14/06/2025
#ಯಶವಂತಪುರ_ಸಿಂಧನೂರು_ಎಕ್ಸ್‌ಪ್ರೆಸ್
🔹ಈ ಗಾಡಿಯು #ರಾಯಚೂರು ಜಿಲ್ಲೆಯ #ಸಿಂಧನೂರು ರೈಲು ನಿಲ್ದಾಣದಿಂದ #ಬೆಂಗಳೂರು ನಗರದ #ಯಶವಂತಪುರ ರೈಲು ನಿಲ್ದಾಣಗಳ ನಡುವೆ ಚಲಿಸುತ್ತಿದೆ.
#ಇತಿಹಾಸ:-
🔹ಈ ಗಾಡಿಯು ಈ ಹಿಂದೇ 56909/10 #ಹೊಸಪೇಟೆ - #ಚಿಕ್ಕಜಾಜೂರು - #ಬೆಂಗಳೂರು ಮಧ್ಯ ಲಿಂಕ್ ಪ್ಯಾಸೆಂಜರ್ ಗಾಡಿಯಾಗಿ ಚಲಿಸುತ್ತಿತ್ತು.
ಹೊಸಪೇಟೆಯಿಂದ #ಬಳ್ಳಾರಿ, ರಾಯದುರ್ಗ, ಚಿತ್ರದುರ್ಗ ಮಾರ್ಗವಾಗಿ ಚಿಕ್ಕಜಾಜೂರು ರೈಲು ನಿಲ್ದಾಣಕ್ಕೆ ಬಂದು, ನಂತರ #ಹುಬ್ಬಳ್ಳಿಯಿಂದ - #ಬೆಂಗಳೂರು ಕಡೆಗೇ ಹೋಗುವ ಗಾಡಿಗೆ ಚಿಕ್ಕಜಾಜೂರು ನಿಲ್ದಾಣದಲ್ಲಿ #ಹೊಸಪೇಟೆ - ಬೆಂಗಳೂರು ಗಾಡಿಯನ್ನು ಅಳವಡಿಸುತ್ತಿದ್ದರು, ನಂತರ ಚಿಕ್ಕಜಾಜೂರುಯಿಂದ ಒಂದೇ ಗಾಡಿಯಾಗಿ #ಬೆಂಗಳೂರು ನಗರಕ್ಕೆ ಸೇರುತ್ತಿದ್ದವು. ಇದೇ ರೀತಿ ಬೆಂಗಳೂರುಯಿಂದ ಚಿಕ್ಕಜಾಜೂರು ತನಕಾ ಒಂದೇ ಗಾಡಿಯಾಗಿ ಸೇರಿ, ಚಿಕ್ಕಜಾಜೂರುನಲ್ಲಿ #ಹುಬ್ಬಳ್ಳಿ ಹಾಗೂ #ಹೊಸಪೇಟೆ ಕಡೆಗೆ ಹೋಗುವ ಕೋಚ್ ಗಳನ್ನು #ಬೇರ್ಪಡಿಸುತ್ತಿದ್ದರು, ಹುಬ್ಬಳ್ಳಿ ಕಡೆಗೇ ಹೋಗುವ ಗಾಡಿಯು ದಾವಣಗೆರೆ ಮಾರ್ಗವಾಗಿ ಮತ್ತು ಹೊಸಪೇಟೆ ಕಡೆಗೇ ಹೋಗುವ ಗಾಡಿಯು ಚಿತ್ರದುರ್ಗ, ರಾಯದುರ್ಗ, ಬಳ್ಳಾರಿ ಮಾರ್ಗವಾಗಿ ತಮ್ಮ ಗಮ್ಯ ಸ್ಥಾನವನ್ನು ಸೇರುತ್ತಿದ್ದವು.
