18/12/2023
Shiva Mecchida Kannappa | jukebox
ಆ....ಆ ಆ …..ಆ….ಆಆಆ……ಆಆಆ….
ಎಲ್ಲಾರು ಮಾಡುವುದು ಹೊಟ್ಟೆಗಾಗಿ
ಗೇಣು ಬಟ್ಟೆಗಾಗಿ, ಗೇಣು ಹೊಟ್ಟೆಗಾಗಿ
ಎಲ್ಲಾರು ಮಾಡುವುದು ಹೊಟ್ಟೆಗಾಗಿ
ಗೇಣು ಬಟ್ಟೆಗಾಗಿ, ಗೇಣು ಹೊಟ್ಟೆಗಾಗಿ
ನೆಲ್ಲುಗಳು ಕುಟ್ಟಿಕೊಂಡು
ಬಿದುರುಗಳ ಹೊತ್ತುಕೊಂಡು
ಕೂಲಿಗಳ ಮಾಡುವುದು ಹೊಟ್ಟೆಗಾಗಿ
ನೆಲ್ಲುಗಳು ಕುಟ್ಟಿಕೊಂಡು
ಬಿದುರುಗಳ ಹೊತ್ತುಕೊಂಡು
ಕೂಲಿಗಳ ಮಾಡುವುದು ಹೊಟ್ಟೆಗಾಗಿ
ನಾಲ್ಕು ವೇದ ಪುರಾಣ ಪಂಚಾಗ ಹೇಳಿಕೊಂಡು
ಕಾಲ ಕಳೆಯುವುದೆಲ್ಲ ಹೊಟ್ಟೆಗಾಗಿ
|| ಎಲ್ಲಾರು ಮಾಡುವುದು ಹೊಟ್ಟೆಗಾಗಿ
ಗೇಣು ಬಟ್ಟೆಗಾಗಿ, ಗೇಣು ಹೊಟ್ಟೆಗಾಗಿ…||
ಬಡಿದು ಬಡಿದು ಕಬ್ಬಿಣವ ಕಾಸಿ ತುಪಾಕಿ ಮಾಡಿ
ಹೊಡೆವ ಗುಂಡು ಮಾಡುವುದು ಹೊಟ್ಟೆಗಾಗಿ
ಬಡಿದು ಬಡಿದು ಕಬ್ಬಿಣವ ಕಾಸಿ ತುಪಾಕಿ ಮಾಡಿ
ಹೊಡೆವ ಗುಂಡು ಮಾಡುವುದು ಹೊಟ್ಟೆಗಾಗಿ
ಚಂಡ ಭಂಡಾರೆಲ್ಲಾ ಮುಂದೆ ಕತ್ತಿ ಹರಿಗೆಯ ಪಿಡಿದು
ಖಂಡ ತುಂಡ ಮಾಡುವುದು ಹೊಟ್ಟೆಗಾಗಿ
|| ಎಲ್ಲಾರು ಮಾಡುವುದು ಹೊಟ್ಟೆಗಾಗಿ
ಗೇಣು ಬಟ್ಟೆಗಾಗಿ, ಗೇಣು ಹೊಟ್ಟೆಗಾಗಿ…||
ದೊಡ್ಡ ದೊಡ್ಡ ಕುದುರೆ ಏರಿ ನೇಗೆ ಹೊತ್ತು
ರಾವುತನಾಗಿ ಹೊಡೆದಾಡಿ ಸಾಯುವುದು ಹೊಟ್ಟೆಗಾಗಿ
ದೊಡ್ಡ ದೊಡ್ಡ ಕುದುರೆ ಏರಿ ನೇಗೆ ಹೊತ್ತು
ರಾವುತನಾಗಿ ಹೊಡೆದಾಡಿ ಸಾಯುವುದು ಹೊಟ್ಟೆಗಾಗಿ
ಕುಂಟೆ ಕುರಿಗೆ ಇಂದ ಹೆಂಟೆ ಮಣ್ಣ ಹದ ಮಾಡಿ
ರಂಟೆ ಹೊಡೆದು ಬೆಳೆಸುವುದು ಹೊಟ್ಟೆಗಾಗಿ
|| ಎಲ್ಲಾರು ಮಾಡುವುದು ಹೊಟ್ಟೆಗಾಗಿ
ಗೇಣು ಬಟ್ಟೆಗಾಗಿ, ಗೇಣು ಹೊಟ್ಟೆಗಾಗಿ…||
