Varun Kanjarpane - RJ Varun

  • Home
  • Varun Kanjarpane - RJ Varun

Varun Kanjarpane - RJ Varun Enthusiastic Individual
Nationalist
Indian first
Kannadiga
Tuluva as well

04/01/2026

🌊🌅 🌊☀️

23/04/2025

ಪಾಕಿಸ್ತಾನಕ್ಕೆ ಭಾರತ ಕೊಟ್ಟಿದೆ ಅತಿ ದೊಡ್ಡ ರಾಜತಾಂತ್ರಿಕ ಹೊಡೆತ. ಮಿಲಿಟರಿ ಆಕ್ಷನ್ ಸದ್ಯದಲ್ಲೇ?!

ಪಾಕಿಸ್ತಾನದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತ ಸರ್ಕಾರದಿಂದ ದೊಡ್ಡ ನಿರ್ಧಾರ.
1.ಸಿಂಧೂ ಜಲ ಒಪ್ಪಂದ ರದ್ದು.
2.ಅಟ್ಟಾರಿ ಗಡಿಯನ್ನು ತಕ್ಷಣವೇ ಬಂದ್
3.ಪಾಕಿಸ್ತಾನಿ ಪ್ರಜೆಗೆ ವೀಸಾ ರದ್ದು.
4.ಒಂದು ವಾರದ ಅವಧಿಯಲ್ಲಿ ಪಾಕ್ ಹೈ ಕಮಿಷನ್‌ ಅರ್ಧದಷ್ಟು ಉದ್ಯೋಗಿಗಳ ವಾಪಸಾತಿಗೆ ಭಾರತ ಆದೇಶ.

ಈ ಸಿಂಧೂ ನದಿ ಒಪ್ಪಂದದ ರದ್ದು ಮಾಡಿದ್ರೆ, ಪಾಕಿಸ್ತಾನಕ್ಕೆ 6 ನದಿಗಳ ಮೂಲಕ ಸಿಗ್ತಾ ಇದ್ದ 80% ನೀರು ಹಂಚಿಕೆ ಕೊನೆಗೊಳ್ಳಲಿದೆ. ಇದು ಪಾಕಿಸ್ತಾನದ ಆರ್ಥಿಕತೆಗೆ ಬಿದ್ದ ದೊಡ್ಡ ಹೊಡೆತ. ಹೇಗೆ ಅಂದ್ರೆ, ಕುಡಿಯುವ ನೀರು, ಕೃಷಿ, ಕೈಗಾರಿಕೆ ಸೇರಿದಂತೆ ಹತ್ತು ಹಲವಾರು ಕಡೆ ನೀರಿಗೆ ತತ್ವಾರ ಎದುರಾಗಲಿದೆ.

"ಸಿಂಧೂ ಜಲ ಒಪ್ಪಂದವನ್ನು ಅಮಾನತು ಅಥವಾ ರದ್ದುಗೊಳಿಸುವುದನ್ನು ನಮ್ಮ ಮೇಲಿನ ಯುದ್ಧ ಎಂದೇ ಪರಿಗಣಿಸುತ್ತೇವೆ ಎಂದು ಪಾಕಿಸ್ತಾನ ಈ ಹಿಂದೆ ಹೇಳಿತ್ತು."

ಹಾಗಾದ್ರೆ ನಮ್ಮ ಕೇಂದ್ರ ಸರ್ಕಾರ ಪಾಕಿಗಳ ಬಳಿ ಪರೋಕ್ಷವಾಗಿ ಮತ್ತು ಸಂಕ್ಷಿಪ್ತವಾಗಿ ನಿಮ್ಮ ಸೈನ್ಯ ಕಳುಹಿಸಿ.. ನಾವು ಅದಕ್ಕೂ ರೆಡಿ ಅಂತ ಹೇಳ್ತಾ ಇದ್ಯಾ ?
ಅದಕ್ಕೆ ಈ ಹಿಂದೆ ಹೇಳಿದ್ದು, ಮಿಲಿಟರಿ ಆಕ್ಷನ್ ಸದ್ಯದಲ್ಲೇ?! ಎಂದು.

ಕಾದು ನೋಡೋಣ.
ಏನೇ ಇರಲಿ... ದೇಶವೇ ಮೊದಲು !
- ವರುಣ್ ಕಂಜರ್ಪಣೆ

 #ಭಯೋತ್ಪಾದಕರ  #ನಿರ್ಮೂಲನೆ ಅಗತ್ಯ! ಆದ್ರೆ ಅದಕ್ಕೂ ಮೊದಲು...ಭಯೋತ್ಪಾದಕರ ಮತ್ತು ದೇಶದ ಶತ್ರುಗಳ  #ಪ್ರತ್ಯಕ್ಷ ಮತ್ತು  #ಪರೋಕ್ಷ ಮೃದು ನಿಲುವ...
22/04/2025

#ಭಯೋತ್ಪಾದಕರ #ನಿರ್ಮೂಲನೆ ಅಗತ್ಯ! ಆದ್ರೆ ಅದಕ್ಕೂ ಮೊದಲು...

