01/09/2025
ಬೀದರ ಜಿಲ್ಲಾ ಪೊಲೀಸರಿಂದ ಜಿಲ್ಲೆಯಲ್ಲಿ 2 ಕೋಟಿಗೂ ಅಧಿಕ ಮೌಲ್ಯದ ಅತೀ ದೊಡ್ಡ ಕಲಬೆರಿಕೆ ಪಾನ ಮಸಾಲಾ, ಕೆಮಿಕಲ್, ತಂಬಾಕು ಪದಾರ್ಥ ವಶ, ವಾಹನ ಜಪ್ತಿ ಆರೋಪಿರ ಬಂಧನ
ಮಾನ್ಯ ಶ್ರೀ ಪ್ರದೀಪ್ ಗುಂಟಿ, ಐ.ಪಿ.ಎಸ್, ಪೊಲೀಸ್ ವರಿಷ್ಠಾಧಿಕಾರಿಗಳು, ಬೀದರ ಜಿಲ್ಲೆ ರವರ ನಿರ್ದೇಶನ ಮತ್ತು ನೇರ ಮಾರ್ಗದರ್ಶನದಂತೆ, ಗಾಂಧಿಗಂಜ ಪೊಲೀಸ್ ಠಾಣಾ ವ್ಯಾಪ್ತಿಯ ಚಿದ್ರಿ ಬುತ್ತಿ ಬಸವಣ್ಣಾ ಹತ್ತಿರದ ಮನೆಯೊಂದರಲ್ಲಿ ಅಕ್ರಮವಾಗಿ ಸರ್ಕಾರದಿಂದ ಯಾವುದೇ ಪರವಾನಿಗೆ ಇಲ್ಲದೆ ವಿವಿಧ ನಮೂನೆಯ ಪಾನ್ ಮಸಾಲಾ ಮತ್ತು ತಂಬಾಕು ವಸ್ತುಗಳನ್ನು ಕಲಬೆರಕೆ ಮಾಡಿ ಗುಟಕಾ ಸಾಮಾಗ್ರಿಗಳನ್ನು ಸಂಗ್ರಹಿಸಿಟ್ಟು, ಅವುಗಳನ್ನು ಸಾಗಾಣಿಕೆ ಮಾಡಲು ಲಾರಿಯಲ್ಲಿ ಲೋಡ್ ಮಾಡುತ್ತಿರುವ ಮಾಹಿತಿಯಂತೆ, ಶ್ರೀ ಚಂದ್ರಕಾಂತ ಪೂಜಾರಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1 ಬೀದರ, ರವರ ಮುಂದಾಳತ್ವದಲ್ಲಿ ಶ್ರೀ ಎಮ್.ಡಿ ಸನದಿ ಪೊಲೀಸ್ ಉಪಾಧೀಕ್ಷಕರು, ಸೆನ್ ಪೊಲೀಸ್ ಠಾಣೆ ಬೀದರ ರವರ ನೇತೃತ್ವದಲ್ಲಿ, ಶ್ರೀ ಆನಂದರಾವ್ ಎಸ್.ಎನ್. ಪಿ.ಐ ಗಾಂಧಿಗಂಜ ಪೊಲೀಸ್ ಠಾಣೆ, ಶ್ರೀ ಶಿವಾನಂದ ಘಾಣಿಗೇರ್ ಪಿ.ಐ ಸೆನ್ ಪೊಲೀಸ್ ಠಾಣೆ ಮತ್ತು ಶ್ರೀ ದಶರಥ ಪಿ.ಎಸ್.ಐ ಗಾಂಧಿಗಂಜ ಪೊಲೀಸ್ ಠಾಣೆ ಹಾಗೂ ಗಾಂಧಿಗಂಜ ಪೊಲೀಸ್ ಠಾಣಾ ಸಿಬ್ಬಂಧಿರವರಾದ ಶ್ರೀ ಅನಿಲ, ಶ್ರೀ ಗಂಗಾಧರ, ಶ್ರೀ ಸುಧೀರ, ಶ್ರೀ ಅಜಯಸಿಂಗ್, ಶ್ರೀ ರಾಜಕುಮಾರ, ಶ್ರೀ ಇಸ್ಮಾಯಿಲ್, ಶ್ರೀ ರಾಜಕಿರಣ, ಶ್ರೀ ಸಂತೋಷ, ಚಿಂತಾಕಿ ಠಾಣೆ, ಅದರಂತೆ ಬೀದರ ನೂತನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಕೋಳಾರ ಕೈಗಾರಿಕಾ ಪ್ರದೇಶದ ಗೊದಾಮಿನಲ್ಲಿ ಪಾನ್ ಮಸಾಲಾ ತಯಾರಿಸಲು ಬೇಕಾದ ಕಚ್ಚಾ ಮಾಲು, ಕೆಮಿಕಲ್ ಪದಾರ್ಥವನ್ನು ಸಂಗ್ರಹಿಸಿಟ್ಟಿರುವ ಮಾಹಿತಿಯಂತೆ ಶ್ರೀ ವಿಜಯಕುಮಾರ, ಪಿ.