31/07/2025
ಪಹಲ್ಗಾಮ್ ನಲ್ಲಿ ಹಿಂದೂಗಳ ನರಸಂಹಾರ ಮಾಡಿದ ಉಗ್ರರನ್ನು ಬೇಟೆಯಾಡಲು ಭಾರತೀಯ ಸೇನೆ, ಇಂಟೆಲಿಜೆನ್ಸ್ ಬ್ಯೂರೊ, R&AW, , ರಾಷ್ಟ್ರೀಯ ರೈಫಲ್ ವಿಶೇಷ ಪ್ಯಾರಾ ಕಮಾಂಡೋಗಳು ಕಾಶ್ಮೀರದ ಕಣಿವೆಯಲ್ಲಿ ಹುಡುಕದ ಜಾಗವೇ ಇರಲಿಲ್ಲ. ಆದರೂ ಅವರು ಅವಿತಿರುವ ಜಾಗದ ಕುರಿತು ಒಂದು ಸಣ್ಣ ಎಳೆ ಕೂಡ ಸಿಕ್ಕಿರಲಿಲ್ಲ.
ಗುಪ್ತಚರ ಇಲಾಖೆ ಹಣದ ಥೈಲಿ ಹಿಡಿದು ಹೊರಟರೂ ಯಾರೂ ಉಗ್ರರ ಕುರಿತು ಸುಳಿವು ನೀಡಿರಲಿಲ್ಲ.
ಆಪರೇಶನ್ ಮಹಾದೇವ್ ನಲ್ಲಿ ಪಹಲ್ಗಾಮ್ ದಾಳಿಯಲ್ಲಿ ಶಾಮೀಲಾಗಿದ್ದ ಎಲ್ಲಾ ಉಗ್ರರನ್ನು ಭಾರತೀಯ ಭದ್ರತಾ ಪಡೆಗಳು ಸಂಹರಿಸಿವೆ.
ಹಾಗಾದ್ರೆ, ಉಗ್ರರ ಇರುವಿಕೆ ಸುಳಿವು ಹೇಗೆ ದೊರೆಯಿತು, ಹೆಜ್ಜೆಗುರುತಾ? ಅಥವಾ ಗುಂಡಿನ ಶಬ್ದ? ಅಥವಾ ಲೋಕಲ್ ಖಬರಿಗಳ ಟಿಪ್ ಆಫ್? ಊಹೂಂ ಇದ್ಯಾವುದು ಅಲ್ಲ.
NTRO ತಾಂತ್ರಿಕ ಇಂಟೆಲಿಜೆನ್ಸ್ ಘಟಕ ಡಾಟಾ ಹೊಯ್ದಾಟದ ಜಾಡು ಹಿಡಿದು ಉಗ್ರರ ಪತ್ತೆಹಚ್ಚಿದೆ.
ಡಿಜಿಟಲ್ ಹೆಜ್ಜೆಗುರುತು ಹಾಗೂ ಡಿಜಿಟಲ್ ಎಕ್ಸ್ಪೋಸರ್ ಆಪರೇಶನ್ ಮಹಾದೇವಗೆ ನಾಂದಿ ಹಾಡಿದೆ.
ಜುಲೈ 11 ರಂದು ಪತ್ತೆಯಾದ ಒಂದು ಕಾಡಿನಲ್ಲಿ ಕಾಣಸಿಗದ ಒಂದು ಭಿನ್ನ ರೀತಿಯ ಸಿಗ್ನಲ್ ಗುಪ್ತಚರ ವಿಭಾಗದ ನಿದ್ದೆ ಗೆಡಿಸಿತ್ತು.
ಕಾಡಿನಲ್ಲಿ ಅಡಗಿದ ಉಗ್ರರು ತಮ್ಮ ಹ್ಯಾಂಡ್ಲರ್ಸ್ ಜೊತೆ ಸಂಪರ್ಕ ಸಾಧಿಸಲು ಅತ್ಯಾಧುನಿಕ ಸ್ಯಾಟಲೈಟ್ ಉಪಕರಣ ಬಳಸುತ್ತಿದ್ರು, ಅದು ಭಾರತದ ಮೊಬೈಲ್ ನೆಟ್ವರ್ಕ್ ಬಳಸದೇ ರೇಡಿಯೋ ಫ್ರೀಕ್ವೆನ್ಸಿ ಬಳಸಿ ಸನಿಹದಲ್ಲಿರುವ ಮತ್ತೊಂದು ಉಪಕರಣದ ಜೊತೆ ಸಂಪರ್ಕ ಸಾಧಿಸಿ ಸ್ಯಾಟಲೈಟ್ ಮೂಲಕ ಕ್ಲಿಷ್ಟವಾಗಿ ಗುಪ್ತ ಸಂದೇಶ ರವಾನೆ ಮಾಡ್ತಿತ್ತು ಹೀಗಾಗಿ ಮಿಲಿಟರಿ ಸಿಗ್ನಲ್ ಇಂಟೆಲಿಜೆನ್ಸ್ ಅನ್ನು ಬೈಪಾಸ್ ಮಾಡಿದ್ದರು.
