
01/09/2025
ಪೊಲೀಸ್ ಸ್ಟೋರಿ ಚಿತ್ರದ ಖ್ಯಾತ ಬರಹಗಾರ ಎಸ್ಎಸ್ ಡೇವಿಡ್ ಇನ್ನಿಲ್ಲ..
1996ರ ಪೊಲೀಸ್ ಸ್ಟೋರಿ ಒಂದು ಸಂಚಲನ ಹುಟ್ಟಿಸಿದ ಸಿನಿಮಾ ಯಾಕೆಂದರೆ ಅದರಲ್ಲಿರುವ ಚಿತ್ರಕಥೆ ಮತ್ತು ಸಂಭಾಷಣೆ ಆಗಿನ ಕಾಲಕ್ಕೆ ಒಂದು ಟ್ರೆಂಡ್ ಸೆಟ್ಟರ್ ಸಿನಿಮಾ ಎಂದರೆ ತಪ್ಪಾಗಲಾರದು.. ಅದಾದ ನಂತರ ಅವರು 10 ವರ್ಷಗಳ ಕಾಲ ದಿನಕ್ಕೆ ಮೂರು ಸಿನಿಮಾಗಳಿಗೆ ಚಿತ್ರಕಥೆ ಸಂಭಾಷಣೆ ಬರೆಯುತ್ತಿದ್ದರು. ಸಾಯಿಕುಮಾರಿಗೆ ಕನ್ನಡದಲ್ಲಿ ಒಂದು ಭದ್ರ ನೆಲೆ ಕಲ್ಪಿಸಿದ ಸಿನಿಮಾ.
ಎಸ್ ಎಸ್ ಡೇವಿಡ್ ರವರಿಗೆ ಯಾವ ಭಾಷೆಯ ಬರವಣಿಗೆಯು ಬರದೇ ಇದ್ದರು ಕಥೆ ಕಟ್ಟುತ್ತಿದ್ದ ರೀತಿ ಮತ್ತು ಅದನ್ನು ಹೇಳುತ್ತಿದ್ದ ಅವರೊಳಗಿನ ಕತೆಗಾರ ಜೊತೆಗೆ ಐದಾರು ಭಾಷೆಗಳನ್ನ ಸುಲಲಿತವಾಗಿ ಮಾತನಾಡುವ ಕಲೆ ಆದರಿಂದಲೇ ಎಲ್ಲರೂ ಬೆರಗಾಗುವಂತೆ ಹೇಳುತ್ತಿದ್ದ ಪರಿ ಅದ್ಭುತ. ಹಿರಿಯ ಗೆಳೆಯರಿಗೆ ಅಂತಿಮ ನಮನಗಳು