ಕೆಟ್ಟ ತನದಿಂದ ಕಳ್ಳತನವನ್ನೆ ಮಾಡಿ
ಕತ್ತಿ ಹೊಡೆಸಿಕೊಳ್ಳುವುದು ಹೊಟ್ಟೆಗಾಗಿ
ಸನ್ಯಾಸಿ ಜಂಗಮ ಜೋಗಿ ಜಟ್ಟಿ ಮೂಂಡ
ಭೈರಾಗಿ ನಾನಾ ವೇಷ ಗೊಂಬುವುದು ಹೊಟ್ಟೆಗಾಗಿ
ಉನ್ನತ ಕಾಗಿನೆಲೆ ಆದಿ ಕೇಶವನ
ಉನ್ನತ ಕಾಗಿನೆಲೆ ಆದಿ ಕೇಶವನ
ಅನುದಿನ ನೆನೆವುದು ಭಕ್ತಿಗಾಗಿ ಪರ ಮುಕ್ತಿಗಾಗಿ
|| ನಾವೆಲ್ಲರೂ ಮಾಡುವುದು ಹೊಟ್ಟೆಗಾಗಿ
ಗೇಣು ಬಟ್ಟೆಗಾಗಿ, ಗೇಣು ಬಟ್ಟೆಗಾಗಿ
ಎಲ್ಲಾರು ಮಾಡುವುದು ಹೊಟ್ಟೆಗಾಗಿ
ಗೇಣು ಬಟ್ಟೆಗಾಗಿ, ಗೇಣು ಬಟ್ಟೆಗಾಗಿ…||
"Kannilla Kiviyilla
ಶಿವಪ್ಪಾ... ಶಿವಪ್ಪಾ ತಂದೆ...
ನನ್ನಪ್ಪಾ ಇಂದೇ ನಿನ್ನನ್ನು ತಿಳಿದೇ..
ನೀನಿಲ್ಲಾ ನೀನಿಲ್ಲಾ ಎಂದು ನಾನು ಹ ಹ್ಹ
ಬದುಕೆಲ್ಲಾ ಕತ್ತಲಲೇ ಅಲೆದೆನಲ್ಲಾ
ಬದುಕೆಲ್ಲಾ ಕತ್ತಲಲೇ ಅಲೆದೆನಲ್ಲಾ
(ಓಂ... ತತ್ತಪುರಷಾಯ ವಿಸ್ಮಯೇ
ಮಹಾ ದೇವಾಯ ಧೀಮಹೀ
ಸನ್ನೋ ಉಗ್ರ ಪ್ರಚೋದಯಾ..ತ
ಈಶಾನ ಸರ್ವ ವಿದ್ಯಾನ್
ಈಶ್ವರ ಸರ್ಪ ಭೂತಾನಾಮ್
ಭ್ರಹ್ಮಾಧೀಪತಿ ಭ್ರಹ್ಮ ನಾರಿಪತಿ
ಬ್ರಹ್ಮ ಶಿವೋಮೇ ಅಸ್ಥಿತೇ ಶಿವೋಮ್
ಸಧ್ಯೋಗ ಗಾತಿಂ ಪ್ರಾಧ್ಯಮ್ )
ಕಣ್ಣಿಲ್ಲಾ... ಕಿವಿಯಿಲ್ಲಾ..
ಕಲ್ಲಾದರು ಈ ಮೈಯೆಲ್ಲಾ
ಹೂವಂತೆ ಹಾಲಂತೆ"
Lyricist:
Kanakadasaru
Singers:
Dr Rajkumar
Director:
Vijay
Music Director:
T G Lingappa
Song List:
Dance Bit
Deva Mahadeva
Ellaru Maduvudu
Kannilla Kiviyilla
Kanninda Nee Baana Beesidaaga
Maayeya Thereyanu
Mella Mellane Bandane
Nee Dhani Na