ಚೀನಿ ಹುವಾವೇ ಕಂಪನಿಯ ಸ್ಮಾರ್ಟ್ ಫೋನ್ ನಲ್ಲಿ ಸ್ಯಾಟಲೈಟ್ ಸಂಪರ್ಕ ಕ್ಷಮತೆಯ ಚಿಪ್ ಇರುತ್ತೆ, ಅದು ಚೀನಿ Tiantong - 1 ನೆಟ್ವರ್ಕ್ ಕನೆಕ್ಟ್ ಆಗಲು ಸ್ಥಳೀಯ ಟವರ್ ಅಥವಾ ಸಿಮ್ ಕಾರ್ಡ್ ಬಳಸುವುದಿಲ್ಲ. ಈ ಫೋನ್ ಗಳು ಸಾಮಾನ್ಯ ಆಂಡ್ರಾಯ್ಡ್ ಫೋನ್ ನಂತೆ ಕಾಣುತ್ತವೆ ಆದರೆ ಗುಪ್ತ ಸಂದೇಶ ಕಳಿಸಲು ಹಾಗೂ ಸಿಗ್ನಲ್ ಕಣ್ಗಾವಲು ವ್ಯವಸ್ಥೆ ಬೇಧಿಸಲು ಇದನ್ನು ಬಳಸಬಹುದು.
ಆಪರೇಶನ್ ಮಹಾದೇವ್ ನಲ್ಲಿ ಭಾರತದ ತಾಂತ್ರಿಕ ನೈಪುಣ್ಯತೆ ಮತ್ತೊಮ್ಮೆ ಸಾಬೀತಾಗಿದೆ. ಚೀನಿ ಸ್ಪೆಕ್ಟ್ರಮ್ ಈಗ ಎಕ್ಸ್ಪೋಸ್ ಆಗಿದೆ, NTRO ಹಿಂದಿರುವ ಇಸ್ರೋ ತಂತ್ರಜ್ಞಾನ ಚೀನೀಯರನ್ನು ಬೆಚ್ಚಿ ಬೀಳಿಸಿದೆ... ಅತ್ತ ಅಮೇರಿಕ ಕೂಡ ಈ ಬೆಳವಣಿಗೆಗಳಿಂದ ಚಿಂತಾಕ್ರಾಂತವಾಗಿರುತ್ತೆ ಯಾಕಂದ್ರೆ ಅವರ ಕಮ್ಯುನಿಕೇಶನ್ ಕೂಡ ಈಗ ಸೇಫಲ್ಲ!!
ಪ್ರತಿ ಆಪರೇಶನ್ ನಲ್ಲಿ ಭಾರತ ಒಂದು ದೈತ್ಯ ಮಿಲಿಟರಿ ಶಕ್ತಿಯಾಗಿ ಹೊರಹೊಮ್ಮುತ್ತಿದೆ...
ಇದು ರಾಷ್ಟ್ರಭಕ್ತರಿಗೆ ಖುಷಿಯನ್ನುಂಟು ಮಾಡಿದ್ರೆ, ಪಾಕ್ ಪ್ರೇಮಿಗಳು ಆಪರೇಶನ್ ಮಹಾದೇವ್ ನಡೆದ ಸಮಯ ಮತ್ತು "ಮಹಾದೇವ್" ಹೆಸರನ್ನೇ ಪ್ರಶ್ನಿಸುವಂತೆ ಮಾಡಿದೆ ಹಾಗೂ ಅವರ ಓಟ್ ಬ್ಯಾಂಕ್ ಪ್ರೇಮ ಬಹಿರಂಗ ಪಡಿಸಿದೆ.
ಭಾರತ್ ಮಾತಾ ಕೀ ಜಯ್ 🚩