Panchami Media Publications, Bangalore

Panchami Media Publications, Bangalore Panchami Media Publications, founded in 2011, is a Bengaluru-based publishing house dedicated to producing high-quality Kannada books.

The firm also offers comprehensive services in design, marketing, distribution, and printing.

16/09/2026

ಆತ್ಮೀಯ ಓದುಗ ಮಿತ್ರರೇ,
ನಾಡಿನ ಖ್ಯಾತ ಕವಿಗಳಾದ ಶ್ರೀ ಚಿಂತಾಮಣಿ ಕೊಡ್ಲೆಕೆರೆ ಅವರ ಹೊಸ ಹನಿಗವಿತೆಗಳ ಗುಚ್ಛ 'ಫುಲ್ ಅರ್ಧ ಟೀ ' ಕೃತಿಯ ಕವಿತೆಯನ್ನು ಓದಿ ಪ್ರೋತ್ಸಾಹಿಸಿದ ಖ್ಯಾತ ವಾಗ್ಮಿಗಳು , ಸಂಸ್ಕೃತಿ ಚಿಂತಕರು ಆಗಿರುವ ಶ್ರೀ ಹಿರೇಮಗಳೂರು ಕಣ್ಣನ್ ಅವ್ರಿಗೆ ನಮ್ಮ ಹೃದಯಪೂರ್ವಕ ಧನ್ಯವಾದಗಳು. ನಿಮ್ಮ ಪುಸ್ತಕ ಪ್ರೀತಿ, ಪ್ರೋತ್ಸಾಹವು ನಮ್ಮ ಈ ಪ್ರಕಟಣೆಗೆ ಬಲ ತುಂಬಿದೆ.

ಧನ್ಯವಾದಗಳು ಚಿಂತಾಮಣಿ ಕೊಡ್ಲೆಕೆರೆ ಸರ್ ಮತ್ತು ಹಿರೇಮಗಳೂರು ಕಣ್ಣನ್ ಸರ್.

'ಫುಲ್ ಅರ್ಧ ಟೀ ' ಕೃತಿಗಾಗಿ ನಮ್ಮನ್ನು ಸಂಪರ್ಕಿಸಿ.
097400 69123

- ಪಂಚಮಿ ಪ್ರಕಾಶನದಿಂದ




ಮುದ್ದು ಮಕ್ಕಳಿಗಾಗಿ ಪಂಚಮಿ ಪ್ರಕಟಿಸಿರುವ ನೂತನ ಪುಸ್ತಕ `ಬನ್ನಿ ಬನ್ನಿ ಗೆಳೆಯರೇ ಆಟ ಆಡೋಣ'-------------------------------------------...
04/09/2026

ಮುದ್ದು ಮಕ್ಕಳಿಗಾಗಿ
ಪಂಚಮಿ ಪ್ರಕಟಿಸಿರುವ ನೂತನ ಪುಸ್ತಕ
`ಬನ್ನಿ ಬನ್ನಿ ಗೆಳೆಯರೇ ಆಟ ಆಡೋಣ'
------------------------------------------------------
ಆತ್ಮೀಯ ಓದುಗಮಿತ್ರರೇ,

ಖ್ಯಾತ ಕವಯಿತ್ರಿ, ಲೇಖಕಿ ಅನಿತಾ ನಾಡಿಗ್ ಅವರು ಮಕ್ಕಳಿಗಾಗಿ ರಚಿಸಿರುವ `ಬನ್ನಿ ಬನ್ನಿ ಗೆಳೆಯರೇ ಆಟ ಆಡೋಣ' ಕೃತಿ ಈಗ ಅಮೆಜಾನ್ ನಲ್ಲಿ ಲಭ್ಯವಿದೆ.

ಆಸಕ್ತರು ನಿಮ್ಮ ಮಕ್ಕಳ ಓದಿನ ಅಭಿರುಚಿಗಾಗಿ, ಮಕ್ಕಳಿಗೆ ನೀಡುವ ಉಡುಗೊರೆಗಾಗಿ ಇಂದೇ ಕೃತಿಯನ್ನು ಕೊಳ್ಳಿರಿ.

