Bidar Suddi

Bidar Suddi Contact information, map and directions, contact form, opening hours, services, ratings, photos, videos and announcements from Bidar Suddi, Digital creator, Bidar.

ಬೀದರ್‌ನ ಪ್ರತಿಯೊಂದು ಸುದ್ದಿ ನಿಮ್ಮಮುಂದೆ ಇಡಲು ಪ್ರಯತ್ನಿಸುತ್ತಿದೆ.

ನೀವು ಹಂಚಿದ ವಿಷಯವನ್ನು ನಾವು ಸುಂದರವಾದ ಪೋಸ್ಟ್ ಅಥವಾ ಲೇಖನ ರೂಪದಲ್ಲಿ ಅಪಲೋಡ್ ಮಾಡಿ ನಿಮ್ಮ ಹೆಸರನ್ನು ತಿಳಿಸುವ ಪ್ರಯತ್ನ ಮಾಡುತ್ತೇವೆ.

ನಮ್ಮಪೇಜ್‌ಗೆ ನೀವು ಉತ್ತಮ ಸುದ್ದಿಗಳು, ಕುಂದು ಕೊರತೆಗಳನ್ನ ಹಂಚಿಕೊಳ್ಳಬಹುದು..

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ, ಮಾರ್ಚ್ 04 ರಂದು ಹೈದರಾಬಾದ್‌ನಲ್ಲ...
27/02/2026

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ, ಮಾರ್ಚ್ 04 ರಂದು ಹೈದರಾಬಾದ್‌ನಲ್ಲಿ ನಡೆಯಲಿರುವ ಆರತಕ್ಷತೆ ಕಾರ್ಯಕ್ರಮಕ್ಕೆ ಆಹ್ವಾನಿಸಿದರು.

ಸ್ವಾಮಿ ವಿವೇಕಾನಂದರು ಬೋಧಿಸಿದ “ಮಾನವ ಸೇವೆಯೇ ಮಾಧವ ಸೇವೆ” ಎಂಬ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಭಾರತ್ ಪಬ್ಲಿಕ್ ಸ್ಕೂಲ್ – ಭ...
20/02/2026

ಸ್ವಾಮಿ ವಿವೇಕಾನಂದರು ಬೋಧಿಸಿದ “ಮಾನವ ಸೇವೆಯೇ ಮಾಧವ ಸೇವೆ” ಎಂಬ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಭಾರತ್ ಪಬ್ಲಿಕ್ ಸ್ಕೂಲ್ – ಭಾಲ್ಕಿಯ ಅಧ್ಯಕ್ಷರಾದ ಶ್ರೀ ಪ್ರವೀಣ ಹನಮಶೆಟ್ಟಿ ಅವರುಸಾಯಿಗಾವ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಉಚಿತವಾಗಿ ಶೀತಲ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಆರಂಭಿಸಿದ್ದಾರೆ.

ಈ ಮಾನವೀಯ ಹಾಗೂ ಸೇವಾಭಾವನೆಯ ಕಾರ್ಯವು ಸಮಾಜದ ಬಗ್ಗೆ ಅವರ ನಿಜವಾದ ಕಾಳಜಿ ಮತ್ತು ಜವಾಬ್ದಾರಿಯನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ.
ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜೊತೆಗೆ, ಸಮಾಜಸೇವೆಯಲ್ಲಿಯೂ ಸದಾ ಮುಂಚೂಣಿಯಲ್ಲಿರುವುದು ಭಾರತ್ ಪಬ್ಲಿಕ್ ಸ್ಕೂಲ್ – ಭಾಲ್ಕಿಯ ಹೆಮ್ಮೆಯಾಗಿದೆ.

