Kendasampige
- Home
- Kendasampige
ಕೆಂಡಸಂಪಿಗೆ ಎಂಬುದು ಕನ್ನಡ ಅಂತರ್ಜಾಲ ಲೋಕ
Address
Website
Alerts
Be the first to know and let us send you an email when Kendasampige posts news and promotions. Your email address will not be used for any other purpose, and you can unsubscribe at any time.
Contact The Business
Send a message to Kendasampige:
-
Want your business to be the top-listed Media Company?
Our Story
ಜಗತ್ತಿನೆಲ್ಲೆಡೆ ಹಬ್ಬಿರುವ ಕನ್ನಡದ ಈ ಬೆಡಗು ಪ್ರತಿ ದಿನವೂ ಅರಳುತ್ತಾ, ಕನ್ನಡ ನಾಡಿನ ಸಂಸ್ಕೃತಿ, ಪರಂಪರೆ, ಸಾಹಿತ್ಯ, ಸಿನೆಮಾ, ಜಾನಪದ, ರಾಜಕೀಯ - ಹೀಗೆ ಕನ್ನಡ ನಾಡಿನ ಇತಿಹಾಸವನ್ನೂ ಹಾಗೂ ದಿನ ನಿತ್ಯದ ಉಸಿರನ್ನೂ ನಿಮ್ಮ ಮುಂದೆ ಸೂಸುತ್ತಿದೆ. ಭಾಷೆ, ಸಂಸ್ಕೃತಿ ಇತ್ಯಾದಿಗಳ ಹೆಸರಿನಲ್ಲಿ ಭಾಷಾಂಧರೂ, ಧರ್ಮಾಂಧರೂ ಆಗಿಬಿಡುವ ಈ ಅಪಾಯದ ಹೊತ್ತಲ್ಲಿ ಕನ್ನಡ ನಾಡಿನ ನಿಜದ ಗುಣವನ್ನು, ಅದರ ಭಾಷಾ ವೈವಿಧ್ಯಗಳನ್ನು, ಪ್ರೀತಿ ಸಹನೆಗಳನ್ನು, ಜನ ಜೀವನದ ವೈವಿಧ್ಯಗಳನ್ನು ಹಾಗೂ ಎಲ್ಲಕ್ಕಿಂತ ಹೆಚ್ಚಾಗಿ ಜಗತ್ತಿನೆಲ್ಲೆಡೆಯ ಮಾನವ ಜೀವಿತದ ಅಪಾರ ಸಾಧ್ಯತೆಗಳನ್ನು ಕೆಂಡಸಂಪಿಗೆ ಪ್ರತಿದಿನವೂ ತನ್ನ ಬರಹಗಳ ಮೂಲಕ ಕನ್ನಡ ಓದುಗ ಲೋಕಕ್ಕೆ ಅರುಹುತ್ತಿದೆ. ಅಂತರ್ಜಾಲವೆಂಬ ಅರಿವಿನ ಸ್ಫೋಟದ ಆಕಾಶದಲ್ಲಿ ಲೇಖಕರು, ಓದುಗರು, ಸಂಪಾದಕರು, ವರದಿಗಾರರು ಎಂಬ ಅಂತರಗಳೇನೂ ಇಲ್ಲ. ಬರೆಯುವ ಒಂದು ಕ್ರಿಯೆಯಷ್ಟೇ ದೊಡ್ಡದು ಓದುವುದು. ಅದರಷ್ಟೇ ದೊಡ್ಡದು ಚಿತ್ರಗಳು.ಇವೆಲ್ಲಕ್ಕಿಂತ ದೊಡ್ಡದು ಇವೆಲ್ಲದರ ನಡುವೆ ನಡೆಯುವ ಪ್ರತಿಕ್ರಿಯೆಗಳು ಹಾಗೂ ಸಂವಾದ. ಕೆಂಡಸಂಪಿಗೆಯ ಬೆಳವಣಿಗೆಗೆ ಬರವಣಿಗೆಗಳು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಓದುಗರ ಪ್ರತಿಕ್ರಿಯೆಗಳು ಎಂಬುದು ಕೆಂಡಸಂಪಿಗೆಯ ನಂಬಿಕೆ. ಓದುಗರ ನಿಮ್ಮ ಇಷ್ಟಗಳನ್ನು ಮರೆತು ಕೆಂಡಸಂಪಿಗೆ ಮುಂದೆ ಹೋಗುವುದಿಲ್ಲ. ಆದರೆ ಹಾಗೆ ಹೋಗುವಾಗ ಅದರ ದಾರಿಯನ್ನೂ ಮರೆಯುವುದಿಲ್ಲ. ಓದುಗರ ಇಷ್ಟಗಳನ್ನು ಗೌರವಿಸುವ ಜೊತೆ ಜೊತೆಯಲ್ಲೇ ನಮ್ಮ ಉದ್ದೇಶಗಳನ್ನೂ ಮರೆಯದ ಹಾಗೆ ಮುಂದೆ ಹೋಗುತ್ತೇವೆ. ಕೆಂಡಸಂಪಿಗೆಯ ಉದ್ದೇಶ ಕನ್ನಡದ ಜೀವಂತ ಸಂಸ್ಕೃತಿಯನ್ನು ಅದರ ಎಲ್ಲ ಪರಿಮಳಗಳ ಜೊತೆಗೆ ಓದುಗರ ಮುಂದೆ ತೆರೆದಿಡುವುದು.