Syed Asgarali

Syed Asgarali Kpcc master trainer
Kpcc minority coordinator
suda ex member Shimoga
Mandal panchayet ex member

27/09/2025
27/09/2025

ಚಿತ್ತಾಪುರ ತಾಲೂಕಿನ ಗುಂಡಗುರ್ತಿ ಗ್ರಾಮಕ್ಕೆ ಇಂದು ಭೇಟಿ ನೀಡಿ ಪ್ರವಾಹದ ಪರಿಸ್ಥಿಯನ್ನು ಪರಿಶೀಲಿಸಿದೆ.ಈಗಾಗಲೇ ಗ್ರಾಮದಲ್ಲಿ ಕಾಳಜಿ ಕೇಂದ್ರವನ್...
27/09/2025

ಚಿತ್ತಾಪುರ ತಾಲೂಕಿನ ಗುಂಡಗುರ್ತಿ ಗ್ರಾಮಕ್ಕೆ ಇಂದು ಭೇಟಿ ನೀಡಿ ಪ್ರವಾಹದ ಪರಿಸ್ಥಿಯನ್ನು ಪರಿಶೀಲಿಸಿದೆ.

ಈಗಾಗಲೇ ಗ್ರಾಮದಲ್ಲಿ ಕಾಳಜಿ ಕೇಂದ್ರವನ್ನು ಸ್ಥಾಪಿಸಲಾಗಿದೆ. ಸಂಜೆವೇಳೆಗೆ ಪ್ರವಾಹ ಮತ್ತಷ್ಟು ಹೆಚ್ಚಲಿದ್ದು ಮತ್ತೊಂದು ಕಾಳಜಿ ಕೇಂದ್ರವನ್ನು ತೆರೆಯುವುದಕ್ಕೆ ಅಧಿಕಾರಿಗಳಿಗೆ ಸೂಚಿಸಿದೆ. ಗ್ರಾಮದ ಮಹಿಳೆಯರು ಮಕ್ಕಳು ಸಂಜೆವೇಳೆಗೆ ಕಾಳಜಿ ಕೇಂದ್ರದಲ್ಲಿ ಸ್ಥಳಾಂತರವಾಗಬೇಕು ಎಂದು ತಿಳಿಸಿದೆ.

ಅತಿವೃಷ್ಟಿಯಿಂದ ಹಾನಿಗೊಳಗಾದವರಿಗೆ ಈಗಾಗಲೇ ಸಂಸದರಿಂದ ಪರಿಹಾರದ ಕಿಟ್ ವಿತರಣೆ ಮಾಡಲಾಗಿದ್ದು, ಸರ್ಕಾರದಿಂದ ಹೆಚ್ಚಿನ ಪರಿಹಾರವನ್ನು ಒದಗಿಸುವ ಭರವಸೆಯನ್ನು ನೀಡಿದೆ.

ನಿರಂತರ ಮಳೆ ಹಾಗೂ ಬೆಣ್ಣೆತೊರ ನದಿ ನೀರಿನ ಪ್ರವಾಹಕ್ಕೆ ತುತ್ತಾಗಿರುವ  ಚಿತ್ತಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾಳಗಿ ತಾಲೂಕಿನ ಹಳೆ ಹೆಬ್ಬ...
27/09/2025

ನಿರಂತರ ಮಳೆ ಹಾಗೂ ಬೆಣ್ಣೆತೊರ ನದಿ ನೀರಿನ ಪ್ರವಾಹಕ್ಕೆ ತುತ್ತಾಗಿರುವ ಚಿತ್ತಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾಳಗಿ ತಾಲೂಕಿನ ಹಳೆ ಹೆಬ್ಬಾಳ, ಕಣಸೂರು ಹಾಗೂ ಮಲಘಾಣ ಗ್ರಾಮಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದೆ.

ಪ್ರವಾಹದಿಂದ ಹಳೆ ಹೆಬ್ಬಾಳ ಗ್ರಾಮಕ್ಕೆ ನೀರು ನುಗ್ಗಿದ್ದು, ತಾತ್ಕಾಲಿಕವಾಗಿ ಕಾಳಜಿ ಕೇಂದ್ರವನ್ನು ತೆರೆಯಲಾಗಿದೆ. ಗ್ರಾಮದ ಸ್ಥಳಾಂತರಕ್ಕೆ ಸರ್ಕಾರ ಬದ್ದವಾಗಿದ್ದು, ಗ್ರಾಮಸ್ಥರು ಒಮ್ಮತದಿಂದ ಒಪ್ಪಿಗೆ ಸೂಚಿಸಬೇಕು ಎಂದು ಸಲಹೆ ನೀಡಿದೆ.

