ್ಯ..........ಅಕ್ಷರ ಸಾಹಿತ್ಯ......***************ಅಕ್ಷರಗಳನ್ನು ಕಲಿತಿರುವ ಕಾರಣದಿಂದ ಏನಾದ...
29/08/2024

ಅಕ್ಷರ ಸಾಹಿತ್ಯ,
ಅನುಭವ ಸಾಹಿತ್ಯ,
ಅನುಭಾವ ಸಾಹಿತ್ಯ..........

ಅಕ್ಷರ ಸಾಹಿತ್ಯ......
***************

ಅಕ್ಷರಗಳನ್ನು ಕಲಿತಿರುವ ಕಾರಣದಿಂದ ಏನಾದರೂ ಬರೆಯಬೇಕು ಎಂಬ ಹಂಬಲದಿಂದ ಬರೆಯುತ್ತಾ ಹೋಗುವುದು ಅಕ್ಷರ ಸಾಹಿತ್ಯ. ಇಲ್ಲಿ ಅಕ್ಷರಗಳದೇ ಪ್ರಾಬಲ್ಯ. ಅಕ್ಷರಗಳಿಂದಲೇ ಭಾವನೆಗಳನ್ನು, ಕಲ್ಪನೆಗಳನ್ನು, ಅನುಭವಗಳನ್ನು, ಮಾಹಿತಿಗಳನ್ನು ಇತ್ಯಾದಿ ಎಲ್ಲಾ ಪ್ರಕಾರದ ಬರಹಗಳನ್ನು ಮೂಡಿಸುತ್ತಾ ಹೋಗುವುದು. ತನಗೆ ತಿಳಿದಿರುವ ಅಥವಾ ತನ್ನ ಜ್ಞಾನದ ಮಿತಿಯಲ್ಲಿ ಬರೆಯುವುದು. ಇದರಲ್ಲಿ ಅಕ್ಷರದ ಅಥವಾ ಪದಗಳ ಲಾಲಿತ್ಯವೇ ಮೇಲುಗೈ ಪಡೆದಿರುತ್ತದೆ ಜೊತೆಗೆ ತನ್ನ ಬುದ್ದಿಯ ಪ್ರದರ್ಶನವೂ ಸೇರಿರುತ್ತದೆ. ನನ್ನ ವೈಯಕ್ತಿಕ ಅನಿಸಿಕೆಯ ಪ್ರಕಾರ ಇದರಲ್ಲಿ ಹೆಚ್ಚು ಜೀವ ಇರುವುದಿಲ್ಲ. ಒಣ ಅಥವಾ ಶುಷ್ಕ ವಾತಾವರಣದ ರೀತಿಯಲ್ಲಿ ಈ ಬರಹಗಳು ಇರುತ್ತವೆ. ಇದರಲ್ಲಿ ಹೆಚ್ಚು ಆಳವಾದ ಅಥವಾ ಅಧ್ಯಯನದ ಒಳ ಅರ್ಥಗಳು ಗೋಚರಿಸುವ ಸಾಧ್ಯತೆ ಕಡಿಮೆ. ನಿರೂಪಣೆಯೇ ಇಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತದೆ.

ಅನುಭವ ಸಾಹಿತ್ಯ......
***********************

ಅಕ್ಷರ ಜ್ಞಾನದ ಜೊತೆಗೆ ಬದುಕಿನ ಅನುಭವದ ಆಧಾರದ ಮೇಲೆ ಬರೆಯುವ ಪ್ರಕಾರ. ಅಂದರೆ ಇಲ್ಲಿ ಅನುಭವಗಳಿಗೆ ಅಕ್ಷರದ ರೂಪ ನೀಡುವುದು. ಒಂದಷ್ಟು ಅಧ್ಯಯನ ಚಿಂತನೆಗಳು ಇಲ್ಲಿ ಅಡಕವಾಗಿರುವ ಸಾಧ್ಯತೆ ಇರುತ್ತದೆ. ಬರೆಯುವ ತುಡಿತ ಹೆಚ್ಚಾಗಿರುತ್ತದೆ. ಆ ಅಕ್ಷರಗಳಲ್ಲಿ ಜೀವಂತಿಕೆಯ ಲಕ್ಷಣಗಳನ್ನು ಗುರುತಿಸಬಹುದು.

