19/03/2025
ಪ್ರಮಾಣಿಕ ಹೋರಾಟಗಾರರಿಗೆ ಇವೆಲ್ಲವೂ ಸಾಮಾನ್ಯ, ಇಂತ ರಾಜಕೀಯ ಪುಡಾರಿಗಳಿಗೆ ಪ್ರಮಾಣಿಕ
ನಾಯಕರು ಎಂದಿಗೂ ಎದರುವುದಿಲ್ಲ.
ದುಷ್ಕರ್ಮಿಗಳು ಗಾಳಿ/ಪಂಚರ್ ತೆಗೆದಿದ್ದ ನಮ್ಮ ವಾಹನಕ್ಕೆ ಗಾಳಿ ಹಾಕಿಸಿಕೊಂಡು ಬರಲು ಕೆಲವು ಪೊಲೀಸರು ನಮ್ಮ ವಾಹನ ತೆಗೆದುಕೊಂಡು ಹೋದರು. ಅವರಿಗೆ ಕಾಯುತ್ತಾ ಹಿರೇಮಠರು ಮತ್ತು ನಾನು ನೆಲದ ಮೇಲೆ ಚಾಪೆ ಹಾಸಿಕೊಂಡು ಕುಳಿತಿದ್ದೆವು. ಇಬ್ಬರೋ ಮೂವರೋ ಪೊಲೀಸರೂ ಇದ್ದರು. ಇದ್ದಕ್ಕಿದ್ದಂತೆ ಬಿಳಿ ಕೋಳಿಮೊಟ್ಟೆಗಳು ತೂರಿ ಬಂದವು. ಒಬ್ಬ ತೀರಾ ಹತ್ತಿರ ಬಂದು ಅವಾಚ್ಯ ಶಬ್ದಗಳಿಂದ ನನ್ನನ್ನು ನಿಂದಿಸುತ್ತ ಮೊಟ್ಟೆ ಎಸೆದ. ನನ್ನ ತಲೆಗೂ ಟೋಪಿಗೂ ಅದು ಬಿತ್ತು. ಅಷ್ಟೊತ್ತಿಗೆ ಹಿರೇಮಠರಿಗೆ, ಮಲ್ಲಿಕಾರ್ಜುನ ಭಟ್ಟರಹಳ್ಳಿ, ಪ್ರಭುಗೌಡ ಪಾಟೀಲ ಇವರ ಮೇಲೆಲ್ಲಾ ಮೊಟ್ಟೆ ಅಭಿಷೇಕ ಆಯಿತು. ಪೊಲೀಸರು ನಿಲ್ಲಿಸಲು ಓಡಿದರು. ಕೆಲವು ಸ್ಥಳೀಯರೂ ಅವರನ್ನು ನಿಯಂತ್ರಿಸುವ ನಾಟಕ ಆಡಿದರು. ಇದೆಲ್ಲವೂ Mallikarjun Bhattarahalli ಮಾಡಿರುವ ಲೈವ್'ನಲ್ಲಿ ಸೆರೆಯಾಗಿದೆ.
https://www.facebook.com/share/v/159rr2eCb6/
ಆ ಮೊಟ್ಟೆಗಳ ಬದಲಿಗೆ ಕಲ್ಲು ತೂರಿದ್ದರೆ ಇಂದು ಹಿರೇಮಠರೂ ಸೇರಿದಂತೆ ಹಲವರ ತಲೆ ಒಡೆಯುತ್ತಿತ್ತು.
20-01-2020.
ಕೇತಗಾನಹಳ್ಳಿ, ಬಿಡದಿ, ರಾಮನಗರ ತಾಲ್ಲೂಕು & ಜಿಲ್ಲೆ.
✍️ ರವಿಕೃಷ್ಣರೆಡ್ಡಿ