18/06/2021
ಸಂಕಲ್ಪ ಪ್ರತಿಷ್ಠಾನ, ಬೆಂಗಳೂರು
ಸಂಕಲ್ಪ ಪ್ರತಿಷ್ಠಾನವು ಪ್ರಾದೇಶಿಕ ವಾತಾವರಣದ ಸಂರಕ್ಷಣೆ, ಆರೋಗ್ಯ, ಆಹಾರ, ಶಿಕ್ಷಣ, ಮಹಿಳೆ ಮತ್ತು ಮಗುವಿನ ಸರ್ವತೋಮುಖ ಬಲವರ್ಧನೆಗಾಗಿ ಒಮ್ಮನಸ್ಸಿನ ಗೆಳೆಯ ಗೆಳತಿಯರ ಸಂಘಟನೆಯಾಗಿದೆ. ಸಂಕಲ್ಪ ಪ್ರತಿಷ್ಠಾನದ ಮೂಲ ಉದ್ದೇಶದ ಸಾಕಾರಕ್ಕಾಗಿ ಒಂದು ಕೋಟಿ ಬಂಡವಾಳ ಕ್ರೋಢೀಕರಿಸಿ, ಅದರ ಸದುಪಯೋಗವನ್ನು ಸಮಾಜದ ಸರ್ವ ಜನರ ಉಪಯೋಗಕ್ಕೆ ಬಳಸುವುದು ಆದ್ಯತೆಯ ಕರ್ತವ್ಯವಾಗಿದೆ. ಈ ಪ್ರತಿಷ್ಠಾನದ ವೆಬ್ ಸೈಟ್ ಹಾಗೂ ನೊಂದಣಿ ಕಾರ್ಯಕ್ರಮ ಪ್ರಗತಿಯಲ್ಲಿದೆ. ಈ ಕಾರ್ಯ ಉದ್ದಿಶ್ಯ ತಮಗೆ ಸಾಮಾಜಿಕ ನ್ಯಾಯ, ಕಳಕಳಿ ಇರಬೇಕು. ತಾವು ನಮ್ಮೊಂದಿಗೆ ಸದಾ ಇರಬೇಕು, ಇದ್ದು ಈ ಎಲ್ಲಾ ಕಾರ್ಯಗಳನ್ನು ಅನುಷ್ಠಾನ ಮಾಡುವ ಪ್ರತಿಷ್ಠಾನದ ವ್ಯವಹಾರಗಳಲ್ಲಿ ತಾವು ಪಾಲುದಾರರು. ತಮ್ಮ ಹಿರಿಯ ಮಾತಾ ಪಿತೃ, ಭ್ರಾತೃಗಳ ಸ್ಮರಣ ಪೂರಕ, ಮನೆದೇವರ ಸಂಕಲ್ಪದಲ್ಲಿ ಬಂಡವಾಳದ ಸಂಚಯನವನ್ನು ಮಾಡಲು ಪ್ರತಿಷ್ಠಾನವು ಅವಕಾಶ ಕಲ್ಪಿಸಲಾಗಿದೆ. ವಾಟ್ಸಾಪ್ ಗುಂಪಿನ ಲಿಂಕ್ ರಚಿಸಲಾಗಿದೆ. ದಯವಿಟ್ಟು ತಮ್ಮ ಭಾಗವಹಿಸುವಿಕೆಯನ್ನು ಖಚಿತಪಡಿಸಲು ಮನವಿ ಮಾಡಲಾಗಿದೆ. https://chat.whatsapp.com/IACV8e6bfQM41mnezKisZz
ಕಷ್ಟಕಾಲದಲ್ಲಿ ಚಿರಪರಿಚಿತರೂ ಕೂಡ ಮೆಲ್ಲಮೆಲ್ಲಗೆ ಹೇಗೆ ಜಾರಿಕೊಳ್ಳುತ್ತಾರೆಂದರೆ ಉದಾಹರಣೆಗೆ ಪಕ್ಷಿಗಳು ಹಣ್ಣುಗಳಿಲ್ಲದ ಮರವನ್ನು ಬಿಟ್ಟುಹೋಗುತ್ತವೆ ಹಾಗೆ. ನೀರು ಬತ್ತಿದ ಕೊಳದಲ್ಲಿ ಕಮಲಗಳಿರುವುದಿಲ್ಲ . ಹೂವು ಬಾಡಿದರೆ ದುಂಬಿಗಳು ಅಲ್ಲಿಗೆ ಬರುವುದಿಲ್ಲ. ಸುಟ್ಟುಹೋದ ಅಡವಿಯಲ್ಲಿ ಪ್ರಾಣಿಗಳು ಉಳಿಯಲಾರವು. ಅಂತೆಯೇ ಕಷ್ಟಕಾಲದಲ್ಲಿ ಚಿರಪರಿಚಿತರೂ ದೂರವಾಗುತ್ತಾರೆ. ಆದರೆ ಈ ಎಲ್ಲವೂ ಪುನಃ ಒಮ್ಮೆ ತಮ್ಮ ಮೊದಲಿನ ಸ್ವರೂಪವನ್ನು ಪಡೆದುಕೊಂಡರೆ ಎಲ್ಲರೂ, ಎಲ್ಲವೂ ಪುನಃ ಬಂದು ಆಶ್ರಯಿಸುತ್ತವೆ. ಸ್ವಾರ್ಥದ ಸ್ವಭಾವ ಸ್ವರೂಪವು ಹೇಗಿರುತ್ತದೆ ಎಂಬುದನ್ನು ಈ ನೀತಿಯಿಂದ ತಿಳಿಯಬಹುದು. ಗರುಡ ಪುರಾಣವು ಈ ನೀತಿಗೆ ಸಾಕ್ಷಿ ಆಗಿರುತ್ತದೆ.