ಅಕ್ಷರಗಳಿಂದ ಅನುಭವದ ರೂಪ ಕೊಡುವುದಕ್ಕಿಂತ ಅನುಭವವನ್ನು ಅಕ್ಷರಗಳಲ್ಲಿ ಹಿಡಿದಿಡುವುದು ಸಾಹಿತ್ಯಿಕವಾಗಿ ಉತ್ತಮ ಗುಣಮಟ್ಟವನ್ನು ಮುಟ್ಟಲು ಸಾಧ್ಯವಾಗುತ್ತದೆ.

ಅನುಭಾವ ಸಾಹಿತ್ಯ...
*********************

" ರವಿ ಕಾಣದ್ದನ್ನು ಕವಿ ಕಂಡ " ಎಂಬ ನಾಣ್ಣುಡಿಯನ್ನು ಇದು ನೆನಪಿಸುತ್ತದೆ. ಅಕ್ಷರ ಜ್ಞಾನದ ಜೊತೆಗೆ ಅನುಭವವೂ ಸೇರಿ ಅದರಿಂದ ಮೇಲೇರಿ ಇನ್ನಷ್ಟು ಆಳವನ್ನು ಹುಡುಕುತ್ತಾ ಒಳನೋಟಗಳನ್ನು, ವಿವಿಧ ಮುಖಗಳನ್ನು ಗ್ರಹಿಸುತ್ತ, ಬರೆಯುತ್ತಾ ಹೋಗುವುದು ಅನುಭಾವ ಸಾಹಿತ್ಯ ತುಂಬಾ ಸೂಕ್ಷ್ಮ ಮತ್ತು ದೂರ ದೃಷ್ಟಿ ಇದರಲ್ಲಿ ಸಿಗುತ್ತದೆ. ಅಧ್ಯಯನ ಮತ್ತು ಚಿಂತನೆಯೂ ಇಲ್ಲಿ ಅಡಕವಾಗಿರುತ್ತದೆ. ಇದರಲ್ಲಿ ಜೀವ ಮೈತುಂಬಿ ಹರಿಯುತ್ತದೆ..

ಬರಹಗಳಲ್ಲಿ ಸಹ ಗುಣಮಟ್ಟವನ್ನು ಅಳೆಯಬಹುದು. ಅನೇಕ ಬರಹಗಳು ಕಾಲದ ಅಗ್ನಿ ಪರೀಕ್ಷೆಯಲ್ಲಿ ಗೆದ್ದು ಈಗಲೂ ಪ್ರಸ್ತುತವಾಗಿ ಉಳಿದಿರುವುದಕ್ಕೆ ಕಾರಣ ಅವುಗಳ ಆಳದಲ್ಲಿ ಇರುವ ಅನುಭಾವ.

ಸಾಮಾಜಿಕ ಜಾಲತಾಣಗಳ ಬೆಳವಣಿಗೆಯೊಂದಿಗೆ ಅನೇಕ ಬರಹಗಾರರು ಸೃಷ್ಟಿಯಾಗಿದ್ದಾರೆ. ಸಾಹಿತ್ಯ ರಚಿಸಲು ಜನಸಾಮಾನ್ಯರಿಗೆ ಒಂದು ಅತ್ಯುತ್ತಮ ವೇದಿಕೆ ದೊರೆತಿದೆ.
ಆದರೆ ಅದು ಅಕ್ಷರ ಸಾಹಿತ್ಯ ದಾಟಿ ಅನುಭವ ‌ಸಾಹಿತ್ಯ ಮೀರಿ ಅನುಭಾವ ಸಾಹಿತ್ಯವಾಗಲಿ ಎಂಬುದು ಒಂದು ಆಶಯ.

ನಿಜವಾದ ಸಾಹಿತ್ಯ ಮಾನವೀಯತೆಯ ವಿಕಾಸವಾದದ ಕುರುಹುಗಳಾಗಿ ಉಳಿಯಬೇಕೇ ಹೊರತು ಶಿಕ್ಷಣ ಆಧಾರಿತ ಮಾನವೀಯ ಮೌಲ್ಯಗಳ ವಿನಾಶದ ಮಾರ್ಗವಾಗಬಾರದು.............
ಇದೊಂದು ಸರಳ ನಿರೂಪಣೆ. ಸಾಹಿತ್ಯದ‌ ಆಳ ಅಗಲಗಳು ಅನಂತ........