ಭಯೋತ್ಪಾದಕರ ಮತ್ತು ದೇಶದ ಶತ್ರುಗಳ #ಪ್ರತ್ಯಕ್ಷ ಮತ್ತು #ಪರೋಕ್ಷ ಮೃದು ನಿಲುವು ಹೊಂದಿರುವ ಮಂದಿಯೇ ನಿಜವಾದ #ದೇಶದ್ರೋಹಿಗಳು. ಉಗ್ರಗಾಮಿಗೂ #ಮಾನವಹಕ್ಕು, #ಕಾನೂನುಹಕ್ಕು ಅಂತೆಲ್ಲ ಉಸಿರೆತ್ತುವ ದೇಶದೊಳಗಿನ #ವೈಟ್ #ಕಾಲರ್ ಉಗ್ರರ ಬಗ್ಗೆ ನಾವು ನೀವು ಎಚ್ಚೆತ್ತುಕೊಳ್ಳಬೇಕು.
ಅವರ ಜೊತೆ ಯಾವುದೇ #ಒಡನಾಟ/ #ವ್ಯವಹಾರ ಸಹ #ದೇಶದ್ರೋಹಿ ಕೆಲಸ ಅಲ್ಲದೆ ಬೇರೇನೂ ಅಲ್ಲ.

ಇನ್ನು #ಧರ್ಮದ ಕಾರಣಕ್ಕೆ, ಕೆಲವೊಮ್ಮೆ ಜಾತಿ ಕಾರಣಕ್ಕೆ, ರಾಜಕೀಯ ಕಾರಣಕ್ಕೆ ಆಗಿರಲಿ... ಉಗ್ರರ ಮತ್ತು ಅವರ ಪರ ನಿಲುವು ಹೊಂದಿರುವ ಯಾರೇ ಆಗಿರಲಿ ಅವರು ದೇಶಕ್ಕಲ್ಲ, ನಮಗೆಲ್ಲರಿಗೂ ಶತ್ರುಗಳ ಅನ್ನೋದು ಮನದಟ್ಟು ಆಗದ ಹೊರತು, ಭಾರತದಲ್ಲಿ #ಉಗ್ರಗಾಮಿಗಳ ದಾಳಿ ನಿಲ್ಲಲ್ಲ.

#ಇಂದು ಕಾಶ್ಮೀರದಲ್ಲಿ ಅಮಾಯಕರ ನರಮೇಧ ಆಗಿದೆ, #ನಾಳೆ ನಮ್ಮ ನಿಮ್ಮ ಮನೆಯೊಳಗೂ ಇಂತಹುದೇ ಘಟನೆ ಆಗುತ್ತೆ.
#ಎಚ್ಚರ..

ಈ ಕ್ಷಣದ #ಅತೀ ₹ಅಗತ್ಯ ಏನಂದ್ರೆ, #ನಮ್ಮೊಳಗಿನ #ಶತ್ರುಗಳ #ನಿರ್ಮೂಲನೆ.
#ಉಗ್ರರ ಉಸಿರು ನಿಲ್ಲಿಸಿ.. ಅದಕ್ಕೂ ಮುನ್ನ ಅವರ ಪರ ನಿಂತವರ #ಹುಟ್ಟಡಗಿಸಿ.

"Eradicate terrorism! But first, we need to put an end to the terrorist sympathizers in India."

ದರ್ಶನ್ ಅಭಿಮಾನಿಗಳ ವರ್ತನೆ ಮಾತ್ರ ಅತಿರೇಕದ್ದೇ ?! ಇಂದು ಕೊಲೆ ಆರೋಪದಲ್ಲಿ ಸೋಕಾಲ್ಡ್ ಚಾಲೆಂಜಿಂಗ್ ಸ್ಟಾರ್ ಜೈಲು ಸೇರಿದ್ದಾನೆ. ಅವನ ಅಭಿಮಾನಿಗ...
14/06/2024

ದರ್ಶನ್ ಅಭಿಮಾನಿಗಳ ವರ್ತನೆ ಮಾತ್ರ ಅತಿರೇಕದ್ದೇ ?!

ಇಂದು ಕೊಲೆ ಆರೋಪದಲ್ಲಿ ಸೋಕಾಲ್ಡ್ ಚಾಲೆಂಜಿಂಗ್ ಸ್ಟಾರ್ ಜೈಲು ಸೇರಿದ್ದಾನೆ. ಅವನ ಅಭಿಮಾನಿಗಳು ಅಣ್ಣ ಹಾಗೆ ಮಾಡಿಲ್ಲ, ಮಾಡೋಕೆ ಸಾಧ್ಯ ಇಲ್ಲ ಅಂತ ಬಾಯಿ ಬಡಿದುಕೊಳ್ತಾ ಇದ್ದಾರೆ. ಇನ್ನು ಕೆಲವರು ಡಿ ಬಾಸ್ ಇದನ್ನು ಮಾಡಿದ್ದರೂ ಇದು ಸರಿಯೇ..”ಅತ್ತಿಗೆಗೆ ಕೆಟ್ಟದಾಗಿ ಮಾತಾಡಿದ್ದಕ್ಕೆ ಅಣ್ಣ ಚೆನ್ನಾಗೇ ಕೊಟ್ರು’ ಅಂತ ಅಂಧ ಅಭಿಮಾನ ಮೆರೆದಿದ್ದು ಇದೆ. ಇದನ್ನು ನಾಗರೀಕ ಸಮಾಜ ಒಪ್ಪಿಲ್ಲ, ಒಪ್ಪಲ್ಲ ಮತ್ತು ಒಪ್ಪಿಕೊಳ್ಳಬಾರದು.
ಹಾಗಿದ್ರೆ ವಿಚಾರ ಇಷ್ಟೇ ನಾ….ಅಲ್ಲ !
ಬರೀ ಡಿ ಗ್ಯಾಂಗ್ ಫ್ಯಾನ್ ಗಳೇ ಹೀಗಾ ?

