JanathaMadhyama

JanathaMadhyama Janatha Madhyama, a daily newspaper launched four decades ago & published from Hassan is a unique ne

10/08/2025
ಪ್ರಮುಖ ಪ್ರಕಟಣೆ: ಕಾಡಾನೆಗಳ ಬಗ್ಗೆ ಎಚ್ಚರಿಕೆ!ಜಿಲ್ಲೆಯಾದ್ಯಂತ ಹಲವು ಗ್ರಾಮಗಳಲ್ಲಿ ಕಾಡಾನೆಗಳು ಕಂಡುಬಂದಿರುವುದರಿಂದ, ಸಾರ್ವಜನಿಕರು ಮತ್ತು ರೈ...
10/08/2025

ಪ್ರಮುಖ ಪ್ರಕಟಣೆ: ಕಾಡಾನೆಗಳ ಬಗ್ಗೆ ಎಚ್ಚರಿಕೆ!

ಜಿಲ್ಲೆಯಾದ್ಯಂತ ಹಲವು ಗ್ರಾಮಗಳಲ್ಲಿ ಕಾಡಾನೆಗಳು ಕಂಡುಬಂದಿರುವುದರಿಂದ, ಸಾರ್ವಜನಿಕರು ಮತ್ತು ರೈತರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.

ಕಾಡಾನೆಗಳು ಕಂಡುಬಂದಿರುವ ಪ್ರದೇಶಗಳ ವಿವರ:

* ಸಕಲೇಶಪುರ ತಾಲ್ಲೂಕು: ಇಬ್ಬಡಿ ಕೊಣ್ಣೂರು ಗ್ರಾಮದ ರಾಮಚಂದ್ರ ಅವರ ತೋಟದ ಸುತ್ತಮುತ್ತ.

* ಹೆತ್ತೂರು ಮತ್ತು ಯಸಳೂರು ಹೋಬಳಿಗಳು: ಜೆಡಿಗದ್ದೆ, ಬಾಚಿಹಳ್ಳಿ ಗ್ರಾಮದ ಬಿರುಗುಂಡಿ ಬೆಟ್ಟ, ಗೊದ್ದು ಗ್ರಾಮದ ಗಾಳಿಬರೆ, ಮೆಕ್ಕಿರ ಮನೆ ಗ್ರಾಮದ ಹಳೆಮನೆದಿಣ್ಣೆ, ಬಾಜಿ ಮನೆ ಎಸ್ಟೇಟ್, ಹಾಡ್ಯ ಗ್ರಾಮದ ಹೆಬ್ಬರುಡಿ ಫಾರೆಸ್ಟ್, ಚಿಕ್ಕಂದೂರು ಅಕೇಶಿಯ ನಡುತೊಪು ಮತ್ತು ಹೊಳೆಸಾಲು, ಹಾಗೂ ಹಿರಿಯೂರು ಫಾರೆಸ್ಟ್ ಸುತ್ತಮುತ್ತ.

* ಬೇಲೂರು ತಾಲ್ಲೂಕು: ಕಾನಳ್ಳಿ ಫಾರೆಸ್ಟ್, ಲಕ್ಷ್ಮಿಪುರ, ಮತ್ತು ನಾಗೇನಹಳ್ಳಿ ಗ್ರಾಮದ ವೈ.ಸಿ. ಮಲ್ಲೇಗೌಡ್ರು ಹಾಗೂ ನಂಜೇಗೌಡ್ರು ಅವರ ತೋಟಗಳ ಸುತ್ತಮುತ್ತ.

* ಆಲೂರು ತಾಲ್ಲೂಕು: ದೊಡ್ಡಬೆಟ್ಟ ಮೀಸಲು ಅರಣ್ಯ ಮತ್ತು ಹಾಚಗೋಡನಹಳ್ಳಿ ಫಾರೆಸ್ಟ್ ಸುತ್ತಮುತ್ತ.

ಮುನ್ನೆಚ್ಚರಿಕೆಗಳು:

* ಸಂಜೆ ಮತ್ತು ಬೆಳಗಿನ ಜಾವದಲ್ಲಿ ಅನಗತ್ಯವಾಗಿ ಹೊರಗೆ ಹೋಗುವುದನ್ನು ತಪ್ಪಿಸಿ.