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9844013068.......

25/07/2024

ನಾವು ಐಟಿ ಉದ್ಯೋಗಿಗಳು ನಿಜಾ.. ಆದರೇ ಜೀತದಾಳುಗಳಲ್ಲ.

ಜೀತ ಪದ್ದತಿ ಇನ್ನೂ ಕರ್ನಾಟಕದಲ್ಲಿ ರದ್ದಾಗಿಲ್ಲವೇ?

ಕನ್ನಡ ಚಿತ್ರರಂಗ ದುಸ್ಥಿತಿಯಲ್ಲಿ....... ಕೆಲವೇ ಕೆಲವು ನಟನಟಿಯರು, ನಿರ್ಮಾಪಕರು, ಪ್ರದರ್ಶಕರು ಮಾತ್ರವೇ ದೊಡ್ಡ ಮಟ್ಟದ ಯಶಸ್ಸು ಕಂಡು ಹಣ ಮಾಡು...
26/05/2024

ಕನ್ನಡ ಚಿತ್ರರಂಗ ದುಸ್ಥಿತಿಯಲ್ಲಿ.......

ಕೆಲವೇ ಕೆಲವು ನಟನಟಿಯರು, ನಿರ್ಮಾಪಕರು, ಪ್ರದರ್ಶಕರು ಮಾತ್ರವೇ ದೊಡ್ಡ ಮಟ್ಟದ ಯಶಸ್ಸು ಕಂಡು ಹಣ ಮಾಡುತ್ತಿದ್ದಾರೆ. ಬಹುತೇಕ ಶೇಕಡಾ 90% ಕ್ಕಿಂತ ಹೆಚ್ಚು ಆ ಕ್ಷೇತ್ರದ ಅವಲಂಬಿತರು ನಷ್ಟದಲ್ಲಿದ್ದಾರೆ ಅಥವಾ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದು ಹೀಗೆಯೇ ಮುಂದುವರೆದರೆ ಚಿತ್ರರಂಗ ಅವಸಾನದ ಅಂಚಿಗೆ ಬಂದು ತಲುಪುತ್ತದೆ. ಆದ್ದರಿಂದ ಏನಾದರೂ ಕ್ರಮ ಕೈಗೊಳ್ಳಲೇಬೇಕು.....

ಮುಖ್ಯವಾಗಿ ಪ್ರಖ್ಯಾತ ನಟರು ಹೆಚ್ಚು ಹೆಚ್ಚು ಸಿನಿಮಾ ಮಾಡಬೇಕು. ಏಕೆಂದರೆ ಅವರಿಂದ ಒಂದಷ್ಟು ಪ್ರೇಕ್ಷಕರು ಚಿತ್ರಮಂದಿರಗಳತ್ತ ಬರಬಹುದು ಎಂಬ ನಿರೀಕ್ಷೆ. ಹಾಗೆಯೇ ಬಿ ಮತ್ತು ಸಿ ದರ್ಜೆಯ ಚಿತ್ರಮಂದಿರಗಳು ಬಹುತೇಕ ಮುಚ್ಚುವ ಹಂತದಲ್ಲಿವೆ ಅಥವಾ ಮುಚ್ಚಿವೆ. ಈಗ ದಾರಿ ಕಾಣದಾಗಿದೆ ಎಂಬ ಚರ್ಚೆಗಳು ಕನ್ನಡ ಚಿತ್ರರಂಗದಲ್ಲಿ ನಡೆಯುತ್ತಿದೆ.....