ಕಣಸೂರು ಗ್ರಾಮವನ್ನು ಸ್ಥಳಾಂತರ ಮಾಡುವುದಕ್ಕೆ ಗ್ರಾಮಸ್ಥರು ಒಪ್ಪಿಗೆ ಸೂಚಿಸಿದ್ದು, ಶೀಘ್ರದಲ್ಲಿಯೇ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸರ್ಕಾರದಿಂದ ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದೆ.

ತಾಲೂಕಿನಲ್ಲಿ ಹಾನಿಗೊಳಗಾದ ಕೃಷಿ ಬೆಳೆಗಳ ಸಮೀಕ್ಷೆ ನಡೆಸಿ ಕೂಡಲೇ ವರದಿ ಸಲ್ಲಿಸುವಂತೆ ಕೃಷಿ‌ ಇಲಾಖೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಕಾಳಗಿ ಹಾಗೂ ಚಿತ್ತಾಪುರ ತಾಲೂಕಿನ ಮಳೆ ಹಾಗೂ ಪ್ರವಾಹಕ್ಕೀಡಾಗಿರುವ ಗ್ರಾಮಗಳ ವಸ್ತುಸ್ಥಿತಿ ಕುರಿತು ಸಮಗ್ರ ವರದಿಯನ್ನು ತಯಾರಿಸಿ ಒಂದು ವಾರದೊಳಗೆ ಸಲ್ಲಿಸುವಂತೆ ಜಿಪಂ ಸಿಇಒ ಅವರಿಗೆ ಸೂಚಿಸಿಲಾಗಿದೆ.

ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಜಿಲ್ಲಾಡಳಿತ ಸಿದ್ಧವಿದ್ದು, ಕಲಬುರಗಿ ಜಿಲ್ಲೆಯ ಜನರ ಹಿತ ಕಾಪಾಡುವುದಕ್ಕೆ ಸರ್ಕಾರ ಬದ್ದವಾಗಿದೆ.

ಮಹಾರಾಷ್ಟ್ರದಿಂದ ನೀರು ಬಿಡುಗಡೆ ಹಿನ್ನೆಲೆಯಲ್ಲಿ ಕಲಬುರಗಿಯಲ್ಲಿ ಹೆಚ್ಚಿದ ಪ್ರವಾಹಮಹಾರಾಷ್ಟ್ರದ ವೀರ್, ಉಜನಿ, ಸಿನಾ ಜಲಾಶಯ ಮತ್ತು ಬೋರಿ ನದಿಯಿ...
26/09/2025

ಮಹಾರಾಷ್ಟ್ರದಿಂದ ನೀರು ಬಿಡುಗಡೆ ಹಿನ್ನೆಲೆಯಲ್ಲಿ ಕಲಬುರಗಿಯಲ್ಲಿ ಹೆಚ್ಚಿದ ಪ್ರವಾಹ

ಮಹಾರಾಷ್ಟ್ರದ ವೀರ್, ಉಜನಿ, ಸಿನಾ ಜಲಾಶಯ ಮತ್ತು ಬೋರಿ ನದಿಯಿಂದ ಅಪಾರ ಪ್ರಮಾಣದ ನೀರನ್ನು ಭೀಮ ನದಿಗೆ ಹರಿಬಿಟ್ಟ ಕಾರಣ ಕಲಬುರಗಿ ಜಿಲ್ಲೆಯಲ್ಲಿ ಪ್ರವಾಹ ಉಂಟಾಗಿದೆ. ಮಹಾರಾಷ್ಟ್ರದಿಂದ ಈವರೆಗೂ ಸುಮಾರು 3.20 ಲಕ್ಷ ಕ್ಯೂಸೆಕ್ ನೀರನ್ನು ಭೀಮ ನದಿಗೆ ಹರಿಬಿಡಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಗಾಣಗಾಪುರ, ಸೊನ್ನ ಬ್ರಿಡ್ಜ್ ಕಂ ಬ್ಯಾರೇಜ್ ವೀಕ್ಷಣೆ ಮಾಡಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದೆ. ಜನರ ಓಡಾಟಕ್ಕೆ ಅನುಕೂಲವಾಗುವಂತೆ ಸೂಕ್ತ ವ್ಯವಸ್ಥೆ ಮಾಡಲು ಸೂಚಿಸಿದೆ.