ಇದೇ ಮಾತು ಇದೇ ಸೂತ್ರ ಕಳಂಕ ಹೊತ್ತ ಸ್ವಾಮೀಜಿಗಳು, ರಾಜಕಾರಣಿಗಳು ಮತ್ತು ಎಲ್ಲಾ ಧರ್ಮಗುರುಗಳು, ಇನ್ನು ಹಲವು ಗ್ಯಾಂಗ್ ಲೀಡರ್ ಗಳ ವಿಚಾರದಲ್ಲೂ ಯಾಕೆ ಫಾಲೋ ಆಗಲ್ಲ.
ಕೊಲೆ ಅತ್ಯಾಚಾರ ಆರೋಪ ಹೊತ್ತಿದ್ದ ಅಸಾರಾಮ್ ಬಾಪು ಅನ್ನೋ ಸ್ವಾಮೀಜಿ ಹಿಂಬಾಲಕರು ಸಹ ಹಿಂಸಾಚಾರಕ್ಕೇ ಇಳಿದಿರಲಿಲ್ವೇ?

ನಮ್ಮದೇ ಕರ್ನಾಟಕದ ಕಥೆಗೆ ಬರೋಣ ಅತ್ಯಾಚಾರ ಆರೋಪ ಹೊತ್ತಿರುವ ಮುರುಘಾ ಮಠದ ಸ್ವಾಮೀಜಿ, ಹೊಸನಗರದ ರಾಘವೇಶ್ವರ ಸ್ವಾಮಿ, ಕೈಲಾಸ ದೇಶ ಸೇರಿರುವ ಬಿಡದಿ ನಿತ್ಯಾನಂದ ಸ್ವಾಮಿ ಹಿಂಬಾಲಕರು ಸಹ ಹೀಗೆ ಅಲ್ವೇ ? ಇನ್ನೂ ಅವರಿಂದ ಆಶೀರ್ವಚನ, ಮಂತ್ರಾಕ್ಷತೆ ಪಡೆದು ಕಾಣಿಕೆ ಕೊಡುವ ಮಂದಿಗೂ ಡಿ ಬಾಸ್ ಗೆ ಜೈಕಾರ ಹಾಕುವ ಅಭಿಮಾನಿಗಳಿಗೂ ಏನು ವ್ಯತ್ಯಾಸ ?

ಕೋಟಿ ಕೋಟಿ ಭ್ರಷ್ಟಾಚಾರ ಆರೋಪ ಹೊತ್ತಿರುವ, ಹಲವು ಕೇಸಲ್ಲಿ ಜಾಮೀನು ಪಡೆದು ಆಚೆ ಇರುವ ರಾಜಕಾರಣಿಗಳಿಗೆ ಜೈಕಾರ ಹಾಕಿ ಮತ್ತೆ ಮತ್ತೆ ವೋಟ್ ಕೊಟ್ಟು ಆರಿಸುವ ಮತದಾರರಿಗೂ, ದರ್ಶನ್ ಫ್ಯಾನ್ಸ್ ಗೂ ಏನು ವ್ಯತ್ಯಾಸ ?

ಇನ್ಯಾವುದೋ ಕೊಲೆ ಆರೋಪಿಗೆ, ರೇಪ್ ಆರೋಪಿಗೆ, ಜನರ ದುಡ್ಡು ಕೊಳ್ಳೆ ಹೊಡೆದವರಿಗೆ ರಕ್ಷಣೆಗೆ ಪ್ರಯತ್ನಿಸುವ ಧಾರ್ಮಿಕ ನಾಯಕ, ರಾಜಕಾರಣಿಗಳ ಹಿಂಬಾಲಕರೂ ಸಹ ಇಷ್ಟೇ ಅಂಧ ಭಕ್ತರು !

“ಆತ ಮಾಡಿದ್ರೆ ತಪ್ಪು, ನಮ್ಮವ ಮಾಡಿದ್ರೆ ತಪ್ಪಲ್ಲ !” ಅನ್ನೋ ಮನಸ್ಥಿತಿಗೆ ಮದ್ದು ಕಂಡುಕೊಳ್ಳದ ವಿನಹ ಇದು ಸಂಭವಾಮಿ ಯುಗೇ ಯುಗೇ !