🔹 #2019ರಲ್ಲಿ ಲಿಂಕ್ ವ್ಯವಸ್ಥೆಯನ್ನು ರದ್ದು ಪಡಿಸಿ, ಯಶವಂತಪುರ - ಹೊಸಪೇಟೆ ಯಶವಂತಪುರ ಮಧ್ಯ ವೇಳಾಪಟ್ಟಿನ್ನು ಬದಲಾಯಿಸಿ, ಬೆಂಗಳೂರುಯಿಂದ #ಯಶವಂತಪುರಕ್ಕೆ ಗಾಡಿಯನ್ನು ಬದಲಾಯಿಸಲಾಯಿತ್ತು. ಮುಂದಿನ ದಿನಗಳಲ್ಲಿ ಪ್ಯಾಸೆಂಜರ್ ಯಿಂದ #ಎಕ್ಸ್‌ಪ್ರೆಸ್ ಯಾಗಿ ಬದಲಾಯಿಸಿದರು. ನಂತರ 2012ರಲ್ಲಿ #ಗಿಣಿಗೇರಾ - #ಕಾರಟಗಿ ಹೊಸ ರೈಲು ಮಾರ್ಗ ಪೂರ್ಣವಾಗಿರುವ ಹಿನ್ನಲೆಯಲ್ಲಿ ಈ ಗಾಡಿಯನ್ನು #ಕಾರಟಗಿವರೆಗೆ ವಿಸ್ತರಿಸಿದರು. #2024ರ ಮಾರ್ಚ್ ಮಾಹೆಯಲ್ಲಿ ಕಾರಟಗಿಯಿಂದ #ಸಿಂಧನೂರು ಹೊಸ ಲೈನ್ ಪೂರ್ಣಗೊಂಡು, ಸಿಂಧನೂರು ವರೆಗೆ ಸೇವೆಯನ್ನು #ವಿಸ್ತರಿಸಲಾಯಿತು.
🔸ಗಾಡಿ ಸಂಖ್ಯೆ:- 16545 ಯಶವಂತಪುರ - ಸಿಂಧನೂರು ಎಕ್ಸ್ಪ್ರೆಸ್
🔹ಪ್ರಯಾಣದ ಸಮಯ:- 13 ಗಂಟೆ 48 ನಿಮಿಷಗಳು
🔸ದೂರ:- 604 ಕಿ.ಮೀ.
ನಿಲುಗಡೆ :- 37 ನಿಲ್ದಾಣಗಳು
🔹 #ಮಾರ್ಗದ ವಿವರ ಮತ್ತು #ಸಮಯ
🔸ಪ್ರತಿ ದಿನ ರಾತ್ರಿ 08:25ಕ್ಕೆ ಯಶವಂತಪುರ ರೈಲು ನಿಲ್ದಾಣದಿಂದ ಹೊರಟು,
ಚಿಕ್ಕ ಬಾಣಾವರ ಜಂ.→ ರಾತ್ರಿ 08:35, ದೊಡ್ಡಬೆಲೆ→ ರಾತ್ರಿ 08:52, ಕ್ಯಾತಸಂದ್ರ→ ರಾತ್ರಿ 09:15, ತುಮಕೂರು→ ರಾತ್ರಿ 09:22, ಗುಬ್ಬಿ→ ರಾತ್ರಿ 09:39, ತಿಪಟೂರು→ ರಾತ್ರಿ 10:18, ಅರಸೀಕೆರೆ ಜಂ.→ ರಾತ್ರಿ 10:45, ಕಡೂರು ಜಂ. → ರಾತ್ರಿ 11:19, ಬೀರೂರು ಜಂ.→ ರಾತ್ರಿ 11:30, ಅಜ್ಜಂಪುರ→ ರಾತ್ರಿ 11:46, ಶಿವಾನಿ→ ರಾತ್ರಿ 11:56, ಹೊಸದುರ್ಗಾ ರೋಡ್→ ಮಧ್ಯರಾತ್ರಿ 12:07, ಹೊಳಲ್ಕೆರೆ→ ಮಧ್ಯರಾತ್ರಿ 12:24, ಚಿಕ್ಕಜಾಜೂರು ಜಂ.