* ತಮ್ಮ ತೋಟ ಅಥವಾ ಜಮೀನುಗಳ ಸುತ್ತಮುತ್ತ ಅನುಮಾನಾಸ್ಪದ ಚಲನವಲನಗಳು ಕಂಡುಬಂದರೆ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿ.

* ಕಾಡಾನೆಗಳನ್ನು ಕೆಣಕಲು ಅಥವಾ ಅವುಗಳ ಹತ್ತಿರ ಹೋಗಲು ಪ್ರಯತ್ನಿಸಬೇಡಿ.
ಎಲ್ಲರೂ ಸುರಕ್ಷಿತವಾಗಿರಿ.

ಸೂಚನೆ: ಅರಣ್ಯ ಇಲಾಖೆ ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಯಾವುದೇ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ, ಅರಣ್ಯ ಇಲಾಖೆಯ ನಿಯಂತ್ರಣ ಕೊಠಡಿಗೆ ಸಂಪರ್ಕಿಸಬಹುದು.

ತಾವರೆ ಹೂ ಕೀಳಲು ಹೋಗಿ ವ್ಯಕ್ತಿ ಸಾವುಹಾಸನ: ವರಮಹಾಲಕ್ಷ್ಮಿ ಹಬ್ಬಕ್ಕೆ ತಾವರೆ ಹೂವು ಕೀಳಲು ಕೆರೆಗೆ ಇಳಿದಿದ್ದ ವ್ಯಕ್ತಿಯೊಬ್ಬರು ನೀರುಪಾಲಾದ ದು...
07/08/2025

ತಾವರೆ ಹೂ ಕೀಳಲು ಹೋಗಿ ವ್ಯಕ್ತಿ ಸಾವು
ಹಾಸನ: ವರಮಹಾಲಕ್ಷ್ಮಿ ಹಬ್ಬಕ್ಕೆ ತಾವರೆ ಹೂವು ಕೀಳಲು ಕೆರೆಗೆ ಇಳಿದಿದ್ದ ವ್ಯಕ್ತಿಯೊಬ್ಬರು ನೀರುಪಾಲಾದ ದುರ್ಘಟನೆ, ಆಲೂರು ತಾಲ್ಲೂಕಿನ ಬೆಳಮೆ ಗ್ರಾಮದಲ್ಲಿ ನಡೆದಿದೆ.
ರಾಮೇಶ್ವರ ಗ್ರಾಮದಲ್ಲಿ ವಾಸವಿದ್ದ ಬಿಕ್ಕೋಡು ಗ್ರಾಮದ ದೇವರಾಜ್ (38) ಮೃತಪಟ್ಟವರು. ವರಮಹಾಲಕ್ಷ್ಮಿ ಹಬ್ಬವಿರುವ ಕಾರಣ ಅವರು ಕೆರೆಗೆ ಹೂವು ಕೀಳಲು ಹೋಗಿದ್ದರು. ಈ ವೇಳೆ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಸುಮಾರು ಮೂರು ಗಂಟೆಗಳ ಕಾಲ ಶೋಧ ಕಾರ್ಯ ನಡೆಸಿ, ದೇವರಾಜ್ ಅವರ ಶವವನ್ನು ಹೊರತೆಗೆದರು. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಆಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಸಾರಿಗೆ ನೌಕರರಿಗೆ ಸ್ಪಷ್ಟನೆ: 14 ತಿಂಗಳ ಹಿಂಬಾಕಿ ವೇತನಕ್ಕೆ ಮಾತ್ರ ಒಪ್ಪಿಗೆಬೆಂಗಳೂರು: ರಾಜ್ಯ ಸಾರಿಗೆ ಸಂಸ್...
05/08/2025

ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಸಾರಿಗೆ ನೌಕರರಿಗೆ ಸ್ಪಷ್ಟನೆ:

14 ತಿಂಗಳ ಹಿಂಬಾಕಿ ವೇತನಕ್ಕೆ ಮಾತ್ರ ಒಪ್ಪಿಗೆ

ಬೆಂಗಳೂರು: ರಾಜ್ಯ ಸಾರಿಗೆ ಸಂಸ್ಥೆಗಳ ನೌಕರರ 38 ತಿಂಗಳ ಬಾಕಿ ವೇತನದ ಬೇಡಿಕೆ ಸಮಂಜಸವಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಸ್ಪಷ್ಟಪಡಿಸಿದ್ದಾರೆ. ಕೇವಲ 14 ತಿಂಗಳ ಹಿಂಬಾಕಿ ವೇತನ ಪಾವತಿಗೆ ಮಾತ್ರ ಸರ್ಕಾರ ಸಿದ್ಧವಿದೆ ಎಂದು ಅವರು ತಿಳಿಸಿದ್ದಾರೆ.

