04/10/2025
ಮಾಧ್ಯಮ ಕ್ಷೇತ್ರದ ಮೂಲಕ ಬೀದರ್ ಜಿಲ್ಲೆಯ ಅಭಿವೃದ್ಧಿಗೆ, ಸಮಾಜದ ಅಭಿವೃದ್ಧಿಗೆ ವಿಶಿಷ್ಟ ಕೊಡುಗೆ ನೀಡುತ್ತಿರುವ ಜನಪರ-ಜೀವಪರ ಕಾಳಜಿಯುಳ್ಳ ಹಿರಿಯ ಪತ್ರಕರ್ತರಾದ ಶ್ರೀಯುತ ಸದಾನಂದ ಜೋಶಿಜಿ ಅವರು "ಸಂಯುಕ್ತ ಕರ್ನಾಟಕ" ಪತ್ರಿಕೆ ಬೀದರ್ ಜಿಲ್ಲಾ ಹಿರಿಯ ವಿಶೇಷ ವರದಿಗಾರರಾಗಿ ಕಾರ್ಯಭಾರ ವಹಿಸಿಕೊಂಡಿರುವುದು ಅತ್ಯಂತ ಖುಷಿ ತಂದಿದೆ. ಇದು ಜಿಲ್ಲೆಯ ಮಾಧ್ಯಮ ಕ್ಷೇತ್ರದ ಮಟ್ಟಿಗೆ ಬಹುದೊಡ್ಡ ಸಕಾರಾತ್ಮಕ ಬೆಳವಣಿಗೆ ಎನಿಸಿದೆ.
ಉತ್ತರ ಕರ್ನಾಟಕ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳಲ್ಲಿ ಮೂರು ದಶಕ ಸೇವೆ ಸಲ್ಲಿಸಿದ ಜೋಶಿಜಿ ಅವರು ಅಲ್ಪ ವಿರಾಮ ಬಳಿಕ ಇದೀಗ ಕನ್ನಡಿಗರ ಸಾಕ್ಷಿಪ್ರಜ್ಞೆ ಎನಿಸಿದ ಅತ್ಯಂತ ವಿಶ್ವಾಸಾರ್ಹ "ಸಂಯುಕ್ತ ಕರ್ನಾಟಕ" ಪತ್ರಿಕೆಗೆ ಸೇರಿ ಈ ಮೂಲಕ ಮತ್ತೆ ಜಿಲ್ಲೆಯ, ಸಮಾಜದ ಸೇವೆಗೆ ಸಮಯ ಕೊಟ್ಟಿರುವುದು ಸ್ವಾಗತಾರ್ಹ. ವಿಜಯವಾಣಿ ಕಲಬುರಗಿ ಆವೃತ್ತಿ ಬ್ಯೂರೋ ಚೀಫ್ ಆಗಿ ಸಹ ಜೋಶಿಜಿ ಅವರು ಎರಡೂವರೆ ವರ್ಷ ಸೇವೆ ಸಲ್ಲಿಸಿ ಈ ಭಾಗದ ಅಭಿವೃದ್ಧಿಗೆ ತಮ್ಮದೇ ಕೊಡುಗೆ ನೀಡಿದ್ದಾರೆ. ಅನೇಕ ಯುವ, ಉದಯೋನ್ಮುಖ ಪತ್ರಕರ್ತರಿಗೆ ಮಾರ್ಗದರ್ಶನ ಮಾಡಿ ಬೆಳೆಸಿರುವ ಶ್ರೇಯಸ್ಸು ಜೋಶಿಜಿ ಅವರಿಗೆ ಸಲ್ಲುತ್ತದೆ. ಅವರ ಕೈಯಲ್ಲಿ ಕೆಲಸ ಮಾಡಿದ ಹಲವರು ಇಂದು ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಜಿಲ್ಲಾ ವರದಿಗಾರ ಸೇರಿದಂತೆ ವಿವಿಧ ಹುದ್ದೆಗಳಲ್ಲಿದ್ದಾರೆ.
ನೇರ, ನಿಖರ, ಪ್ರಖರ ಸುದ್ದಿ, ವರದಿ ಕೊಡುವುದು ಜೋಶಿಜಿ ಅವರ ವಿಶೇಷತೆ. ಈ ಭಾಗದ ಪ್ರಮುಖ ರಾಜಕೀಯ ವಿಶ್ಲೇಷಕರಾಗಿದ್ದಾರೆ. ತಮ್ಮ ಹರಿತವಾದ ಲೇಖನಿಯಿಂದ ಜನಮಾನಸದಲ್ಲಿ ವಿಶಿಷ್ಟ ಸ್ಥಾನ ಗಳಿಸಿದ್ದಾರೆ. ಪ್ರಖರ ರಾಷ್ಟ್ರವಾದಿ ಪತ್ರಕರ್ತರಾಗಿ ಗುರುತಿಸಿಕೊಂಡಿರುವುದು ಇವರ ಇನ್ನೊಂದು ವಿಶೇಷತೆ. ಅಪಾರ ಅನುಭವಿಗಳಾದ ಜೋಶಿಜಿ ಅವರು ಅಷ್ಟೇ ಸರಳ ವ್ಯಕ್ತಿತ್ವ ಸಹ ಹೊಂದಿದ್ದಾರೆ. ಎಲ್ಲರೊಂದಿಗೆ ಆತ್ಮೀಯ ಒಡನಾಟವಿಟ್ಟುಕೊಂಡು ಜಿಲ್ಲೆಯ ಮಾಧ್ಯಮ ಕ್ಷೇತ್ರದ "ಧ್ರುವತಾರೆ"ಯಾಗಿದ್ದಾರೆ ಎಂದರೂ ಅತಿಶಯೋಕ್ತಿಯಾಗಲಾರದು.
ಜೋಶಿಜಿ ಅವರು ಮತ್ತೆ ಮಾಧ್ಯಮ ಕ್ಷೇತ್ರದಲ್ಲಿ ಸಕ್ರಿಯರಾಗಿರುವುದು ಸಾಕಷ್ಟು ಆಶಾಭಾವ ಮೂಡಿಸಿದೆ.
ಸಾರ್ವಜನಿಕರು-ಸರ್ಕಾರ- ಜನಪ್ರತಿನಿಧಿಗಳ ಕೊಂಡಿಯಾಗಿ ಜೋಶಿಜಿ ಅವರು ಅನೇಕ ಕೆಲಸ ಈ ಹಿಂದೆ ಮಾಡಿದ್ದಾರೆ. ಮುಂದೆಯೂ ಮಾಡಲಿದ್ದಾರೆ ಎಂಬ ವಿಶ್ವಾಸ ನಮಗಿದೆ.
ಜೋಶಿ ಸರ್ ಜಿ ಅವರಿಗೆ ಶುಭವಾಗಲಿ.
🙏🙏🙏