11/02/2023
ನನ್ನ ವಿರುದ್ಧ ಇರುವ ಗುಂಪು ನಾಳೆ ಸಭೆ ಕರೆದಿದೆ ನಾಳೆ ನಡೆಯುತ್ತಿರುವ ಜೆಡಿಎಸ್ ಸಭೆಗೂ ನನಗೂ ಸಂಬಂಧವಿಲ್ಲ, ನನ್ನ ಅಭಿಮಾನಿಗಳು ಅನ್ಯತಾ ಭಾವಿಸಬೇಡಿ ಶಾಸಕ ಶಿವಲಿಂಗೇಗೌಡ ಹೇಳಿಕೆ
ನಗರದಲ್ಲಿ ಭಾನುವಾರ ಜೆಡಿಎಸ್ ಪಕ್ಷದ ಬೃಹತ್ ಸಮಾವೇಷ ಹಮ್ಮಿಕೊಂಡಿದ್ದು ಸಮಾವೇಶಕ್ಕೆ ಮಾಜಿಪ್ರಧಾನಿ ದೇವೇಗೌಡರು, ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ರಾಜ್ಯಾದ್ಯಕ್ಷ ಸಿ ಎಂ ಇಬ್ರಾಹಿಂ ಕೂಡ ಭಾಗವಹಿಸಲಿದ್ದು ಸಹ್ರಸ ಸಂಖ್ಯೆಯ ಜನರನ್ನು ಸೇರಿಸಿ ಸಮಾವೇಶ ನಡೆಸಲು ತಯಾರಿ ನಡೆದಿದ್ದು ಕಾರ್ಯಕ್ರಮ ಕುರಿತು ಶಾಸಕ ಶಿವಲಿಂಗೇಗೌಡ ಹೇಳಿಕೆ ನೀಡಿ ಈ ಕಾರ್ಯಕ್ರಮಕ್ಕೂ ನನಗೂ ಯಾವುದೇ ಸಂಬಂಧವಿಲ್ಲಾ ಯಾರೂ ನನ್ನನ್ನು ಈ ವರೆಗೆ ಸಂಪರ್ಕ ಮಾಡಿಲ್ಲಾ ಆಹ್ವಾನವನ್ನೂ ನೀಡಿರುವುದಿಲ್ಲ, ಕರಪತ್ರದಲ್ಲಿ ನನ್ನ ಹೆಸರು ಮತ್ತು ಫೋಟೊ ಕೂಡ ಹಾಕಿಸಿದ್ದು ನನ್ನ ಅನುಮತಿ ಇಲ್ಲದೆ ಈ ರೀತಿ ಮಾಡಿರುವುದು ಖಂಡನೀತ ಇದು ತಪ್ಪು ಎಂದ ಅವರು ಅರಸೀಕೆರೆ ಕಾರ್ಯಕರ್ತರ ಸಭೆಣ ಸಮಾವೇಶ ಆಯೋಜನೆ ಮಾಡಬೇಕಾಗಿರುವುದು ನಾನು ಯಾರೋ ಬಂದು ಇಲ್ಲಿ ಮಾಡುವುದಲ್ಲ, ನಾನು ಮಾಡುವ ಕಾರ್ಯಕ್ರಮಕ್ಕೆ ನಾನು ಕರೆಯುತ್ತೇನ, ಭಾನುವಾರದ ಕಾರ್ಯಕ್ರಮ ನನಗೆ ಸಂಬಂಧ ಇಲ್ಲವಾದ್ದರಿಂದ ನನ್ನ ಅಭಿಮಾನಿಗಳು ಯಾರೂ ಕೂಡ ಬೇಸರವಾಗಬೇಡಿ ಎಂದು ತಿಳಿಸಿದರು.