ಯಾವಾಗಲೂ ಒಂದು ಕ್ಷೇತ್ರ ಆರ್ಥಿಕ ಸಂಕಷ್ಟ ಎದುರಾದಾಗ ಆ ಕ್ಷೇತ್ರದ ಜನ ಅಷ್ಟಕ್ಕೇ ಸೀಮಿತವಾಗಿ ಒಂದಷ್ಟು ಕ್ರಮಗಳನ್ನು ಕೈಗೊಳ್ಳುತ್ತಾರೆ. ಇದು ಸಾಮಾನ್ಯ ಪ್ರಕ್ರಿಯೆ. ಆದರೆ ಜಾಗತೀಕರಣದ ನಂತರ ಈ ರೀತಿಯ ಅನೇಕ ಕ್ಷೇತ್ರಗಳು ಸಾಕಷ್ಟು ದೊಡ್ಡ ಪಲ್ಲಟಗಳಿಗೆ ಕಾರಣವಾಗಿ ಅದು ಸಂಪೂರ್ಣ ಕುಸಿದು, ಆ ಪ್ರಕ್ರಿಯೆಯಲ್ಲಿ ಅನೇಕರು ನಷ್ಟ ಅನುಭವಿಸಿ ಆ ಕ್ಷೇತ್ರವನ್ನೇ ಬಿಟ್ಟು ಹೋಗಿರುವುದಲ್ಲದೆ ಇನ್ನೂ ಕೆಲವರು ಆತ್ಮಹತ್ಯೆಯನ್ನೇ ಮಾಡಿಕೊಂಡಿದ್ದಾರೆ........

ಇದು ಸಮಗ್ರ ಚಿಂತನೆಗೆ ಒಳಪಡಬೇಕಾದ ವಿಷಯ. ಕೃಷಿ ಕ್ಷೇತ್ರವೇ ಇರಲಿ, ರೇಷ್ಮೆ ಉದ್ಯಮವೇ ಇರಲಿ, ಶಿಕ್ಷಣ ಆರೋಗ್ಯವೇ ಇರಲಿ, ಮನರಂಜನಾ ಉದ್ಯಮವೇ ಇರಲಿ, ರಾಜಕೀಯವೇ ಇರಲಿ,, ಉದ್ಯಮ ವ್ಯಾಪಾರವೇ ಇರಲಿ, ಬೀದಿ ಬದಿಯ ಸಣ್ಣಪುಟ್ಟ ವ್ಯಾಪಾರಿಗಳೇ ಇರಲಿ, ಚಿಲ್ಲರೆ ಅಂಗಡಿಗಳವರೇ ಆಗಿರಲಿ ದೊಡ್ಡ ವ್ಯಕ್ತಿಗಳು, ದೊಡ್ಡ ಸಂಸ್ಥೆಗಳು ಅಂದರೆ ಕಾರ್ಪೊರೇಟ್ ಸಂಸ್ಕೃತಿ ಯಾವುದೇ ಕ್ಷೇತ್ರಕ್ಕೆ ಪ್ರವೇಶಿಸಿದ ನಂತರ ಅದು ತನ್ನ ಕಬಂಧ ಬಾಹುಗಳನ್ನು ಎಲ್ಲೆಡೆ ಚಾಚಿ, ಮಧ್ಯಮ ಮತ್ತು ಸಣ್ಣ ಪ್ರಮಾಣದ ಎಲ್ಲರನ್ನು ತನ್ನೊಳಗಡೆ ಬಂಧಿಸಿ, ಅವರನ್ನು ನಾಶಪಡಿಸಿ ತಾನೇ ಏಕೀಕೃತ ಮತ್ತು ಕೇಂದ್ರೀಕೃತ ಆರ್ಥಿಕ ಬಲಶಾಲಿಯಾಗುವುದು ಸಾಮಾನ್ಯ ದೃಶ್ಯವಾಗಿದೆ......

ಇದನ್ನು ಎಲ್ಲಾ ಕ್ಷೇತ್ರಗಳಲ್ಲೂ ನೀವು ಗಮನಿಸಬಹುದು. ಸಣ್ಣಪುಟ್ಟ ಆಸ್ಪತ್ರೆಗಳು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳಾಗಿ ಅದು ಮತ್ತೆ ಬೃಹತ್ ಉದ್ಯಮಿಯ ಕೈಗೆ ಹೋಗಿ ಆ ಜಾಲ ದೇಶಾದ್ಯಂತ ವ್ಯಾಪಿಸುತ್ತದೆ. ದಿನನಿತ್ಯದ ಸರಕು ಸರಂಜಾಮುಗಳ ವ್ಯಾಪಾರವು ಮಾಲ್ ಸಂಸ್ಕೃತಿ, ಬಿಗ್ ಬಜಾರ್ ಸಂಸ್ಕೃತಿಗೆ ಒಳಪಟ್ಟು ಚಿಕ್ಕ ಪುಟ್ಟ ಅಂಗಡಿಗಳು ಬದುಕುವುದೇ ದುಸ್ತರವಾಗಿದೆ....