Amazon link

https://amzn.in/d/0cPgm9WR





ಆತ್ಮೀಯ ಓದುಗ ಮಿತ್ರರೇ,ಪಂಚಮಿ ಪ್ರಕಟಣೆಯ ನೂತನ ಕೃತಿನಾಡಿನ ಖ್ಯಾತ ಲೇಖಕರು, ಕವಿಗಳು ಆದಂತಹಶ್ರೀ ಚಿಂತಾಮಣಿ ಕೊಡ್ಲೆಕೆರೆ ಅವರ ‘ಫುಲ್ ಅರ್ಧ ಟೀ’ ...
13/08/2026

ಆತ್ಮೀಯ ಓದುಗ ಮಿತ್ರರೇ,
ಪಂಚಮಿ ಪ್ರಕಟಣೆಯ ನೂತನ ಕೃತಿ
ನಾಡಿನ ಖ್ಯಾತ ಲೇಖಕರು, ಕವಿಗಳು ಆದಂತಹ
ಶ್ರೀ ಚಿಂತಾಮಣಿ ಕೊಡ್ಲೆಕೆರೆ ಅವರ
‘ಫುಲ್ ಅರ್ಧ ಟೀ’ (ಹನಿಗವಿತೆಗಳು)

ಪುಸ್ತಕ ಅಮೇಜಾನ್ ನಲ್ಲಿಯೂ ಕೂಡ ಲಭ್ಯವಿದೆ.
ಅದರ ಕೊಂಡಿ ಕೆಳಕಂಡಂತಿದೆ.

Full Ardha Tea (Kannada)

ಆತ್ಮೀಯ ಓದುಗ ಮಿತ್ರರೇ,ಪಂಚಮಿ ಪ್ರಕಟಣೆಯ ನೂತನ ಕೃತಿನಾಡಿನ ಖ್ಯಾತ ಲೇಖಕರು, ಕವಿಗಳು ಆದಂತಹಶ್ರೀ ಚಿಂತಾಮಣಿ ಕೊಡ್ಲೆಕೆರೆ ಅವರ ‘ಫುಲ್ ಅರ್ಧ ಟೀ’ ...
13/08/2026

ಆತ್ಮೀಯ ಓದುಗ ಮಿತ್ರರೇ,
ಪಂಚಮಿ ಪ್ರಕಟಣೆಯ ನೂತನ ಕೃತಿ
ನಾಡಿನ ಖ್ಯಾತ ಲೇಖಕರು, ಕವಿಗಳು ಆದಂತಹ
ಶ್ರೀ ಚಿಂತಾಮಣಿ ಕೊಡ್ಲೆಕೆರೆ ಅವರ

‘ಫುಲ್ ಅರ್ಧ ಟೀ’ (ಹನಿಗವಿತೆಗಳು)
-----------------------------------------------------------
ಅರ್ಧ ಟೀ ಕೊಟ್ಟು
ಹೇಳುವರು ಫುಲ್ಲು
ಸಣ್ಣ ಪದ್ಯ ಬರೆದು
ನೀಡುವರು ಥ್ರಿಲ್ಲು