→ ಮಧ್ಯರಾತ್ರಿ 12:55, ಅಮೃತಾಪುರ→ ಮಧ್ಯರಾತ್ರಿ 01:14, ಚಿತ್ರದುರ್ಗ→ ಮಧ್ಯರಾತ್ರಿ 01:38, ಬಾಲೇನಹಳ್ಳಿ→ ಮಧ್ಯರಾತ್ರಿ 02:01, ಚಳ್ಳಕೆರೆ→ ಮಧ್ಯರಾತ್ರಿ 02:17, ಬೊಮ್ಮಗೊಂಡನ ಕೆರೆ→ ಮಧ್ಯರಾತ್ರಿ 02:44, ಮೊಳಕಾಲ್ಮುರು→ ಮುಂಜಾನೆ 03:01, ರಾಯದುರ್ಗಂ ಜಂ. → ಮುಂಜಾನೆ 04:13, ಸೋಮಲಾಪುರಂ→ ಮುಂಜಾನೆ 04:44, ಓಬಳಾಪುರಂ→ ಮುಂಜಾನೆ 05:09, (ಬಳ್ಳಾರಿ ಬೈಪಾಸ್ ಮೂಲಕ) #ಬಳ್ಳಾರಿಕಂಟೋನ್ಮೆಂಟ್ ಹಾಲ್ಟ್→ ಮುಂಜಾನೆ 06:06, ಕುಡತಿನಿ→ ಮುಂಜಾನೆ 06:09, ದರೋಜಿ→ ಮುಂಜಾನೆ 06:19, ತೋರಣಗಲ್ಲು ಜಂ.→ ಮುಂಜಾನೆ 06:33, ಗಾದಿಗನೂರು→ ಮುಂಜಾನೆ 06:45, ಹೊಸಪೇಟೆ ಜಂ. → ಬೆಳಿಗ್ಗೆ 07:35, ಮುನಿರಾಬಾದ್→ ಬೆಳಿಗ್ಗೆ 07:54, ಗಿಣಿಗೇರಾ ಜಂ.→ ಬೆಳಿಗ್ಗೆ 08:25, ಬೂದಗುಂಪ→ ಬೆಳಿಗ್ಗೆ 08:45, ಜಬ್ಬಲಗುಡ್ಡ→ ಬೆಳಿಗ್ಗೆ 08:59, ಚಿಕ್ಕಬೆಣಕಲ್ → ಬೆಳಿಗ್ಗೆ 09:14, ಗಂಗಾವತಿ→ ಬೆಳಿಗ್ಗೆ 09:33, ಶ್ರೀರಾಂನಗರ→ ಬೆಳಿಗ್ಗೆ 09:47, ಸಿದ್ದಾಪುರ→ ಬೆಳಿಗ್ಗೆ 09:55, ಕಾರಟಗಿ→ ಬೆಳಿಗ್ಗೆ 10:13, ಬೆಳಿಗ್ಗೆ 10:25→ಗೊರೆಬಾಳ,
ಸಿಂಧನೂರು ರೈಲು ನಿಲ್ದಾಣವನ್ನು ಮಾರನೇ ದಿನ ಬೆಳಿಗ್ಗೆ 11:25ಕ್ಕೆ ಬಂದು ಸೇರುತ್ತದೆ.
🔹ಕೋಚ್ ವಿವರ:- 06 ಜನರಲ್ ಕೋಚ್, 01 ಎಸಿ ಕೋಚ್, 04 ಸ್ಲಿಪೀರ್ ಕೋಚ್, 02 ಸಿಟ್ಟಿಂಗ್ ಕಮ್ ಲಗೇಜ್ ಕೋಚ್ ಒಟ್ಟು 13 ಕೋಚ್ ಗಳನ್ನು ಹೊಂದಿದೆ.
#ಸೂಚನೆ:- ತಿಳಿಸಿರುವ ಮಾಹಿತಿ ಬಹುಶಃ ಬದಲಾಗಬಹುದು, ನನ್ನ ಮಾಹಿತಿಯು 100% ಸರಿಯಾಗಿದೆ ಎಂದು ನಾನು ಹೇಳುವುದಿಲ್ಲ.
#𝗡𝗼𝘁𝗲:- 𝗪𝗶𝘁𝗵𝗼𝘂𝘁 𝗠𝘆 𝗣𝗲𝗿𝗺𝗶𝘀𝘀𝗶𝗼𝗻 𝗗𝗼𝗻'𝘁 𝗨𝘀𝗲 𝗣𝗶𝗰𝘀 & 𝗜𝗻𝗳𝗼𝗿𝗺𝗮𝘁𝗶𝗼𝗻 , 𝗥𝗲𝗽𝗼𝘀𝘁/𝗨𝗽𝗹𝗼𝗮𝗱 𝗼𝗻 𝘆𝗼𝘂𝗿 𝗽𝗮𝗴𝗲𝘀/𝗦𝗶𝘁𝗲. 𝐘𝐨𝐮 𝐜𝐚𝐧 𝐒𝐡𝐚𝐫𝐞 𝐏𝐨𝐬𝐭 𝐎𝐧𝐥𝐲.
𝗣𝗵𝗼𝘁𝗼 𝗖𝗿𝗲𝗱𝗶𝘁:- Rohith