ಹಾಗೆಯೇ ಮನರಂಜನಾ ಉದ್ಯಮವು ಸಹ ಕೆಲವೇ ಕೆಲವು ಹಿತಾಸಕ್ತಿಗಳು, ಜನಪ್ರಿಯರು ಮಾತ್ರವೇ ಚಿತ್ರರಂಗ ಎಂದು ಪರಿಗಣಿಸುವ ಮಟ್ಟಕ್ಕೆ ಬೆಳೆದಿರುತ್ತದೆ. ಬಣ್ಣದ ಲೋಕದ ಮನರಂಜನಾ ಉದ್ಯಮ ಈಗ ಅನುಭವಿಸುತ್ತಿರುವ ಸಂಕಷ್ಟಗಳು ಈ ದೇಶದ ಅನೇಕ ಮಧ್ಯಮ, ಕೆಳಮಧ್ಯಮ ವರ್ಗದ ಜನ ಕಳೆದ 20/30 ವರ್ಷಗಳಿಂದ ಅನುಭವಿಸುತ್ತಾ ಇದ್ದಾರೆ. ಇದು ಹೊಸದೇನು ಅಲ್ಲ. ನಮ್ಮ ಕಣ್ಣ ಮುಂದೆಯೇ ಅನೇಕ ಸಿರಿವಂತ ಕುಟುಂಬಗಳು ಕೆಳಕ್ಕೆ ಜಾರಿವೆ. ಹಾಗೆಯೇ ಅನಿರೀಕ್ಷಿತವಾಗಿ ಕೆಲವು ಕುಟುಂಬಗಳು ದೊಡ್ಡ ಹಂತಕ್ಕೆ ಬೆಳೆದೂ ಸಹ ಇವೆ.....

ಕೆಜಿಎಫ್, ಬಾಹುಬಲಿಯಂತ ಸಿನಿಮಾ 1500 ಕೋಟಿ ಅಥವಾ ಕಾಂತಾರದಂತಹ ಸಿನಿಮಾ 700 ಕೋಟಿ ಹಣ ಮಾಡುತ್ತಿರುವಾಗ ಚಿತ್ರರಂಗ ದುಸ್ಥಿತಿಗೆ ಬರಲು ಹೇಗೆ ಸಾಧ್ಯ ಎಂದು ಜನಸಾಮಾನ್ಯರಿಗೆ ಅನ್ನಿಸಬಹುದು. ನಾವು ಕೇವಲ ಯಶಸ್ಸುಗಳನ್ನು, ಪ್ರಚಾರ ಪಡೆದ ಸಿನಿಮಾಗಳನ್ನು ಮಾತ್ರ ಗಮನಿಸಬಾರದು. ದೊಡ್ಡ ಮೊತ್ತ ಕೇವಲ ಒಂದು ಎರಡಕ್ಕೇ ಸೀಮಿತವಾಗಿರುತ್ತದೆ. ಆದರೆ ಕನ್ನಡ ಚಿತ್ರರಂಗದಲ್ಲಿ ಸಾಮಾನ್ಯವಾಗಿ ಸರಿಸುಮಾರು ವರ್ಷಕ್ಕೆ 100/130/180 ಚಿತ್ರಗಳು ನಿರ್ಮಾಣವಾಗಿ ಬಿಡುಗಡೆಯಾಗುತ್ತವೆ. ಅದನ್ನೂ ಗಮನಿಸಬೇಕು....

