FAST TV Kannada

FAST TV Kannada ಫಾಸ್ಟ್ ನ್ಯೂಸ್ ಹಾಸನ ಜಿಲ್ಲಾದ್ಯಂತ ನಿಮ್ಮ

U DIGITAL Channel No. 192
M DIGITAL Channel No. 75
NXT DIGITAL Channel NO. 87
ನೈಜ ಸುದ್ದಿ

04/08/2026

4 ಎಕರೆ 20 ಗುಂಟೆ ಭೂಮಿಗೆ, 10 ಲಕ್ಷದ 50 ಸಾವಿರಕ್ಕೆ ಬೇಡಿಕೆ ಇಟ್ಟಿದ್ದ ಭ್ರಷ್ಟಾಧಿಕಾರಿ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಹುಣಸೂರು ವಿಪವಿಭಾಗಾಧಿಕಾರಿ ಕಾವ್ಯರಾಣಿ...!

ಸಾವಿರ ಪದಗಳಲ್ಲಿ ಹೇಳುವುದನ್ನು ಒಂದು ಚಿತ್ರ ತಿಳಿಸುತ್ತದೆ: ಜೆ.ಮಂಜುನಾಥ್ಬೆಂಗಳೂರು, ಜುಲೈ 03 (ಕರ್ನಾಟಕ ವಾರ್ತೆ):ಸಾವಿರ ಪದಗಳಲ್ಲಿ ವಿಶ್ಲೇಷಣ...
04/08/2026

ಸಾವಿರ ಪದಗಳಲ್ಲಿ ಹೇಳುವುದನ್ನು ಒಂದು ಚಿತ್ರ ತಿಳಿಸುತ್ತದೆ: ಜೆ.ಮಂಜುನಾಥ್

ಬೆಂಗಳೂರು, ಜುಲೈ 03 (ಕರ್ನಾಟಕ ವಾರ್ತೆ):

ಸಾವಿರ ಪದಗಳಲ್ಲಿ ವಿಶ್ಲೇಷಣೆ ಮಾಡಬಹುದಾದುದನ್ನು ಒಂದು ಛಾಯಾಚಿತ್ರ ತಿಳಿಸುವುದರಿಂದ ಛಾಯಾಚಿತ್ರಕ್ಕಿರುವ ಶಕ್ತಿ ಎಂತಹದು ಎಂಬುದನ್ನು ತಿಳಿಸುತ್ತದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಾದ ಜೆ.ಮಂಜುನಾಥ್ ಅವರು ಅಭಿಪ್ರಾಯಪಟ್ಟರು.

ಅವರು ಇಂದು ಇಂದು ಕರ್ನಾಟಕ ಮಾಧ್ಯಮ ಅಕಾಡೆಮಿ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಕರ್ನಾಟಕ ಚಿತ್ರ ಕಲಾ ಪರಿಷತ್ತಿನಲ್ಲಿ ಹಮ್ಮಿಕೊಂಡಿದ್ದ FOCUS-ON-NEWS 2.0 ಪತ್ರಿಕಾ ಛಾಯಾಗ್ರಾಹಕರಿಗೆ ರಾಷ್ಟ್ರಮಟ್ಟದ ಛಾಯಾಚಿತ್ರ ಪ್ರದರ್ಶನ, ಸ್ಪರ್ಧೆ ಹಾಗೂ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಛಾಯಾಗ್ರಾಹಕರು ನಮ್ಮ ಸುತ್ತ ಮುತ್ತ ನಡೆಯುವ ಘಟನೆಗಳು ಮತ್ತು ಭಾವನೆಗಳನ್ನು ಕ್ಯಾಮಾರದಲ್ಲಿ ಸೆರೆ ಹಿಡಿದು ಜನರಿಗೆ ತಲುಪಿಸುತ್ತಾರೆ. ಸಾವಿರ ಪದಗಳು ತಿಳಿಸುವುದನ್ನು ಒಂದು ಛಾಯಾಚಿತ್ರ ಹೇಳುವುದಲ್ಲದೆ ನಮ್ಮ ಮನದಲ್ಲಿ ಬಹಳ ಕಾಲ ಉಳಿಯುತ್ತದೆ. ಕೆಲವೊಂದು ಸಾರಿ ಛಾಯಾಚಿತ್ರ ತೆಗೆಯಲು ಛಾಯಾಗ್ರಾಹಕರು ತುಂಬಾ ಸಹನೆಯಿಂದ ಕಾಯಬೇಕಾಗುತ್ತದೆ. ಹಾಗೆಯೇ ಕೆಲವೊಂದು ಬಾರಿ ತುಂಬಾ ಸೂಕ್ಷ್ಮತೆ ಮತ್ತು ಜಾಗರೂಕತೆಯಿಂದ ಕಾರ್ಯನಿರ್ವಹಿಸಬೇಕಾಗುತ್ತದೆ. ಹಾಗಾಗಿ ಅವರ ಶ್ರಮ ಮತ್ತು ಶ್ರದ್ಧೆ ಅತ್ಯಂತ ಪ್ರಶಂಸನೀಯ ಎಂದರು.