-ವರುಣ್ ಕಂಜರ್ಪಣೆ

Kanjarpane Kitchen is back with Chinese Deepavali specials 😋
14/11/2023

Kanjarpane Kitchen is back with Chinese Deepavali specials 😋

Hello Hampi ✨
14/10/2023

Hello Hampi ✨

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಭಕ್ತರಿಗಾಗಿ ದೇವಳದ ಪ್ರಕಟಣೆ ಇಲ್ಲಿದೆ. ಎಲ್ಲಾ ಭಕ್ತರ ತಲುಪಲಿ ಎಂಬ ಕಾರಣಕ್ಕಾಗಿ ಹಂಚಿಕೊಂಡಿದ್ದೇನೆ.👇ನಮಸ...
27/09/2023

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಭಕ್ತರಿಗಾಗಿ ದೇವಳದ ಪ್ರಕಟಣೆ ಇಲ್ಲಿದೆ.
ಎಲ್ಲಾ ಭಕ್ತರ ತಲುಪಲಿ ಎಂಬ ಕಾರಣಕ್ಕಾಗಿ ಹಂಚಿಕೊಂಡಿದ್ದೇನೆ.
👇
ನಮಸ್ತೆ, ಕ್ಷೇತ್ರದ ಎಲ್ಲಾ ಭಕ್ತಾದಿಗಳೇ ಕಳೆದ ಅನೇಕ ದಿನಗಳಿಂದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ದ ಸೇವೆಯ ವಿಚಾರವಾಗಿ ಜಾಲತಾಣ,ವೆಬ್ ನ್ಯೂಸ್ ನಲ್ಲಿ ಸುದ್ದಿಗಳು ಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಕೋಟ್ಯಾಂತರ ಭಕ್ತರ ಶ್ರದ್ಧೆ, ಭಾವನೆ ದೃಷ್ಟಿಯಿಂದ ಸ್ಪಷ್ಟನೆ ನೀಡುತ್ತಿದ್ದೇವೆ.
ದೇವಾಲಯಕ್ಕೆ ಸಂಭಂದಪಟ್ಟ ಯಾವುದೇ ಮಠ ಮಾನ್ಯತೆಗಳಿರುವುದಿಲ್ಲ ಇದು ಸಂಪೂರ್ಣವಾಗಿ ಮುಜರಾಯಿ ಆಡಳಿತಕೊಳಪಟ್ಟ ದೇವಾಲಯ. ದೇವಾಲಯಕ್ಕೆ ಸಂಭಂದಪಟ್ಟ ಹಿಂದಿನಿಂದಲೂ ಪರಂಪರಾಗತವಾಗಿ ನಡೆಸುವ ಪೂಜೆಗಳು ಕೆಲವು ಸಮಯದಿಂದ ಖಾಸಗಿ ಸ್ಥಳಗಳಲ್ಲಿ ನಡೆಯುತ್ತಿದ್ದು ಇದರ ಬಗ್ಗೆ ಯಾರು ಮೋಸ ಹೋಗಬಾರದೆಂದು ದೇವಾಲಯದ ಅಂಗಣದಲ್ಲಿ ಮತ್ತು ಅಲ್ಲಲ್ಲಿ ಬರುವ ಭಕ್ತಾದಿಗಳಿಗೆ ಕಾಣುವಂತೆ ಬೋರ್ಡ್ ಗಳನ್ನು ಅಳವಡಿಸಲಾಗಿದೆ ಮತ್ತು ದೇವಾಲಯದ ಪೂಜೆಗಳನ್ನು ಯಾವುದೇ ಖಾಸಗಿ ವೆಬ್ ಸೈಟ್ ಗಳಲ್ಲಿ ಅವಕಾಶಗಳಿಲ್ಲ ಸರಕಾರದ http://temples.karnataka.gov.in ನಲ್ಲಿ ಮಾತ್ರ ಸಾಧ್ಯವಿರುತ್ತದೆ ಇದಲ್ಲದೆ ದೇವಾಲಯಕ್ಕೆ ಬೇರೆ ಯಾವುದೇ ವೆಬ್ ಸೈಟ್ ಇರುವುದಿಲ್ಲ.

Kukke Shree Subrahmanya Temple
ನೀವೂ ಹಂಚಿಕೊಳ್ಳಿ.

ಭಾಷಣ ಅನ್ನೋದು ಕಲೆ!ಆದ್ರೆ ಕವರ್ ಭಾಷಣ ಕಳೆ!ಎಸ್… ಮಾತುಗಾರಿಕೆ ಒಂದು ವರ. ಎಲ್ಲರಿಗೂ ಬರಲ್ಲ. ಹಾಗಂತ ಆ ಕಲೆಯನ್ನು ಕಳೆಯಾಗಿಸಬಾರದು.. ದುಡ್ಡು ಕೊ...
13/09/2023

ಭಾಷಣ ಅನ್ನೋದು ಕಲೆ!
ಆದ್ರೆ ಕವರ್ ಭಾಷಣ ಕಳೆ!