ಹೆಸರು ಚಿಂತಾಮಣಿ
ಕವಿತೆ ಘಂಟಾಮಣಿ

ಚಿಂತಾಮಣಿ ಕೊಡ್ಲೆಕೆರೆ ಅವರ ಹನಿಗವಿತೆಗಳ ಸಂಕಲನ ಎಷ್ಟು ಫ್ರೆಶ್ ಆಗಿದೆಯೆಂದರೆ ಇಂಥ ಪದ್ಯಗಳನ್ನು ಓದಿ ಯಾವುದೋ ಕಾಲವಾಯಿತು. ಹನಿಗವನಗಳು ಗಿಡಗಳಿಂದ ತೊಟ್ಟಿಕ್ಕುವ ಹನಿಗಳಂತೆ, ಬಹಳ ಹೊತ್ತು ಕಟ್ಟಿಡುವುದು ಕಷ್ಟ. ಚಿಂತಾಮಣಿ ಯಾವುದೋ ಮೋಡಿ ಮಾಡಿ ಈ ಕವಿತೆಗಳೆಲ್ಲ ನೆನಪಲ್ಲಿ ಉಳಿಯುವಂತೆ ಮಾಡುತ್ತಾರೆ.
ಜಿಗಿಜಿಗಿದು ಸಾಗುವ ಪದಗಳು, ಪದಗಳಿಗೆ ಕಚಗುಳಿ ಇಡುವ ಪದ್ಯ. ಚಿಂತಾಮಣಿ ಕೈಯಲ್ಲಿ ಪುಟ್ಟ ಪುಟ್ಟ ಪದಗಳು ಚಪ್ಪಟೆ ಕಲ್ಲು ನೀರನ್ನು ಚಿಮ್ಮುತ್ತಾ ಹೋಗಿ ಸೃಷ್ಟಿಸುವ ಸೊಗಸಾದ ವಿನ್ಯಾಸ ಹುಟ್ಟುಹಾಕುತ್ತವೆ. ಕುತೂಹಲದಿಂದ ಶುರುವಾಗಿ ವಿಸ್ಮಯಕಾರಿಯಾಗಿ ಕೊನೆಯಾಗುತ್ತವೆ. ಶುಂಠಿ ಪೆಪ್ಪರಮಿಂಟಿನ ರುಚಿಯಂತೆ ಬಹಳ ಕಾಲ ನಾಲಗೆಯಲ್ಲಿ ನೆಲೆಸುತ್ತವೆ. ಮತ್ತೊಮ್ಮೆ ಓದು ಎಂದು ಪ್ರೇರೇಪಿಸುತ್ತವೆ. ಕನ್ನಡದ ಶಕ್ತಿಯ ನೋಡು, ತುಂಟತನವ ನೋಡು, ಸಂಭ್ರಮವ ನೋಡು, ಉಲ್ಲಾಸವ ನೋಡು, ಬೆಡಗ ನೋಡು ಎಂದು ಕೈತಟ್ಟಿ ಕರೆಯುತ್ತವೆ.
ಚಿಂತಾಮಣಿ ಅವರ ಸುದೀರ್ಘ ಪದ್ಯಗಳನ್ನು ಓದಿದ್ದೆ. ಪುಟ್ಟ ಕವಿತೆಗಳನ್ನು ಅವರು ಇಷ್ಟು ದಿನ ಎಲ್ಲಿ ಬಚ್ಚಿಟ್ಟುಕೊಂಡಿದ್ದರೋ ಕಾಣೆ. ಇವೆಲ್ಲ ಮುದ ನೀಡುವ ಹದವರಿತ ರಚನೆಗಳು. ವೈಯನ್ಕೆಯ ಪನ್, ಡುಂಡಿರಾಜರ ವಿಟ್, ಲಕ್ಷ್ಮಣರಾಯರ ಫನ್ ಮತ್ತು ಆಗ್ಡನ್ ನ್ಯಾಶ್ ಎಂಬ ಇಂಗ್ಲಿಷ್ ಕವಿಯ ರೈಮ್- ಈ ಪದ್ಯಗಳನ್ನು ಮಜವಾಗಿಸಿವೆ. ಅವರೊಳಗಿನ ಕವಿ ಗಾಢವಾದ ಹೈಕುಗಳನ್ನೂ ಬರೆಯಬಲ್ಲ ಎಂಬುದಕ್ಕೂ ಈ ಸಂಕಲನದಲ್ಲಿ ಸಾಕ್ಷಿಗಳು ಸಿಗುತ್ತವೆ.
ಈ ಸಂಕಲನ ನಮ್ಮ ಚಿಂತೆಯನ್ನು ಓಡಿಸುವ ಸ್ವರ್ಶಮಣಿ.

