ಸಿರಿದನಿ SIRIdani

  • Home
  • ಸಿರಿದನಿ SIRIdani

ಸಿರಿದನಿ SIRIdani SIRI dani Shwetha Initiative Radio Infotainment. its a passion platform to reach our thoughts, fee

25/10/2024
ನೆರಳಿರಲು ಹಿಂದೆಯೇ ಬೆಳಕಿರುವುದು....ಒಳ್ಳೆಯ ಕೃತಿಯನ್ನೋದಿ ವರ್ಷವೇ ಕಳೆಯಿತು. ಆಲಸ್ಯ ಎಂಬ ಕಾರಣವು ಪುರುಸೊತ್ತಿಲ್ಲ ಎಂಬ ನೆಪದ ಪರದೆಯ ಅಡ್ಡದಲ್...
18/06/2024

ನೆರಳಿರಲು ಹಿಂದೆಯೇ ಬೆಳಕಿರುವುದು....

ಒಳ್ಳೆಯ ಕೃತಿಯನ್ನೋದಿ ವರ್ಷವೇ ಕಳೆಯಿತು. ಆಲಸ್ಯ ಎಂಬ ಕಾರಣವು ಪುರುಸೊತ್ತಿಲ್ಲ ಎಂಬ ನೆಪದ ಪರದೆಯ ಅಡ್ಡದಲ್ಲಿತ್ತು. ಹಾಗೆಯೇ ಕವಿ, ಸಾಹಿತಿಗಳ ಒಡನಾಟವೂ ಸ್ವಲ್ಪ ಕಡಿಮೆಯಾಗುತ್ತಲೇ ಬಂದಿತ್ತು. ಅಂಥದ್ದರಲ್ಲಿ ಹಿರಿಯ ಗೆಳೆಯರಾದ ಶ್ರೀ ಡಾ.ಎ. ಭಾನು ಅವರು ತಮ್ಮ ಎರಡು ಕೃತಿಗಳ (ಭಾನುಗೀತ ಮತ್ತು ಭಾವ ಸೌರಭ) ಬಿಡುಗಡೆ ಸಮಾರಂಭಕ್ಕೆ ಕರೆದರು. ಕವನ, ಸಾಹಿತ್ಯ, ಬರಹ, ಸಮಾರಂಭಗಳಿಂದ ದೂರ ಉಳಿದಿರುವ ನನಗೆ ಆ ಕಾರ್ದಯಕ್ರಮದ ನೆಪದಲ್ಲಿ ಡಾ.ಭಾನು ಅವರನ್ನು ಭೇಟಿಯಾಗಬಹುದು ಎಂಬ ಕಾರಣಕ್ಕೆ ಹೋದೆ. ಎನ್‌.ಆರ್‌. ಕಾಲೊನಿಯ ಡಾ.ಸಿ. ಅಶ್ವತ್ಥ್‌ ಕಲಾಭವನದಲ್ಲಿ ಬಹಳ ಅಚ್ಚುಕಟ್ಟಾದ ಸಮಾರಂಭ ಆಯೋಜಿಸಿದ್ದರು. ಡಾ.ಭಾನು, ಅವರ ಒಡನಾಡಿಗಳನ್ನು ನೋಡಿ ಖುಷಿಪಟ್ಟೆ. ಶ್ರೀ ಢುಂಡಿರಾಜ್‌, ಡಾ.ನಾ.ದಾಮೋದರ ಶೆಟ್ಟಿ ಹೊರತುಪಡಿಸಿದರೆ ಉಳಿದ ಎಲ್ಲರೂ ನನಗೆ ಹೊಸ ಮುಖಗಳೇ.

ಭಾನುಗೀತ
(ಆದಿತ್ಯ ಲಹರಿ) ನನಗನಿಸಿದ್ದು
ಈ ಪುಸ್ತಕದ ಮೊದಲೆರಡು ಪುಟಗಳನ್ನು ಓದಿದ್ದು ನನ್ನ ಗೆಳೆಯ ಡಾ.ಎ.ಭಾನು ಅವರದೆನ್ನುವ ಕಾರಣಕ್ಕೆ. ಸುಮ್ಮನೆ ನೋಡೋಣ (ಓದೋಣ ಅಲ್ಲ) ಅಂತ ಕಣ್ಣೂರು ಎಕ್ಸ್‌ಪ್ರೆಸ್‌ನಲ್ಲಿ ಕುಳಿತು ʼಭಾನು ಗೀತʼದ ಪುಟ ತೆರೆದವನಿಗೆ ರಾತ್ರಿ ೧೧ರ ವೇಳೆಗೆ ಸಹ ಪ್ರಯಾಣಿಕರು ದೀಪ ಆರಿಸಿದಾಗ ಓಹ್‌ ಇಷ್ಟು ಓದಿದೆನಾ ಅನಿಸಿತ್ತು. ಸುಮಾರು ೨೭ ಪುಟಗಳಷ್ಟು ಲಹರಿ ಓದಿ ಮುಗಿಸಿದ್ದೆ. ಪ್ರಯಾಣ ಮುಗಿಸಿ ಮೂರು ದಿನಗಳ ಬಳಿಕ ಮತ್ತೆ ಈ ಕೃತಿ ಕೈಗೆತ್ತಿಕೊಂಡು ಓದಿ ಮುಗಿಸಿದೆ. ಹೌದು ಈಗ ಕೃತಿ ನೋಡಿದ್ದಲ್ಲ. ಓದಿದ್ದು. ಇಷ್ಟವಾದ ಸಾಲುಗಳನ್ನು ಮತ್ತೆ ಓದಿದ್ದು... ಬದುಕಿನಲ್ಲಿ ಕಳೆದುಕೊಂಡ ಆನಂದವೊಂದನ್ನು ಈ ಸಾಲು ನೆನಪಿಸಿದವು.