ಒಬ್ಬ ನಾಯಕನಟ 100 ಕೋಟಿ, 50 ಕೋಟಿಯ ಸಂಭಾವನೆ ಪಡೆದರೆ ಅದು ಆತನಿಗೆ ಮಾತ್ರ ಸೀಮಿತವಾಗಿರುತ್ತದೆ. ಅದೇ ಮಾನದಂಡವನ್ನು ಎಲ್ಲ ಕಡೆ ಉಪಯೋಗಿಸಲು ಸಾಧ್ಯವಿಲ್ಲ. ಇಡೀ ವ್ಯವಸ್ಥೆ ಎಚ್ಚೆತ್ತುಕೊಂಡು ಸುಸ್ಥಿರ ಅಭಿವೃದ್ಧಿಯ ಕಡೆ, ಸಮಾನ ಹಂಚಿಕೆಯ ಕಡೆ, ಸಮಾನ ಹಕ್ಕು ಮತ್ತು ಕರ್ತವ್ಯಗಳ ಕಡೆ ಮುನ್ನುಗ್ಗದಿದ್ದರೆ ಈ ರೀತಿಯ ಏರಿಳಿತಗಳಿಗೆ ಎಲ್ಲ ಕ್ಷೇತ್ರಗಳ ಮಧ್ಯಮ ಮತ್ತು ಕೆಳ ಮಧ್ಯಮ ಹಾಗೂ ಬಡ ಕುಟುಂಬಗಳು ಬಲಿಯಾಗುತ್ತವೆ ಎಂಬುದನ್ನು ಪ್ರತಿಯೊಬ್ಬರು ಅರಿಯಬೇಕಿದೆ. ಇಲ್ಲದಿದ್ದರೆ ಇವತ್ತು ಚಿತ್ರರಂಗ, ನಾಳೆ ರಿಯಲ್ ಎಸ್ಟೇಟ್, ನಾಡಿದ್ದು ಮತ್ತೊಂದು ಉದ್ಯಮ ಹೀಗೆ ಕೆಲವೇ ಜನರ ನಿಯಂತ್ರಿತ ವ್ಯವಸ್ಥೆ ನಮ್ಮನ್ನು ಗುಲಾಮರನ್ನಾಗಿ ಮಾಡುವುದು ನಿಶ್ಚಿತ.....

ಜಿಡಿಪಿ ಬೆಳವಣಿಗೆಯ ಅಂಕಿ ಅಂಶಗಳು ಅಥವಾ ಬೃಹತ್ ಗಾತ್ರದ ಆರ್ಥಿಕತೆ, ಈ ಎರಡನ್ನೇ ನಾವು ಅಭಿವೃದ್ಧಿಯ ಮಾನದಂಡ ಎಂದು ಪರಿಗಣಿಸಬಾರದು. ಸಮಗ್ರ - ಸುಸ್ಥಿರ ಅಭಿವೃದ್ಧಿ ಬಹಳ ಮುಖ್ಯವಾಗುತ್ತದೆ. ದೇಶದ ಪ್ರತಿ ಪ್ರಜೆಯ ಈ ಕ್ಷಣದ ಆತನ ಜೀವನ ಮಟ್ಟ ಮತ್ತು ನೆಮ್ಮದಿಯ ಗುಣಮಟ್ಟ ಬಹಳ ಮುಖ್ಯವಾಗಬೇಕು......

ಶಾರುಖಾನ್ ಕೇವಲ ನಟ ಮಾತ್ರ ಅಲ್ಲ ನಿರ್ಮಾಪಕನೂ ಹೌದು, ಐಪಿಎಲ್ ಮುಂತಾದ ಕ್ರೀಡಾ ತಂಡಗಳ ಮಾಲೀಕನೂ ಸಹ ಹೌದು, ಜಾಹೀರಾತು, ಇವೆಂಟ್ ಮ್ಯಾನೇಜ್ಮೆಂಟ್ ಉದ್ಯಮ ದೊರೆಯೂ ಹೌದು. ಹಾಗೆಯೇ ಅಂಬಾನಿ, ಅದಾನಿಗಳು ತಮ್ಮ ವ್ಯಾಪಾರ ಕ್ಷೇತ್ರಗಳನ್ನು ಮೀರಿ ಕ್ರೀಡೆ, ಮಾಧ್ಯಮ ಕ್ಷೇತ್ರಗಳನ್ನು ತಮ್ಮ ವ್ಯಾಪಾರದ ಬಲೆಯೊಳಗೆ ಸೇರಿಸಿಕೊಳ್ಳುತ್ತಿದ್ದಾರೆ. ಮೇಲ್ನೋಟಕ್ಕೆ ಅಭಿವೃದ್ಧಿ ಮತ್ತು ಸ್ಪರ್ಧೆ ಎನಿಸಬಹುದು. ಆದರೆ ಇಡೀ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಗುಲಾಮಿತನಕ್ಕೆ ಇದು ಕಾರಣವಾಗುತ್ತದೆ ಎಂಬ ಸೂಕ್ಷ್ಮವನ್ನು ಸಂವೇದನಾಶೀಲ ಮನಸ್ಸುಗಳು ಗ್ರಹಿಸಬೇಕು.......

