CK News kannada

CK News kannada WEBSITE NEWS AND CHANNEL Gokak Taluka Top news channel
(2)

ಗೋಕಾಕ ನಗರದಲ್ಲಿ ಇಂಜಿನಿಯರಿಂಗ್ ಕಾಲೇಜ್ ಪ್ರಾರಂಭವಾಗಿದೆ
23/08/2025

ಗೋಕಾಕ ನಗರದಲ್ಲಿ ಇಂಜಿನಿಯರಿಂಗ್ ಕಾಲೇಜ್ ಪ್ರಾರಂಭವಾಗಿದೆ

22/08/2025

ಲಕ್ಷ್ಮಣ ಸವದಿ ಮೋಸಗಾರ, ನಾಟಕ ಮಾಡೋ ಕಲಾಕಾರ : ಶಾಸಕ ರಮೇಶ್ ಜಾರಕಿಹೊಳಿ ವಾಗ್ದಾಳಿ

22/08/2025

DCC BANK ಚುನಾವಣೆ; ಅಖಾಡಕ್ಕೆ ಮಹೇಶ್ ಕುಮಟ್ಟಳ್ಳಿ, ಶ್ರೀನಿವಾಸ ಪಾಟೀಲ್ ಕಣಕ್ಕಿಳಿಸಲು ಮುಂದಾದ್ರು ಸಾಹುಕಾರ ರಮೇಶ್ ಜಾರಕಿಹೊಳಿ

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ಯುವ ಪ್ರಧಾನ ಕಾರ್ಯದರ್ಶಿಗಳಾದ ರಾಹುಲ ಜಾರಕಿಹೊಳಿ ಅವರು ಗೋಕಾಕ ನಗರದ ಇತಿಹಾಸದಲ್ಲೇ ಪ್ರಥಮ ಬಾರಿಗೆ...
22/08/2025

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ಯುವ ಪ್ರಧಾನ ಕಾರ್ಯದರ್ಶಿಗಳಾದ ರಾಹುಲ ಜಾರಕಿಹೊಳಿ ಅವರು ಗೋಕಾಕ ನಗರದ ಇತಿಹಾಸದಲ್ಲೇ ಪ್ರಥಮ ಬಾರಿಗೆ, ಗೋಕಾಕ ಇಂಜಿನಿಯರ್ಸ್ ಅಸೋಸಿಯೇಷನ್‌ ಅವರ ವತಿಯಿಂದ ಶ್ರೀ ಮಹಾಲಕ್ಷ್ಮಿ ಭವನದಲ್ಲಿ ಆಯೋಜಿಸಲಾದ "ಬಿಲ್ಡ್ ಟೆಕ್ - 2025" ಕಟ್ಟಡ ನಿರ್ಮಾಣ ಸಾಮಗ್ರಿಗಳು, ಗೃಹ ಅಲಂಕಾರ ಮತ್ತು ಪೀಠೋಪಕರಣಗಳ ಬೃಹತ್ ವಸ್ತು ಪ್ರದರ್ಶನವನ್ನು‌ ಇಂದು ಉದ್ಘಾಟಿಸಿದರು.

ಕಟ್ಟಡ ನಿರ್ಮಾಣ ಕ್ಷೇತ್ರದ ನವೀನ ತಂತ್ರಜ್ಞಾನಗಳು, ಆಧುನಿಕ ವಸ್ತುಗಳು ಮತ್ತು ಉಪಕರಣಗಳನ್ನು ಒಟ್ಟುಗೂಡಿಸಿದ ಈ ಪ್ರದರ್ಶನದಲ್ಲಿ ವಿವಿಧ ಮಳಿಗೆಗಳಿಗೆ ಭೇಟಿ ನೀಡಿ, ಅಲ್ಲಿ ಪ್ರದರ್ಶಿಸಲಾದ ತಂತ್ರಜ್ಞಾನಗಳನ್ನು ಅವಲೋಕಿಸಿದೆ.

ಇಂತಹ ಪ್ರದರ್ಶನಗಳು ನಮ್ಮ ಇಂಜಿನಿಯರ್‌ಗಳು, ತಂತ್ರಜ್ಞರು ಹಾಗೂ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ತೊಡಗಿರುವ ಯುವ ಉದ್ಯಮಿಗಳಿಗೆ ಪ್ರೇರಣೆ ನೀಡುವುದರೊಂದಿಗೆ, ಗೋಕಾಕ ನಗರದ ಸಮಗ್ರ ಅಭಿವೃದ್ಧಿಗೆ ಹೊಸ ದಿಕ್ಕು ತೋರಿಸಲಿವೆ ಎಂದು ಆಯೋಜಕರಿಂದ ಸನ್ಮಾನ ಸ್ವೀಕರಿಸಿ, ಮಾತನಾಡಿದರು. ‌

ಈ ವೇಳೆ ಗೋಕಾಕಿನ ಶೂನ್ಯ ಸಂಪಾದನಾ ಮಠದ ಕಿರಿಯ ಸ್ವಾಮಿಗಳು ಶ್ರೀ ಬಸವ ಪ್ರಭು ಶ್ರೀಗಳು, ಅಸೋಸಿಯೇಷನ್ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.