ವಂದನೆಗಳೊಂದಿಗೆ,
ಭಾರತ್ ಪಬ್ಲಿಕ್ ಸ್ಕೂಲ್ – ಭಾಲ್ಕಿ
Praveen Hanamshetty

#ಬೀದರ_ಸುದ್ದಿ #ಬೀದರ್ #ಬೀದರದಕ್ಷಿಣ #ಬೀದರಉತ್ತರ #ಭಾಲ್ಕಿ #ಕಮಲನಗರ #ಹುಮನಾಬಾದ #ಬೀದರ್ #ಹುಲಸೂರ #ಹುಡುಗಿ #ಬಸವಕಲ್ಯಾಣ #ಚಿಟ್ಟಗುಪ್ಪ #ಔರಾದ್ #ಬೆಂಗಳೂರು

19/02/2026

ಹಿಂದೂ ಹೃದಯ ಸಾಮ್ರಾಟ, ಹಿಂಧವೀ ಸ್ವರಾಜ್ಯ ಸ್ಥಾಪಕ, ಅಪ್ರತಿಮ ವೀರ , ಧರ್ಮ - ಸಂಸ್ಕೃತಿಗಳ ರಕ್ಷಕ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಂದು ಶತ ಶತ ನಮನಗಳು.🙏 🚩 🕉️ 🙏

#ಶಿವಾಜಿ

03/02/2026

ಬಸವಣ್ಣನವರು ಮಂತ್ರಿಯಾಗಿ ಕಾರ್ಯನಿರ್ಸಿರುವ ಕೋಟೆಯಲ್ಲಿ ಕನಿಷ್ಠ ಸೌಕರ್ಯವೂ ಇಲ್ಲದೇ ಪ್ರವಾಸಿಗರು ಪರದಾಟ, ಜಿಲ್ಲಾ ಆಡಳಿತ ಕಣ್ಮುಚ್ಚಿ ಕೊಳ್ಳುತ್ತಿದೆ.

#ಬೀದರ_ಸುದ್ದಿ #ಬೀದರ್

ಮೆಹಕರ–ಡೋಣಗಾಪುರ್–ತಡೋಳಾ ಶ್ರೀ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಷ.ಬ್ರ. ಶ್ರೀ ಗುರು ರಾಜೇಶ್ವರ ಶಿವಾಚಾರ್ಯರಿಗೆ ಜನ್ಮದಿನದ ಅಂಗವಾಗಿ ಭಕ್ತಿಪೂರ್...
01/02/2026

ಮೆಹಕರ–ಡೋಣಗಾಪುರ್–ತಡೋಳಾ ಶ್ರೀ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಷ.ಬ್ರ. ಶ್ರೀ ಗುರು ರಾಜೇಶ್ವರ ಶಿವಾಚಾರ್ಯರಿಗೆ ಜನ್ಮದಿನದ ಅಂಗವಾಗಿ ಭಕ್ತಿಪೂರ್ವಕ ಹಾಗೂ ಹೃತ್ಪೂರ್ವಕ ಶುಭಾಶಯಗಳು.

ಅವರ ಆಶೀರ್ವಾದ ಸದಾ ಭಕ್ತಜನರ ಮೇಲೆ ಕರುಣೆಯ ನೆರಳಾಗಿ ವಿಸ್ತರಿಸಲಿ.

#ಬೀದರ_ಸುದ್ದಿ #ಬೀದರ್

31/01/2026

ಪುನೀತ್ ಕೆರೆಹಳ್ಳಿಗೋಸ್ಕರ ಬಿಜೆಪಿ-ಕಾಂಗ್ರೆಸ್ ನಡುವೆ ಸದನದಲ್ಲಿ ಜಗಳ..