ಮಾಧ್ಯಮಕ್ಷೇತ್ರದಲ್ಲಿ ತಂತ್ರಜ್ಞಾನವು ವೇಗವಾಗಿ ಬದಲಾಗುತ್ತಿದ್ದು, ಆಧುನಿಕ ಉಪಕರಣಗಳ ಅವಶ್ಯಕತೆ ಇರುವುದರಿಂದ ಆಧುನಿಕತೆಗೆ ತಕ್ಕಂತೆ ಛಾಯಾಗ್ರಾಹಕರು ಕೂಡ ತಮ್ಮ ಕೌಶಲ್ಯವನ್ನು ಹೆಚ್ಚಿಸಿಕೊಳ್ಳುವುದು ಅಗತ್ಯವಾಗಿದೆ. ಕರ್ನಾಟಕ ವಿವಿಧ ಭಾಗಗಳಲ್ಲಿ ಈ ವೃತ್ತಿಯಲ್ಲಿ ತೊಡಗಿರುವವರಿಗೆ ತಂತ್ರಜ್ಞಾನದ ಅರಿವು, ಜಾಗೃತಿ ಮೂಡಿಸಲು ತರಬೇತಿ ನೀಡುವುದು ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ಅಕಾಡೆಮಿಯು ಹಮ್ಮಿಕೊಂಡಿರುವ ಎರಡು ದಿನಗಳ ಕಾರ್ಯಾಗಾರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಛಾಯಾಗ್ರಾಹಕರು ಭಾಗವಹಿಸುವ ಮೂಲಕ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಕಾರ್ಯಗಾರದ ಉದ್ಘಾಟನೆಯಲ್ಲಿ ಭಾಗವಹಿಸಿದ್ದ ಖ್ಯಾತ ಕನ್ನಡ ಚಲನಚಿತ್ರ ನಟ ಶ್ರೀಮುರಳಿ ಅವರು ಮಾತನಾಡಿ ಛಾಯಾಗ್ರಾಹಕರ ಕೆಲಸ ಸವಾಲಿನ ಕೆಲಸವಾಗಿದ್ದು, ಅವರು ಎಲೆಮರೆ ಕಾಯಿಯಂತೆ ಕೆಲಸ ನಿರ್ವಹಿಸುತ್ತಾರೆ ಎಂದರು.

ಒಂದು ಛಾಯಾಚಿತ್ರಕ್ಕಾಗಿ ಕೆಲವೊಂದು ಸಾರಿ ನೂರಾರು ಛಾಯಾಚಿತ್ರ ತೆಗೆಯಬೇಕಾಗುತ್ತದೆ. ಪರದೆಯ ಮೇಲೆ ಚಿತ್ರವನ್ನು ನೋಡಿ ಅದು ಚೆನ್ನಾಗಿದೆ, ಇದು ಚೆನ್ನಾಗಿಲ್ಲ ಎಂದು ನಾವು ಸುಲಭವಾಗಿ ವಿಶ್ಲೇಷಿಸುತ್ತೇವೆ. ಆದರೆ ಆ ಚಿತ್ರ ತೆಗೆಯಲು ಛಾಯಾಗ್ರಾಹಕನ ಶ್ರಮ ಎಷ್ಟಿರುತ್ತದೆ ಎಂಬುದನ್ನು ನಾವು ಮರೆಯುತ್ತೇವೆ. ಛಾಯಾಗ್ರಾಹಕರ ಕೆಲಸಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ.