22/08/2025
22/08/2025

ಗೋಕಾಕ ಲೋಳಸುರ ಸೇತುವೆ ಪರಿಶೀಲಿಸಿದ ಶಾಸಕ ರಮೇಶ್ ಜಾರಕಿಹೊಳಿ; ವಾಹನಗಳ ಸಂಚಾರ ಆರಂಭ

22/08/2025

ಗೋಕಾಕ ಲೋಳಸುರ ಸೇತುವೆ ಪರಿಶೀಲನೆ ನಂತರ ತಹಶೀಲ್ದಾರ್ ಮೋಹನ್ ಬಸ್ಮೆ ಅವರು ಹೇಳಿದ್ದೇನು?

22/08/2025

ಗೋಕಾಕ ಲೋಳಸುರ ಸೇತುವೆಯಲ್ಲಿ ತಗ್ಗಿದ ನೀರು | ಸೇತುವೆ ಪರಿಶೀಲನೆ ನಂತರ ಸಂಚಾರಕ್ಕೆ ಅವಕಾಶ ಸಾಧ್ಯತೆ

ದಿ. ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯ ಹಿನ್ನೆಲೆಯಲ್ಲಿ, ಇಂದು ಪಾಚ್ಛಾಪುರ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಕರಗುಪ್ಪಿ ಗ್ರಾಮ...
21/08/2025

ದಿ. ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯ ಹಿನ್ನೆಲೆಯಲ್ಲಿ, ಇಂದು ಪಾಚ್ಛಾಪುರ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಕರಗುಪ್ಪಿ ಗ್ರಾಮದ ಶ್ರೀ ಸೀಮಿದೇವಿ ದೇವಸ್ಥಾನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಭಾಗವಹಿಸಿ, ಮಾತನಾಡಿದರು

ಈ ಸಂದರ್ಭದಲ್ಲಿ ದಿ. ಅಪ್ಪಣಗೌಡ ಪಾಟೀಲ ಸಹಕಾರಿ ಪೆನಲ್‌ಗೆ ಅಮೂಲ್ಯ ಮತವನ್ನು ಕೋರುತ್ತಾ, ಬಸವಣ್ಣನವರ ತತ್ವಗಳನ್ನು ಪಾಲಿಸಿ, ಬುದ್ಧ–ಅಂಬೇಡ್ಕರ್ ಅವರ ಮಾರ್ಗದಲ್ಲಿ ಜನಸೇವೆಯಲ್ಲಿ ತೊಡಗಿರುವ ಶ್ರೀ ಸತೀಶ ಜಾರಕಿಹೊಳಿಯವರ ನೇತೃತ್ವದಲ್ಲಿ ನಮ್ಮ ಪೆನಲ್ ಸದಾ ರೈತರ ಹಾಗೂ ಜನರ ಪರವಾಗಿ ಕಾರ್ಯನಿರ್ವಹಿಸುತ್ತಿದೆ. 30 ವರ್ಷಗಳಿಂದ ಆಗದೇ ಉಳಿದಿದ್ದ ಹಲವು ಕೆಲಸಗಳನ್ನು ನಮ್ಮ ಸಹಕಾರಿಯ ನೂತನ ಆಡಳಿತ ಮಂಡಳಿ ಸ್ವತಂತ್ರವಾಗಿ ಕೇವಲ 60 ದಿನಗಳಲ್ಲಿ ನೆರವೇರಿಸಿದೆ. ನಿರಂತರ ಜ್ಯೋತಿ ಯೋಜನೆಯಡಿ ಬೆಳಕಿನ ಹಕ್ಕನ್ನು ಮನೆಮನೆಗೆ ತಲುಪಿಸುತ್ತಿದ್ದು, ಹೊಲಗಳಿಗೆ ಪ್ರತ್ಯೇಕ ಟಿಸಿಗಳನ್ನು ಅಳವಡಿಸುವ ಕಾರ್ಯವೂ ಶೀಘ್ರಗತಿಯಲ್ಲಿ ನಡೆಯುತ್ತಿದೆ. ಹೀಗಾಗಿ, ರೈತರ ಹಿತ, ಜನರ ಹಿತಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ದಿ. ಅಪ್ಪಣಗೌಡ ಪಾಟೀಲ ವಿದ್ಯುತ್ ಸಹಕಾರಿ ಪೆನೆಲ್‌ಗೆ ನೀವು ಬೆಂಬಲ ನೀಡಿ, ಭಾರಿ ಬಹುಮತದಿಂದ ಜಯಶೀಲರನ್ನಾಗಿ ಮಾಡುವಂತೆ ವಿನಂತಿಸಿದರು