ಸಂಧಾನ ಸಭೆಯಲ್ಲಿ ನಡೆದದ್ದೇನು?

ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಧಾನ ಸಭೆಯಲ್ಲಿ ಸಾರಿಗೆ ನೌಕರರ ಸಂಘಟನೆಗಳ ಪ್ರಮುಖರು ತಮ್ಮ ಬೇಡಿಕೆಗಳನ್ನು ಮಂಡಿಸಿದರು. 2020ರ ಜನವರಿಯಿಂದ 2023ರ ಫೆಬ್ರವರಿವರೆಗಿನ 38 ತಿಂಗಳ ವೇತನ ಹೆಚ್ಚಳದ ಹಿಂಬಾಕಿ ಮತ್ತು 2024ರ ಜನವರಿಯಿಂದ ಹೊಸದಾಗಿ ವೇತನ ಹೆಚ್ಚಳ ಮಾಡುವಂತೆ ಅವರು ಪಟ್ಟು ಹಿಡಿದರು.

ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ

ನೌಕರರ ಬೇಡಿಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನಿಗಮಗಳ ಆರ್ಥಿಕ ಪರಿಸ್ಥಿತಿ ಮತ್ತು ಹಿಂದಿನ ಸರ್ಕಾರ 2023ರ ಮಾರ್ಚ್‌ನಲ್ಲಿ ಹೊರಡಿಸಿದ ಆದೇಶದಲ್ಲಿನ ದೋಷಗಳ ಬಗ್ಗೆ ವಿವರಿಸಿದರು. 38 ತಿಂಗಳ ವೇತನ ಹೆಚ್ಚಳದ ಹಿಂಬಾಕಿ ಪಾವತಿ ಅಸಾಧ್ಯ ಎಂದು ತಿಳಿಸಿದ ಅವರು, ಕೇವಲ 14 ತಿಂಗಳ ವೇತನ ಹೆಚ್ಚಳದ ಹಿಂಬಾಕಿ ನೀಡಲು ಮಾತ್ರ ಸರ್ಕಾರ ಸಿದ್ಧವಿದೆ ಎಂದು ಹೇಳಿದರು.

ಹಾಸನದಲ್ಲಿ ಬಸ್ ಮುಷ್ಕರದ ಬಿಸಿ ಪ್ರಯಾಣಿಕರಿಗೆ ತಟ್ಟಿದೆ. ರಾಜ್ಯಾದ್ಯಂತ ಸಾರಿಗೆ ನೌಕರರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮುಷ್ಕರ ನಡೆಸುತ...
05/08/2025

ಹಾಸನದಲ್ಲಿ ಬಸ್ ಮುಷ್ಕರದ ಬಿಸಿ ಪ್ರಯಾಣಿಕರಿಗೆ ತಟ್ಟಿದೆ. ರಾಜ್ಯಾದ್ಯಂತ ಸಾರಿಗೆ ನೌಕರರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮುಷ್ಕರ ನಡೆಸುತ್ತಿದ್ದಾರೆ. ಇದು ಹಾಸನ ಜಿಲ್ಲೆಯಲ್ಲೂ ಪರಿಣಾಮ ಬೀರಿದೆ.
ಹಾಸನದಲ್ಲಿ ನಿನ್ನೆ (ಸೋಮವಾರ) ಮಧ್ಯಾಹ್ನದಿಂದಲೇ ಕೆಲವು ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗದ ಕಾರಣ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಇಂದು ಕೂಡ ಬಹುತೇಕ KSRTC ಬಸ್‌ಗಳ ಓಡಾಟ ಸ್ಥಗಿತಗೊಂಡಿದೆ. ಇದರಿಂದಾಗಿ ಪ್ರಯಾಣಿಕರು ಪರದಾಡುತ್ತಿದ್ದಾರೆ.
ಪ್ರಯಾಣಿಕರ ತೊಂದರೆಯನ್ನು ತಪ್ಪಿಸಲು ಜಿಲ್ಲಾಡಳಿತವು ಖಾಸಗಿ ವಾಹನಗಳಿಗೆ ಬಸ್ ನಿಲ್ದಾಣದೊಳಗೆ ಪ್ರವೇಶಿಸಲು ಅವಕಾಶ ಕಲ್ಪಿಸಿದೆ. ಆದರೆ, ಮುಷ್ಕರದ ಬಗ್ಗೆ ಮೊದಲೇ ತಿಳಿದಿದ್ದ ಅನೇಕ ಜನರು ತಮ್ಮ ಪ್ರಯಾಣವನ್ನು ಮುಂದೂಡಿರುವ ಕಾರಣ ಬಸ್ ನಿಲ್ದಾಣದಲ್ಲಿ ಜನಸಂದಣಿ ವಿರಳವಾಗಿದೆ. ಹೀಗಾಗಿ ಖಾಸಗಿ ವಾಹನಗಳು ಪ್ರಯಾಣಿಕರಿಗಾಗಿ ಕಾಯುತ್ತಾ ನಿಂತಿವೆ.

