halli2dellhi

halli2dellhi 'ಹಳ್ಳಿ 2 ಡೆಲ್ಲಿ'
ಮೂಲೆ, ಮೂಲೆಯ ಸುದ್ದಿಗಳನ್ನು ಬಿತ್ತರಿಸುವ ಏಕೈಕ ಡಿಜಿಟಲ್ ಸುದ್ದಿ ಮಾಧ್ಯಮ.

"ಜನಪರ ನಿಲುವೇ ನಮ್ಮ ಅಸ್ತ್ರ, ಸತ್ಯವೇ ನಮ್ಮ ಬಲ"
(1)

13/08/2026

ಪ್ರಿಯಕರನ ಜೊತೆ ಸೇರಿ ಪತಿಯನ್ನೇ ವಿದ್ಯುತ್ ಶಾಕ್ ನೀಡಿ ಕೊ* ಪತ್ನಿ..!

ದೆಹಲಿ: ಖರ್ಚಿಗೆ ಹಣ ನೀಡದ ಹಾಗೂ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ 55 ವರ್ಷದ ಪತಿಯನ್ನು, 45 ವರ್ಷದ ಪತ್ನಿ ತನ್ನ 20 ವರ್ಷದ ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿರುವ ಘಟನೆ ನಡೆದಿದೆ. ಮೊದಲು ನಿದ್ರೆ ಮಾತ್ರೆ ನೀಡಿ, ನಂತರ ಖಾಸಗಿ ಅಂಗಗಳಿಗೆ ವಿದ್ಯುತ್ ಶಾಕ್ ಕೊಟ್ಟು ಕ್ರೂರವಾಗಿ ಹತ್ಯೆ ಮಾಡಲಾಗಿದೆ. ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದಾರೆ..!halli2delhi

13/08/2026

ಕೋಲಾರ: ಬಸ್‌ನಲ್ಲಿ ಲೈಂಗಿಕ ಕಿರುಕುಳ ನೀಡಿದ ಪುಂಡನಿಗೆ ಚಪ್ಪಲಿಯಿಂದ ತಕ್ಕ ಪಾಠ..!

ಕೋಲಾರ: ಪ್ರಯಾಣಿಸುತ್ತಿದ್ದ ಬಸ್‌ನಲ್ಲಿ ತನಗೆ ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿಗೆ ಯುವತಿಯೊಬ್ಬಳು ಚಲಿಸುವ ಬಸ್‌ನಲ್ಲೇ ಹಿಡಿದು ಚಪ್ಪಲಿಯಿಂದ ಥಳಿಸಿ ತಕ್ಕ ಪಾಠ ಕಲಿಸಿರುವ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ. ಕಿರುಕುಳ ನೀಡಿದ ವ್ಯಕ್ತಿಯ ವಿರುದ್ಧ ಸಮಯಪ್ರಜ್ಞೆ ಹಾಗೂ ಧೈರ್ಯದಿಂದ ಪ್ರತಿಭಟಿಸಿದ ಯುವತಿಯ ಸಾಹಸಕ್ಕೆ ನೆಟ್ಟಿಗರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ..!halli2delhi

12/08/2026
12/08/2026

ನೇಪಾಳದ ಮೂಲಕ ಭಾರತ ಪ್ರವೇಶಿಸಿದ್ದ ಪಾಕಿಸ್ತಾನಿ ಏಜೆಂಟ್ ಪೋಲಿಸ್ ವಶಕ್ಕೆ..!

ಪಶ್ಚಿಮ ಬಂಗಾಳ: ಪಾಕಿಸ್ತಾನದ ಗೂಢಚಾರಿ ರಾಣಾ ರೌಫ್ ಅಲಿಯಾಸ್ ವಹಾಬ್ ಆಲಮ್ ಎಂಬಾತನನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ನೇಪಾಳದ ಮೂಲಕ ಭಾರತ ಪ್ರವೇಶಿಸಿ ನಕಲಿ ಗುರುತಿನ ಚೀಟಿ (Fake ID) ಸೃಷ್ಟಿಸಿಕೊಂಡಿದ್ದ ಈತ, ಪಾಕಿಸ್ತಾನದ 'ಐಎಸ್‌ಐ' (ISI) ಜೊತೆ ಸಂಪರ್ಕದಲ್ಲಿದ್ದನು. ಭಾರತೀಯ ಸೇನೆ ಹಾಗೂ ರೈಲ್ವೆ ಇಲಾಖೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಗಳನ್ನು ಪಾಕಿಸ್ತಾನಿ ಹ್ಯಾಂಡ್ಲರ್‌ಗಳಿಗೆ ಈತ ರವಾನಿಸಿರುವ ಶಂಕೆ ವ್ಯಕ್ತವಾಗಿದೆ..!halli2delhi

