15/09/2025
॥ ॐ ॥
👍🏻👏🏻👌🏻🤝🚩🛕❤️🙂🙏🏻🌹🙏🏻🌹
🌹👍🏻👏🏻👌🏻🤝🚩🛕❤️🙂🌹🙏🏻🌹
👍🏻👏🏻👌🏻🤝🚩🛕❤️🙂🙏🏻🌹🙏🏻🌹
🕉️|🕉️
ಭಗವದ್ಗೀತೆ:
ಅಧ್ಯಾಯ ಐದು:
ನಾಲ್ಕನೆ ಅಧ್ಯಾಯದಲ್ಲಿ ಕೃಷ್ಣ ಕರ್ಮಯೋಗದ ಬಗ್ಗೆ ಹೇಳಿದ ಹಾಗು ಕೊನೆಯಲ್ಲಿ ಕರ್ಮಸನ್ಯಾಸದ ಬಗ್ಗೆಯೂ ಹೇಳಿದ. ಇಲ್ಲಿ ನಮಗೆ ಸ್ವಲ್ಪ ಗೊಂದಲವಾಗುತ್ತದೆ. ಇದನ್ನು ಸಂಪೂರ್ಣ ಅರ್ಥ ಮಾಡಿಕೊಳ್ಳಬೇಕಾದರೆ ಮೊದಲು ಕರ್ಮಯೋಗ ಮತ್ತು ಕರ್ಮಸಂನ್ಯಾಸ ಅಂದರೆ ಏನು ಎಂದು ತಿಳಿಯಬೇಕು. ಮೇಲ್ನೋಟಕ್ಕೆ ನಮಗೆ ಕರ್ಮಸಂನ್ಯಾಸ ಅಂದರೆ 'ಕರ್ಮತ್ಯಾಗ' ಎನ್ನುವಂತೆ ಕಾಣುತ್ತದೆ. ಆದರೆ ಕೃಷ್ಣ ನಾಲ್ಕನೇ ಅಧ್ಯಾಯದ ಕೊನೆಯಲ್ಲಿ "ಎದ್ದು ನಿಲ್ಲು- ಯುದ್ಧ ಮಾಡು" ಎಂದು ಅರ್ಜುನನನ್ನು ಕರ್ಮ ಮಾಡುವಂತೆ ಹುರಿದುಂಬಿಸಿದ್ದನ್ನು ನಾವು ಕಂಡಿದ್ದೇವೆ. ಇದರಿಂದ ಕರ್ಮಸಂನ್ಯಾಸ ಅಂದರೆ ಕರ್ಮತ್ಯಾಗವಲ್ಲ ಎನ್ನುವುದು ನಮಗೆ ಸ್ಪಷ್ಟವಾಗುತ್ತದೆ. ಶಾಸ್ತ್ರೀಯವಾಗಿ ಕರ್ಮಸಂನ್ಯಾಸ ಎಂದರೆ ದ್ವಂದ್ವಾತೀತವಾಗಿ, ಕರ್ಮಫಲದ ಬಯಕೆಯಿಲ್ಲದೆ-ಕರ್ಮ ಮಾಡುವುದು. ಇಲ್ಲಿ ರಾಗ-ದ್ವೇಷಗಳಿಗೆ, ಕಾಮ-ಕ್ರೋಧಗಳಿಗೆ ಎಡೆಯಿಲ್ಲ. ಈ ಬಗ್ಗೆಯೂ ವಿಶೇಷವಾಗಿ ಕೃಷ್ಣ ಹಿಂದೆ ವಿವರಿಸಿದ್ದ. ಆದ್ದರಿಂದ ಕರ್ಮಸಂನ್ಯಾಸ ಎಂದರೆ ಕರ್ಮವನ್ನು ಬಿಡುವುದಲ್ಲ,ಕರ್ಮದಲ್ಲಿ ಕಾಮ ಕ್ರೋಧಗಳನ್ನು ಬಿಡುವುದು. "ಕಾಮಕ್ರೋಧಗಳ ಅತೀತನಾಗಿ ಯುದ್ಧಮಾಡು ಮತ್ತು ಜ್ಞಾನಯೋಗದ ದಾರಿಯಲ್ಲಿ ನಡೆ" ಎನ್ನುವುದು ಅರ್ಜುನನಿಗೆ ಕೃಷ್ಣನ ಸಂದೇಶ. ಆದರೆ ಕಾಮ-ಕ್ರೋಧಗಳ ಅತೀತನಾಗಿ ಜ್ಞಾನಮಾರ್ಗದಲ್ಲಿ ಯುದ್ಧ ಮಾಡುವುದು ಹೇಗೆ? ಇದನ್ನು