ಎಸ್… ಮಾತುಗಾರಿಕೆ ಒಂದು ವರ. ಎಲ್ಲರಿಗೂ ಬರಲ್ಲ. ಹಾಗಂತ ಆ ಕಲೆಯನ್ನು ಕಳೆಯಾಗಿಸಬಾರದು.. ದುಡ್ಡು ಕೊಟ್ಟವರ ಪರ ಬರೆಯುವುದಕ್ಕೆ ಅಕ್ಷರ ಹಾದರ ಅಂತ ಹೇಳ್ತಾರೆ, ಹಾಗೇ ಬಾಡಿಗೆ ಭಾಷಣ ಅಂತ ಒಂದಿದೆ, ಬೇರೆ ಬೇರೆ ಕಡೆ ಕವರ್ ತುಂಬಾ ದುಡ್ಡು ತೆಗೆದುಕೊಂಡು ಪ್ರಖರ ಧ್ವನಿ ಎತ್ತುವ ಪ್ರಕ್ರಿಯೆ…
ಪಡೆದ ದುಡ್ಡಿಗೆ ಪುಂಖಾನುಪುಂಖವಾಗಿ ಪರ್ಫಾರ್ಮೆನ್ಸ್ ಕೊಟ್ಟು ಬರೋದು !
ಇದು ಕಲೆಯಲ್ಲ… ಸ್ವರ ಹಾದರ!

ಬೇಕಿದ್ರೆ ಗಮನಿಸಿ, ಇಂತಹ ಒಂದಷ್ಟು ಭಾಷಣಕಾರರಿಗೆ ತಮ್ಮೂರಲ್ಲಿ ಯಾರು ಕಿಮ್ಮತ್ತೆ ಕೊಡಲ್ಲ. ಬರೀ ಮಾತು ಗುರೂ ಒಳಗೆ ಎಲ್ಲಾ ಹುಳುಕು ಅಂತ ಊರಲ್ಲಿ, ತಾಲೂಕಿನ ಹಲವೆಡೆ ಸುದ್ದಿ ಆಗಿರುತ್ತೆ. ಅದೇ ದೂರದ ಊರಲ್ಲಿ ಅಂತಹ ಮಂದಿಯ ಪ್ರಖರ ಮಾತಿಗೆ ಭಾರಿ ಡಿಮ್ಯಾಂಡ್!
ಯಾಕೆ ಹೇಳಿ.. ಅವ್ರಿಗೆ ಒಳ್ಳೆ ಸೌಂಡ್ ಮಾಡೋ ಒಂದು ಮಾತುಗಾರಿಕೆಯ ಅವಶ್ಯಕತೆ ಇರುತ್ತೆ. ಇದು ಒಂಥರಾ ಅನ್ನ ಹಳಸಿತ್ತು ನಾಯಿ ಹಸಿದಿತ್ತು ಪರಿಸ್ಥಿತಿ !

ಬಾಡಿಗೆ ದಿಕ್ಸೂಚಿ ಭಾಷಣಗಾರರನ್ನು ಕರೆ ತರುವ ಮಂದಿಗೆ ಜನ ಸೇರಿಸುವ, ಚಪ್ಪಾಳೆ ಸದ್ದು ಕೇಳುವ ಆಸೆ. ಆದ್ರೆ ತಮಗೆ ಆಗಲ್ಲ, ಯಾರನ್ನಾದ್ರೂ ದುಡ್ಡು ಕೊಟ್ಟು ಕರೆಸಿ ಉಗ್ರ ಭಾಷಣ ಮಾಡಿ ಕೊನೆಯಲ್ಲಿ ತಮ್ಮನ್ನೂ ಹೊಗಳಿಸಿಕೊಂಡು ದೊಡ್ಡದಾಗಿ ಪೋಸ್ ಕೊಡುವ ತೆವಲು. ಕವರ್ ತೆಗೆದುಕೊಂಡು ಭಾಷಣ ಮಾಡುವ ವ್ಯಕ್ತಿ ಬಿಡಿ, ಅವನಿಗೆ ಅದೇ ವೃತ್ತಿ, ಅದೇ ಅಭ್ಯಾಸ !

ಒಂದು ವಿಚಾರದಲ್ಲಿ ನಾವು ಸ್ಪಷ್ಟವಾಗಿ ಇರಲೇ ಬೇಕು. ಅದೇನಂದರೆ, ನಾವು ಯಾರನ್ನೇ ಸಂಪನ್ಮೂಲ ವ್ಯಕ್ತಿ, ದಿಕ್ಸೂಚಿ ಭಾಷಣಕಾರ ಅಂತ ಕರೆಸುವುದಿದ್ದರೆ ಆತನಿಗೆ ಬೇರೆ ಉದ್ಯೋಗ ಇದೆಯೇ ಎಂದು ಮೊದಲು ತಿಳಿಯಬೇಕು. ಯಾಕೆಂದರೆ ಮಾತಾಡುವುದೇ ಆತನ ಉದ್ಯೋಗ ಅಂತ ಆದ್ರೆ, ಅದು ಆತನ ದುಡಿಮೆಯ ಮೂಲ. ಆತ ದುಡ್ಡು ಕೊಟ್ಟವರ ಪರ ಮಾತನಾಡಬೇಕು. ಅಂತಹ ವ್ಯಕ್ತಿ ಹೇಳುವ ಮಾತಿನಲ್ಲಿ ಇನ್ನೆಷ್ಟು ಸಾರ ಇರಬಹುದು !? ನೀವೇ ಅಂದಾಜಿಸಿ.