12/08/2026

ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಪತ್ತೆ: ವಿಐಪಿ ಸೌಲಭ್ಯ ಆರೋಪಕ್ಕೆ ಪುಷ್ಟಿ..!

​ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಬಳಿ ಮೊಬೈಲ್ ಫೋನ್ ಪತ್ತೆಯಾಗಿದೆ. ಮಂಗಳವಾರ ಸಿಸಿಬಿ ಅಧಿಕಾರಿಗಳು ನಡೆಸಿದ ದಿಢೀರ್ ಪರಿಶೀಲನೆಯ ವೇಳೆ ಈ ಘಟನೆ ಬೆಳಕಿಗೆ ಬಂದಿದ್ದು, ಜೈಲಿನಲ್ಲಿ ವಿಐಪಿ ಸೌಲಭ್ಯ ನೀಡಲಾಗುತ್ತಿದೆ ಎಂಬ ಆರೋಪಗಳಿಗೆ ಪುಷ್ಟಿ ನೀಡಿದೆ..!halli2delhi

12/08/2026

ಕೋಲಂಬಿಯಾ ಭೂಕಂಪ: 234ಕ್ಕೂ ಹೆಚ್ಚು ಸಾ*, ಭಾರಿ ಹಾನಿ..!

ದಕ್ಷಿಣಅಮೆರಿಕಾ: ಕೋಲಂಬಿಯಾದಲ್ಲಿ ಸಂಭವಿಸಿದ 7.4 ತೀವ್ರತೆಯ ಭೀಕರ ಭೂಕಂಪಕ್ಕೆ 234ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, 900ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಸೋಮವಾರ ನಡೆದ ಈ ದುರಂತದಲ್ಲಿ 1,500ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿದ್ದು, 3,000ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಸುಮಾರು 96 ಕಿ.ಮೀ ಆಳದಲ್ಲಿ ಸಂಭವಿಸಿದ ಈ ಭೂಕಂಪದ ಬಳಿಕ, ಪಶ್ಚಿಮ ಕೋಲಂಬಿಯಾದಲ್ಲಿ ರಕ್ಷಣಾ ತಂಡಗಳು ಕುಸಿದ ಕಟ್ಟಡಗಳ ಅಡಿಯಿಂದ ಜನರನ್ನು ಹೊರತೆಗೆಯುವ ಕಾರ್ಯ ಮುಂದುವರಿಸಿವೆ..!halli2delhi

12/08/2026

ಮಹಾರಾಷ್ಟ್ರ: ಹಾಸ್ಟೆಲ್‌ನಲ್ಲಿ ಹಾವು ಕಡಿದು ಮೂವರು ವಿದ್ಯಾರ್ಥಿನಿಯರ ಸಾ*..!

ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯ ಜಪ್ಪಳ್ಳೆಯ ಗಿರಿಜನ ಆಶ್ರಮ ಶಾಲಾ ಹಾಸ್ಟೆಲ್‌ನಲ್ಲಿ ಸೋಮವಾರ ನಿದ್ರಿಸುತ್ತಿದ್ದ ಆರು ಬಾಲಕಿಯರಿಗೆ ಹಾವು ಕಚ್ಚಿದೆ. ತೀವ್ರ ಅಸ್ವಸ್ಥಗೊಂಡಿದ್ದ 8, 12 ಮತ್ತು 14 ವರ್ಷದ ಮೂವರು ಬಾಲಕಿಯರು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಉಳಿದ ಮೂವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಅವರಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ..!halli2delhi

10/08/2026

ಜಮೀನಿನಲ್ಲಿ ಹೂತಿಟ್ಟಿದ್ದ 5 ಲಕ್ಷ ರೂ. ನೋಟುಗಳನ್ನು ತಿಂದ ಗೆದ್ದಲು..!