ಅರ್ಥ ಮಾಡಿಕೊಳ್ಳುವುದು ನಮಗೆ ಸ್ವಲ್ಪ ಕಷ್ಟ. ಈ ಕುರಿತು ಅರ್ಜುನ ಕೃಷ್ಣನಲ್ಲಿ ವಿವರಣೆಯನ್ನು ನಮ್ಮ ನಿಮ್ಮೆಲ್ಲರ ಪರವಾಗಿ ಕೇಳುವುದರೊಂದಿಗೆ ಐದನೇ ಅಧ್ಯಾಯ ಆರಂಭವಾಗುತ್ತದೆ. ಈ ಅಧ್ಯಾಯದಲ್ಲಿ ಕರ್ಮಸಂನ್ಯಾಸದ ಬಗ್ಗೆ ವಿಶೇಷವಾದ ವಿವರಣೆಯನ್ನು ಕೃಷ್ಣ ನಮ್ಮ ಮುಂದಿಟ್ಟಿದ್ದಾನೆ.
ಅಧ್ಯಾಯ - 05 : ಶ್ಲೋಕ – 01
ಅರ್ಜುನ ಉವಾಚ ।
ಸಂನ್ಯಾಸಂ ಕರ್ಮಣಾಂ ಕೃಷ್ಣ ಪುನರ್ಯೋಗಂ ಚ ಶಂಸಸಿ ।
ಯಚ್ಛ್ರೇಯ ಏತಯೋರೇಕಂ ತನ್ಮೇ ಬ್ರೂಹಿ ಸುನಿಶ್ಚಿತಮ್ ॥೧॥
ಕೃಷ್ಣ, ಒಮ್ಮೆ ಕರ್ಮಸಂನ್ಯಾಸವನ್ನು ಹೊಗಳುತ್ತಿ; ಮತ್ತೊಮ್ಮೆ ಕರ್ಮಯೋಗವನ್ನು. ಇವೆರಡರಲ್ಲಿ ಯಾವುದು ಮಿಗಿಲು ಅದನ್ನು ನನಗೆ ಖಚಿತವಾಗಿ ಹೇಳು.
ಅರ್ಜುನ ಕೇಳುತ್ತಾನೆ: "ಓ ಕೃಷ್ಣ, ನೀನು ಒಮ್ಮೆ ಹೋರಾಡು ಎನ್ನುತ್ತಿ, ಇನ್ನೊಮ್ಮೆ ಕರ್ಮಸಂನ್ಯಾಸ ಮಾಡು ಅನ್ನುತ್ತಿ . ಒಂದು ವೇಳೆ ಕರ್ಮಸಂನ್ಯಾಸ ಅಂದರೆ ಕರ್ಮತ್ಯಾಗವಾದರೆ ಇದು ಒಂದಕ್ಕೊಂದು ವಿರುದ್ಧ. ಇದರಲ್ಲಿ ಯಾವುದು ಶ್ರೇಯಸ್ಕರ ಎನ್ನುವುದನ್ನು ನಿಶ್ಚಿತವಾಗಿ ಹೇಳು" ಎಂದು ಅರ್ಜುನ ಕೃಷ್ಣನನ್ನು ಕೇಳುತ್ತಾನೆ. ಯುದ್ಧ ಮಾಡುವಾಗ ದ್ವಂದ್ವ ಅನ್ನುವುದು ಇದ್ದೇ ಇದೆ.ದ್ವಂದ್ವತ್ಯಾಗದಿಂದ ಯುದ್ಧ ಮಾಡುವುದು ಹೇಗೆ? ಕರ್ಮಸಂನ್ಯಾಸ ಮತ್ತು ಕರ್ಮಯೋಗ ಇವೆರಡೂ ಒಟ್ಟಿಗೆ ಹೇಗೆ ಸಾಧ್ಯ? ಯುದ್ಧವೆಂದಮೇಲೆ ರಾಗ-ದ್ವೇಷ ಇದ್ದೇ ಇರುತ್ತದೆ. ಈ ಕಾರಣದಿಂದ ಕೃಷ್ಣನ ಮಾತು ನಮಗೆ ಖಚಿತವಾಗಿ ಅರ್ಥವಾಗುವುದಿಲ್ಲ. ಅದಕ್ಕಾಗಿ ಅರ್ಜುನ ಕೃಷ್ಣನಲ್ಲಿ ವಿವರವನ್ನು ಕೇಳುತ್ತಿದ್ದಾನೆ.
