19/06/2025
ಚಿಕ್ಕೋಡಿ ಪತ್ರಕರ್ತರಿಗೆ ಜಾಕೇಟ್ ವಿತರಣಾ ಕಾರ್ಯಕ್ರಮ.
ಬೆಳಗಾವಿ ಜಿಲ್ಲಾ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ ಅಸೋಸಿಯೇಷನ್ ಚಿಕ್ಕೋಡಿ ಜಿಲ್ಲಾ ಘಟಕ ಹಾಗೂ ಅಲ್ಲಮಪ್ರಭು ಅನ್ನದಾನ ಸಮಿತಿ ಚಿಕ್ಕೋಡಿ ವತಿಯಿಂದ ಇಂದು ಪ್ರವಾಸಿ ಮಂದಿರದಲ್ಲಿ ಚಿಕ್ಕೋಡಿ ಪತ್ರಕರ್ತರಿಗೆ ಜಾಕೇಟ್ ವಿತರಣಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಚಿಕ್ಕೋಡಿ ಉಪ ವಿಭಾಗಾಧಿಕಾರಿ ಎಸ್ ಎಸ್ ಸಂಪಗಾವಿ ಮಾತನಾಡಿ ಪ್ರತಿಯೊಬ್ಬರ ಕಷ್ಟಸುಖಗಳಲ್ಲಿ ಭಾಗಿಯಾಗುವ ಪತ್ರಕರ್ತರ ಕಷ್ಟಸುಖಗಳನ್ನು ಯಾರು ಕೇಳುವವರಿಲ್ಲ. ಸದ್ಯ ಮಾನ್ಸೂನ್ ಇರುವುದರಿಂದ ಮಳೆ ಗಾಳಿ ಎನ್ನದೇ ಪತ್ರಕರ್ತರು ಅಡ್ಡಾಡುತ್ತಾರೆ. ಪತ್ರಕರ್ತರ ಕಷ್ಟವನ್ನು ಗಮನಿಸಿದ ಅಲ್ಲಮಪ್ರಭು ಅನ್ನದಾನ ಸಮಿತಿಯಿಂದ ಪತ್ರಕರ್ತರಿಗೆ ಜಾಕೇಟ್ ವಿತರಣೆ ಮಾಡುತ್ತಿರುವುದು ಸಂತಸವಾಗಿದೆ ಎಂದರು.
ಬೆಳಗಾವಿ ಜಿಲ್ಲಾ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ ಅಸೋಸಿಯೇಷನ್ ಚಿಕ್ಕೋಡಿ ಜಿಲ್ಲಾ ಘಟಕದ ಅಧ್ಯಕ್ಷರಾದ ಸಿದ್ದೇಶ ಪುಟಾಣಿ ಮಾತನಾಡಿ, ಪತ್ರಕರ್ತರು ಸಮಾಜದಲ್ಲಿನ ಅಂಕು ಡೊಂಕುಗಳನ್ನು ಸರಿಪಡಿಸ್ತಾರೆ. ಆದರೆ ಪತ್ರಕರ್ತರ ಕಷ್ಟ ಸುಖಗಳನ್ನು ಕೇಳುವರಿಲ್ಲದೇ ಪತ್ರಕರ್ತರು ಕೌಟುಂಬಿಕವಾಗಿ ಅನೇಕ ಕಷ್ಟಗಳನ್ನು ಎದುರಿಸುತ್ತಿದ್ದಾರೆ. ಹೀಗಾಗಿಯೇ ಜರ್ನಲಿಸ್ಟ್ ಅಸೋಸಿಯೇಷನ್ ಅಸ್ತಿತ್ವಕ್ಕೆ ತರಬೇಕಾಯಿತು. ಇದರಿಂದಾಗಿ ಚಿಕ್ಕೋಡಿ ಜಿಲ್ಲೆಯ ಬಡ ಪತ್ರಕರ್ತರಿಗೆ ಬಹಳಷ್ಟು ಅನುಕೂಲವಾಗಲಿದೆ.
ಅಸೋಸಿಯೇಷನ್ ಹಾಗೂ ಅಲ್ಲಮಪ್ರಭು ಅನ್ನದಾನ ಸಮಿತಿಯಿಂದ ಜಾಕೆಟ್ ವಿತರಿಸುತ್ತಿರುವುದು ಆತ್ಮತೃಪ್ತಿ ತಂದಿದೆ ಎಂದರು. ಕಾರ್ಯಕ್ರಮದಲ್ಲಿ ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ, ಶಿವಮೂರ್ತಿ ಪಡಲಾಳೆ, ರಣಜಿತ್ ಶಿಂದೆ, ಮಹೇಂದ್ರಕುಮಾರ್ ಷಾ, ಡಾ. ಎಂ.ಜಿ ಮುಸಾಳೆ, ಗ್ಯಾರಂಟಿ ನ್ಯೂಸ್ ಬ್ಯೂರೋ ಹೆಡ್ ಅಜಿತ್ ಸಣ್ಣಕ್ಕಿ, ಪಬ್ಲಿಕ್ ನೆಕ್ಸ್ ವರದಿಗಾರ ಲಕ್ಷ್ಮಣ ಕೋಳಿ, ಜೀ ನ್ಯೂಸ್ ವರದಿಗಾರ ಶಹಬಾಜ್ ಮಕಾನದಾರ, ಸಚಿನ ಜಮಖಂಡಿ, ರಘು ಲಿಂಬಿಗಿಡದ, ಉತ್ತಮ ಅರಭಾವಿ, ಸುನೀಲ್ ಬಡಿಗೇರ್, ದುರದುಂಡಯ್ಯ ಭಾವಿಮನಿ ಸೇರಿದಂತೆ ವಿದ್ಯುನ್ಮಾನ ಮಾಧ್ಯಮ ಹಾಗೂ ಮುದ್ರಣ ಮಾಧ್ಯಮ ವರದಿಗಾರರು ಉಪಸ್ಥಿತಿರಿದ್ದರು.
ಇನ್ನು ನ್ಯೂಸ್ ಪಸ್ಟ್ ವರದಿಗಾರ ಸಂಜಯ್ ಕೌಲಗಿ ನಿರೂಪಿಸಿದರು. ರಿಪಬ್ಲಿಕ್ ಕನ್ನಡ ವರದಿಗಾರ ಸಂಜು ಅರಭಾವಿ ವಂದಿಸಿದರು...