ಎಳೆಬಿಸಿಲಿನಂದವನು ಬೆಳಗಾಗೆ ನೋಡದವ
ಕಳೆದುಕೊಳ್ಳುವನೊಂದು ಯೋಗವನ್ನು
ಹೊಳೆಯುತಿಹ ಕಿರಣಗಳ ಕಡೆಗಣಿಸಿ ಮಲಗಿದವ
ಬೆಳೆಸುವನು ಸೋಮಾರಿ ಹೊಟ್ಟೆಯನ್ನು

ಈ ಮೊದಲು ರಂಗಭೂಮಿಗೆ ಬೇಕಾದ ಕೆಲವೊಂದು ರೆಫರೆನ್ಸ್‌ ಸಾಲುಗಳನ್ನು ಹುಡುಕಬೇಕಾದರೆ ಇಂತಹ ಕಾವ್ಯ, ಲಹರಿಗಳನ್ನು ಹುಡುಕುತ್ತಿದ್ದೆ. ಒಂದೆರಡು ಪಂಚ್‌ಲೈನ್‌ಗಳು ಸಾಕಾಗುತ್ತಿದ್ದವು. ಈಗ ಆ ಸಹವಾಸ (ಅಥವಾ ಚಟಗಳೆನ್ನಿ) ಕಡಿದು ೯ ವರ್ಷಗಳು ಕಳೆದಿವೆ. ಮತ್ತೆ ಕಾವ್ಯಗಳನ್ನು ಓದುವುದು ಬಲವಂತದ ಪ್ರಯತ್ನವೇ ಸರಿ. ಆದರೆ, ಈ ಕೃತಿ ಅಂತ ಬಲವಂತವನ್ನೇನೂ ಮಾಡಲಿಲ್ಲ. ಸರಾಗವಾಗಿ ಓದಿಸಿಕೊಂಡು ಹೋಯಿತು. ಚೌಪದಿಯ ಸಾಲುಗಳು ಸೂರ್ಯಸ್ಮರಣೆಯ, ಸೂರ್ಯ ಆರಾಧನೆಯ ಯಾವ ಮಂತ್ರಗಳಿಗೂ ಕಡಿಮೆ ಇಲ್ಲದಂತಿವೆ. ಇಲ್ಲಿ ಸೂರ್ಯ ಎಲ್ಲ ಪಾತ್ರಗಳನ್ನೂ ನಿರ್ವಹಿಸಿದ್ದಾನೆ. ಉದಿಸಿದ್ದಾನೆ, ಉರಿಸಿದ್ದಾನೆ, ಅಸ್ತಮದ ಸಂದರ್ಭದಲ್ಲೂ ನಾಳೆ ಮತ್ತೆ ಬರುತ್ತೇನೆ ಎಂಬ ಭರವಸೆಯನ್ನೂ ಪದೇ ಪದೇ ಬಿತ್ತಿದ್ದಾನೆ. ʼಕಾರ್ಮೋಡದಂಚಿನಲಿ ಬೆಳ್ಳಿ ರೇಖೆಯ ಕಾಣಿ; ನೆರಳಿರಲು ಹಿಂದೆಯೇ ಬೆಳಕಿರುವುದು....ʼ ಬದುಕಿಗೆ ಬೇಕಾದದ್ದು ಇದೇ ಅಲ್ಲವೇ.

ಸೂರ್ಯನನ್ನು ಶೃಂಗಾರಪುರುಷ, ಮಾಡೆಲ್‌ ಆಗಿ ಚಿತ್ರಿಸಿದ ಮಜಾ ಹೀಗಿದೆ
ಶೃಂಗಾರಪುರುಷನಂತಂದದಿಂ ಸಿಂಗರಿಸಿ
ಉದಯಿಸಿದನಾದಿತ್ಯನಾಗಸದಲಿ
ಸ್ವರ್ಣಲೇಪಿತ ರೂಪದರ್ಶಿಯನು ಕಂಡ ಜನ
ಮುದದಿಂದ ನಮಿಸಿದರು ಧರಣಿಯಲ್ಲಿ.