-ಜೋಗಿ

----------------------------------------------------------

ನಾನು ಹೀಗೆ ನನಗಿಷ್ಟವಾದ ಹನಿಗವನಗಳನ್ನು ಕೋಟ್ ಮಾಡುತ್ತಲೆ ಹೋದರೆ ಮನೆಗಿಂತ ಗೇಟೇ ದೊಡ್ಡದು ಅನ್ನುವಂತೆ ಆಗಬಹುದು. ಉಸ್ತಾದ್ ಝಾಕಿರ್ ಹುಸೇನ್ “ವಾಹ್ ತಾಜ್ ಬೋಲಿಯೆ” ಅಂದ ಹಾಗೆ ಕೊಡ್ಲೆಕೆರೆಯವರ ‘ಫುಲ್ ಅರ್ಧ ಟೀ’ ಯನ್ನು ನಾನಂತೂ “ವಾಹ್! ಚಿಂತಾಮಣಿ ಬೋಲಿಯೆ!” ಎಂದು ಚಪ್ಪರಿಸುತ್ತ ಸವಿದಿದ್ದೇನೆ. ಸಂಕಲನದ ಆರಂಭದಲ್ಲಿ ಕವಿ -
ಒಲವೆಂಬ ಸಕ್ಕರೆಯ ಬೆರೆಸಿ ಮಾಡಿರುವ ಟೀ
‘ಅರ್ಧ’ ಸಾಲದು ಎಂದು ಮುನಿಯದಿರು ಮಿತ್ರ
ನಿನಗೆ ಪೂರ್ಣಾನಂದ ಸಿಗಲೆಂದು ಬೇಡುವೆನು
ತಿಳಿದವರು ಒಪ್ಪುವುದು ಸತ್ವವನು ಮಾತ್ರ !
ಎಂದಿದ್ದಾರೆ. ಅನುಮಾನವೇ ಬೇಡ. ಖಂಡಿತವಾಗಿಯೂ ಈ ಸಂಕಲನದ ಹನಿಗವನಗಳು ಕಾವ್ಯ ಪ್ರಿಯರಿಗೆ ಪೂರ್ಣಾನಂದವನ್ನು ನೀಡುತ್ತವೆ. ಕವಿ ನರಸಿಂಹಸ್ವಾಮಿಯವರದು ‘ಇಹದ ಪರಿಮಳದ ಹಾದಿ’ಯಾದರೆ ಚಿಂತಾಮಣಿಯವರದು ಅಷ್ಟೇ ಚೇತೋಹಾರಿಯಾದ ‘ಚಹದ ಪರಿಮಳದ ಹಾದಿ’. ಹನಿಗವನ ಎಂಬ ಕಾವ್ಯ ಪ್ರಕಾರದ ಗೌರವವನ್ನು ಹೆಚ್ಚಿಸುವಂಥ ಸಂಕಲನವನ್ನು ನೀಡಿದ್ದಕ್ಕಾಗಿ ಕವಿಮಿತ್ರ ಚಿಂತಾಮಣಿ ಕೊಡ್ಲೆಕೆರೆಯವರನ್ನು ಹಾರ್ದಿಕವಾಗಿ ಅಭಿನಂದಿಸುತ್ತೇನೆ.

-ಎಚ್.ಡುಂಡಿರಾಜ್
------------------------------------------------------------------

ಕೃತಿಗಾಗಿ ಸಂಪರ್ಕಿಸಬಹುದು.
ಮೊ: 097400 69123
ನಿಮ್ಮ ಮನೆಗೆ ಪುಸ್ತಕವನ್ನು ತಲುಪಿಸಲಾಗುವುದು.

ಪುಸ್ತಕ ಅಮೇಜಾನ್ ನಲ್ಲಿಯೂ ಕೂಡ ಲಭ್ಯವಿದೆ.
ಅದರ ಕೊಂಡಿ ಕೆಳಕಂಡಂತಿದೆ.

https://www.amazon.in/dp/B0HBJXX1W9

`ಬತ್ತುವುದಿಲ್ಲ ಜೀವದೊಲವು’ ಕೃತಿಗೆ ಅಡ್ವೈಸರ್ ಪ್ರಶಸ್ತಿ------------------------------------------------------------ಆತ್ಮೀಯರೇ,ಒಂದ...
13/08/2026

`ಬತ್ತುವುದಿಲ್ಲ ಜೀವದೊಲವು’ ಕೃತಿಗೆ ಅಡ್ವೈಸರ್ ಪ್ರಶಸ್ತಿ
------------------------------------------------------------
ಆತ್ಮೀಯರೇ,
ಒಂದು ಸಂತಸದ ಸುದ್ದಿ!
ನಮ್ಮ ಪಂಚಮಿ ಪ್ರಕಟಣೆಯ ಖ್ಯಾತ ಲೇಖಕರು ಆಗಿರುವ ಶ್ರೀ ಮಹಾದೇವ ಬಸರಕೋಡ ಅವರು ರಚಿಸಿರುವ `ಬತ್ತುವುದಿಲ್ಲ ಜೀವದೊಲವು’ ಕಾವ್ಯ ಕೃತಿಗೆ ಪ್ರತಿಷ್ಠಿತ `ಅಡ್ವೈಸರ್’ ಪ್ರಶಸ್ತಿ ಲಭಿಸಿದೆ.
ಇದು ಕೃತಿಗೆ ಸಿಕ್ಕ ದೊಡ್ಡ ಗೌರವವೆಂದು ಭಾವಿಸುತ್ತೇವೆ.