ಭೀಮ ನದಿ ನೀರಿನ ಮಟ್ಟ ಏರಿಕೆಯಿಂದ ನೆರೆ ಸೃಷ್ಟಿಯಾಗಿದ್ದು, ನದಿ ತೀರದಲ್ಲಿರುವ ನಿವಾಸಿಗಳಿಗೆ ಜಾಗ್ರತೆ ವಹಿಸುವಂತೆ ಸೂಚಿಸಲಾಗಿದೆ. ಹಾಗೆಯೇ ಅಗತ್ಯ ಇರುವ ಕಡೆಗಳಲ್ಲಿ ಕಾಳಜಿ ಕೇಂದ್ರಗಳ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯಲ್ಲಿ ಸೆಪ್ಟೆಂಬರ್ 26ರ ವೇಳೆಗೆ ಸರಾಸರಿ 619 ಮಿಲಿ ಮೀಟರ್ ವಾಡಿಕೆ ಮಳೆ ಸುರಿಯುತ್ತಿತ್ತು. ಆದರೆ ಈ ವರ್ಷ 915 ಮಿ.ಮೀಗಿಂತಲೂ ಅಧಿಕ ಮಳೆ ಸುರಿದಿರುವುದರಿಂದ ವ್ಯಾಪಕ ಅನಾಹುತವಾಗಿದೆ. ಪ್ರವಾಹ ಪರಿಸ್ಥಿತಿ ತಗ್ಗಿದ ನಂತರ ಮತ್ತೊಮ್ಮೆ ಭೇಟಿ ನೀಡಿ, ಸೂಕ್ತ ಪರಿಹಾರ ಒದಗಿಸಲು ಕ್ರಮವಹಿಸಲಾಗುವುದು.

ಮಂಗಳೂರು ಟೆಕ್ನೋವಾಂಜಾ 2025 ರಲ್ಲಿ ಭಾಗವಹಿಸಿದ್ದು ತುಂಬಾ ಸಂತಸ ತಂದಿದೆ. ಇದು ಬಿಯಾಂಡ್ ಬೆಂಗಳೂರು ಯೋಜನೆಯಡಿ,   ಎಂದೇ ಗುರುತಾಗಿರುವ ಮಂಗಳೂರನ...
26/09/2025

ಮಂಗಳೂರು ಟೆಕ್ನೋವಾಂಜಾ 2025 ರಲ್ಲಿ ಭಾಗವಹಿಸಿದ್ದು ತುಂಬಾ ಸಂತಸ ತಂದಿದೆ. ಇದು ಬಿಯಾಂಡ್ ಬೆಂಗಳೂರು ಯೋಜನೆಯಡಿ, ಎಂದೇ ಗುರುತಾಗಿರುವ ಮಂಗಳೂರನ್ನು ಜಾಗತಿಕ ನಾವೀನ್ಯತೆ ಮತ್ತು ಹೂಡಿಕೆಗಳಿಗೆ ಒಂದು ಹೆಬ್ಬಾಗಿಲನ್ನಾಗಿಸುವುದು ನಮ್ಮ ಗುರಿಯಾಗಿದೆ.

ನಗರವು ಅಭಿವೃದ್ಧಿ ಹೊಂದುತ್ತಿರುವ ಐಟಿ/ಐಟಿಇಎಸ್ ಕೇಂದ್ರವಾಗಿ ಬೆಳೆದಿದೆ. 250 ಕಂಪನಿಗಳು ₹3,500 ಕೋಟಿಗೂ ಹೆಚ್ಚು ಮೊತ್ತದ ರಫ್ತುಗಳನ್ನು ನಡೆಸುತ್ತಿದ್ದು, ಈಗ ₹10,000 ಕೋಟಿ ಮೀರಲು ಮತ್ತು ಮುಂದಿನ 3 ವರ್ಷಗಳಲ್ಲಿ 1 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲು ಸಜ್ಜಾಗಿವೆ. ಕರ್ನಾಟಕದ GSDP ಗೆ ಮಂಗಳೂರು ನಗರವೊಂದೇ ಶೇಕಡ 5.5 ರಷ್ಟು ಕೊಡುಗೆ ನೀಡುತ್ತಿದೆ. ಇದು ಬೆಳವಣಿಗೆಯ ಕ್ಲಸ್ಟರ್ ಆಗಿ ಅದರ ಪ್ರಾಮುಖ್ಯವನ್ನು ಒತ್ತಿಹೇಳುತ್ತದೆ. ಮುಂದಿನ ಅಲೆಯನ್ನು ಮುನ್ನಡೆಸಲು, ಕರ್ನಾಟಕ ಸರ್ಕಾರವು 3,500 ವೃತ್ತಿಪರರ ಸಾಮರ್ಥ್ಯದೊಂದಿಗೆ 3.25 ಎಕರೆಗಳಲ್ಲಿ ವ್ಯಾಪಿಸಲಿರುವ ನಗರದ ಅತಿದೊಡ್ಡ ತಂತ್ರಜ್ಞಾನ ಉದ್ಯಾನವನ್ನು ಸ್ಥಾಪಿಸುತ್ತಿದೆ.

