01/11/2025
ಗೋಕಾಕ ನ್ಯಾಯವಾದಿಗಳ ಸಂಘದಿಂದ ಕನ್ನಡ ರಾಜ್ಯೋತ್ಸವ ಆಚರಣೆ
ಗೋಕಾಕ : ನಗರದ ನ್ಯಾಯಾಲಯ ಆವರಣದಲ್ಲಿ ಗೋಕಾಕ ನ್ಯಾಯವಾದಿಗಳ ಸಂಘದಿಂದ ಕಛೇರಿಯಲ್ಲಿ ತಾಯಿ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಿದರು.
ಈ ಸಮಯದಲ್ಲಿ ಸಂಘದ ಅಧ್ಯಕ್ಷರಾದ ಎಸ್ ಜಿ ಪಾಟೀಲ್ ಅವರು ಮಾತನಾಡಿ ನಾವು - ನೀವು ಎಲ್ಲರೂ ಸೇರಿ ಕನ್ನಡವನ್ನು ಬಳಸುವ, ಬೆಳೆಸುವ ಸಂಕಲ್ಪವನ್ನು ಈ ದಿನ ಸ್ವೀಕರಿಸೋಣ. ನೆಲದ ಭಾಷೆ ಮನದ ಭಾಷೆಯಾಗಲಿ, ಕನ್ನಡದ ಚಿಗುರು ಎಲ್ಲರೆದೆಯೊಳಗೆ ಮೊಳಕೆಯೊಡೆಯಲಿ ಎಂದರು.
ನಮ್ಮ ಗೋಕಾಕ ನ್ಯಾಯಾಲಯವು ಬ್ರಿಟಿಷ್ ಆಡಳಿತಕ್ಕಿಂತ ಹಾಗೂ ಕನ್ನಡ ಏಕಿಕರಣಕ್ಕಿಂತ ಮುಂಚಿನ ಕಟ್ಟಡವಾಗಿದೆ, ಇಂತಹ ಕಟ್ಟಡಗಳು ಇನಸ್ಕೋ ದಲ್ಲಿ ಸಹಿತ ಮಾನ್ಯತೆ ಪಡೆದಿದೆ ಅವುಗಳನ್ನು ಉಳಿಸಿ ಬೆಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಉಳಿದ ಪದಾದಿಕಾರಿಗಳು , ಹಿರಿಯ ನ್ಯಾಯವಾದಿಗಳು ಉಪಸ್ಥಿತರಿದ್ದರು.