ಈ ಬಾರಿಯ ಬಿಸಿಲ ತಾಪಕ್ಕೆ ಬೆಂಗಳೂರಿಗರು ಬಸವಳಿದ ಬಗೆಯನ್ನು ಸೂರ್ಯನೊಂದಿಗೆ ಸಂವಾದಿಸಿ ಬರೆದ ರೂಪಕ ಇಲ್ಲಿದೆ.

ಉರಿವಬಿಸಿ ಅಡುಗೆಯನು ಕೆಂಗೋಲ ಬಡಿಸಿದನು
ತಿರೆಯ ಬರಬಿಸಿಲಿನಲಿ ಧರಣಿ ಎಲೆಗೆ
ನರರದರ ಶಾಖವನು ಸಹಿಸಲಾಗದೆ ತೊರೆದು
ಸರಿದಿಹರು ತಂಪಿರುವ ನೆರಳಿನೆಡೆಗೆ

ಸೂರ್ಯೋದಯದಿಂದ ಸೂರ್ಯಾಸ್ತಮಾನದವರೆಗೆ ೨೧೫ ಚೌಪದಿಗಳು ಇಲ್ಲಿವೆ. ಸೂರ್ಯನಿಗೆ ನಮಸ್ಕಾರ, ಕೃತಜ್ಞತೆ, ಅತಿ ಉರಿಗೆ ಆಕ್ರೋಶ, ಅವನ ಉರಿ ಹೆಚ್ಚಾಗಲು ಮನುಕುಲ ಮಾಡಿದ ತಪ್ಪಿಗೆ ಪಶ್ಚಾತ್ತಾಪ ಎಲ್ಲವೂ ಇಲ್ಲಿದೆ. ಈ ಕೃತಿಯನ್ನು ಬಾಯ್ದೆರೆದು ಓದಬೇಕು. ಇಡೀ ಕೃತಿಯಲ್ಲಿ ಡಿ.ವಿ.ಗುಂಡಪ್ಪನವರ ಕಗ್ಗದ ಸಾಲುಗಳ ಛಾಯೆಯಂತೂ ಗಾಢವಾಗಿದೆ. ಡಾ.ಭಾನು ಅವರು ಕಗ್ಗದ ಬಗೆಗೂ ದಿನವಿಡೀ ಮಾತನಾಡಬಲ್ಲರು.
ಈ ಕೃತಿಯನ್ನು ಓದಬೇಕಾದದ್ದು
ಏಕೆಂದರೆ
ಚೌಪದಿಗಳ ಸೊಗಸಿಗಾಗಿ, ಶಬ್ದಲಾಲಿತ್ಯಕ್ಕಾಗಿ
ಮರೆತು ಹೋದ ಸರಳ ಕನ್ನಡ ಪದಗಳ ನೆನಪಿಗಾಗಿ
ಉಚ್ಚಾರ ಸ್ಪಷ್ಟತೆಗಾಗಿ ಮಕ್ಕಳು ಓದಲೇಬೇಕು
ಶಬ್ದಜೋಡಣೆಯ ಕೌಶಲ ತಿಳಿಯಲು
ಇದೇ ಸಮಾರಂಭದಲ್ಲಿ ಡಾ.ಭಾನು ಅವರ ಭಾವ ಸೌರಭ ಅನ್ನು ವ ಕೃತಿಯೂ ಬಿಡುಗಡೆಯಾಗಿದೆ. ಓದಿ ಮುಗಿಸಿ ಮತ್ತೆ ಹೇಳುತ್ತೇನೆ.
ಪ್ರೀತಿಯಿಂದ
- ಶರತ್‌
.A.BHANU

 ,  ,  ,  ,   INITIATIVE,   ,  ,  ,    ,  , , , , , , ,  FILMS, , , ,  , , ,  2, , , ,  #ರಮೇಶ್‌,  #ರಮೇಶ್‌ಅರವಿಂದ್‌
20/03/2024

, , , , INITIATIVE, , , , , , , , , , , , FILMS, , , , , , , 2, , , , #ರಮೇಶ್‌, #ರಮೇಶ್‌ಅರವಿಂದ್‌

ACTOR, DIRECTOR, WRITER, MOTIVATIONAL SPEAKER RAMESH ARAVIND SHARED HIS LIFE THOUGHTS WITH SIRIDANI. SHOW DISCUSSED ON HIS LIFE, CAREER, FITNESS, ACHIEVEMENT...

https://youtu.be/cPKZv7SZy7UACTOR, DIRECTOR, WRITER, MOTIVATIONAL SPEAKER RAMESH ARAVIND SHARED HIS LIFE THOUGHTS WITH S...
20/03/2024

https://youtu.be/cPKZv7SZy7U
ACTOR, DIRECTOR, WRITER, MOTIVATIONAL SPEAKER RAMESH ARAVIND SHARED HIS LIFE THOUGHTS WITH SIRIDANI. SHOW DISCUSSED ON HIS LIFE, CAREER, FITNESS, ACHIEVEMENT AND MORE....
TO LISTEN AUDIO TUNE ON TO SIRIDANI PODCAST, LISTEN IN ANY PODCAST PLATFORM
PLEASE SHARE YOUR VIEWS WITH: [email protected]
VISIT AND LISTEN: www.shwethainitiative.com
, , , , INITIATIVE, , , , , , , , , , , , FILMS, , , , , , , 2, , , , #ರಮೇಶ್‌, #ರಮೇಶ್‌ಅರವಿಂದ್

Need it printed, planned, or programmed? We're your experts. Ads, events, websites, ERP, PR and more – all under one roof.