ಛಾಯಾಚಿತ್ರ ಸ್ಪರ್ಧೆಗೆ ಅಂತಿಮವಾಗಿ ಪ್ರವೇಶ ಪಡೆದ 50 ಛಾಯಾಚಿತ್ರಗಳನ್ನು ವೀಕ್ಷಿಸಿದಾಗ ನನಗೆ ಸಂತೋಷ ಮತ್ತು ನೋವು ಎರಡು ಭಾಸವಾಯಿತು. ಕೆಲವು ಚಿತ್ರಗಳು ಜೀವನವನ್ನು ಸುಂದರವಾಗಿಸಿ, ಮನಸ್ಸನ್ನು ಉಲ್ಲಾಸಗೊಳಿಸಿದರೆ, ಮತ್ತೆ ಕೆಲವು ಮನಸಿಗೆ ನೋವವನ್ನು ನೀಡುತ್ತದೆ. ಇದೇ ಛಾಯಾಚಿತ್ರಕ್ಕಿರುವ ಶಕ್ತಿ ಎಂದರು.

ಛಾಯಾಚಿತ್ರ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಕೇರಳದ ಬಿನುರಾಜು, ದ್ವಿತೀಯ ಬಹುಮಾನ ಮುಂಬೈನ ಕುನಾಲ್ ಪಾಟೀಲ್ ಹಾಗೂ ತೃತೀಯ ಬಹುಮಾನ ತೆಲಂಗಾಣದ ವೀರಗೋಣಿ ರಜನಿಕಾಂತ್ ಅವರು ಪಡೆದಿರುವುದಾಗಿ ಈ ಸಂದರ್ಭದಲ್ಲಿ ಪ್ರಶಸ್ತಿ ವಿಜೇತರ ಹೆಸರನ್ನು ಘೋಷಣೆ ಮಾಡಲಾಯಿತು.

ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾದ ಶ್ರೀಮತಿ ಆಯೇಶಾ ಖಾನಂ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ, ಸಮಾಜದಲ್ಲಿ ಅವಘಡ ಅಥವಾ ಅನಾಹುತ ಸಂಭವಿಸಿದಾಗ ಎಲ್ಲರೂ ದೂರ ಓಡಿದರೆ ಛಾಯಾಗ್ರಾಹಕರು ಮಾತ್ರ ಸತ್ಯವನ್ನು ಜಗತ್ತಿಗೆ ತೋರಿಸಲು, ಪ್ರಾಣದ ಹಂಗನ್ನು ತೊರೆದು ಘಟನಾ ಸ್ಥಳಕ್ಕೆ ಹೋಗುತ್ತಾರೆ. ಅವರು ಮಾಧ್ಯಮ ಕ್ಷೇತ್ರದ ಕಣ್ಣುಗಳಿದ್ದಂತೆ ಎಂದರು.

ಈ ಬಾರಿಯ ಪ್ರದರ್ಶನಕ್ಕೆ ದೇಶದಾದ್ಯಂತ ಸುಮಾರು 222ಕ್ಕೂ ಹೆಚ್ಚ ಛಾಯಾಚಿತ್ರಗಳು ಬಂದಿದ್ದು, ಅಸೋಷಿಯೇಟಡ್ ಪ್ರೆಸ್ ನ ಹಿರಿಯ ಪೋಟೋ ಎಡಿಟರ್ ಎಜಾಜ್ ರಾಹಿ ಅವರು ಅತ್ಯಂತ ವೃತ್ತಿಪರವಾಗಿ, ನಿಷ್ಪÀಕ್ಷಪಾತವಾಗಿ ಅತ್ಯುತ್ತಮ ಚಿತ್ರಗಳನ್ನು ಆಯ್ಕೆ ಮಾಡಿದ್ದಾರೆ ಎಂದು ತಿಳಿಸಿದರು.