ಪ್ರತಿಯೊಬ್ಬನೂ ತನ್ನ ವೃತ್ತಿಯಲ್ಲಿ ಅಭಿವೃದ್ಧಿಗೆ ಪ್ರಯತ್ನ ಮಾಡ್ತಾನೆ, Next ಲೆವೆಲ್ ಗೆ ಪ್ರಯತ್ನ ಮಾಡ್ತಾನೆ, ಅಂತಹ ಹೊತ್ತಲ್ಲಿ ದುಡ್ಡು ಮಾಡೋಕೆ ಬೇರೆ ಬೇರೆ ಅಡ್ಡ ದಾರಿ ಸಹ ಕಾಣೋಕೆ ಶುರು ಆಗುತ್ತೆ. ತನ್ನನ್ನು ದುಡ್ಡು ಕೊಟ್ಟು ಕರೆಸುವ ಮಂದಿಗೂ ಏನೋ ಅಜೆಂಡಾ ಇರುತ್ತೆ ಅನ್ನೋದೂ ಈ ಬಾಡಿಗೆ ಭಾಷಣಕಾರ/ಭಾಷಣಗಾರ್ತಿಗೂ ತಿಳಿದಿರುತ್ತದೆ. ಅಂತಹ ಹೊತ್ತಲ್ಲೇ ಈ ಎಲೆಕ್ಷನ್ ಟಿಕೇಟ್ ಕೊಡು ಕೊಳ್ಳುವ ವ್ಯವಹಾರದ ಪೀಠಿಕೆ ಆಗೋದು, ಅವ್ಯವಹಾರದ/ ವಂಚನೆಯ ಅಕೌಂಟ್ ತೆರೆದುಕೊಳ್ಳವುದು. ಅವರವರ ಸಾಮರ್ಥ್ಯಕ್ಕೆ ಅನುಗುಣವಾಗಿ ಸಣ್ಣ ದೊಡ್ಡ ಹಗರಣಗಳು ಆಗುತ್ತವೆ. ಕೆಲವು ಹೊರಬರುತ್ತವೆ. ಇನ್ನೆಷ್ಟೋ ಅಲ್ಲಲ್ಲೇ ಮುಚ್ಚಿ ಹೋಗುತ್ತವೆ.

ಈಗಿನ ಕಾಲಮಾನ ಹೇಗೆ ಅಂದ್ರೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸಹಾಯ, ಭಾಷಣ ಅಥವಾ ಸೇವೆ ಮಾಡುವ ಮಂದಿ ಕಡಿಮೆ. ಇಲ್ವೇ ಇಲ್ಲ ಅಂತೇನಿಲ್ಲ.. ಆದ್ರೆ ಅಂತಹ ಮಂದಿ ಎಲೆಮರೆ ಕಾಯಿಯಂತೆ ಕೆಲಸ ಮಾಡ್ತಾ ಇರ್ತಾರೆ. ಆದ್ರೆ ಪ್ರಚಾರದ ಹಿಂದೆ ಬೀಳುವ ಮಂದಿ, ಹೆಚ್ಚು ಸೌಂಡ್ ಮಾಡುವ ಮಂದಿ ಇದ್ರೆ, ಅವರ ಮನದ ಆಳದಲ್ಲಿ ಹೆಚ್ಚಾಗಿ ಹಿಡನ್ ಅಜೆಂಡಾ ಒಂದು ಇದ್ದೇ ಇರುತ್ತೆ ಅನ್ನೋದು ಸಹ ಅಷ್ಟೇ ಸತ್ಯ.

ಜನ ಸೇರಿದಲ್ಲಿ ಚಪ್ಪಾಳೆಯ ಸದ್ದಿಗಾಗಿ ಯಾರನ್ನೋ ಕರೆಸುವ ಬದಲು, ತಮ್ಮ ಕೆಲಸದ ಮೂಲಕ ಸಾಧಿಸಿ ತೋರಿಸಿದವರ ಗುರುತಿಸುವ ಕಾರ್ಯ ಆದ್ರೆ ಉತ್ತಮ.
ತಮ್ಮ ಊರಿನ ಸಭೆ ಸಮಾರಂಭಕ್ಕೇ ಅತಿಥಿಗಳನ್ನು ಕರೆಸಿ,, ಆದ್ರೆ ಬಾಡಿಗೆ ಭಾಷಣ ಮಾಡೊ ಮಂದಿಯನ್ನು ಕರೆಸದಿರಿ…!! ಇಲ್ಲವಾದಲ್ಲಿ ಇನ್ನಷ್ಟು ಕವರ್ ಭಾಷಣ, ಕವರ್ ಹೋರಾಟಗಾರರು, ಕವರ್ ಪತ್ರಕರ್ತ, ಕವರ್ ಮಾಧ್ಯಮ ಇಂತಹ ನೂರೆಂಟು ಅಪಾಯಗಳು ಹುಟ್ಟಿಕೊಳ್ಳುತ್ತವೆ. ಊರು ತುಂಬಾ ಕೊಳೆಯಾಗಿ, ಸತ್ಯದ ಕೊಲೆಯಾಗಿ, ಕೊನೆಗೆ ಕಳೆಯಾಗಿ ನಿಮ್ಮ ನಮ್ಮ ಮನೆ ಸೇರೋದು ಖಚಿತ !
ಮತ್ತೆ ಹೇಳ್ತಿದೀನಿ..
ಭಾಷಣ ಅನ್ನೋದು ಕಲೆ, ಆದ್ರೆ ಕವರ್ ಭಾಷಣ ಕಳೆ !
ಅದು ಸ್ವರ ಹಾದರ!