ಐ ನೂತನ ನಗರ ಠಾಣೆ ರವರು ಶ್ರೀ ಸಂತೋಷ ಸಿ.ಹೆಚ್.ಸಿ-599 ಡಿ.ಎಸ್.ಬಿ ಘಟಕ ಬೀದರ, ಶ್ರೀ ಸಂತೋಷ, ಚಿಂತಾಕಿ ಠಾಣೆ, ಮತ್ತು ನೂತನ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಶ್ರೀ ಪ್ರಕಾಶ ರವರೊಂದಿಗೆ ದಾಳಿ ಮಾಡಿ ಗಾಂಧಿಗಂಜ ಪೊಲೀಸ್ ಠಾಣೆ ರವರು ಮತ್ತು ನೂತನ ನಗರ ಪೊಲೀಸ್ ಠಾಣೆ ರವರು ಪ್ರತ್ಯೇಕವಾಗಿ ತಮ್ಮ ತಮ್ಮ ಠಾಣಾ ವ್ಯಾಪ್ತಿಯಲ್ಲಿ ದಾಳಿ ಮಾಡಿ ಒಟ್ಟು 2,44,90,525=00 ರೂಪಾಯಿ ಮೌಲ್ಯದ ಪಾನ್ ಮಸಾಲಾ ತಯಾರಿಸಲು ಬೇಕಾದ ಮತ್ತು ಮಾನವನ ಆರೋಗ್ಯಕ್ಕೆ ಹಾನಿಯಾಗುವಂತಹ ಕಚ್ಚಾ ಮಾಲು ಹಾಗೂ ಕೆಮಿಕಲ್ ಪಾದಾರ್ಥವನ್ನು ಜಪ್ತಿ ಮಾಡಿಕೊಂಡು 8 ಜನ ಆರೋಪಿತರ ವಿರುದ್ದ ಕಾನೂನು ರೀತ್ಯ ಕ್ರಮ ಕೈಕೊಳ್ಳಲಾಗಿದೆ.
ಎರಡೂ ಕೋಟಿಗೂ ಅಧಿಕ ಮೌಲ್ಯದ ನಕಲಿ ಪಾನ ಮಸಾಲಾ ಮತ್ತು ತಂಬಾಕಿನ ಪದಾರ್ಥ, ಕೆಮಿಕಲ್ಗಳ ಪಾಕೇಟಗಳು ವಶ ಪಡಿಸಿಕೊಂಡ ಬೀದರ ಗಾಂಧಿಗಂಜ ಮತ್ತು ನೂತನ ನಗರ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಯವರ ಕಾರ್ಯಕ್ಕೆ ಶಾಘಿಸಿ, ಬಹುಮಾನ ಘೋಷಿಸಲಾಗಿದೆ.
ಬೀದರ ಜಿಲ್ಲೆಯನ್ನು ನಶಾ ಮುಕ್ತ ಜಿಲ್ಲೆಯನ್ನಾಗಿಸಲು ಸದಾ ಸನ್ನಧರಾಗಿದ್ದು, ಜಿಲ್ಲೆಯಲ್ಲಿ ಅಪರಾಧ ನಿಯಂತ್ರಣಕ್ಕಾಗಿ ಜಿಲ್ಲೆಯ ಪೊಲೀಸರ ಕಾರ್ಯಾಚರಣೆಯು ಮುಂದುವರೆಯುತ್ತದೆ....
ಪ್ರದೀಪ್ ಗುಂಟಿ, ಐ.ಪಿ.ಎಸ್
ಪೊಲೀಸ್ ವರಿಷ್ಠಾಧಿಕಾರಿಗಳು,
ಬೀದರ್ ಜಿಲ್ಲೆ ಬೀದರ್.