ಈ ದುಸ್ಥಿತಿಗಳು ದಿಢೀರ್ ಎಂದು ಆಗುವುದಿಲ್ಲ. ಇದು ಕ್ಯಾನ್ಸರ್ ಕಣಗಳಂತೆ ನಿಧಾನವಾಗಿ, ಒಳಗೊಳಗೆ ಜೀವ ತಳೆಯುತ್ತಿರುತ್ತವೆ. ಒಂದು ದಿನ ಅದರ ದುಷ್ಪರಿಣಾಮಗಳು ಗೋಚರವಾಗತೊಡಗಿದಾಗ ಅದರ ಅರಿವಾಗುತ್ತದೆ. ಅದು ಯಾವ ಹಂತಕ್ಕೆ ಬಂದಮೇಲೆ ನಮ್ಮ ಅರಿವಿಗೆ ಬರುತ್ತದೆ ಎಂಬುದರ ಮೇಲೆ ಮುಂದಿನ ಪರಿಣಾಮಗಳು ಅವಲಂಬಿಸಿರುತ್ತದೆ.....

ಸಿನಿಮಾ ಮಂದಿಗೆ ಈಗ ಅರ್ಥವಾಗುತ್ತಿದೆ. ಕಾಲ ಮಿಂಚಿದೆ. ಅನೇಕ ಪರ್ಯಾಯ ಮಾಧ್ಯಮಗಳು ಬೆಳವಣಿಗೆ ಹೊಂದಿವೆ. ಆದರೂ ಒಂದಷ್ಟು ಪರಿಹಾರ ಸೂತ್ರಗಳು ಇದ್ದೇ ಇರುತ್ತವೆ. ಅದನ್ನು ಎಲ್ಲರ ಸಹಕಾರದೊಂದಿಗೆ ಕಂಡುಕೊಳ್ಳಲೇಬೇಕಿದೆ. ಪ್ರಖ್ಯಾತ ನಟರು ತಮ್ಮ ಹಮ್ಮು ಬಿಮ್ಮು ಮರೆತು ಅಜ್ಞಾನ ಮೆರೆಯದೆ ಇದಕ್ಕೆ ಸಹಕರಿಸಬೇಕಿದೆ. ಅನುಭವಿಗಳು ಪರಿಹಾರ ಸೂತ್ರ ಹಣಿಯಬೇಕಿದೆ......

ನಮ್ಮ ಬಾಲ್ಯದ, ಯೌವ್ವನದ, ಸಂಕಷ್ಟದ ಸಮಯದಲ್ಲಿ ಈ ಸಿನಿಮಾಗಳು ನಮ್ಮ ಮೇಲೆ ಒಂದಷ್ಟು ಪರಿಣಾಮ ಬೀರಿದೆ. ಒಂದು ಇಡೀ ಜನಾಂಗವೇ ಸಿನಿಮಾಗಳ ಭ್ರಮಾ ಲೋಕದಲ್ಲಿ ತೇಲಿದೆ ಮತ್ತು ಮುಳುಗಿದೆ. ಸಿನಿಮಾ ನಟರು ನಮ್ಮದೇ ಬದುಕಿನ ಭಾಗವಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವರು ಸಾಕಷ್ಟು ಕೆಟ್ಟ ಮೌಲ್ಯಗಳ ಪ್ರತಿಪಾದಕರಾಗಿದ್ದರು, ಚಿತ್ರರಂಗ ಮೌಲ್ಯಯುತವಾಗಿ, ಪ್ರಾಮಾಣಿಕವಾಗಿ, ಸುಸ್ಥಿರವಾಗಿ ಉಳಿಯಲಿ ಮತ್ತು ಬೆಳೆಯಲಿ ಎಂದು ಹಾರೈಸುತ್ತಾ......

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9844013068.........

Address

Bangalore

Alerts

Be the first to know and let us send you an email when Suddi Manthana - ಸುದ್ದಿ ಮಂಥನ posts news and promotions. Your email address will not be used for any other purpose, and you can unsubscribe at any time.

Contact The Business

Send a message to Suddi Manthana - ಸುದ್ದಿ ಮಂಥನ:

Share