
05/07/2025
ಇದು ನನ್ನ ಸ್ನೇಹಿತೆಯಾದ ಅಶ್ವಿನಿ ಬರೆದಿರುವ ಎರಡನೇ ಪುಸ್ತಕ ಅವಳು ಪ್ರಾಥಮಿಕ ಶಾಲೆಯಿಂದಲೂ ಪರಿಚಯ ಕೊನೆಗೆ ಡಿಗ್ರಿಯನ್ನು ಕೂಡ ಜೊತೆಗೆ ಮುಗಿಸಿದ ಅವಳು,
ಡಿಗ್ರಿ ಓದುತ್ತಿದ್ದಾಗಲೇ ತನ್ನ ಮೊದಲನೇ ಪುಸ್ತಕ ನವನಿಧಿ ಯನ್ನು ಬರೆಯಲು ಪ್ರಾರಂಭಿಸಿದಳು, ಅವಳು ಆ ಪುಸ್ತಕವನ್ನು ಬರೆದು ಬಿಡುಗಡೆ ಮಾಡುತ್ತಾಳೆ ಎಂಬ ನಂಬಿಕೆ ಯಾರಿಗೂ ಇರಲಿಲ್ಲ ಆದರೆ ಅವಳು ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನಲ್ಲಿ ಡಾ:: ಡಿಸೋಜರವರ ಕೈಯಲ್ಲಿ ತನ್ನ ನವನಿಧಿ ಪುಸ್ತಕವನ್ನು ಬಿಡುಗಡೆ ಮಾಡಿಸಿದಳು
ಆದರೆ ಅವಳ ಪ್ರಯತ್ನ ಅಲ್ಲಿಗೆ ನಿಲ್ಲಲಿಲ್ಲ ತನ್ನ ಎರಡನೇ ಪುಸ್ತಕ ಭಾವಾನುಭವಗಳು ಈ ಕೃತಿಗೆ ಶ್ರೀಮತಿ ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ಡಾಕ್ಟರ್ ರಾಜಕುಮಾರ್ ಅವರ ಎರಡನೇ ಪುತ್ರಿಯಾದ ಪೂರ್ಣಿಮಾ ರಾಜ್ ಕುಮಾರ್ ರವರ ಅನಿಸಿಕೆಗಳನ್ನ ಪಡೆದು ತನ್ನ ಪುಸ್ತಕದಲ್ಲಿ ಮುದ್ರಿಸಿದಳು,
ಅವಳ ಪ್ರಯತ್ನ ಕೊನೆಗೂ ಯಶಸ್ವಿ ಆಯಿತು.😊
ಅಂದುಕೊಂಡರೆ ಏನು ಬೇಕಾದರೂ ಸಾಧಿಸಬಹುದೆಂಬುದಕ್ಕೆ ಅವಳು ನನ್ನ ಮುಂದೆ ದೊಡ್ಡ ಉದಾಹರಣೆಯಾಗಿ ನಿಂತುಕೊಂಡಳು ಮುಂದಿನ ದಿನಗಳಲ್ಲಿ ಇನ್ನಷ್ಟು ಹಲವಾರು ಪುಸ್ತಕಗಳನ್ನು ಬರೆದು ಯಶಸ್ವಿಯನ್ನು ಪಡೆಯಲಿ ಎಂದು ನಾನು ಆಶಿಸುತ್ತೇನೆ.😌
ಪುಸ್ತಕಗಳಿಗಾಗಿ ಸಂಪರ್ಕಿಸಿ ಅಶ್ವಿನಿ ಬಿ ಆರ್ 95911 08233