ಸುಳ್ಳು ಸುದ್ದಿ ಹಾಗೂ ತಪ್ಪು ಮಾಹಿತಿಗಳನ್ನು ತಡೆಯಲು ಅಕಾಡೆಮಿ ಶ್ರಮಿಸುತ್ತಿದೆ. ಎಐ ಮತ್ತು ಆಧುನಿಕ ತಂತ್ರಜ್ಞಾನ ಯುಗದಲ್ಲಿ ವೃತ್ತಿಪರ ಛಾಯಾಗ್ರಾಹಕರಿಗೆ ಸತ್ಯ ಸಂದತೆ ಮತ್ತು ಧೈರ್ಯ ಅತ್ಯಂತ ಪ್ರಮುಖವಾಗಿದ್ದು, ಕರ್ನಾಟಕದಲ್ಲಿ ಆರಂಭಗೊಂಡ ಈ ಪ್ರಯತ್ನವು ಈಗ ರಾಷ್ಟ್ರೀಯ ಮಟ್ಟ ತಲುಪಿದ್ದು, ಮುಂದಿನ ದಿನಗಳಲ್ಲಿ ದಕ್ಷಿಣ ಏಷ್ಯಾ ಮಟ್ಟದಲ್ಲಿ ಈ ಪ್ರದರ್ಶನವನ್ನು ವಿಸ್ತರಿಸುವ ಆಶಯವನ್ನು ವ್ಯಕ್ತಪಡಿಸಿದರು.

ಮುಂಬರುವ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಛಾಯಾಗ್ರಾಹಕರು ಈ ಕ್ಷೇತ್ರಕ್ಕೆ ಬರಬೇಕೆಂದು ಆಯೇಶಾ ಅವರು ಆಶಯ ವ್ಯಕ್ತಪಡಿಸಿದರು.

03/08/2026

ಮಲೆನಾಡಿನಲ್ಲಿ ಮುಂದುವರಿದ ಮಳೆ: ಅಂಜನಾಪುರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಬಿ.ವೈ. ವಿಜಯೇಂದ್ರ

ಶಿವಮೊಗ್ಗ : ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಶಿಕಾರಿಪುರ ತಾಲೂಕಿನ ಜೀವನಾಡಿಯಾಗಿರುವ ಅಂಜನಾಪುರ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿದೆ. ಜಲಾಶಯ ಭರ್ತಿಯಾಗಿ ಕೋಡಿ ಬಿದ್ದಿರುವ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಿಕಾರಿಪುರ ಕ್ಷೇತ್ರದ ಶಾಸಕ ಬಿ.ವೈ.ವಿಜಯೇಂದ್ರ ಅವರು ಜಲಾಶಯಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿ ಸಾಂಪ್ರದಾಯಿಕವಾಗಿ ಬಾಗಿನ ಅರ್ಪಿಸಿದರು.
ಶಿಕಾರಿಪುರ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಸುವ ಪ್ರಮುಖ ಮೂಲವಾಗಿರುವ ಈ ಡ್ಯಾಂ ತುಂಬಿ ಹರಿಯುತ್ತಿರುವುದರಿಂದ ಇಡೀ ತಾಲೂಕಿಗೆ ಹೊಸ ಜೀವಕಳೆ ಬಂದಂತಾಗಿದೆ. ಈ ವೇಳೆ ಮಾತನಾಡಿದ ಬಿ.ವೈ. ವಿಜಯೇಂದ್ರ, ರಾಜ್ಯಾದ್ಯಂತ ಸುರಿಯುತ್ತಿರುವ ಭಾರಿ ಮಳೆಗೆ ತೀವ್ರ ಹರ್ಷ ವ್ಯಕ್ತಪಡಿಸಿದರು. ಉತ್ತಮ ಮಳೆಯಿಂದಾಗಿ ನಾಡಿನ ಜಲಮೂಲಗಳು ಭರ್ತಿಯಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿದ್ದು, ಕೃಷಿ ಚಟುವಟಿಕೆಗಳು ಚುರುಕುಗೊಳ್ಳಲಿ ಎಂದು ಅವರು ಆಶಿಸಿದರು.

