03/09/2026
ನೇಪಾಳದ ಭೀಕರ ಪ್ರವಾಹದಲ್ಲಿ ಇಡೀ ಪ್ರದೇಶವೇ ಕೊಚ್ಚಿಹೋದರೂ ಕೇವಲ ಒಂದೇ ಒಂದು ಮನೆ ಸುರಕ್ಷಿತವಾಗಿ ಉಳಿದುಕೊಂಡಿದ್ದ ವೀಡಿಯೋ ವೈರಲ್ ಆಗಿತ್ತು. ಆ ಮನೆಯ ಮಾಲೀಕರು ಕ್ರಿಶ್ಚಿಯನ್ನರು ಎಂಬ ವದಂತಿ ಹರಿದಾಡುತ್ತಿತ್ತು. ಆದರೆ ಈಗ ಆ ಮನೆಯ ಮಾಲೀಕರು ತಾವು ಹಿಂದೂಗಳು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ!
ಅವರು ಮಾತನಾಡಿ, "ನಾವು ದಿನವೂ ಹನುಮಾನ್ ಚಾಲೀಸಾ ಪಠಿಸುತ್ತೇವೆ. ಪ್ರವಾಹದ ಭೀಕರ ಕ್ಷಣದಲ್ಲೂ 'ಓಂ ನಮಃ ಶಿವಾಯ' ಜಪಿಸುತ್ತಿದ್ದೆವು. ಭಗವಂತನೇ ನಮ್ಮ ಮನೆ ಮತ್ತು ಜೀವವನ್ನು ಕಾಪಾಡಿದ್ದಾನೆ" ಎಂದು ಹೇಳಿದ್ದಾರೆ. ಈ ಸತ್ಯ ಬಹಿರಂಗವಾದ ನಂತರ ದೈವಿಕ ಶಕ್ತಿ ಮತ್ತು ಭಕ್ತಿಯ ಮೇಲಿನ ನಂಬಿಕೆ ನೆಟ್ಟಿಗರಲ್ಲಿ ಮತ್ತಷ್ಟು ಗಟ್ಟಿಯಾಗಿದೆ. 🏠