ವಿನಾಕಾರಣ ಅನ್ಯರ ಮನೆಯಲ್ಲಿ ವಾಸ ಮಾಡಬಾರದು’; ‘ಮೂರ್ಖ ಶಿಷ್ಯನಿಗೆ ಪಾಠ ಹೇಳುವುದರಿಂದಲೂ, ಕೆಟ್ಟ ಸ್ವಭಾವದ ಹೆಂಡತಿಯನ್ನು ಪಡೆಯುವುದರಿಂದಲೂ, ಮಹಾಮೇಧಾವಿಯೂ ಗೌರವವನ್ನು ಕಳೆದುಕೊಳ್ಳುತ್ತಾನೆ. ಶತ್ರುಗಳಾದರೂ ನಮ್ಮ ಹಿತವನ್ನು ಬಯಸುವುದಾದರೆ ಅವರೇ ನಿಜವಾದ ಬಂಧುಗಳು. ನೆಂಟನಾದವನು ನಮ್ಮ ವಿನಾಶವನ್ನು ಬಯಸುತ್ತಿದ್ದರೆ ಅವನೇ ನಿಜವಾದ ಶತ್ರು. ನಮ್ಮಲ್ಲಿ ಉಂಟಾದ ರೋಗ ನಮಗೆ ಶತ್ರು. ದೂರದ ಅಡವಿಯಲ್ಲಿದ್ದ ಔಷಧವು ನಮಗೆ ಮಿತ್ರ. ಯಾವ ಪ್ರದೇಶದಲ್ಲಿ ನಮಗೆ ಗೌರವ, ಆದರ, ಬಂಧುಗಳಿರುವುದಿಲ್ಲವೋ ಮತ್ತು ವಿದ್ಯೆಯನ್ನು ಸಂಪಾದಿಸುವ ಅವಕಾಶವಿರುವುದಿಲ್ಲವೋ ಆ ಪ್ರದೇಶವನ್ನು ಬಿಡುವುದೇ ಲೇಸು.
ಸಂಕಲ್ಪ ಪ್ರತಿಷ್ಠಾನವು 10,000 ಸದಸ್ಯತ್ವ ನೋಂದಣಿ ಅಭಿಯಾನ ಯೋಜನೆಯಡಿ ಸುಮಾರು ಒಂದು ಕೋಟಿ ಪ್ರತಿಷ್ಠಾನ ಬಂಡವಾಳ (Corpus Fund)ವನ್ನು ಸಂಗ್ರಹಿಸುವ ಸಂಕಲ್ಪ ಇದಾಗಿರುತ್ತದೆ. ಯಾವುದೇ ಕಾರಣಕ್ಕೂ ಒಂದು ಕೋಟಿ ಹಣ ವ್ಯಯ ಮಾಡುವುದಿಲ್ಲ. ಮೂಲ ಬಂಡವಾಳ ಕ್ರೋಢೀಕರಿಸಿ ನಂತರ AAA+ ಶ್ರೇಣಿ ಭದ್ರತೆ ಇರುವ ಸರ್ಕಾರಿ ಬಾಂಡ್ಗಳಿಂದ ಗಳಿಸುವ ಲಾಭಾಂಶದಿಂದ ಸಾಮಾಜಿಕ ಕಳಕಳಿ ಕಾರ್ಯಕ್ರಮ ನೆರವೇರಿಸಲು ಕಟೀಬದ್ಧವಾಗಿದೆ. ಇದು ಸಾರ್ವಜನಿಕರ ದೇಣಿಗೆ ರೂಪದಲ್ಲಿ ಸಂಚಯನವಾಗಿದ್ದು, ಕಾನೂನಾತ್ಮಕ ಹಾಗೂ ಆಡಳಿತಾತ್ಮಕ ದೃಷ್ಟಿಯಿಂದ ಸನ್ನದು ಪಡೆದ ಚಾರ್ಟೆಡ್ ಅಕೌಂಟೆಂಟ್ ಅವರಿಂದ ಅಡಿಟ್ ವರದಿಮಾಡಲು ನಿರ್ಧರಿಸಲಾಗಿದೆ. ಪ್ರತಿಷ್ಠಾನದ ಪರಮ ಧ್ಯೇಯೋದ್ದೇಶಗಳನ್ನು ತಮ್ಮ ಅವಗಾಹನೆಗಾಗಿ ಪ್ರಸ್ತುತ ಪಡಿಸಲಾಗುತ್ತದೆ. ಜೀವಮಾನದಲ್ಲಿ ಒಮ್ಮೆ ಮಾತ್ರ ಈ ದೇಣಿಗೆ ಸಂಗ್ರಹ ಸಾರ್ವಜನಿಕರಿಂದ ಪಡೆಯಲಾಗುತ್ತದೆ. ವರ್ಷಾ ವರ್ಷಾ ವಂತಿಕೆ ಪಡೆಯಲಾಗುವುದಿಲ್ಲ. ಒಮ್ಮೆ ಸದಸ್ಯರಾದವರು ಜೀವನ ಪರ್ಯಂತ *ಸಂಕಲ್ಪ ಪ್ರತಿಷ್ಠಾನ* ಸದಸ್ಯರಾಗಿ ಅಜೀವ ಪರ್ಯಂತ ನಡೆಯುವ ಎಲ್ಲಾ ಸಾಮಾಜಿಕ ಕಳಕಳಿ ಕಾರ್ಯಕ್ರಮಗಳಿಗೆ ಸಾಕ್ಷಿ ಆಗಿರುತ್ತಾರೆ ಎಂದು ಟ್ರಸ್ಟ್ ತಿಳಿಸಲು ಸೂಚಿಸಿರುತ್ತಾರೆ. ಸದಸ್ಯರಿಗೆ ನಾಮಿನೇಷನ್ ಸೂಚಿಸಲು ಮನವಿ ಮಾಡುತ್ತಿದ್ದೇವೆ. ಸ್ವಯಂಪ್ರೇರಿತರಾಗಿ ತಾವು ಈ ಉತ್ತಮ ಸಾಮಾಜಿಕ ಸೌಲಭ್ಯದ ನೇತಾರರಾಗಿ, ದೀಪದಿಂದ ದೀಪ ಹಚ್ಚಿ, ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವ, ಮನುಜ ಕುಲವೊಂದೇ ವಲಂ. ಇದು ಎಲ್ಲಾ ಮಾನವೀಯತೆಯ ಮೌಲ್ಯ ಎತ್ತಿ ಹಿಡಿಯುವ ನಾಗರೀಕ ಸಂವರ್ಧನೆಯ ಸಹಕಾರ ತತ್ವವೇ ಆದರ್ಶವಾಗಿದೆ. ಎಲ್ಲಾವೂ ಸಮಾಜದ ಪ್ರತಿ ನಾಗರೀಕರಿಗಾಗಿ ಒಂದು ವಾಮನ ಪಾದ.
ಈ ಪ್ರತಿಷಾನದ ಕಾರ್ಯಚಟುವಟಿಕೆಗಳನ್ನು ಪ್ರೋತ್ಸಾಹಿಸಲು ತಾವು ಸದಸ್ಯರಾಗಿ ಹಾಗು ತಮ್ಮವರನ್ನು ಪ್ರೋತ್ಸಾಹಿಸಿ, ಇನ್ನೂಬ್ಬರ ಬಾಳ ನೌಕೆಯಲ್ಲಿ ಬೆಳಕಾಗಲು, ಪ್ರತಿಷ್ಠಾನದೊಂದಿಗೆ ಹೆಜ್ಜೆ ಹಾಕಲು ಮತ್ತು ಸಾಮಾಜಿಕ ಮೌಲ್ಯದ ಹರಿಕಾರರಾಗಲು, ಹೃತ್ಪೂರ್ವಕ ಸುಸ್ವಾಗತ. ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ಸಂಖ್ಯೆ ಸಂಪರ್ಕ ಮಾಡಲು ಮನವಿ ಮಾಡುತ್ತಿದ್ದೇವೆ.
ಶ್ರೀ ಕೃಷ್ಣ - 9008066889.
ಶ್ರೀ ಬದರೀಶ - 7795657695.
WhatsApp Group Invite