ಉತ್ತಮ ದಂತ ಪೋಷಣೆ ಅರಿವು ಅಗತ್ಯವಿಕ ಸುದ್ದಿಲೋಕ ಭಾಲ್ಕಿದೀರ್ಘಾವಧಿಯವರೆಗೂ ಉತ್ತಮ ದಂತ ಪೋಷಣೆಗೆ ಬಾಲ್ಯದಿಂದಲೂ ಹಲ್ಲುಗಳ ನಿರ್ವಹಣೆಯ ಅರಿವು ಮೂಡ...
30/01/2026

ಉತ್ತಮ ದಂತ ಪೋಷಣೆ ಅರಿವು ಅಗತ್ಯ

ವಿಕ ಸುದ್ದಿಲೋಕ ಭಾಲ್ಕಿ

ದೀರ್ಘಾವಧಿಯವರೆಗೂ ಉತ್ತಮ ದಂತ ಪೋಷಣೆಗೆ ಬಾಲ್ಯದಿಂದಲೂ ಹಲ್ಲುಗಳ ನಿರ್ವಹಣೆಯ ಅರಿವು ಮೂಡಿಸಿಕೊಳ್ಳಬೇಕೆಂದು ಎಸ್.ಬಿ.ಡೆಂಟಲ್ ಕಾಲೇಜಿನ ಪ್ರಾಧ್ಯಾಪಕ ಡಾ.ಸಿದ್ದಣ್ಣಗೌಡ ಅಭಿಪ್ರಾಯಪಟ್ಟರು..

ಭಾಲ್ಕಿಯ ಸದ್ಗುರು ವಿದ್ಯಾಲಯದಲ್ಲಿ ಆಯೋಜಿಸಿದ್ದ ದಂತ ಉಚಿತ ತಪಾಸಣಾ ಶಿಬಿರ ಡಾ.ಸಿದ್ಧಣ್ಣಗೌಡ ಉದ್ಘಾಟಿಸಿದರು. ರೋಟರಿ ಅಧ್ಯಕ್ಷ ಅಶ್ವಿನ್‌ ಭೋಸೆ, ಡಾ.ಅಮಿತ್ ಅಷ್ಟೂರೆ, ಸೋಮನಾಥ ಮುದ್ದಾ ಇದ್ದರು.

#ಬೀದರ_ಸುದ್ದಿ #ಬೀದರ್

30/01/2026

📍 ರಾಜ್ಯದ ಎಲ್ಲಾ ರೈತರು ಕಡ್ಡಾಯವಾಗಿ Ekyc ಹಾಗೂ Farmer consent ಮಾಡಿಕೊಳ್ಳಿ 🙏

#ಬೀದರ_ಸುದ್ದಿ #ಬೀದರ್

30/01/2026

ಬೀದರ್‌ ಜಿಲ್ಲೆಯ ಮಾಂಜ್ರಾ ನದಿ ಪಾತ್ರದಲ್ಲಿ ಅಕ್ರಮ ಮರಳು ದಂಧೆ, ಟ್ರೆಂಚ್ ನಿರ್ಮಾಣ..

#ಬೀದರ_ಸುದ್ದಿ #ಬೀದರ್

29/01/2026

ಬೀದರ ಜಿಲ್ಲಾ ಪೊಲೀಸ್, ಖಟಕ ಚಿಂಚೋಳಿ ಪೊಲೀಸರಿಂದ ಕೇವಲ 06 ಗಂಟೆಯ ಒಳಗಾಗಿ ಕಳುವಾದ 3 ಲಕ್ಷಕ್ಕೂ ಅಧಿಕ ಮೌಲ್ಯದ ಬಂಗಾರದ ಒಡವೆಗಳ ವಶ ಆರೋಪಿತರ ಬಂಧನ.

ಇಂದು ಪ್ರಯಾಣಿಕರೊಬ್ಬರು ಹುಮನಾಬಾದ ದಿಂದ ಭಾಲ್ಕಿ ಕಡೆಗೆ ಪ್ರಯಾಣಿಸುತ್ತಿದ್ದಾಗ ಕಪಲಾಪೂರ ಕ್ರಾಸ್ ಹತ್ತಿರ ಬಂದಾಗ ಯಾರೋ ಅಪರಿಚಿತ ವ್ಯಕ್ತಿ ಪ್ರಯಾಣಿಕರ ಬ್ಯಾಗನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ಖಟಕ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಾನ್ಯ ಶ್ರೀ ಪ್ರದೀಪ್ ಗುಂಟಿ, ಐ.ಪಿ.ಎಸ್, ಪೊಲೀಸ್ ವರೀಷ್ಠಾಧಿಕಾರಿಗಳು, ಬೀದರ ರವರ ನಿರ್ದೇಶನ ಮತ್ತು ನೇರ ಮಾರ್ಗದರ್ಶನದಂತೆ, ಪ್ರಕರಣದ ತನಿಖೆಯು ಶ್ರೀ ಶಿವಾನಂದ ಪವಾಡಶೆಟ್ಟಿ, ಪೊಲೀಸ್ ಉಪಾಧೀಕ್ಷಕರು ಭಾಲ್ಕಿ ರವರ ನೇತೃತ್ವದಲ್ಲಿ ಖಟಕ ಚಿಂಚೋಳಿ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ ಪ್ರಭಾಕರ ಪಾಟೀಲ ಹಾಗೂ ಅಪರಾಧ ವಿಭಾಗದ ಸಿಬ್ಬಂದಿ ರವರಾದ ಶ್ರೀ ಬುಡ್ಡಪ್ಪ, ಶ್ರೀ ಶ್ರೀಕಾಂತ ರವರನ್ನೊಳಗೊಂಡ ತಂಡವನ್ನು ರಚಿಸಿದ್ದು, ತಂಡವು ವೈಜ್ಞಾನಿಕ ನೆರವು, ಸಿ.ಸಿಟಿವಿ ಮತ್ತು ಪೊಲೀಸ್ ಬಾತ್ಮಿದಾರರ ಮಾಹಿತಿಯಂತೆ ತಂಡವು ಪ್ರಕರಣ ದಾಖಲಾದ ಕೇವಲ 06 ಗಂಟೆಯ ಒಳಗಾಗಿ ಆರೋಪಿತರ ಪತ್ತೆ ಹಚ್ಚಿ ಆರೋಪಿತರಿಂದ 3,15,000=00 ರೂಪಾಯಿ ಮೌಲ್ಯದವುಗಳನ್ನು ವಶ ಪಡಿಸಿಕೊಂಡು ಆರೋಪಿತರ ವಿರುದ್ದ ಕಾನೂನು ರಿತ್ಯ ಕ್ರಮ ಕೈಗೊಂಡು ನ್ಯಾಯಾಂಗ ಬಂಧನಕ್ಕೆ ಕಳುಹಿಸಿ ವಾರಸುದಾರರಿಗೆ ವಶ ಪಡಿಸಿಕೊಂಡ ಬಂಗಾರದ ಆಭರಣಗಳನ್ನು ಹಸ್ತಾಂತರಿಸಲಾಯಿತು.

ಅತೀ ಚಾಕ ಚಾತುರ್ಯತೆಯಿಂದ ಕಳ್ಳತನ ಪ್ರಕರಣವನ್ನು ಭೇದಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯಕ್ಕೆ ಶ್ಲಾಘಿಸಿ ತಂಡಕ್ಕೆ ನಗದು ಬಹುಮಾನ ನೀಡಲಾಗಿದೆ.

ಬೀದರ ಜಿಲ್ಲೆಯಲ್ಲಿ ಅಪರಾಧ ನಿಯಂತ್ರಣ, ಪತ್ತೆ ಕಾರ್ಯ ಜಿಲ್ಲೆಯ ಪೊಲೀಸರ ಕಾರ್ಯಾಚರಣೆಯು ಸದಾ ಮುಂದುವರೆಯುತ್ತದೆ...

ಪ್ರದೀಪ್ ಗುಂಟಿ, ಐ.ಪಿ.ಎಸ್. ಪೊಲೀಸ್ ವರೀಷ್ಠಾಧಿಕಾರಿಗಳು,ಬೀದರ ಜಿಲ್ಲೆ, ಬೀದರ.

Address

Bidar

Website

Alerts

Be the first to know and let us send you an email when Bidar Suddi posts news and promotions. Your email address will not be used for any other purpose, and you can unsubscribe at any time.

Share