ರಾಜಸ್ಥಾನ: ಮರೆವಿನ ಕಾಯಿಲೆಯಿಂದಾಗಿ ಜಮೀನಿನಲ್ಲಿ ಹೂತಿಟ್ಟಿದ್ದ 5 ಲಕ್ಷ ರೂ. ನಗದನ್ನು ಮರೆತಿದ್ದ ರಾಜಸ್ಥಾನದ ರೈತ ರಂಗು ಅವರಿಗೆ ಉಳುಮೆ ಮಾಡುವಾಗ ಶಾಕ್ ಕಾದಿತ್ತು. ಪ್ಲಾಸ್ಟಿಕ್ ಚೀಲದಲ್ಲಿದ್ದ ಹಣವನ್ನು ಗೆದ್ದಲುಗಳು ಸಂಪೂರ್ಣವಾಗಿ ತಿಂದು ಹಾಳುಮಾಡಿದ್ದವು. ಹಾಳಾದ ನೋಟುಗಳನ್ನು ಬದಲಾಯಿಸಿಕೊಳ್ಳಲು ಜೈಪುರದ ಆರ್‌ಬಿಐ ಅಥವಾ ಎಸ್‌ಬಿಐ ಮುಖ್ಯ ಕಚೇರಿಗೆ ತೆರಳುವಂತೆ ಸ್ಥಳೀಯ ಬ್ಯಾಂಕ್ ಸಲಹೆ ನೀಡಿದೆ..!halli2delhi


# news

10/08/2026

ಹಿಂದೂ ದೇವತೆಗಳ ವೇಷದಲ್ಲಿ ಆಕ್ಷೇಪಾರ್ಹ ನೃತ್ಯ: ಸಾರ್ವಜನಿಕರ ತೀವ್ರ ಆಕ್ರೋಶ..!

ವಿಡಿಯೋದಲ್ಲಿ ದೇವ-ದೇವತೆಗಳ ವೇಷ ಧರಿಸಿರುವ ವ್ಯಕ್ತಿಯೊಬ್ಬರು ಆಕ್ಷೇಪಾರ್ಹ ರೀತಿಯಲ್ಲಿ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ. ಈ ವಿಡಿಯೋ ಹೊರಬಿದ್ದ ನಂತರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಂಬಂಧ ಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ..!halli2delhi

10/08/2026

ಬೆಳೆ ಹಾನಿ ವೀಕ್ಷಣೆ: ಸಚಿವ ಸಂಪುಟ ಸಭೆಯಲ್ಲಿ ಚರ್ಚೆ - ಗೃಹ ಸಚಿವ ಪ್ರಿಯಾಂಕ್ ಖರ್ಗೆ..!

ಕಲಬುರಗಿ: ರಾಜ್ಯದಲ್ಲಿ ಸೂಪರ್ ಎಲ್‌ನಿನೋ ಪರಿಣಾಮದಿಂದ ಶೇ. 75ರಷ್ಟು ಮಳೆ ಕೊರತೆಯಾಗಿದ್ದು, ಬರದ ಸ್ಥಿತಿ ಕುರಿತು ಮುಂಬರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಅವರಾದ ಬಿ. ಹಾಗೂ ಕೆರೆ ಭೋಸಗಾ ಗ್ರಾಮಗಳ ಹೊಲಗಳಿಗೆ ಭೇಟಿ ನೀಡಿ, ಮಳೆಯಿಲ್ಲದೆ ಒಣಗುತ್ತಿರುವ ಉದ್ದು ಮತ್ತು ತೊಗರಿ ಬೆಳೆ ಹಾನಿಯನ್ನು ವೀಕ್ಷಿಸಿ ರೈತರ ಅಹವಾಲು ಆಲಿಸಿದರು..!‎⁨halli2delhi karnataka public

Address

KALABURAGI
Kalaburagi

Alerts

Be the first to know and let us send you an email when halli2dellhi posts news and promotions. Your email address will not be used for any other purpose, and you can unsubscribe at any time.

Shortcuts

Share