03/08/2026

ಬೆಂಗಳೂರು
ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕಾರ | ಡಿಕೆ ಶಿವಕುಮಾರ್ ಮತ್ತು ಜಿ. ಪರಮೇಶ್ವರ್ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಶಿವಲಿಂಗೇಗೌಡ

03/08/2026

ಬೇಲೂರು
ಅಬಕಾರಿ ಇಲಾಖೆಯಲ್ಲಿ ಬಾರಿ ಬ್ರಷ್ಟಾಚಾರ ನಡೆಯುತಿದ್ದು, ಅಕ್ರಮ ಮದ್ಯ ಮಾರಾಟಗಾರರಿಂದ ಮದ್ಯ ವಶಕ್ಕೆ ಪಡೆದು, ಅವರಿಂದಲೇ ಹಣವನ್ನೂ ಸಹ ಪಡೆದರೂ ಮತ್ತೆ ಅವರ ವಿರುದ್ಧವೇ ಕೇಸು ದಾಖಲಿಸಿ ಅಕ್ರಮಗಳಲ್ಲಿ ಅಧಿಕಾರಿಗಳು ಬಾಗಿಯಾಗಿದ್ದಾರೆಂದು ತಾಲೂಕು ಕೆ.ಡಿ.ಪಿ ಸದಸ್ಯರು ಸಭೆ ನಡೆಯುತಿದ್ದ ವೇದಿಕೆ ಮುಂಭಾಗದಲ್ಲೆ ಕೆಲಸ ಸಮಯ ಕುಳಿತು ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿತಿ ಧರಣಿ ನಡೆಸಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕ ಎಚ್.ಕೆ.ಸುರೇಶ್ ಅಧ್ಯಕ್ಷತೆಯಲ್ಲಿ ಶನಿವಾರ ಕರೆಯಲಾಗಿದ್ದ (ಕೆ.ಡಿ.ಪಿ)ಪ್ರಗತಿ ಪರಿಶೀಲನ ಸಭೆಯಲ್ಲಿ ಹಲವು ಇಲಾಖೆಗಳ ಕಾರ್ಯವೈಖರಿಯ ಕುರಿತು ತೀವ್ರ ಚರ್ಚೆಗೆ ಕಾರಣವಾಯಿತು. ಅಬಕಾರಿ ಇಲಾಖೆಯ ಕಾರ್ಯವೈಖರಿಯ ಕುರಿತು ಕೆಡಿಪಿ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ತಾಲೂಕಿನ ಕೆಲ ಬಾರ್‌ಗಳು ನಿಯಮ ಉಲ್ಲಂಘಿಸಿ ಬೆಳಗ್ಗೆಯೆ ತೆರೆಯುತಿದ್ದಾರೆ. ಇದರಿಂದ ಸಾಕಷ್ಟು ಸಮಸ್ಯೆಯಾಗುತ್ತಿದೆ. ಹಾಗೂ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿದರು.

ತಾಪಂ ಆಡಳಿತಾಧಿಕಾರಿ ಡಾ.ಬಿ.ಕೆ.ರಮೇಶ್, ತಹಶೀಲ್ದಾರ್ ಶ್ರೀಧರ್ ಕಂಕನವಾಡಿ, ತಾಪಂ ಇಒ ಸತೀಶ್ ಕುಮಾರ್, ಪೊಲೀಸ್ ಇನ್ಸ್ಪೆಕ್ಟರ್ ರೇವಣ್ಣ, ಕೆ.ಡಿ.ಪಿ ಸದಸ್ಯರಾದ ಜ್ಯೋತಿ, ನಂದೀಶ್, ನವೀನ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳಿದ್ದರು.