ಸಹೋದ್ಯೋಗಿ - ಸಹೃದಯಿಯ ನೆನಪಿನ ಆಲ್ಬಂ2008ರ ಮಧ್ಯಭಾಗ. ನಾನು ಉದಯವಾಣಿಗೆ ರಾಜೀನಾಮೆ ನೀಡಿದ ಸಂದರ್ಭ. ಅಂದು ರಾತ್ರಿ ಆ ಸಂಸ್ಥೆಯ ಹಿರಿಯ ಪತ್ರಕರ್...
01/03/2024

ಸಹೋದ್ಯೋಗಿ - ಸಹೃದಯಿಯ ನೆನಪಿನ ಆಲ್ಬಂ

2008ರ ಮಧ್ಯಭಾಗ. ನಾನು ಉದಯವಾಣಿಗೆ ರಾಜೀನಾಮೆ ನೀಡಿದ ಸಂದರ್ಭ. ಅಂದು ರಾತ್ರಿ ಆ ಸಂಸ್ಥೆಯ ಹಿರಿಯ ಪತ್ರಕರ್ತರೊಂದಿಗೆ ದೀರ್ಘಕಾಲ ಮಾತನಾಡಿದ್ದೆ. ಬೇರೆ ಯಾರೂ ಅಲ್ಲ ಇದೇ ಮನೋಹರ ಪ್ರಸಾದ್‌. ಆಲಿಯಾಸ್‌ ಮಂಗಳೂರಿನ ಪ್ರೀತಿಯ ಭಾಷೆಯಲ್ಲಿ ಮನೋಹರಣ್ಣ. ಅದೇ ತಾನೆ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಇನ್ನೂ ಪೂರ್ತಿ ಕಣ್ಣು ಬಿಡದವನ ಜೊತೆ ಅಷ್ಟೊಂದು ಚರ್ಚಿಸುವಷ್ಟು ಅವಶ್ಯತೆಯೂ ಅವರಿಗಿರಲಿಕ್ಕಿಲ್ಲ. ಆದರೆ ಅವರು ಅಷ್ಟೇ ಆತ್ಮೀಯವಾಗಿ ಸಮಯ ಕೊಟ್ಟರು. ನನ್ನ ಮನಸ್ಸನ್ನು ಅರಿತರು. ಅವರೂ ಸಾಕಷ್ಟು ತೆರೆದುಕೊಂಡರು. ಅಂದಿನ ವ್ಯವಸ್ಥೆಯ ಬಗ್ಗೆ ಅವರೊಳಗೆ ಮಡುಗಟ್ಟಿದ್ದ ಆಕ್ರೋಶ ಸಾತ್ವಿಕವಾಗಿ ಹೊರಬರುತ್ತಾ ಮತ್ತೆ ಮತ್ತೆ ತೀವ್ರಗತಿಗೇರಿದ್ದನ್ನೂ ಗಮನಿಸಿದ್ದೆ. ನಾವಿದನ್ನೆಲ್ಲಾ ನೋಡುತ್ತಲೇ ಹೋಗಬೇಕು ಅಷ್ಟೇ. ಅಸಹಾಯಕತೆಯ ದೀರ್ಘ ನಿಟ್ಟುಸಿರುಬಿಟ್ಟರು.
ಏಕೆಂದರೆ ಸಂಸ್ಥೆಯೊಳಗೆ ಅಂಥಹ ಬೆಳವಣಿಗೆಗಳೂ ನಡೆದಿದ್ದವು. ಹಿರಿಯರನ್ನು ಕಡೆಗಣಿಸುತ್ತಲೇ ಬಂದ ವಿದ್ಯಮಾನಗಳಿಗೆ ಮನೋಹರ ಪ್ರಸಾದ್‌ ಅವರಲ್ಲಿ ಅಸಹಾಯಕತೆಯ ಮೌನವೊಂದಿತ್ತು. ದೊಡ್ಡವ- ಸಣ್ಣವ ಎಂಬ ಬೇಧವಿಲ್ಲದೆ ಒಂದೇ ರೀತಿ ಬೆರೆಯುವ, ಸೆಳೆಯುವ ಅವರ ಗುಣ ನನಗಿಷ್ಟವಾದದ್ದು.
ಆ ಅದ್ಭುತ ನಿರೂಪಕ
ಮನಸ್ಸು ಇನ್ನೂ ಹಿಂದಕ್ಕೆ ಓಡುತ್ತದೆ. 2002ರಲ್ಲಿ ಮೂಡಬಿದಿರೆಯಲ್ಲಿ ನಡೆದ 71ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿರೂಪಕರಾಗಿ ಅವರು ಕಾಣಿಸಿಕೊಂಡಿದ್ದರು. ನನಗೆ ಅವರ ದರ್ಶನ ಮೊದಲ ಬಾರಿಗೆ ಅಲ್ಲಿಯೇ ಆಗಿದ್ದು. ದೂರದಲ್ಲಿ ವೀಕ್ಷಕನಾಗಿ ಅವರ ನಿರೂಪಣೆಗೆ ಕಿವಿಯಾಗಿದ್ದೆ. ಒಂದು ನಿರೂಪಣೆಗೆ ಅದೆಷ್ಟು ಅಧ್ಯಯನ, ಸರಕುಗಳನ್ನು ಹೆಕ್ಕಿತರುವ ತಯಾರಿ ಅದೆಷ್ಟಿರಬೇಕು ಎಂಬ ಅಚ್ಚರಿಯೂ ನನ್ನದಾಗಿತ್ತು. ಹಾಗಾಗಿಯೇ ಅವರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಕ್ಷೇತ್ರದವರಿಗೂ, ಸಂಘಟನೆಗಳಿಗೂ ಬೇಕಾದವರಾಗಿದ್ದರು. ಪತ್ರಕರ್ತನೊಬ್ಬ ಬೆಳೆಯುವುದು ವರದಿಗಳು, ರೋಚಕ ತಲೆಬರಹಗಳಾಚೆಗೂ ಸಾಧ್ಯ ಎಂಬುದನ್ನು ತೋರಿಸಿಕೊಟ್ಟವರು ಅವರು.
ನಮ್ಮ ಕುಡ್ಲ ವಾರ್ತೆಗಳಿಗೆ ಸ್ವಾಗತ
2005ರ ಅವಧಿಯಲ್ಲಿ ಮಂಗಳೂರಿನಲ್ಲಿ (ಅಂದೂ ಇಂದೂ) ಜನರ ಮೊದಲ ಆದ್ಯತೆ ಸ್ಥಳೀಯ ಟಿವಿ ವಾಹಿನಿಗಳು. ಸಿನಿಮಾ ಹಾಡುಗಳಾಚೆಯೂ ಸ್ಥಳೀಯವಾಗಿ ಕಂಟೆಂಟ್‌ ಸಿದ್ಧಪಡಿಸಿ ಪ್ರಸಾರ ಮಾಡಬಹುದು ಎಂಬ ಮಾದರಿಯನ್ನು ಕರ್ನಾಟಕದಲ್ಲಿ ಹಾಕಿಕೊಟ್ಟದ್ದು ಬಹುಶಃ ಮಂಗಳೂರೇ ಮೊದಲಿರಬೇಕು. ಆ ಕಾಲದಲ್ಲಿ ಸಂಜೆ 7 ಗಂಟೆಯ ಸುದ್ದಿ ನೋಡಬೇಕಾದರೆ ʼನಮ್ಮ ಕುಡ್ಲʼ ವಾಹಿನಿಯಲ್ಲಿ ಮನೋಹರಣ್ಣ ಕಾಣಿಸುತ್ತಿದ್ದರು. ಸ್ವಲ್ಪ ಹೊತ್ತು ಕಳೆದರೆ ಇನ್ನೊಂದು ವಾಹಿನಿಯಲ್ಲಿ ಯಾವುದೋ ಸಂದರ್ಶನ, ಚರ್ಚೆ ನಡೆಸುತ್ತಿದ್ದರು.