GCC ಗಳು ಮತ್ತು ಸ್ಟಾರ್ಟ್‌ಅಪ್‌ಗಳಿಗೆ ಬೆಳೆಯುತ್ತಿರುವ ನೆಲೆಯನ್ನು ಹೊಂದಿರುವ ಮಂಗಳೂರು ಕ್ಲಸ್ಟರ್ ಫಿನ್‌ಟೆಕ್, ಮೆಡ್‌ಟೆಕ್, ಮೆರೈನ್ ಟೆಕ್ ಮತ್ತು ಬ್ಲೂ ಟೆಕ್‌ನಲ್ಲಿ ಪ್ರಬಲ ಸಾಮರ್ಥ್ಯಗಳನ್ನು ನಿರ್ಮಿಸುತ್ತಿದೆ. ಈ ಮೂಲಕ ನಗರವನ್ನು ನಾವೀನ್ಯತೆ ಮತ್ತು ಕರ್ನಾಟಕದ ಡಿಜಿಟಲ್ ಆರ್ಥಿಕತೆಯ ಚಾಲಕನನ್ನಾಗಿ ಮಾಡುತ್ತಿದೆ.

25/09/2025

झुकती है दुनिया, झुकाने वाला चाहिए

▪️इस बार राहुल गांधी के दिए वोट चोरी के सबूतों पर एफिडेविट मांगने के बजाय चुनाव आयोग ने कमी स्वीकारते हुए वोटर डिलीट करने के नियम बदले - वो भी 6 दिन में

▪️यह वही चुनाव आयोग है जिसने राहुल गांधी जी की प्रेस कांफ्रेंस का फर्जी फैक्ट चेक किया था - लेकिन लोकतंत्र की ताक़त है कि थूक कर तो चुनाव आयोग को चाटना पड़ा

▪️यह राहुल गांधी के सच की ताक़त है और उनके खुलासे का परिणाम है

📅 18 सितंबर

• नेता विपक्ष राहुल गांधी जी ने बड़ा खुलासा किया कि कैसे लोगों के वोट काटे जा रहे हैं

• 'वोट चोरी' के इस खुलासे के बाद चुनाव आयोग सकते में आ गया

📅 24 सितंबर

• एक हफ़्ते के अंदर चुनाव आयोग ने वोट डिलीट करने के नियम बदल दिए

• अब ऑनलाइन वोटर लिस्ट से नाम डिलीट करवाने के लिए ई-वेरिफिकेशन करना होगा

▪️इसके क्या मतलब हैं?

• वोट चोरी पर राहुल गांधी जी के दिए गए सबूत 100% पुख्ता हैं

• इसी वजह से आनन-फानन में ये फैसला लिया गया, ताकि चुनाव आयोग अपनी 'वोट चोरी' को छिपा सके

• साफ है- चुनाव आयोग नरेंद्र मोदी के साथ मिलकर बड़े स्तर पर 'वोट चोरी' में लगा है

👉 लेकिन सिर्फ नियम बदलकर आप बचेंगे नहीं ज्ञानेश गुप्ता जी. अब तो आपको कर्नाटक CID को तुरंत सारे डिटेल देने होंगे जिससे वोट चोरी के गोरख धंधे की जाँच हो सके

👉 उसकी जाँच में रोड़ा मत बनिए

👉 और हाँ - अपनी फ़र्ज़ी फैक्ट चेक एजेंसी को निकाल बाहर कीजिए

Address

Bhadravati

Website

Alerts

Be the first to know and let us send you an email when Syed Asgarali posts news and promotions. Your email address will not be used for any other purpose, and you can unsubscribe at any time.

Share