
02/06/2025
ಕ್ವೀಕ್ ಆಕ್ಷನ್…ಸಂತಿಬಸ್ತವಾಡಕ್ಕೆ ಸಿಐಡಿ ತಂಡ…
ಧರ್ಮಗ್ರಂಥ ಸುಟ್ಟ ಪ್ರಕರಣದ ತನಿಖೆ ಆರಂಭ
ಬೆಳಗಾವಿ ತಾಲೂಕಿನ ಸಂತಿಬಸ್ತವಾಡ ಗ್ರಾಮದಲ್ಲಿ ಧರ್ಮಗ್ರಂಥ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳ ತಂಡದಿಂದ ಆರೋಪಿಗಳ ಪತ್ತೆಗೆ ತನಿಖೆ ಪ್ರಾರಂಭವಾಗಿದೆ.
ಬೆಳಗಾವಿ ತಾಲೂಕಿನ ಸಂತಿಬಸ್ತವಾಡ ಗ್ರಾಮದಲ್ಲಿ ಧರ್ಮಗ್ರಂಥ ಸುಟ್ಟ ಪ್ರಕರಣ ಪೊಲೀಸರಿಗೆ ತಲೆ ದಂಡವಾಗಿ ಪರಿಣಮಿಸಿದೆ. ನಿನ್ನೆಯಷ್ಟೇ ಕಮಿಷ್ನರ್ ಭೂಷಣ್ ಬೋರಸೆ ಅವರು ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ ಎಂದು ಮಾಧ್ಯಮಗೋಷ್ಟಿ ನಡೆಸ ಮಾಹಿತಿಯನ್ನು ನೀಡಿದ್ದರು. ಇಂದು ಡಿಐಸಿ ಡಿವೈಎಸ್ಪಿ ಸುಲೇಮಾನ್ ತಾಶೀಲ್ದಾರ ಅವರ ನೇತೃತ್ವದಲ್ಲಿ ತನಿಖೆ ಆರಂಭವಾಗಿದೆ. ಪ್ರಕರಣದ ಗಂಭೀರತೆ ಅರಿತು ರಾಜ್ಯ ಸರ್ಕಾರ ಪ್ರಕರಣವನ್ನು ಸಿಐಡಿಗೆ ವಹಿಸಿದೆ. ಬೆಳಗಾವಿ ಗ್ರಾಮೀಣ ಠಾಣಾ ಪೊಲೀಸರಿಂದ ತನಿಖಾ ವರದಿ ಮಾಹಿತಿ ಕಲೆ ಹಾಕಲಾಗುತ್ತಿದೆ.
ಧರ್ಮಗ್ರಂಥ ಕಳ್ಳತನ ಮಾಡಿಕೊಂಡು ಹೋಗಿರುವ ಮಸೀದಿ ಸ್ಥಳ. ಸುಟ್ಟಿರುವ ಘಟನಾ ಸ್ಥಳಗಳಲ್ಲಿ ಸಿಐಡಿ ಅಧಿಕಾರಿಗಳು ಪ್ರಾಥಮಿಕ ತನಿಖೆ ಆರಂಭಿಸಿದ್ದಾರೆ. ಸಿಐಡಿ ಅಧಿಕಾರಿಗಳ ತಂಡಕ್ಕೆ ಬೆಳಗಾವಿ ಪೊಲೀಸರು ಸಾಥ್ ನೀಡಿದ್ದು, ನಾಳೆಯೂ ಸಿಐಡಿ ಅಧಿಕಾರಿಗಳ ತಂಡದಿಂದ ಪ್ರಕರಣದ ತನಿಖೆ ಮುಂದುವರೆಯಲಿದೆ.