2005-06ರ ಅವಧಿ. ಮಂಗಳೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಕಾರ್ಯಕ್ರಮವೊಂದಕ್ಕೆ ಮನೋಹರ ಪ್ರಸಾದ್‌ ಅವರನ್ನು ಕರೆಯಬೇಕು ಎಂದು ನಿರ್ಧರಿಸಲಾಯಿತು. ಮನೋಹರಣ್ಣ ಒಪ್ಪಿದ್ದರು ಕೂಡಾ. ಆದರೆ ವಿಶ್ವವಿದ್ಯಾಲಯದ ಮೇಷ್ಟ್ರುಗಳ ನಡುವಿನ ದುಸುಮುಸಿನ ಕಾರಣಕ್ಕೆ ಅವರನ್ನು ಕರೆತರಲಾಗಲಿಲ್ಲ. ಏನೋ ನೆಪ ಹೇಳಿ ತಪ್ಪಿಸಿಕೊಳ್ಳಬೇಕಾಯಿತು. ಕೆಲವು ದಿನಗಳ ನಂತರ ಅವರನ್ನು ಮಂಗಳೂರಿನ ನವಭಾರತ ಸರ್ಕಲ್‌ ಮುಂಭಾಗದ ಅಂದಿನ ಉದಯವಾಣಿ ಕಚೇರಿ ಮುಂಭಾಗ ಅಚಾನಕ್ಕಾಗಿ ಭೇಟಿಯಾಗಬೇಕಾಯಿತು. ನನಗಾದ ಮುಜುಗರ ಹೇಳಲಾಗದು. ಆದರೆ ಮನೋಹರಣ್ಣ ಮಾತ್ರ ಏನೂ ಆಗದವರಂತೆ ನಮಸ್ಕಾರಕ್ಕೊಂದು ಪ್ರತಿಕ್ರಿಯೆ ನೀಡಿ ಮುಗುಳ್ನಕ್ಕು ಮುಂದುವರಿದರು. ಇದಾದ ಕೆಲವೇ ತಿಂಗಳುಗಳಲ್ಲಿ ನಾನು ಅವರ ಸಹೋದ್ಯೋಗಿಯೂ ಆದೆ. ಆಗಾಗ ಹಾಟ್‌ಲೈನ್‌ನಲ್ಲಿ ನನ್ನ-ಅವರ ಕುಶಲೋಪರಿ. ನನ್ನ ಆವೃತ್ತಿಗೆ ಸುದ್ದಿಗಳು ಬೇಕಾದರೆ ಒಂದಿಷ್ಟು ಚರ್ಚೆಗಳು ನಡೆಯುತ್ತಿದ್ದವು ಅಷ್ಟೇ.
ಸಂಪರ್ಕ ಹಾಗೇ ಮುಂದುವರಿದಿತ್ತು. 2008ರ ಅಂತ್ಯಭಾಗದಲ್ಲಿ ಮುಂಬೈ ತಾಜ್‌ ಹೋಟೆಲ್‌ ಮೇಲೆ ಉಗ್ರರ ದಾಳಿ ಮತ್ತು ಹುತಾತ್ಮ ಪೊಲೀಸ್‌ ಅಧಿಕಾರಿಗಳ ಬಗೆಗೆ ಏನಾದರೂ ಕಾರ್ಯಕ್ರಮ ಮಾಡಬೇಕು ಎಂಬ ಚಿಂತನೆ ಇತ್ತು. ಆಗ ನಾನು ಕಾರ್ಕಳ ಭುವನೇಂದ್ರ ಕಾಲೇಜಿನಲ್ಲಿ ಉಪನ್ಯಾಸಕ. ಕಾರ್ಯಕ್ರಮವನ್ನು ದೊಡ್ಡದಾಗಿ ಮಾಡಬೇಕು ಎಂಬ ಆಸೆಯೇನೋ ನಮ್ಮದು. ಆದರೆ, ನನ್ನ, ಕಾಲೇಜಿನ ಮತ್ತು ಸಹೋದ್ಯೋಗಿಗಳ ಇತಿಮಿತಿಗಳೂ ಅಷ್ಟೇ ತೀವ್ರವಾಗಿದ್ದವು. ಸರಿ, ಒಂದು ಭಂಡ ಧೈರ್ಯ ಮಾಡಿ ಕಾರ್ಯಕ್ರಮಕ್ಕೆ ಮುಂದಾದೆವು. ʼನಮ್ಮ ಟಿವಿʼ ವಾಹಿನಿಯವರು ಸಹಯೋಗ ನೀಡಿದರು. ಮನೋಹರ ಪ್ರಸಾದ್‌, ಜಿತೇಂದ್ರ ಕುಂದೇಶ್ವರ ಮಂಗಳೂರಿನಿಂದ ಕಾರ್ಕಳಕ್ಕೆ ಬಂದು ಕಾರ್ಯಕ್ರಮವನ್ನು ಚೆಂದವಾಗಿ ನಡೆಸಿಕೊಟ್ಟರು. ಕಾಲೇಜಿನ ಆವರಣದಲ್ಲೇ ಟಿವಿ ಚರ್ಚಾ ವೇದಿಕೆಯ ಸೆಟ್‌ ಹಾಕಿದ್ದು, ಬಹು ಕ್ಯಾಮೆರಾಗಳು, ಬಹು ಕೋನದ ಚಿತ್ರೀಕರಣ, ವೃತ್ತಿಪರ ಎಡಿಟಿಂಗ್‌ ಆ ಕಾಲಕ್ಕೆ ರೋಚಕ ಸಾಧನೆಯೇ. ಏನೂ ಇಲ್ಲದ ಆ ಕಾಲದಲ್ಲಿ ಮಾಧ್ಯಮ ಕಾರ್ಯಕ್ರಮವೊಂದು ನಡೆಯುವುದು ಹೀಗೆ ಎಂಬ ಪ್ರಾಯೋಗಿಕ ಪಾಠ ನಮ್ಮ ವಿದ್ಯಾರ್ಥಿಗಳಿಗೆ ಅಲ್ಲಿ ಆಗಿಹೋಯಿತು. ವಿದ್ಯಾರ್ಥಿಗಳು ಮತ್ತು ಈಗ ಬೇರೆ ಬೇರೆ ಕಡೆ ಚದುರಿಹೋಗಿರುವ ಸಹೋದ್ಯೋಗಿಗಳು ಆ ಕಾರ್ಯಕ್ರಮವನ್ನು ಈಗಲೂ ನೆನಪಿಸಿಕೊಳ್ಳುತ್ತೇವೆ.

