15/07/2025
ಹಂಸ ಸಂಘಟನೆಯ ವತಿಯಿಂದ ಆಯೋಜಿಸಿದ್ದ ಪ್ರತಿಭಾ ಪ್ರೇರಣೆ ಕಾರ್ಯಕ್ರಮವು ಅದ್ದೂರಿಯಾಗಿ ನೆರವೇರಿತು
ಆನೇಕಲ್ ತಾಲ್ಲೂಕಿನ ಚಂದಾಪುರದಲ್ಲಿ ಕೆ.ಎನ್ ಟಿ ಕಲ್ಯಾಣ ಮಂಟಪದ ಆವರಣದಲ್ಲಿ ಹಂಸ ಸಂಘಟನೆಯ ವತಿಯಿಂದ ಪ್ರತಿಭಾ ಪ್ರೇರಣೆ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಲಾಗಿತ್ತು.
ಇನ್ನು ಪ್ರತಿಭಾ ಪ್ರೇರಣೆ ಕಾರ್ಯಕ್ರಮಕಕ್ಕೆ ಜನಪ್ರತಿನಿಧಿಗಳು. ಗಣ್ಯರು ಚಾಲನೆ ನೀಡಿ ಶುಭ ಹಾರೈಸಿದರು.
ಇನ್ನು ಪ್ರತಿಭಾ ಪ್ರೇರಣೆ ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಶಾಲೆಗಳ 40 ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು ಹಾಗೆಯೇ ಎಸ್ ಎಸ್ ಎಲ್ ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಉನ್ನತ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಇನ್ನು ಹಂಸ ಸಂಘಟನೆಯ 5ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತವಾಗಿ ವಿವಿಧ ಕಾರ್ಯಕ್ರಮಗಳನ್ನು ರೂಪಿಸಲಾಗಿತ್ತು.
ಇನ್ನು ಕಾರ್ಯಕ್ರಮದಲ್ಲಿ ಶಾಸಕ ಬಿ.ಶಿವಣ್ಣರವರು. ಲೇಖಕರಾದ ಪ್ರೊ.ಕೃಷ್ಣೇಗೌಡ. ಬೆಂಗಳೂರು ಯಲಹಂಕ ರಾಮಕೃಷ್ಣ ವಿವೇಕಾನಂದ ವೇದಾಂತ ಆಶ್ರಮದ ಅಭಯಾನಂದ ಸ್ವಾಮೀಜಿ ವಿಧಾನ ಪರಿಷತ್ ಸದಸ್ಯರಾದ ರಾಮೋಜಿ ಗೌಡರು , ಪುಟ್ಟಣ್ಣ, ಕ್ಯಾಮ್ಸ್ ಕರ್ನಾಟಕ ಸಂಘಟನೆಯ ಕಾರ್ಯದರ್ಶಿ ಶಶಿಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವೆಂಕಟೇಶ್, ಹಂಸ ಸಂಘಟನೆಯ ಅಧ್ಯಕ್ಷ ಎನ್. ಪ್ರಹ್ಲಾದ ಗೌಡ, ಗೌರವ ಅಧ್ಯಕ್ಷ ಚಂದ್ರಯ ನಾಯ್ಡು , ಪಳ್ಳಪ್ಪ ಯಾದವ್, ರವಿಕುಮಾರ್, ಪದಾಧಿಕಾರಿಗಳಾದ ಅಂಬರೀಷ್, ವಿಜಯಕುಮಾರ್ ಗೌಡ, ಯೋಗೇಶ್, ಶಿವಪ್ಪ, ಕಾಳಿನಾಥ್, ಭರತ್, ವಿನಯ್ ಬಾಬು, ಅನಂತರಾಜು, ನಾಗರಾಜ್, ಲೋಕೇಶ್, ಅಜಯ್, ಮಂಜುನಾಥ್, ಗೀತಾ ಮತ್ತು ಶಿಕ್ಷಕರು ಹಾಜರಿದ್ದರು.