ಇದಕ್ಕಾಗಿ ಲೇಖಕರಾದ ಶ್ರೀ ಮಹಾದೇವ ಬಸರಕೋಡ ಅವರಿಗೆ ಅಭಿನಂದನೆಗಳು. ಪ್ರಶಸ್ತಿ ನೀಡಿದ ಅಡ್ವೈಸರ್ ಪತ್ರಿಕೆ ಮತ್ತು ಅದರ ಸಂಪಾದಕರಾದ ಶ್ರೀ ಬಸವರಾಜ್ ಅವರಿಗೆ ಧನ್ಯವಾದಗಳು.

ಮತ್ತೊಮ್ಮೆ ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.

ಪಂಚಮಿ ಪ್ರಕಾಶನದಿಂದ

ಆತ್ಮೀಯ ಓದುಗ ಮಿತ್ರರೇ,ಪಂಚಮಿ ಪ್ರಕಟಿಸಿರುವ ಖ್ಯಾತ ಅಂಕಣಕಾರರು, ಲೇಖಕರು ಆದಂತಹ ಮಹಾದೇವ ಬಸರಕೋಡ ಅವರ ಕಥಾ ಸಂಕಲನ 'ಆಕಾಶ ದೇವತೆ' ಕುರಿತಾದ ವಿಮ...
02/08/2026

ಆತ್ಮೀಯ ಓದುಗ ಮಿತ್ರರೇ,
ಪಂಚಮಿ ಪ್ರಕಟಿಸಿರುವ ಖ್ಯಾತ ಅಂಕಣಕಾರರು, ಲೇಖಕರು ಆದಂತಹ ಮಹಾದೇವ ಬಸರಕೋಡ ಅವರ ಕಥಾ ಸಂಕಲನ 'ಆಕಾಶ ದೇವತೆ' ಕುರಿತಾದ ವಿಮರ್ಶೆಯು ಇಂದಿನ ವಿಶ್ವವಾಣಿಯ ವಿರಾಮ ಪುರವಣಿಯಲ್ಲಿ ಪ್ರಕಟಗೊಂಡಿದೆ.
ಆಸಕ್ತರು ಗಮನಿಸಿ.
ಕೃತಿ ವಿಮರ್ಶೆ ಪ್ರಕಟಿಸಿದ 'ವಿಶ್ವವಾಣಿ ' ಪತ್ರಿಕೆ ಮತ್ತು ಪುರವಣಿ ಸಂಪಾದಕರಾದ ಶಶಿಧರ್ ಹಾಲಾಡಿ ಅವ್ರ ಪ್ರೋತ್ಸಾಹವನ್ನು ವಿನಮ್ರವಾಗಿ ಸ್ಮರಿಸುತ್ತೇವೆ.
ಧನ್ಯವಾದಗಳು

ಆತ್ಮೀಯ ಓದುಗ ಮಿತ್ರರೇ,ನಮ್ಮ ಪಂಚಮಿ ಪ್ರಕಟಿಸಿರುವ ಪತ್ರಕರ್ತರಾದ ಹಸನಡೊಂಗ್ರಿ ಎಚ್ ಬೇಪಾರಿ ಅವರ `ಅಮ್ಮ ಎಂಬ ಕಡಲು' ಕಥಾಸಂಕಲನದ ಕುರಿತು ನಮ್ಮ ಪ...
28/07/2026