- ವರುಣ್ ಕಂಜರ್ಪಣೆ

Happy Independence day
15/08/2023

Happy Independence day

13/06/2023

ಶಕ್ತಿ ಯೋಜನೆ
ಕರ್ನಾಟಕದ ಮಹಿಳೆಯರಿಗೆ ಉಪಯುಕ್ತ

ಆದ್ರೆ ಒಂದು ಸಲಹೆ,
ಕರ್ನಾಟಕದ ಆಧಾರ್ ಕಾರ್ಡ್ ಅಥವಾ ಐಡಿ ಕಾರ್ಡ್ ತೋರಿಸುವ ಬದಲು ಸಲೀಸಾಗಿ ಕನ್ನಡ ಮಾತನಾಡುವ ಮಹಿಳೆಯರಿಗೆ ಬಸ್ ಪ್ರಯಾಣ ಫ್ರೀ ಅಂತ ಹೇಳಿದ್ರೆ ಕನ್ನಡ ಬಳಕೆ ಆದ್ರೂ ಹೆಚ್ಚಾಗ್ತ ಇತ್ತು.
ಸುಲಲಿತ ಕನ್ನಡ ಮಾತಾಡುವವರು ನಮ್ಮ ಕನ್ನಡಿಗರು/ಕನ್ನಡತಿಯರು ತಾನೇ??
ಮತ್ತೆ ಐಡಿ ಏಕೆ?? ಸ್ಮಾರ್ಟ್ ಕಾರ್ಡ್ ಏಕೆ??

ಪ್ರೀತಿಯ ಕನ್ನಡಪರ ಹೋರಾಟಗಾರರೇ... ಏನಂತೀರಿ??

ಇಂಟರೆಸ್ಟಿಂಗ್ ವಿಚಾರ ಒಂದಿದೆ...ಬಾಡಿಗೆದಾರರು ಫ್ರೀ ವಿದ್ಯುತ್ ಪಡೆಯಲು 1 ವರ್ಷದ ದಾಖಲೆ ಕೊಡಬೇಕು !ಓಕೆ..  ಒಳ್ಳೇದು...ಆದ್ರೆ ಮನೆ ಮಾಲೀಕ ರೆಂ...
08/06/2023

ಇಂಟರೆಸ್ಟಿಂಗ್ ವಿಚಾರ ಒಂದಿದೆ...

ಬಾಡಿಗೆದಾರರು ಫ್ರೀ ವಿದ್ಯುತ್ ಪಡೆಯಲು 1 ವರ್ಷದ ದಾಖಲೆ ಕೊಡಬೇಕು !
ಓಕೆ.. ಒಳ್ಳೇದು...
ಆದ್ರೆ ಮನೆ ಮಾಲೀಕ ರೆಂಟಲ್ ಅಗ್ರಿಮೆಂಟ್ ಮಾಡೋದೇ 11 ತಿಂಗಳಿಗೇ ತಾನೇ ?
ಹಾಗಿದ್ದಾಗ ಒಂದು ವರ್ಷಕ್ಕೂ ಮೇಲೆ ಬಾಡಿಗೆಯಲ್ಲಿ ಇದ್ದೆ ಅನ್ನೋದಿಕ್ಕೆ ಕರಾರು ಪತ್ರ ಊರ್ಜಿತ ಆಗುತ್ತಾ ?? ಬಾಡಿಗೆದಾರರು ಮನೆ ಬದಲಾವಣೆ ಮಾಡಿದಲ್ಲಿ ಮತ್ತೆ ಒಂದು ವರ್ಷ ಕಾದೇ ಗೃಹ ಜ್ಯೋತಿ ಭಾಗ್ಯ ಪಡೆಯಬೇಕೇ??
ಇದ್ಯಾವುದೂ ಇನ್ನೂ ಸ್ಪಷ್ಟವಾಗಿಲ್ಲ!
ಸ್ವಲ್ಪ ತಿಳಿಸಿ KJ George ಸರ್....