.ದೇಹದಾರ್ಢ್ಯ ಪಟು ಜಿಮ್ ಸೋಮ ಶ್ವಾಸಕೋಶದ ಸೋಂಕಿನಿಂದ ನಿಧನಹಾಸನ: ರಾಷ್ಟ್ರಮಟ್ಟದ ದೇಹದಾರ್ಢ್ಯ ಸ್ಪರ್ಧೆಗೆ ಸಿದ್ಧತೆ ನಡೆಸುತ್ತಿದ್ದ ಜಿಲ್ಲೆಯ ಯು...
05/08/2025

.ದೇಹದಾರ್ಢ್ಯ ಪಟು ಜಿಮ್ ಸೋಮ ಶ್ವಾಸಕೋಶದ ಸೋಂಕಿನಿಂದ ನಿಧನ

ಹಾಸನ: ರಾಷ್ಟ್ರಮಟ್ಟದ ದೇಹದಾರ್ಢ್ಯ ಸ್ಪರ್ಧೆಗೆ ಸಿದ್ಧತೆ ನಡೆಸುತ್ತಿದ್ದ ಜಿಲ್ಲೆಯ ಯುವ ದೇಹದಾರ್ಢ್ಯ ಪಟು ಸೋಮಶೇಖರ್ (30) ಅವರು ಶ್ವಾಸಕೋಶದ ಸೋಂಕಿನಿಂದ ನಿಧನರಾಗಿದ್ದಾರೆ.

'ಜಿಮ್ ಸೋಮ' ಎಂದೇ ಖ್ಯಾತಿಯಾಗಿದ್ದ ಇವರು ಸಕಲೇಶಪುರ ತಾಲ್ಲೂಕಿನ ಬೆಳಗೋಡು ಗ್ರಾಮದವರಾಗಿದ್ದರು.
ಕಳೆದ ಒಂದು ವಾರದಿಂದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಸೋಮಶೇಖರ್ ಅವರನ್ನು ಲ ಪೋಷಕರು ಭಾನುವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅದೇ ರಾತ್ರಿ ಅವರು ಮೃತಪಟ್ಟಿದ್ದಾರೆ.
ಆರೂವರೆ ಅಡಿ ಎತ್ತರ ಮತ್ತು 110 ಕೆಜಿ ತೂಕವಿದ್ದ ಸೋಮಶೇಖರ್, ಬಾಡಿಬಿಲ್ಡಿಂಗ್ ಕ್ಷೇತ್ರದಲ್ಲಿ ಹಲವು ಟೈಟಲ್‌ಗಳನ್ನು ಗೆದ್ದಿದ್ದರು. ಅವರ ಅಕಾಲಿಕ ನಿಧನಕ್ಕೆ ಸ್ನೇಹಿತರು ಮತ್ತು ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

Address

Race Course Road
Hassan
573201

Opening Hours

Monday 9am - 12:30am
Tuesday 9am - 12:30am
Wednesday 9am - 12:30am
Thursday 9am - 12:30am
Friday 9am - 12:30am
Saturday 9am - 12:30am
Sunday 9am - 12:30am

Telephone

+919449852494

Alerts

Be the first to know and let us send you an email when JanathaMadhyama posts news and promotions. Your email address will not be used for any other purpose, and you can unsubscribe at any time.

Contact The Business

Send a message to JanathaMadhyama:

Share

Category