JAI BHEEM TV

JAI BHEEM TV JAI BHEEM TV KARNATAKA

06/04/2022

ಹಿಜಾಬ್ ಧರಿಸೋದು ನಮ್ಮ ಹಕ್ಕು ಎಂದು ಹೇಳಿರುವ ಅಪಘಾನಿಸ್ಥಾನದ ಅಲ್ ಖೈದಾದ ಜವಾಹರಿಗೆ ಹೇಳಿಕೆಗೆ ತಿರುಗೇಟು ನೀಡಿರುವ ಪ್ರಮೋದ ಮುತಾಲಿಕ್ ಅವರು ಅಲ್ ಕೈದಾದ ಬಯೋತ್ಪಾದನೆ ಸಂಘಟನೆ ನಮಗೆ ಉಪದೇಶ ಕೊಡುವ ಅವಶ್ಯಕತೆ ಇಲ್ಲ. ನಿಮ್ಮ ದೇಶದಲ್ಲಿ ಮಹಿಳೆಯರನ್ನು ಎಷ್ಟು ಗೌರವವಾಗಿ ಕಾಣ್ತಾ ಇದರಿ ಎಂಬುದು ತಿಳಿದುಕ್ಕೊಳ್ಳಿ ನಮ್ಮ ದೇಶದಲ್ಲಿ ಮೂಗು ತುರಿಸುವ ಕೆಲಸ ಮಾಡಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ

21/03/2022

ರಾಜ್ಯ ಸರ್ಕಾರ ಪಠ್ಯದಲ್ಲಿ ಭಗವದ್ಗೀತೆಯನ್ನು ಅಳವಡಿಸಲು ಹೊರಟಿರುವುದು ಮೂರ್ಖತನದ ನಡೆ. ಧಾರ್ಮಿಕ ವಿಚಾರಗಳನ್ನು ಶಿಕ್ಷಣದಲ್ಲಿ ಅಳವಡಿಸುವ ಮೂಲಕ ಕೋಮುದ್ವೇಷವನ್ನು ಬಿತ್ತಲು ಈ ಸರ್ಕಾರ ಹೊರಟಿದೆ ಎಂದು ಎಐಡಿಎಸ್ಓ ಜಿಲ್ಲಾ ಕಾರ್ಯದರ್ಶಿ ತುಳಜಾರಾಮ ಎನ್ ಕೆ ಆರೋಪಿಸಿದ್ದಾರೆ

21/03/2022

ಉಕ್ರೇನ್ ದಲ್ಲಿ ಈಚೆಗೆ ನಡೆದ ರಷ್ಯಾ ದಾಳಿ ಸಂದರ್ಭದಲ್ಲಿ ಮೃತಪಟ್ಟ ಹಾವೇರಿ ಜಿಲ್ಲೆಯ ರಾಣೆಬೆನ್ನೂರ ತಾಲ್ಲೂಕು ಚಳಗೇರಿಯ ವೈದ್ಯಕೀಯ ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ಅವರ ಮನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭೇಟಿ ನೀಡಿ ನವೀನ ಪಾರ್ಥಿವ ಶರೀರಕ್ಕೆ ಅಂತಿಮ ಗೌರವ ಸಲ್ಲಿಸಿದರು.

20/03/2022

ರಾಜ್ಯದಲ್ಲಿ ಕುರಿಗಾಹಿಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯಗಳನ್ನ ಖಂಡಿಸಿ ಹಾಗೂ ಕುರಿಗಾಹಿಗಳಿಗೆ ಭದ್ರತೆ ನೀಡಬೇಕೆಂದು ಆಗ್ರಹಿಸಿ ಮಾರ್ಚ್ 22 ರಂದು ವಿಧಾನಸಭೆ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕುರುಬ ಸಮಾಜದ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಸಿದ್ದಣ್ಣ ಹೇಳಿದ್ದಾರೆ

20/03/2022

ಮಹಾಶಿವರಾತ್ರಿ ದಿನದಂದು ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದ ಲಾಡ್ಲೇ ಮಶಾಕ್ ದರ್ಗಾದಲ್ಲಿ ಜಿಲ್ಲಾಡಳಿತ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡರೂ ಸಹ ಕೋಮು ಗಲಬೆ ನಡೆದಿದೆ. ಈ ಕುರಿತು ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಬೇಕೆಂದು ಜನತಾದಳ ಹಿರಿಯ ಉಪಾಧ್ಯಕ್ಷ ಸೈಯದ್ ಬಾಬರ ಮುಸ್ತಫಾ ಆಗ್ರಹಿಸಿದ್ದಾರೆ.

