18/09/2026
ಕಲಬುರಗಿ ಕೆಬಿಎನ ವಿವಿಯ ಮೆಗಾ ಆರೋಗ್ಯ ಶಿಬಿರ ಯಶಸ್ವಿ
ಕಲಬುರಗಿ : ಖಾಜಾ ಬಂದಾನವಾಜ್ ವಿಶ್ವವಿದ್ಯಾಲಯದ ಕುಲಾಧಿಪತಿ ಹಜರತ್ ಜನಾಬ್ ಡಾ. ಸೈಯದ್ ಮುಹಮ್ಮದ್ ಅಲಿ ಅಲ್-ಹುಸೈನಿ ಸಾಹೇಬ್ ಅವರ ಜನ್ಮದಿನಾಚರಣೆಯ ಅಂಗವಾಗಿ ಗುರುವಾರ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಆರೋಗ್ಯ ಜಾಗೃತಿ ಅಭಿಯಾನವನ್ನು ನಗರದ ವಿವಿಧ ಕಡೆ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮವು ಕೆಬಿಎನ್ ವಿಶ್ವವಿದ್ಯಾಲಯದ IQAC ಉಪಕ್ರಮದಡಿ, ವೈದ್ಯಕೀಯ ವಿಜ್ಞಾನಗಳ ನಿಕಾಯದಿಂದ ಸಮುದಾಯ ವೈದ್ಯಕೀಯ ವಿಭಾಗದ ಸಹಯೋಗದಲ್ಲಿ ನಡೆಯಿತು.
ಖಾಜಾ ಬಜಾರನಲ್ಲಿನ ಆರೋಗ್ಯ ಶಿಬಿರ ಉದ್ಘಾಟಿಸಿದ ವಿವಿಯ ಸಮ ಉಪಕುಲಪತಿ ಪ್ರೊ ಆಶಫಾಕ ಅಹ್ಮದ ಇವರು ಕೆಬಿಎನ ಬಡವರ ಬಂಧು. ಜನರ ಸೇವೆಗಾಗಿ ಸದಾ ಸಿದ್ಧ. ಕುಲಾಧಿಪತಿಯ ಜನ್ಮ ದಿನದಂದು ಈ ಮೆಗಾ ಆರೋಗ್ಯ್ ಶಿಬಿರ ಹಮ್ಮಿಕೊಂಡು ಉಚಿತ ಔಷಧಿ ನೀಡಿ ತನ್ನ ವಿಶಿಷ್ಟಸೇವೆಯನ್ನು ಮುಂದುವರಿಸಿದೆ. ಎಲ್ಲರೂ ಈ ಕ್ಯಾಂಪನ್ನು ಸಧ್ಭಳಿಕೆ ಮಾಡಿಕೊಳ್ಳಿ ಎಂದರು.
ಐಕ್ಯೂಎಸಿ ನಿರ್ದೇಶಕ ಡಾ ಮೊಹಮ್ಮದ ಅಬ್ದುಲ ಬಷೀರ ಇವರು ಮಾತನಾಡುತ್ತ, ಇಂತಹ ಕ್ಯಾಂಪಗಳನ್ನು ಪ್ರತಿ ವರ್ಷ ಹಮ್ಮಿಕೊಳ್ಳಲಾಗುವುದು. ಎಲ್ಲ ವಿಭಾಗದ ವೈದ್ಯರು ಲಭ್ಯವಿದ್ದು, ಜನರು ಇದರ ಲಾಭ ಪಡೆಯುಬೇಕು. ಯಾವುದೇ ಸಮಸ್ಯೆ ಇದ್ದಲ್ಲಿ ಕೆಬಿಎನ ಆಸ್ಪತ್ರೆಯನ್ನು ಸಂಪರ್ಕಿಸಬಹುದು ಎಂದರು.
ಬಿ ಬಿ ರಜಾ ಬಾಲಕಿಯರ ಪ್ರೌಢಶಾಲೆಯಲ್ಲಿ ಋತು ಚಕ್ರ ನೈರ್ಮಲ್ಯದ ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು. ನಂತರ ಸುಮಾರು 240 ವಿದ್ಯಾರ್ಥಿನಿಯರಿಗೆ ರೇಖಾ ಗಣಿತ ಪೆಟ್ಟಿಗೆ ( geometry box) ನೀಡಲಾಯಿತು. ಖಾಜಾ ಬಾಲಕರ ಪ್ರೌಢಶಾಲೆಯಲ್ಲಿ ಸುಮಾರು 200 ವಿದ್ಯಾರ್ಥಿಗಳಿಗೆ ಆರೋಗ್ಯ ತಪಾಸಣೆ, ದಂತ ನೈರ್ಮಲ್ಯದ ಜಾಗೃತಿ ಕಾರ್ಯಕ್ರಮ ನಡೆಸಿ ಡೆಂಟಲ ಕಿಟ ವಿತರಣೆ ಮಾಡಲಾಯಿತು.