ಆತ್ಮೀಯ ಓದುಗ ಮಿತ್ರರೇ,
ನಮ್ಮ ಪಂಚಮಿ ಪ್ರಕಟಿಸಿರುವ ಪತ್ರಕರ್ತರಾದ ಹಸನಡೊಂಗ್ರಿ ಎಚ್ ಬೇಪಾರಿ ಅವರ `ಅಮ್ಮ ಎಂಬ ಕಡಲು' ಕಥಾಸಂಕಲನದ ಕುರಿತು ನಮ್ಮ ಪ್ರಕಾಶನ ಬಳಗದ ಲೇಖಕರಾದ ಶ್ರೀ ಮಹಾದೇವ ಬಸರಕೋಡ ಅವರು ವಿಮರ್ಶಾತ್ಮಕ ಲೇಖನವನ್ನು ಬರೆದಿದ್ದು, ಅದು ನಾಡಿನ ಜನಪ್ರಿಯ ಪತ್ರಿಕೆ `ವಾರ್ತಾಭಾರತಿ'ಯಲ್ಲಿ ಪ್ರಕಟಗೊಂಡಿದೆ. ಇದಕ್ಕಾಗಿ ಲೇಖಕರನ್ನು ಅಭಿನಂದಿಸುತ್ತಾ, ಕೃತಿ ವಿಮರ್ಶೆ ಮಾಡಿದ ಶ್ರೀ ಮಹಾದೇವ ಬಸರಕೋಡ ಅವರಿಗೆ ಮತ್ತು ವಾರ್ತಾಭಾರತಿ ಪತ್ರಿಕೆಗೆ ಧನ್ಯವಾದಗಳು.
------------------------------------------------------------

Panchami Media Publications, Bangalore


ಆತ್ಮೀಯ ಓದುಗ ಮಿತ್ರರೇ,ನಮ್ಮ ಪಂಚಮಿ ಪ್ರಕಟಣೆಯಮಹಾದೇವ ಬಸರಕೋಡ ಅವರ ನೂತನ ಕಥಾಸಂಕಲನ `ಆಕಾಶ ದೇವತೆ' ಕೃತಿಯ ಕುರಿತು ನಾಡಿನ ಹಿರಿಯ ಲೇಖಕರು, ಜನಪ...
28/07/2026

ಆತ್ಮೀಯ ಓದುಗ ಮಿತ್ರರೇ,
ನಮ್ಮ ಪಂಚಮಿ ಪ್ರಕಟಣೆಯ
ಮಹಾದೇವ ಬಸರಕೋಡ ಅವರ ನೂತನ ಕಥಾಸಂಕಲನ `ಆಕಾಶ ದೇವತೆ' ಕೃತಿಯ ಕುರಿತು ನಾಡಿನ ಹಿರಿಯ ಲೇಖಕರು, ಜನಪದ ವಿದ್ವಾಂಸರು ಆಗಿರುವ ಶ್ರೀರಾಮ ಇಟ್ಟಣ್ಣವರ ಅವರು ತಮ್ಮ ಕೃತಿ ಓದಿನ ಮಾತುಗಳನ್ನು ಹಂಚಿಕೊಂಡಿದ್ದಾರೆ. ಇದು ಕೃತಿಗೆ ಸಿಕ್ಕ ವಿಶೇಷ ಮನ್ನಣೆಯೆಂದು ತಿಳಿಸುತ್ತಾ, ಹಿರಿಯರಾದ ಶ್ರೀರಾಮ ಇಟ್ಟಣ್ಣವರ ಅವರಿಗೆ ಕೃತಜ್ಞತೆಗಳನ್ನು ತಿಳಿಸುತ್ತೇವೆ. ಅವರ ಓದಿನ ಮಾತು ಕೆಳಕಂಡಂತಿದೆ.
---------------------------------------------------------