ಇಲ್ಲಿ ಅರ್ಜುನ ತನ್ನ ಪ್ರಶ್ನೆಯ ನಡುವೆ "ಕೃಷ್ಣ" ಎನ್ನುವ ಸಂಬೋಧನೆಯನ್ನು ಬಳಸಿದ್ದಾನೆ. 'ಕರ್ಷತಿ ಇತೀ ಕೃಷ್ಣಃ' ಎಲ್ಲರನ್ನೂ ತನ್ನೆಡೆಗೆ ಸೆಳೆಯುವ ಪಾದರಸ, ಸಂಸಾರದಿಂದ ಎತ್ತರಕ್ಕೆ ಕೊಂಡೊಯ್ಯುವ ಕರ್ಷಣಶಕ್ತಿಯಾದ ಸೌಂದರ್ಯಮೂರ್ತಿ ಭಗವಂತ ಕೃಷ್ಣಃ. ಅಜ್ಞಾನದಿಂದ ಬರುವ ಸಂಶಯವನ್ನು ಕರ್ಷಣೆಮಾಡಿ ಜ್ಞಾನದ ಮಡಿಲಿಗೆ ಸೆಳೆಯುವ ನೀನು ನನಗೆ ಖಚಿತವಾಗಿ ಯಾವುದು ಶ್ರೇಯಸ್ಸು ಎನ್ನುವುದನ್ನು ತಿಳಿಸು ಎನ್ನುವ ಭಾವ ಈ ಸಂಬೋಧನೆಯಲ್ಲಿದೆ.
ಶ್ರೀ ಕೃಷ್ಣಾರ್ಪಣಮಸ್ತು.ಇದು ಮುಂದುವರಿಯುತ್ತದೆ.
🌷🌷🌷🌷🌷🌷🌷🌷🌷🌷
ಲೋಕಾ ಸಮಸ್ತಾ ಸುಖಿನೋ ಭವಂತು ।🕉️
🕉️🕉️🕉️🕉️🕉️🕉️🕉️
🙌🏼
🕉️🙌🏼🎊
🙏🙏🌺🌺
💐💐💐🎉🎉🎉🌹🌹🌹🙏🏼🙏🏼🙏🏼🕉️🔯☸️
ಗೋಪಾಲ ಕೃಷ್ಣ ಎಂ ಎನ್
॥ ॐ ॥
👍🏻👏🏻👌🏻🤝🚩🛕❤️🙂🙏🏻🌹
🌹👍🏻👏🏻👌🏻🤝🚩🛕❤️🙂🌹🙏🏻🌹
👍🏻👏🏻👌🏻🤝🚩🛕❤️🙂🙏🏻🌹
🕉️|🕉️
भागवद गीता:
पाँचवाँ अध्याय:
चौथे अध्याय में, कृष्ण ने कर्मयोग के बारे में बताया और अंत में, उन्होंने कर्मसंन्यास के बारे में भी बताया। यहाँ हम थोड़ा भ्रमित हो जाते हैं। इसे पूरी तरह से समझने के लिए, हमें पहले यह समझना होगा कि कर्मयोग और कर्मसंन्यास का क्या अर्थ है। ऊपरी तौर पर, कर्मसंन्यास का अर्थ 'कर्म का त्याग' प्रतीत होता है। लेकिन हमने देखा है कि चौथे अध्याय के अंत में, कृष्ण ने अर्जुन को "उठो और युद्ध करो" कहकर कर्म करने के लिए प्रोत्साहित किया। इससे हमें यह स्पष्ट होता है कि कर्मसंन्यास, कर्मसंन्यास नहीं है। शास्त्रों के अनुसार, कर्मसंन्यास का अर्थ है अद्वैत भाव से, कर्म के फल की इच्छा के बिना कर्म करना। यहाँ राग, द्वेष, काम, क्रोध के लिए कोई स्थान नहीं है। कृष्ण ने पहले भी इसकी विशेष व्याख्या की थी। इसलिए, कर्मसंन्यास का अर्थ कर्म का त्याग करना नहीं, बल्कि कर्म में काम और क्रोध का त्याग करना है। "काम और क्रोध से परे होकर युद्ध करो और ज्ञान के मार्ग पर चलो" यही कृष्ण का अर्जुन को संदेश है। लेकिन काम और क्रोध से परे होकर ज्ञान के मार्ग पर कैसे युद्ध किया जाए? यह हमारे लिए समझना थोड़ा कठिन है। पाँचवाँ अध्याय अर्जुन द्वारा कृष्ण से हम सबकी ओर से इसे समझाने के अनुरोध से आरंभ होता है। इस अध्याय में, कृष्ण ने हमें कर्म संन्यास के बारे में एक विशेष व्याख्या दी है।