ಮನೋಹರಣ್ಣ ಮತ್ತು ಮಾಮ್‌
ಇಲ್ಲಿಗೇ ಮುಗಿಯಲಿಲ್ಲ. 2015 ಏಪ್ರಿಲ್‌ನಲ್ಲಿ ನಮ್ಮ ಮಂಗಳೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಹಳೆ ವಿದ್ಯಾರ್ಥಿ ಸಂಘಟನೆ ಮಾಮ್‌ (ಮೀಡಿಯಾ ಅಲೂಮ್ನಿ ಅಸೋಸಿಯೇಷನ್‌ ಆಫ್‌ ಮಂಗಳಗಂಗೋತ್ರಿ) ವತಿಯಿಂದ ಅವರಿಗೊಂದು ಅದ್ದೂರಿ ಅಭಿನಂದನಾ ಕಾರ್ಯಕ್ರಮ ʼಮನೋಭಿನಂದನʼ ಹಮ್ಮಿಕೊಳ್ಳಲಾಗಿತ್ತು. ನಮ್ಮ ಸಂಘಟನೆ ಮರು ಜೀವ ಪಡೆದ ಬಳಿಕ ನಡೆದ ಮೊದಲ ದೊಡ್ಡ ಕಾರ್ಯಕ್ರಮವದು. ಕಾರ್ಯಕ್ರಮದಲ್ಲಿ ಅವರಿಗೆ ಒಂದು ಲಕ್ಷ ರೂಪಾಯಿ ನಗದು ಪುರಸ್ಕಾರ ನೀಡಲು ಮುಂದಾದೆವು. ಅವರು ನಮ್ಮಿಂದ ಸಾಂಕೇತಿಕವಾಗಿ ಒಂದು ರೂಪಾಯಿ ಪಡೆದರು. ಅವರಿಗೆ ನೀಡಿದ ಚಿನ್ನದ ಪದಕವನ್ನು ತನ್ನೂರು ಕರ್ವಾಲಿನ ಅರ್ಹರಿಗೆ ನೆರವಾಗಲು ನೀಡುವುದಾಗಿ ಘೋಷಿಸಿದರು. ಒಂದು ಲಕ್ಷ ರೂಪಾಯಿಯನ್ನು ಸಂಘಟನೆಗೆ ಹಿಂದಿರುಗಿಸಿದರು. ಆ ಮೊತ್ತ ಈಗ ಪತ್ರಿಕೋದ್ಯಮ ಅಧ್ಯಯನದಲ್ಲಿ ಸಾಧನೆ ಮಾಡಿದ ಮತ್ತು ಪತ್ರಿಕೋದ್ಯಮಕ್ಕೆ ವಿಶೇಷ ಕೊಡುಗೆ ನೀಡಿದ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪ್ರಶಸ್ತಿ ನೀಡಲು ಮೂಲ ಬಂಡವಾಳವಾಗಿ ಬಳಕೆಯಾಗುತ್ತಿದೆ. ಆ ಹಣ ಈಗ ರಾಜ್ಯ ರಾಜಧಾನಿಯಲ್ಲಿ ನಮ್ಮ ಸಂಘಟನೆ ಕಾರ್ಯಕ್ರಮ ನಡೆಸುವವರೆಗೆ ಕಾರಣವಾಗಿದೆ. ಈ ಕಾರ್ಯಕ್ರಮದಲ್ಲಿ ಅವರನ್ನು ಮಂಗಳೂರು ವಿಶ್ವವಿದ್ಯಾಲಯ ಅವರನ್ನು ಗೌರವ ಪ್ರಾಧ್ಯಾಪಕರನ್ನಾಗಿ (ಎಜುಸೆಂಟ್‌ ಪ್ರೊಫೆಸರ್‌) ಸ್ವೀಕರಿಸಿ ಗೌರವಿಸಿತು. ಆ ಸಮಾರಂಭದಲ್ಲಿ ಮನೋಹರಣ್ಣನ ಮಾತುಗಳು ಹೀಗಿವೆ. ʼಪತ್ರಕರ್ತರು ಇತರರನ್ನು ಬೆಳೆಸುವ ಪಲ್ಲಕ್ಕಿ ಹೊರುವ ಕೆಲಸ ಮಾಡುತ್ತಿದ್ದು, ಇಂದು, ಅಂತಹ ಪಲ್ಲಕ್ಕಿ ಹೊರುವವನನ್ನೇ ಪಲ್ಲಕ್ಕಿಯಲ್ಲಿ ಕೂರಿಸಿದ್ದೀರಿʼ ಎಂದರು.
ಮನೋಭಿನಂದನ ಗ್ರಂಥಕ್ಕೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಗಣ್ಯಾತಿಗಣ್ಯರು, ಖ್ಯಾತನಾಮರು ಪ್ರೀತಿಯಿಂದ ಲೇಖನ ಬರೆದುಕೊಟ್ಟರು. (ವಿವರಗಳಿಗೆ http://maammangalore.blogspot.com/2015/04/blog-post.html
ಈ ಅಭಿನಂದನಾ ಕಾರ್ಯಕ್ರಮಕ್ಕೆ ಉದಯವಾಣಿ ವಿಶೇಷ ಸಂಚಿಕೆಯನ್ನು ಹೊರತಂದಿತ್ತು. ಕೊನೆಯ ಪುಟದಲ್ಲಿ ದೊಡ್ಡದಾದ ಜಾಹೀರಾತನ್ನೂ ಪ್ರಕಟಿಸಿತ್ತು. ಒಂದು ಪತ್ರಿಕಾ ಸಂಸ್ಥೆ ಪತ್ರಕರ್ತ ತನ್ನಲ್ಲಿ ಉದ್ಯೋಗಿಯಾಗಿರುವಾಗಲೇ ಅವನ ಬಗ್ಗೆ ವಿಶೇಷ ಸಂಚಿಕೆ ತರುವುದು ಮತ್ತು ಜಾಹೀರಾತು ಪ್ರಕಟಿಸುವುದು ಅಪರೂಪದಲ್ಲಿ ಅತ್ಯಪರೂಪದ ಘಟನೆ. ಅದೂ ಕನ್ನಡ ಪತ್ರಿಕೋದ್ಯಮ ಎಂಬ ........... ದಲ್ಲಿ.