03/08/2026

ಅರಸೀಕೆರೆ ಶಾಸಕ ಶಿವಲಿಂಗೇಗೌಡಾಗೆ ಸಿಹಿ ತಿನ್ನಿಸಿ ಸಂಭ್ರಮ,
ಮನೆಗೆ ಹೋಗಿ ಸಿಹಿ ತಿನ್ನಿಸಿ ಸಂಭ್ರಮಿಸಿದ ಹಾಸನ ಸಂಸದ ಶ್ರೇಯಸ್ ಪಟೇಲ್,
ಸಚಿವ ಸ್ಥಾನಕ್ಕಾಗಿ ಮಾಜಿ ಸಿಎಂ ಹಾಗೂ ಹಾಲಿ ಸಿಎಂ ಬಳಿ ಕಸರತ್ತು ನೆಡೆಸಿದ್ದ ಹಾಸನ ಸಂಸದ ಶ್ರೇಯಸ್ ಪಟೇಲ್,
ಹಾಸನ ಜಿಲ್ಲೆಗೆ ಮಂತ್ರಿ ಸ್ಥಾನ ಕೊಡಿಸುವುದರಲ್ಲಿ ಫಲ ಕಂಡ ಶ್ರೇಯಸ್ ಪಟೇಲ್...

03/08/2026

ಆಲೂರು : ಟೋಲ್ ಕಟ್ಟಲ್ಲ. ಏನ್ ಮಾಡ್ತೀಯ ಲಾಂಗ್ ಹಿಡಿದು ಯುವಕರಿಂದ ಬೆದರಿಕೆ ಹಾಕಿದ ಘಟನೆ ಆಲೂರು ತಾಲೂಕಿನ ಬೈರಾಪುರ ಸಮೀಪದ ಚೌಲ್ಗೆರೆ ಟೋಲ್ ನಲ್ಲಿ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ 75 ಕ್ಕೆ ಸೇರಿದ ತಾಲೂಕಿನ ಬೈರಾಪುರ ಸಮೀಪದ ಚೌಲ್ಗೆರೆ ಗ್ರಾಮದ ಬಳಿ ಇರುವ ಟೋಲ್ ನಲ್ಲಿ ಪುಂಡ ಯುವಕರು ಲಾಂಗು ಮಚ್ಚು ಹಾಗೂ ಗನ್ ಹಿಡಿದು ಅಟ್ಟಹಾಸ ಮೆರೆದು ಸಿಬ್ಬಂದಿಗಳಿಗೆ ಬೆದರಿಕೆ ಹಾಕಿದ್ದಾರೆ.
ಸುಂಕ ತೆರಿಗೆ ಪಾವತಿಸುವಂತೆ ಟೋಲ್ ನ ಸಿಬ್ಬಂದಿಗಳು ಕೇಳಿದಾಗ ಕಾರಿನಿಂದ ಇಳಿದು ಬಂದು
ಟೋಲ್ ಕಟ್ಟಲ್ಲ. ಏನ್ ಮಾಡ್ತೀಯ ಎಂದು ಜಗಳಕ್ಕೆ ಹಿಳಿದು ಲಾಂಗ್ ಹಿಡಿದು ಯುವಕರಿಂದ ಬೆದರಿಕೆ ಹಾಕಿದ್ದಾರೆಂದು ತಿಳಿದು ಬಂದಿದ್ದು

ಲಾಂಗ್ ಮತ್ತು ಬಂದುಕುಗಳನ್ನು ಪ್ರದರ್ಶಿಸಿರುವ ದೃಶ್ಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ

03/08/2026

ಹುಬ್ಬಳ್ಳಿ
ಕುಂದಗೋಳ ತಾಲೂಕು ಹರಕುಣಿ ಗ್ರಾಮದಲ್ಲಿ..
ಭೀಕರ ಟ್ಯಾಕ್ಟರ್ ಪಲ್ಟಿ.
ಸ್ಥಳದಲ್ಲಿ ಸ್ಥಳದಲ್ಲೇ ಓರ್ವ ಸಾವು..