अध्याय - 05 : श्लोक - 01
अर्जुन के वचन।
संन्यासं कर्मणां कृष्ण पुनरयोगं च शमसि।
यच्छ्रेया एतयोरेकं तन्मे ब्रूहि सुनिशचितम् ॥1॥
कृष्ण, एक बार आप कर्म संन्यास की प्रशंसा करते हैं; फिर कर्म योग की। मुझे निश्चित रूप से बताइए कि दोनों में से कौन सा श्रेष्ठ है।
अर्जुन पूछता है: "हे कृष्ण, आप कहते हैं कि एक बार युद्ध करो, और फिर कर्मसंन्यास करो। यदि कर्मसंन्यास का अर्थ कर्मों का त्याग है, तो ये दोनों एक-दूसरे के विपरीत हैं। मुझे निश्चित रूप से बताइए कि इनमें से कौन सा श्रेष्ठ है," अर्जुन कृष्ण से पूछता है। युद्ध करते समय हमेशा द्वैत होता है। द्वैत का त्याग करके कोई युद्ध कैसे कर सकता है? कर्मसंन्यास और कर्मयोग दोनों एक साथ कैसे हो सकते हैं? युद्ध में सदैव प्रेम और द्वेष रहता है। इसी कारण हम कृष्ण के वचनों को स्पष्ट रूप से नहीं समझ पाते। इसीलिए अर्जुन कृष्ण से विस्तृत जानकारी माँग रहा है।
यहाँ अर्जुन ने अपने प्रश्न के मध्य में "कृष्ण" संबोधन का प्रयोग किया है। 'कर्षति इति कृष्ण' वह पारद है जो सबको अपनी ओर आकर्षित करता है, वह आकर्षक शक्ति जो सबको संसार से ऊँचाइयों तक ले जाती है, भगवान कृष्ण की सुंदर मूर्ति है। इस संबोधन का भाव है, "हे अज्ञान से उत्पन्न संशय को दूर करने वाले और मुझे ज्ञान की गोद में ले जाने वाले, मुझे निश्चयपूर्वक बताइए कि क्या सर्वोत्तम है।"
श्री कृष्ण अर्पणमस्तु। यह चलता रहेगा।
🌷🌷🌷🌷🌷🌷🌷🌷🌷
हे प्रभु, सारा संसार सुखी रहे। 🕉️
🕉️🕉️🕉️🕉️🕉️🕉️🕉️
🙌🏼
🕉️🙌🏼🎊
🙏🙏🌺🌺
💐💐💐🎉🎉🎉🌹🌹🌹🙏🏼🙏🏼🙏🏼🕉️🔯☸️
गोपाल कृष्ण एम एन