ಟೀಕೆಗಳಿಗೆ ಮುಗುಳ್ನಗುವೇ ಉತ್ತರ
ಇಂಥ ಮನೋಹರಣ್ಣ ಟೀಕೆಗಳಿಗೆ ಹೊರತಾದವರಲ್ಲ. ಅವರ ಬಗೆಗಿನ ರಂಗಿನ, ರೋಚಕ ಕಥೆಗಳೂ ಕಡಿಮೆಯಿರಲಿಲ್ಲ. ಅದೆಲ್ಲವನ್ನೂ ಕೇಳಿಯೂ ಕೇಳಿಸದಂತೆ. ತೀರಾ ಹತ್ತಿರದವರು ಛೇಡಿಸಿದರೆ ಸಣ್ಣ ಮುಗುಳ್ನಗುವಿನ ಪ್ರತಿಕ್ರಿಯೆ ನೀಡಿ, ಹೌದು- ಅಲ್ಲಗಳ ನಡುವಿನ ಉತ್ತರ ಕೊಡುತ್ತಿದ್ದರು. ಅವರ ಸಮಕಾಲೀನರು ಮಾಡುವ ಟೀಕೆಗಳಂತೂ ಪತ್ರಕರ್ತರು ಎಂಬ ಜಾತಿಗುಣವನ್ನು ಪದೇ ಪದೇ ಎತ್ತಿ ತೋರಿಸುತ್ತಿತ್ತು. ಆದರೆ, ಮನೋಹರ ಪ್ರಸಾದ್‌ ಒಬ್ಬ ಕ್ಲಾಸ್‌ ಮೂವಿ ಮೇಕರ್‌ ಅಷ್ಟೇ. ಅಂಥ ಟೀಕೆಗಳಿಗೆ ಅವರು ಕಿವುಡರಾಗುತ್ತಿದ್ದರು. ಟೀಕಿಸಿದವರನ್ನು ತಪ್ಪಿಯೂ ದೂರುತ್ತಿರಲಿಲ್ಲ. ಅವರ ಬರಹಗಳಲ್ಲೂ ನಕಾರಾತ್ಮಕ ವಿಷಯಗಳಿಗೆ ಆಸ್ಪದ ಇದ್ದದ್ದು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಇದೇ ಮನೋಹರಣ್ಣನ ಯಶಸ್ಸಿನ ಗುಟ್ಟು ಎನ್ನೋಣವೇ.