ಸೋನಿಯಾ ಗಾಂಧಿ ಕಾಲನಿ, ಖಮರ ಕಾಲನಿ, ಎಮ್ ಎಸ್ ಕೆ ಮಿಲ್, ಖಾಜಾ ಬಜಾರ ಸ್ಥಳಗಳಲ್ಲಿ ಒಟ್ಟಾರೆ 2000 ಕ್ಕೂ ಹೆಚ್ಚು ಜನರಿಗೆ ಉಚಿತವಾಗಿ ಬಿ ಪಿ, ಶುಗರ, ಕಿವಿ ಮೂಗು ಗಂಟಲು,ಕಣ್ಣು, ಚರ್ಮ,ಸಾಮಾನ್ಯ ಔಷಧಿ, ಮೂಳೆ ಪರೀಕ್ಷೆ, ಚಿಕ್ಕ ಮಕ್ಕಳ ಪರೀಕ್ಷೆಗಳನ್ನು ಮಾಡಿ ಮಾತ್ರೆಗಳನ್ನು ಸಹ ಉಚಿತವಾಗಿ ನೀಡಲಾಯಿತು.ಫಾಲೋ ಅಪನ ಅವಶ್ಯಕತೆ ಇದ್ದಲ್ಲಿ, ಕೆ ಬಿಎನ ಆಸ್ಪತ್ರೆಗೆ ಅಹ್ವಾನ ನೀಡಲಾಯಿತು.ಕೆಬಿಎನ್ ಆಸ್ಪತ್ರೆಯಲ್ಲಿ ನಡೆದ ಗರ್ಭಿಣಿಯರ ಉಚಿತ ಪರೀಕ್ಷೆಯಲ್ಲಿ ಸುಮಾರು 160 ಸ್ತ್ರೀಯರು ಪಾಲ್ಗೊಂಡಿದ್ದರು.
ಕಣ್ಣಿನ ವಿಭಾಗದಿಂದ ಅವಶ್ಯವಿದ್ದವರಿಗೆ ರೀಡಿಂಗ್ ಗ್ಲಾಸ ಗಳನ್ನು ಕೂಡ ಉಚಿತವಾಗಿ ನೀಡಲಾಯಿತು. ರಕ್ತದಾನ ಶಿಬಿರದಲ್ಲಿ ಸುಮಾರು ಜನ ಪಾಲ್ಗೊಂಡು ರಕ್ತದಾನ ಮಾಡಿದರು.
ಕೆಬಿಎನ ವಿವಿಯ ಆವರಣದ ಸ್ಕಿಲ್ ಲ್ಯಾಬನಲ್ಲಿ ಖಾಜಾ ಪ್ರೌಢಶಾಲೆಯ ಬಾಲಕಿಯರನ್ನು ಒಳಗೊಂಡಂತೆ 250 ಉಪನ್ಯಾಸಕರಿಗೆ ಸಿಪಿ ಆರ ತರಬೇತಿಯನ್ನು ನೀಡಲಾಯಿತು.
ನಗರದ ವೃದ್ಧಾಶ್ರಮದಲ್ಲಿ ಹಾಗೂ ಕೆಬಿಎನ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣುಗಳನ್ನು ವಿತರಿಸಲಾಯಿತು.
ಈ ಶಿಬಿರದಲ್ಲಿ ಪಿಜಿ ವಿದ್ಯಾರ್ಥಿಗಳನ್ನು ಒಳಗೊಂಡಂತೆ ಸುಮಾರು 70 ವೈದ್ಯರು ಸೇವೆ ಸಲ್ಲಿಸಿದರು.
ಈ ಎಲ್ಲ ಕಾರ್ಯಕ್ರಮಗಳಲ್ಲಿ ಕೆ ಈ ಎಸ ಕಾರ್ಯದರ್ಶಿ ಬೆನ್ನಿ ಕುರಿಕೊಸ, ವಿವಿಯ ಕುಲಸಚಿವ ಮಿರ್ ವಿಲಾಯತ್ ಅಲಿ, ಮೆಡಿಕಲ ಡೀನ್ ಡಾ ಗುರು ಪ್ರಸಾದ್, ಮೆಡಿಕಲ್ ಆಧೀ ಕ್ಷಕ್ ಡಾ ಸಿದ್ಧಲಿಂಗ ಚೆಂಗಟಿ, ಆಡಳಿತ ಅಧಿಕಾರಿ ಡಾ ರಾಧಿಕಾ ಎಲ್ಲರೂ ಹಾಜರಿದ್ದರು.
ಸಜ್ಜದಾ ನಶೀನರ ಜನ್ಮ ದಿನದ್ ಅಂಗವಾಗಿ ಕೆಬಿಎನ ಸೌಹಾರ್ದ ಬ್ಯಾಂಕನಲ್ಲಿ 15 ಬಡಜನರಿಗೆ ಬಡ್ಡಿ ರಹಿತ ಸಾಲವನ್ನು ನೀಡಲಾಯಿತು..