ಈ ವೇಳೆ ಸಹಕಾರಿಯ ನಿರ್ದೇಶಕರಾದ ಶ್ರೀ ರವಿ ಹಿಡಕಲ್, ಮುಖಂಡರಾದ ಶ್ರೀ ಮಂಜುಗೌಡಾ ಪಾಟೀಲ, ಶ್ರೀ ಮಹಾಂತೇಶ ಮಗದುಮ್ಮ, ಶ್ರೀ ಶಂಕರ ಗುಡಸ್, ಶ್ರೀ ಸೋಮನಗೌಡ ಪಾಟೀಲ, ಕರಗುಪ್ಪಿ ಗ್ರಾ.ಪಂ. ಅಧ್ಯಕ್ಷ ಶ್ರೀ ಸೋಮಲಿಂಗ ಜೊರಲಿ, ಬಸ್ಸಾಪುರ ಗ್ರಾ.ಪಂ. ಅಧ್ಯಕ್ಷ ಶ್ರೀ ಭೀಮಶಿ ಕಳ್ಳಿಮನಿ, ಗ್ರಾ.ಪಂ. ಅಧ್ಯಕ್ಷ ಶ್ರೀ‌ ಲೋಹಿತ ಆಡಿಮನಿ, ಗ್ರಾ.ಪಂ. ಅಧ್ಯಕ್ಷ ಕಮಲಪ್ಪಾ ದಾರವಾಡಿ, ಮುಖಂಡರುಗಳಾದ ಶ್ರೀ ಯಲನಾಯಿಕ ಮಾವನೂರ, ಶ್ರೀ ದತ್ತಾತ್ರೆಯ ಹೆಜ್ಜೆಸರ್, ಶ್ರೀ ಮಂಜುನಾಥ ಪಾಟೀಲ, ಶ್ರೀ ನಿಂಗಪ್ಪ ಬಂಜಿರಾಮ್, ಶ್ರೀ ಗಂಗಪ್ಪಾ ಕಂಟಿಕರ್, ಶ್ರೀ ಭೀಮಶಿ ಲಂಕೆನ್ನವರ್, ಶ್ರೀ ಅಬ್ದುಲಗಣಿ ದರ್ಗಾ, ಶ್ರೀ ಬಸು ಕುರಬೇಟ್, ಶ್ರೀ ಬಾಳೇಶ ದಾಸನಟ್ಟಿ, ಶ್ರೀ ಈರಪ್ಪಾ ಬಂಜಿರಾಮ್, ಮಾರುತಿ ನಾಯ್ಕ ಸೇರಿ ಪ್ರಮುಖ ಮುಖಂಡರು ‌ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ಇಂದು ಕುಂದರ ನಾಡಿನ ವಿವಿಧ ಗ್ರಾಮಗಳ ಸರ್ಕಾರದ ವಿವಿಧ ಯೋಜನೆ ಗಳಲ್ಲಿ ನಿರ್ಮಿಸಲಾದ ಆಸ್ಪತ್ರೆ ಹಾಗೂ ಸಮುದಾಯ ಭವನ ಗಳನ್ನು ಜನಪ್ರಿಯ ಶಾಸಕರಾದ ರಮೇ...
21/08/2025

ಇಂದು ಕುಂದರ ನಾಡಿನ ವಿವಿಧ ಗ್ರಾಮಗಳ ಸರ್ಕಾರದ ವಿವಿಧ ಯೋಜನೆ ಗಳಲ್ಲಿ ನಿರ್ಮಿಸಲಾದ ಆಸ್ಪತ್ರೆ ಹಾಗೂ ಸಮುದಾಯ ಭವನ ಗಳನ್ನು ಜನಪ್ರಿಯ ಶಾಸಕರಾದ ರಮೇಶ್ ಜಾರಕಿಹೊಳಿ ಅವರು ಉದ್ಘಾಟಿಸಿದರು.

ಘಟಪ್ರಭಾ ನದಿಯಿಂದ ಜಲಾವೃತಗೊಂಡ  ಗೋಕಾಕ ಲೋಳಸುರ ಸೇತುವೆಗೆ ವಿಧಾನ ಪರಿಷತ್ ಸದಸ್ಯರಾದ ಲಖನ ಜಾರಕಿಹೊಳಿ ಅವರು ಭೇಟಿ ನೀಡಿ ಪರಿಶೀಲಿಸಿದರು
21/08/2025

ಘಟಪ್ರಭಾ ನದಿಯಿಂದ ಜಲಾವೃತಗೊಂಡ ಗೋಕಾಕ ಲೋಳಸುರ ಸೇತುವೆಗೆ ವಿಧಾನ ಪರಿಷತ್ ಸದಸ್ಯರಾದ ಲಖನ ಜಾರಕಿಹೊಳಿ ಅವರು ಭೇಟಿ ನೀಡಿ ಪರಿಶೀಲಿಸಿದರು

21/08/2025

ಹಿಡಕಲ್ ಜಲಾಶಯ

Address

CK NEWS KANNADA OFFICE
Gokak

Alerts

Be the first to know and let us send you an email when CK News kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to CK News kannada:

Share

Category