ಒಟ್ಟಿನಲ್ಲಿ ನೆನಪುಗಳು ಸಾಕಷ್ಟು ಇವೆ. ಮೊಗೆದಷ್ಟೂ ಮಾತುಗಳಿವೆ. ಆದರೆ ಇದನ್ನೆಲ್ಲಾ ಓದಲು, ಕೇಳಲು ಮನೋಹರಣ್ಣ ಮಾತ್ರ ನಮ್ಮೊಂದಿಗೆ ಭೌತಿಕವಾಗಿ ಇಲ್ಲ...

(ಚಿತ್ರಕೃಪೆ: ಮಾಮ್‌ ಸಂಘಟನೆ, ಕೃಷ್ಣಕಿಶೋರ್‌ ಮಂಗಳೂರಿನ ಛಾಯಾಗ್ರಾಹಕ ಗೆಳೆಯರು)

Address

# 20 VICTORIA LAYOUT

Alerts

Be the first to know and let us send you an email when ಸಿರಿದನಿ SIRIdani posts news and promotions. Your email address will not be used for any other purpose, and you can unsubscribe at any time.

Contact The Business

Send a message to ಸಿರಿದನಿ SIRIdani:

Shortcuts

  • Address
  • Alerts
  • Contact The Business
  • Claim ownership or report listing
  • Want your business to be the top-listed Media Company?

Share