ಉಳಿದ ನಾಲ್ವರಿಗೆ ಗಂಭೀರ ಗಾಯ.,.
ಟ್ಯಾಕ್ಟರ್ ಪಲ್ಟಿ ಅವಘಡದಲ್ಲಿ.
ಹರಕುಣಿ ಗ್ರಾಮದ ರೈತ ತಿಪ್ಪಣ್ಣ ಕೊರಟ್ಟಿ. ಮಹೇಶ್ ಕೋರಿ ರಾಮಣ್ಣ ಬೇವಿನ ಮರದ ಮಲ್ಲೇಶ ದಿಂಡಾಲ್ ಕೊಪ್ಪ. ಮಂಜುನಾಥ್ ಬ್ಯಾಹಟ್ಟಿ..
ತಿಳಿದು ತಿಳಿದು ದೌಡಾಯಿಸಿದ ತಹಶೀಲ್ದಾರ್ ರಾಜು ಮಾ ವರ್ಕರ್. ಸಿ ಪಿ ಸಮೀರ್ ಉಲ್ಲಾಖಾನ್ , ಪಿಎಸ್ಐ ಶರಣಪ್ಪ ಸಂಗಳದ.
ಈ ಕುರಿತು ಕೊಂದುಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು...

03/08/2026

*ನಿರಂತರ ಸುದ್ದಿಗಳ ಅನಾವರಣ ಫಾಸ್ಟ್ ಟಿವಿ ಕನ್ನಡ 24×7 DIGITAL ಚಾನೆಲ್ ನಲ್ಲಿ.....*

*ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವವರು ಯಾರೆಲ್ಲಾ? ಇಲ್ಲಿದೆ ಪಟ್ಟಿ*

*ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಇಂದು (ಸೋಮವಾರ) ಸಂಜೆ 4.05ಕ್ಕೆ ರಾಜಭವನದಲ್ಲಿ ನಡೆಯಲಿದೆ.*

*ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವವರ ಪಟ್ಟಿಯನ್ನು ಕಾಂಗ್ರೆಸ್‌ ಹೈಕಮಾಂಡ್ ಅಂತಿಮಗೊಳಿಸಿದೆ.*

*ಪಿ. ಎಂ. ನರೇಂದ್ರಸ್ವಾಮಿ*

*ಶಿವರಾಜ್ ತಂಗಡಗಿ*

*ರುದ್ರಪ್ಪ ಲಮಾಣಿ*

*ಕೆ. ಎಸ್‌. ಬಸವಂತಪ್ಪ*

*ಬಿ. ನಾಗೇಂದ್ರ*

*ಟಿ. ರಘುಮೂರ್ತಿ*

*ಬಿ. ಜೆಡ್. ಜಮೀರ್ ಅಹ್ಮದ್ ಖಾನ್*

*ರಿಜ್ವಾನ್ ಅರ್ಷದ್*

*ಸಂತೋಷ್ ಲಾಡ್*

*ಮಧು ಬಂಗಾರಪ್ಪ*

*ಪುಟ್ಟರಂಗಶೆಟ್ಟಿ*

*ಮಂಕಾಳ ವೈದ್ಯ*

*ಡಾ. ಅಜಯ್ ಸಿಂಗ್*

*ಎನ್‌. ಚಲುವರಾಯಸ್ವಾಮಿ*

*ಕೆ. ಎಂ. ಶಿವಲಿಂಗೇಗೌಡ*

*ಎಚ್‌. ಸಿ. ಬಾಲಕೃಷ್ಣ*

*ಗಾಯತ್ರಿ ಶಾಂತೇಗೌಡ*

*ಬಸವರಾಜ ರಾಯರೆಡ್ಡಿ*

*ವಿಜಯಾನಂದ ಕಾಶಪ್ಪನವರ*

*ಲಕ್ಷ್ಮಣ ಸವದಿ*

Address

MIG 25. 3 Road Floor Kuvempunagar Near KEB Office
Hassan
573201

Alerts

Be the first to know and let us send you an email when FAST TV Kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to FAST TV Kannada:

Shortcuts

Share