16/03/2022

ವಿದ್ಯಾರ್ಥಿಗಳಿಂದ ಹಣ ಪಡೆದು ಅಕ್ರಮವಾಗಿ ನಕಲು ಮಾಡಿಸುವ ಮೂಲಕ ಪರೀಕ್ಷೆ ನಡೆಸುವ ಕಾಲೇಜುಗಳನ್ನು ಕಪ್ಪು ಪಟ್ಟಿಗೆ ಸೇರ್ಪಡೆ ಮಾಡಬೇಕು ಅಂತಹ ಕಾಲೇಜಿನ ಆಡಳಿತ ಮಂಡಳಿ ಹಾಗೂ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಆದರೆ ಅದನ್ನು ಬಿಟ್ಟು ವಿಶ್ವವಿದ್ಯಾಲಯ ಅಂತವ ಬೆನ್ನಿಗೆ ನಿಲ್ಲುವ ಕೆಲಸವನ್ನು ಮಾಡುತ್ತಿದೆ ಎಂದು ಆರೋಪಿಸಿದ ಸೈಬಣ್ಣ ಜಮಾದಾರ, ವಿಶ್ವ ವಿದ್ಯಾಲಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ತಡೆ ಹಾಕಬೇಕು ಹಗೂ ಈ ಅಕ್ರಮಗಳ ಕುರಿತು ತನಿಖೆ ನಡೆಸಲು ಉನ್ನತ ಅಧಿಕಾರಿಗಳ ತಂಡವೊಂದನ್ನು ರಚನೆ ಮಾಡಬೇಕು

16/03/2022

ರಾಜ್ಯ ಸರ್ಕಾರದ ಈ ತಾರತಮ್ಯದ ವಿರುದ್ಧ ನಿರಂತರವಾಗಿ ಹೋರಾಟ ಮಾಡಿಕೊಂಡು ಬರಲಾಗುತ್ತಿದೆ. ಅದರೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಕಿರುಕುಳದಿಂದ ಬೇಸತ್ತು ಮಾರ್ಚ್ 13 ರಂದು ಓಂಕಾರ್ ರೇವಣಪ್ಪ ಶೇರಿಕಾರ್ ಎಂಬ ನೌಕರನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆಯನ್ನು ಖಂಡಿಸಿ, ಹುಮನಾಬಾದ್ ನಲ್ಲಿ ಮೃತ ಓಂಕಾರ್ ಶವವಿಟ್ಟು ಪ್ರತಿಭಟನೆ ಮಾಡಲಾಯಿತು. ಈ ವಿಷಯವನ್ನು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಸದನದಲ್ಲಿ ಪ್ರಸ್ತಾಪ ಮಾಡಿದ ಕಾರಣ, ಘಟನೆಯ ಕುರಿತು ಮಾಹಿತಿ ಪಡೆದ ಮುಖ್ಯಮಂತ್ರಿಗಳು ಮಾರ್ಚ್ 15 ರಂದು ಸದನದಲ್ಲಿ ಈ ಹಿಂದೆ 2021 ಜನವರೆ 16 ರಂದು ಮಾಡಿರುವ ಆದೇಶವನ್ನು ಹಿಂದಕ್ಕೆ ಪಡೆದಿದ್ದಾರೆ ಎಂದು ಮಾಹಾಂತೇಶ ಕೌಲಗಿ ತಿಳಿಸಿದರು