ಪ್ರಿಯ ಮಹಾದೇವ ಬಸರಕೋಡ ಅವರಿಗೆ
ವಂದನೆಗಳು..
ತಮ್ಮ 'ಆಕಾಶ ದೇವತೆ' ಕತೆಗಳನ್ನು ಓದಿ ಬರೆಯುತ್ತಿದ್ದೇನೆ.
ಹೆಚ್ಚು ಕಡಿಮೆ ಇಲ್ಲಿಯ ಎಲ್ಲಾ ಕತೆಗಳು ಆದರ್ಶಕ್ಕೆ ಮುಖ ಮಾಡಿವೆ. ಲೇಖಕ ಹೇಗೋ ಹಾಗೆ ಬರವಣಿಗೆ. ನೀವು ಆದರ್ಶವನ್ನು ನಂಬಿ ನಡೆದವರು. ಐಸ್ಕ್ರೀಂ ಹುಡುಗನಲ್ಲಿ ನಿರೂಪಕನಾಗಿ, ಆಕಾಶ ದೇವತೆಯಲ್ಲಿ ಶ್ರೀಮಂತ ಮಹಿಳೆಯಾಗಿ, ಅಬಲೆಯ ಕನಸಿನಲ್ಲಿ ಮುಖ್ಯಾಧ್ಯಾಪಕರಾಗಿ ನೀವಿದ್ದೀರಿ.
ಶಶಾಂಕ, ಶಿವು, ನಿರ್ಮಲಾ ಇವರೆಲ್ಲ ಒಂದಿಲ್ಲೊಂದು ರೀತಿಯಲ್ಲಿ ಕಷ್ಟದ ಬದುಕಿಗೆ ಎದೆಯೊಡ್ಡಿದವರು. ಅವರಿಗೆ ಅನಿರೀಕ್ಷಿತ ಸಹಾಯ ಹಸ್ತಗಳು ಬೇರೆ ಬೇರೆ ರೂಪದಲ್ಲಿ ದೊರೆಯುತ್ತವೆ.
ನನಗೆ ತುಂಬ ಹಿಡಿಸಿದ್ದು 'ಒಲವೇ ಬದುಕಿನ ದಾರಿ ದೀಪ' ಮನೋ ಪಾತಳಿಯ ಮೇಲೆ ಸೃಜನಗೊಂಡ ಕತೆ. ತನ್ನ ಕುಟುಂಬ ‍ಸ್ತರವನ್ನು ಮೀರಿ ಮಹೇಶನ ಕಡೆಗೆ ಹರಿಯುವ ಮನಸ್ಸನ್ನು ತಹಬಂದಿಗೆ ತಂದುಕೊಂಡು ಕುಟುಂಬ ಧರ್ಮಕ್ಕೆ ಹೊರಳಿದವಳು ಬಿಂದು.
ಬೇರೆ ಬಗೆಯ ಕತೆಗಳೂ ಇಲ್ಲಿವೆ. 'ಬೆಳಕಿನರಮನೆಯ ದಾರಿಯಲ್ಲಿ' ಪಾಶ್ಚಾತ್ತಾಪದೊಂದಿಗೆ ಅನೇಕ ಪ್ರಶ್ನೆಗಳು ಸಾಲುಗಟ್ಟಿವೆ. 'ಅಂತರ್ಮುಖಿ'ಯೂ ಒಂದು ತಿರುವಿನಲ್ಲಿ ಹೊಸ ಭಾವದ ಬೆಳಕು ಕಾಣುತ್ತಾನೆ.
ಇವು ಕತೆಗಳು. ಕತೆಗಳಲ್ಲಿಯೂ ನಿಮ್ಮ ಚಿಂತನಶೀಲ ಬರಹಗಳ ಶೈಲಿಯಿದೆ (ಲೋಕದ ವಸ್ತುಗಳನ್ನು....... ಬಹು ದೊಡ್ಡ ಮೌಲ್ಯ ಪು.೮೬).
ಶಶಾಂಕ ವಯಸ್ಸಿಗೆ ಮೀರಿದ ಮಾತುಗಳನ್ನಾಡುತ್ತಾನೆ. (ಇಂತಹ ಕಷ್ಟದ ಅನುಭವಗಳೇ.......ಎಂದು ಹೇಳಿದ್ದಾಳೆ. ಪು.೨೦). ಕಷ್ಟಗಳಿಗೆ ಕರಗುವ ಲೇಖಕನ ಭಾವುಕತೆ ಮತ್ತು ಬಡವರ ಒಡಲ ನೋವು ಹಾಗೆ ಬರೆಸುತ್ತವೆ.
ನಿಮ್ಮ ಬರವಣಿಗೆಗೊಂದು ಲಾಲಿತ್ಯವಿದೆ.ಸರಾಗವಾಗಿ ಓದಿಸಿಕೊಂಡು ಹೋಗುತ್ತವೆ.
ಒಳ್ಳೆಯ ಕತೆಗಳಿಗಾಗಿ ಅಭಿನಂದಿಸುತ್ತೇನೆ.
ಒಳ್ಳೆಯದಾಗಲಿ.
- ಇಟ್ಟಣ್ಣವರ



