30/05/2025
ಜಾವಗಲ್ : ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಜಾವಗಲ್ ಹೋಬಳಿಯಲ್ಲಿ ಪ್ರತಿದಿನ ಮುಂಜಾನೆ 5 ರಿಂದ 6:30 ಗಂಟೆಯ ವರೆಗೆ ಬಾಣಾವರ, ಅರಸೀಕೆರೆ, ಶಿವಮೊಗ್ಗ, ಬೆಂಗಳೂರು ಕಡೆಗೆ ಜಾವಗಲ್ ನಿಂದ ಪ್ರಯಾಣ ಮಾಡುವ ಸಾರ್ವಜನಿಕ ಪ್ರಯಾಣಿಕರಿಗೆ ಸೂಕ್ತ ಬಸ್ ವ್ಯವಸ್ಥೆ ಇಲ್ಲದೇ ಪರದಾಡುವ ಪರಿಸ್ಥಿತಿ ಬಂದೊದಗಿದೆ.
ಪ್ರತಿದಿನ ಮುಂಜಾನೆ ಚಿಕ್ಕಮಗಳೂರಿನಿಂದ ಜಾವಗಲ್ ಮಾರ್ಗದ ಮೂಲಕ ಬೆಂಗಳೂರು ತಲುಪುವ ಬಸ್ ಜಾವಗಲ್ ಗೆ ಸುಮಾರು 5:15 ರಿಂದ 5:30 ಗಂಟೆಯೊಳಗೆ ಜಾವಗಲ್ ತಲುಪುವಷ್ಟರಲ್ಲಿ ಆ ಬಸ್ ಸಂಪೂರ್ಣ ಜನರಿಂದ ತುಂಬಿ ಹೋಗಿದ್ದು. ಜಾವಗಲ್ ನಿಂದ ಹತ್ತುವ ಪ್ರಯಾಣಿಕರಿಗೆ ಆ ಬಸ್ ನಲ್ಲಿ ನಿಲ್ಲಲು ಸಹ ಸ್ಥಳ ಇರುವದಿಲ್ಲ. 6 ಗಂಟಿಗೆ ಜಾವಗಲ್ ನಿಂದ ಬಾಣಾವರಕ್ಕೆ ಹೊರಡುತಿದ್ದ ಗಂಗಾವತಿ ಬಸ್ ಸಹ ಇಲ್ಲವಾಗಿದ್ದು ಜನರಿಗೆ 6:30 ರ ನಂತರವಷ್ಟೆ ಬಸ್ನ ವ್ಯವಸ್ಥೆ ಇದೆ. ಇದರಿಂದ ಜಾವಗಲ್ ನಿಂದ ಬಾಣಾವರ, ಅರಸೀಕೆರೆ, ಹಾಗೂ ಶಿವಮೊಗ್ಗ, ಬೆಂಗಳೂರು ರೈಲು ಪ್ರಯಾಣಿಕರಿಗೆ ಮುಂಜಾನೆ ಸೂಕ್ತ ಬಸ್ ವ್ಯವಸ್ಥೆ ಇಲ್ಲದೇ ಪರದಾಡುವ ಪರಿಸ್ಥಿತಿ ಬಂದೊದಗಿದೆ.
ಜಾವಗಲ್ ಹೋಬಳಿಯ ಸುತ್ತಮುತ್ತಲಿನ ಗ್ರಾಮಸ್ತರು ಸಹ ಬೆಂಗಳೂರು ಪ್ರಯಾಣಿಸಲು ಜಾವಗಲ್ ಗೆ ಬಂದು ಕಾಯುತ್ತಾರೆ ಇದರಿಂದ ಪ್ರಯಾಣಿಕರ ಸಂಖ್ಯೆಯು ಹೆಚ್ಚಾಗಿದ್ದು ಬೇಲೂರು ಬಸ್ ಘಟಕ ಹಾಗೂ ಅರಸೀಕೆರೆ ಬಸ್ ಘಟಕ ವ್ಯವಸ್ಥಾಪಕರು ಈ ಸಮಸ್ಯೆಯನ್ನು ಪರಿಗಣಿಸಿ, ಸುಮಾರು ಮುಂಜಾನೆ 6 ಗಂಟೆಗೆ ಜಾವಗಲ್ ನಿಂದ ಬಾಣಾವರ ಹಾಗೂ ಅರಸೀಕೆರೆಗೆ ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸಿ ಕೊಡಬೇಕಾಗಿ ವಿನಂತಿ.