15/03/2022

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಯಶವಂತ ಗುರುಕರ್, ನ್ಯಾಯಾಲಯದ ತೀರ್ಪನ್ನು ಎಲ್ಲರು ಗೌರವಿಸಬೇಕು. ತೀರ್ಪಿನ ಪರ-ವಿರೋಧ ಕುರಿತು ಯಾರು ಮೆರವಣಿಗೆ, ಪ್ರತಿಭಟನೆ, ಸಂಭ್ರಮಾಚರಣೆ ಮಾಡುವಂತಿಲ್ಲ. ವಿಶೇಷವಾಗಿ ಸಾಮಾಜಿಕ ಜಾಲತಾಣದಲ್ಲಿ ನ್ಯಾಯಾಲಯದ ತೀರ್ಪಿನ ಸುದ್ದಿ ಪ್ರಸಾರ ಮಾಡುವಾಗ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ಬರುವಂತೆ, ಸಮುದಾಯಗಳ ನಡುವೆ ಪ್ರಚೋದನೆಗೆ ಕಾರಣವಾಗುವ ಯಾವುದೇ ಸುಳ್ಳು ಸುದ್ದಿ ಪ್ರಸಾರ ಮಾಡುವಂತಿಲ್ಲ ಎಂದು ಖಡಕ್ ಸೂಚನೆ ನೀಡಿದರು. ಇದನ್ನು ಉಲ್ಲಂಘಿಸಿ ಪ್ರಸಾರ ಮಾಡುವುದು ಕಂಡುಬಂದಲ್ಲಿ ಅಂತಹ ಸಾಮಾಜಿಕ ಜಾಲತಾಣಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಅವರು ಎಚ್ಚರಿಕೆ ನೀಡಿದರು.

15/03/2022

ಸಮವಸ್ತ್ರ ಕುರಿತು ಸರ್ಕಾರ ಏನು ಆದೇಶ ನೀಡಿತ್ತೋ ಅದು ಸರಿಯಾಗಿದೆ. ಸರ್ಕಾರದ ಆದೇಶ ಕಾನೂನು ಬದ್ಧವಾಗಿದೆ. ಅದರ ಪ್ರಕಾರ ಪಾಲನೆ ಮಾಡಬೇಕು. ಸರ್ಕಾರ ಶಾಲಾ, ಕಾಲೇಜುಗಳಿಗೆ ಏನು ವಸ್ತ್ರ ಸಂಹಿತೆ ನೀಡಿದೆಯೋ, ಶಾಲೆ ಏನು ಸಮವಸ್ತ್ರ ನಿಯಮ ನೀಡುತ್ತದೋ ಅದನ್ನು ಪಾಲನೆ ಮಾಡಬೇಕು ಎಂದು ಹೈಕೋರ್ಟ್‌ ಹೇಳಿದೆ. ಯಾವುದೇ ಶಾಲೆ, ಕಾಲೇಜುಗಳು ಹಿಜಾಬ್ ಧರಿಸಲು ಅವಕಾಶ ನೀಡಿಲ್ಲ ಎಂದರೆ ಅದು ಹಿಜಾಬ್ ಕುರಿತು, ಇಸ್ಲಾಂ ಧಾರ್ಮಿಕ ಹಕ್ಕಿನ ಕುರಿತು ಉಲ್ಲಂಘನೆ ಆಗುವುದಿಲ್ಲ ಎಂದು ಹೈಕೋರ್ಟ್‌ ಐತಿಹಾಸಿಕ ತೀರ್ಪು ನೀಡಿದೆ.

14/03/2022

ಎಸ್ ಟಿ ಸಿಂಧುತ್ವ ಪ್ರಮಾಣ ಪತ್ರ ಸಿಗದ ಹಿನ್ನಲೆ ಆತ್ಮಹತ್ಯೆ ಮಾಡಿಕೊಂಡಿರುವ ಹುಮನಬಾದ್ ತಾಲೂಕಿನ ಕುಮಾರ ಚಿಂಚೋಳಿ ಗ್ರಾಮದ ಓಂಕಾರನ ಸಾವಿಗೆ ರಾಜ್ಯ ಸರ್ಕಾರವೇ ಹೊಣೆ ಹೊರಬೇಕು ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘ ಯುವ ಘಟಕದ ಮುಖಂಡರು ಆರೋಪಿಸಿದ್ದಾರೆ

Address


Alerts

Be the first to know and let us send you an email when JAI BHEEM TV posts news and promotions. Your email address will not be used for any other purpose, and you can unsubscribe at any time.

Shortcuts

  • Address
  • Telephone
  • Alerts
  • Claim ownership or report listing
  • Want your business to be the top-listed Media Company?

Share