ಆತ್ಮೀಯ ಓದುಗರೇ,ನಾಡಿನ ಖ್ಯಾತ ಕವಿಗಳಾದ ಶ್ರೀ ಡಿ.ಎನ್. ಅಕ್ಕಿ ಅವರ `ಗೆರೆ ಏಕೆ ಕೊರೆದೆ...'  `ಹಕ್ಕಿಹಾಂಗ' ಕವನ ಸಂಕಲನಗಳ ಕುರಿತು ನಾಡಿನ ಹಿರಿ...
12/06/2026

ಆತ್ಮೀಯ ಓದುಗರೇ,

ನಾಡಿನ ಖ್ಯಾತ ಕವಿಗಳಾದ ಶ್ರೀ ಡಿ.ಎನ್. ಅಕ್ಕಿ ಅವರ `ಗೆರೆ ಏಕೆ ಕೊರೆದೆ...' `ಹಕ್ಕಿಹಾಂಗ' ಕವನ ಸಂಕಲನಗಳ ಕುರಿತು ನಾಡಿನ ಹಿರಿಯ ಕವಿಗಳಾದ ಡಾ.ದೊಡ್ಡರಂಗೇಗೌಡರು ಬರೆದಿರುವ ಅಭಿಪ್ರಾಯವಿದು.

ಈ ಕೃತಿಗಳಿಗಾಗಿ ಸಂಪರ್ಕಿಸಿ: 097400 69123

ಆತ್ಮೀಯ ಓದುಗ ಮಿತ್ರರೇ,ಪಂಚಮಿ ಪ್ರಕಟಿಸಿರುವ ನಾಡಿನ ಖ್ಯಾತ ಲೇಖಕರು, ಅಂಕಣಕಾರರು ಆಗಿರುವ ಶ್ರೀ ಮಹಾದೇವ ಬಸರಕೋಡ ಅವರ ನೂತನ ಕಥಾಗುಚ್ಛ `ಆಕಾಶ ದೇ...
10/06/2026

ಆತ್ಮೀಯ ಓದುಗ ಮಿತ್ರರೇ,

ಪಂಚಮಿ ಪ್ರಕಟಿಸಿರುವ ನಾಡಿನ ಖ್ಯಾತ ಲೇಖಕರು, ಅಂಕಣಕಾರರು ಆಗಿರುವ ಶ್ರೀ ಮಹಾದೇವ ಬಸರಕೋಡ ಅವರ ನೂತನ ಕಥಾಗುಚ್ಛ `ಆಕಾಶ ದೇವತೆ’ ಸಂಕಲನದ ಕುರಿತು ರಜನಿ ಎಂ ಅವರು ಬರೆದಿರುವ ವಸ್ತುನಿಷ್ಟ ವಿಮರ್ಶೆಯು ವಾರ್ತಾ ಭಾರತಿ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ.
ತನ್ಮೂಲಕ ಪುಸ್ತಕ ಪರಿಚಯವನ್ನು ಪ್ರಕಟಿಸಿದ `ವಾರ್ತಾ ಭಾರತಿ’ ಪತ್ರಿಕೆಗೆ ಧನ್ಯವಾದಗಳು.

ಮಹಾದೇವ ಬಸರಕೋಡ ಅವರ `ಆಕಾಶ ದೇವತೆ’ ಕೃತಿಗಾಗಿ ಸಂಪರ್ಕಿಸಿ: 097400 69123

ತಮ್ಮ ಪ್ರೋತ್ಸಾಹಕ್ಕೆ ವಂದಿಸುತ್ತಾ

`ಪಂಚಮಿ' ಪ್ರಕಾಶನದಿಂದ

Address

Bangalore
560085

Telephone

+919739561334

Website

Alerts

Be the first to know and let us send you an email when Panchami Media Publications, Bangalore posts news and promotions. Your email address will not be used for any other purpose, and you can unsubscribe at any time.

Shortcuts

Share