ಉಚಿತ ಖಚಿತಗಳ ನಡುವೆ ವಿದ್ಯುತ್ ದರ ಬೇರೆ ಬೇರೆ ರೀತಿಯಲ್ಲಿ ಏರಿರುವುದು ಗಮನಿಸಿಇದು ನನ್ನ ಕರೆಂಟ್ ಬಿಲ್. ಕಳೆದ ತಿಂಗಳು ಬಳಸಿದ್ದು 110 ಯೂನಿಟ್ಅ...
07/06/2023

ಉಚಿತ ಖಚಿತಗಳ ನಡುವೆ ವಿದ್ಯುತ್ ದರ ಬೇರೆ ಬೇರೆ ರೀತಿಯಲ್ಲಿ ಏರಿರುವುದು ಗಮನಿಸಿ

ಇದು ನನ್ನ ಕರೆಂಟ್ ಬಿಲ್.
ಕಳೆದ ತಿಂಗಳು ಬಳಸಿದ್ದು 110 ಯೂನಿಟ್
ಅದರ ಬಿಲ್ - 775.84

ಈ ತಿಂಗಳು ಬಳಸಿದ್ದು 121 ಯೂನಿಟ್
ಅದರ ಬಿಲ್ - 1416

ಕೇವಲ 11 ಯೂನಿಟ್ ಹೆಚ್ಚುವರಿ ಬಳಸಿದ್ದು, ಆದರೆ ಬಿಲ್ ಬಂದಿದ್ದು ಹೆಚ್ಚುವರಿ 641 ರೂಪಾಯಿ.

1. ನಿಗದಿತ ಶುಲ್ಕ/ fixed charges - ಏರಿಕೆ ⬆️🔺
2. ಯುನಿಟ್ ದರ (ಸ್ಲಾಬ್ ದರ ಇಲ್ಲದೆ ಮೊದಲ ಯೂನಿಟ್ ಗು ಹೆಚ್ಚಿನ ದರ) - ಏರಿಕೆ ⬆️🔺
3. ಬಿಲ್ ಮೇಲಿನ ತೆರಿಗೆ - ಏರಿಕೆ ⬆️🔺
4. ಇತರೆ ಚಾರ್ಜ್ ಗಳು (ಏಕಾಏಕಿ ರೂ. 321.96) - ಏರಿಕೆ ⬆️🔺

ಇದು ಸ್ಯಾಂಪಲ್. ಮುಂದಿನ ದಿನಗಳಲ್ಲಿ, ಮನೆ ತೆರಿಗೆ, ಆಸ್ತಿ ತೆರಿಗೆ. ಪೆಟ್ರೋಲ್ ಮೇಲೆ ಸೆಸ್ ಅಂತ ತೆರಿಗೆ, ಇನ್ನು ಎಲ್ಲೆಲ್ಲಿ ತೆರಿಗೆ ಹೆಚ್ಚು ಮಾಡೋಕೆ ಸಾಧ್ಯ ಅಲ್ಲೆಲ್ಲ ತೆರಿಗೆ ಬೀಳೋದು ನಿಶ್ಚಿತ.
ಯಾಕೆ ಹೇಳಿ
ಉಚಿತಗಳಿಗೆ ಸಂಪನ್ಮೂಲ ಕ್ರೋಡೀಕರಣ ಮಾಡೋಕೆ. ತೆರಿಗೆ ಸೋರಿಕೆ, ಅಕ್ರಮಗಳ ಮೂಲಕ ಸರ್ಕಾರದ ಹಣ ಸೋರಿಕೆ, ಅಕ್ರಮ ಬಿಪಿಎಲ್ ಕಾರ್ಡ್, ಇವುಗಳಿಗೆ ಕಡಿವಾಣ ಹಾಕಿದ್ರೆ ಜನಸಾಮಾನ್ಯರಿಗೆ ಬಿಲ್ ಏರಿಕೆ ದರ ಏರಿಕೆ ಬರೆ ಹಾಕಬೇಕಾಗಿರಲಿಲ್ಲ. ಆದ್ರೆ
ಅವುಗಳನ್ನು ಮಾಡಿದ್ರೆ ವೋಟ್ ಬ್ಯಾಂಕ್ ಗೆ ಹೊಡೆತ ಬೀಳುತ್ತೆ ಮತ್ತು ಪರ್ಸಂಟೇಜ್ ಗೆ ಹೊಡೆತ ಬೀಳುತ್ತೆ. ಅದು ಆಡಳಿತ ಪಕ್ಷಕ್ಕೂ ಬೇಕಿಲ್ಲ ವಿಪಕ್ಷಕ್ಕೂ ಬೇಕಿಲ್ಲ.
ಜನಸಾಮಾನ್ಯರ ಹಿತ ಯಾರಿಗೂ ಬೇಕಿಲ್ಲ.
ಒಟ್ನಲ್ಲಿ ಉಚಿತ ಖಚಿತಗಳ ನಡುವೆ ಶ್ರೀಸಾಮಾನ್ಯ ಹೈರಾಣಾಗಿ ಹೋಗೋದು ಖಂಡಿತ... ನಿಶ್ಚಿತ...!!

- ವರುಣ್ ಕಂಜರ್ಪಣೆ

Address

Gokarna

581326

Website

Alerts

Be the first to know and let us send you an email when Varun Kanjarpane - RJ Varun posts news and promotions. Your email address will not be used for any other purpose, and you can unsubscribe at any time.

  • Want your business to be the top-listed Media Company?

Share