Radhas Thulunada Channel

Radhas Thulunada Channel ಶುಚಿಯಾಗಿ ರುಚಿಯಾಗಿ ತುಳುನಾಡಿನ ಹಾಗೂ ಭಾರತೀಯ ಅಡುಗೆಗಳು, ಹೊಸ ರುಚಿ, ಉಪಯೋಗವಾಗುವಂತಹ ಉತ್ತಮ ಮಾಹಿತಿಗಳು, ತುಳುನಾಡಿನ ಆಚರಣೆಗಳು..

ಹೇಗಿದ್ದೀರಾ ಫ್ರೆಂಡ್ಸ್? ತಿಂಡಿ ಆಯಿತಾ.. ಏನು ತಿಂಡಿ? ನನಗೆ ಊದಲು ದೋಸೆ (ಸಿರಿಧಾನ್ಯ ) - ಬೀನ್ಸ್ ಪಲ್ಯ ಸಿಹಿ ಗೆಣಸು ಬೇಯಿಸಿದ್ದು ಪೇರಳೆ ಡ್ರ...
14/10/2025

ಹೇಗಿದ್ದೀರಾ ಫ್ರೆಂಡ್ಸ್? ತಿಂಡಿ ಆಯಿತಾ.. ಏನು ತಿಂಡಿ?
ನನಗೆ ಊದಲು ದೋಸೆ (ಸಿರಿಧಾನ್ಯ ) - ಬೀನ್ಸ್ ಪಲ್ಯ
ಸಿಹಿ ಗೆಣಸು ಬೇಯಿಸಿದ್ದು
ಪೇರಳೆ
ಡ್ರೇಗನ್ ಹಣ್ಣು
ಪಪ್ಪಾಯ ಹಣ್ಣು
ಬಾಳೆಹಣ್ಣು
ಒಂದು ಪೋಷಕಾಂಷಭರಿತ ಉಪಹಾರ ಅನ್ನಬಹುದೇ ಇದನ್ನು? 🥄🥄🥄🥰👌👌😋

ಸಿರಿಧಾನ್ಯ ಊದಲು ದೋಸೆ

ರಾತ್ರಿಯೇ 1ಕಪ್ ಊದಲು, ಅದರ ಜೊತೆಗೆ 2 ದೊಡ್ಡ ಚಮಚ ಹುರುಳಿ ಕಾಳು, 2 ದೊಡ್ಡ ಚಮಚ ಹೆಸರು ಕಾಳು, 1ಚಮಚ ಅಲಸಂಡೆ ಕಾಳು, 2ದೊಡ್ಡ ಚಮಚ ರಾಗಿ ಚೆನ್ನಾಗಿ ತೊಳೆದು ಎಲ್ಲವನ್ನೂ ಒಟ್ಟಿಗೆ ನೆನೆಯಲು ಹಾಕಿದೆ. 1 Tspn ಮೆಂತೆ ತೊಳೆದು ಬೇರೇನೇ ನೆನೆ ಹಾಕಿದೆ.
ಬೆಳಿಗ್ಗೆ ನೆನೆಸಿದ ಮೆಂತೆ ನೀರು ಸಮೇತ ಮಿಕ್ಸಿ ಜಾರಿಗೆ ಹಾಕಿದೆ. ನಂತರ ಊದಲು ಹಾಗೂ ಕಾಳುಗಳನ್ನು ಕೂಡಾ ತೊಳೆದು ಮಿಕ್ಸಿ ಜಾರಿಗೆ ಹಾಕಿದೆ. ರುಚಿಗೆ ಉಪ್ಪು, ಸ್ವಲ್ಪ ನೀರು, 1/4ಕಪ್ ತೆಂಗಿನ ತುರಿ ಹಾಕಿ ನುಣ್ಣಗೆ ರುಬ್ಬಿ ಬೌಲ್ ಗೆ ಹಾಕಿ ಅದಕ್ಕೆ ತುರಿದ 1/4ಕಪ್ ತೆಂಗಿನ ತುರಿ ಸೇರಿಸಿ ಎಣ್ಣೆ ಸವರಿ ಬಿಸಿಯಾದ ಕಾವಲಿಗೆ ಅರ್ಧ ಸೌಟು ಹಿಟ್ಟು ಹಾಕಿ ಮುಚ್ಚಳ ಮುಚ್ಚಿ ಬೇಯಿಸಿ ತಿರುಗಿಸಿ ಹಾಕಿ ಮತ್ತೆ ಬೇಯಿಸಿ ಕಾವಲಿಯಿಂದ ತೆಗೆಯುವಾಗ ಸ್ವಲ್ಪ ತುಪ್ಪ ಸವರಿಕೊಂಡೆ.. ತಿನ್ನಲು ಆರೋಗ್ಯಕರ ಹಾಗೂ ಅಷ್ಟೇ ರುಚಿಯೂ.... 🥰

There is a saying "A good breakfast fuels up & get us ready for the day. " Having a good breakfast each morning set up o...
13/10/2025

There is a saying "A good breakfast fuels up & get us ready for the day. " Having a good breakfast each morning set up our metabolism. It's the important meal of the day.
I received a certificate for the healthy breakfast I made today. I am very happy. Thank you very much for all your encouragement and support.

Thank you so much to all Admins for this Certificate. ❤️❤️
Grateful to each member for making this journey so Special 🙏❤️

ಹೇಗಿದ್ದೀರಾ ಫ್ರೆಂಡ್ಸ್... ತಿಂಡಿಗೆ ಏನು ಮಾಡಿದ್ರಿ? ನಮ್ಮಲ್ಲಿ ಇವತ್ತು ಕೊರಲೆ ( ಸಿರಿಧಾನ್ಯ ) ಉಪ್ಪಿಟ್ಟು, ಅದರ ಜೊತೆಗೆ ಸ್ವಲ್ಪ ಹಣ್ಣು (ಪಪ...
13/10/2025

ಹೇಗಿದ್ದೀರಾ ಫ್ರೆಂಡ್ಸ್... ತಿಂಡಿಗೆ ಏನು ಮಾಡಿದ್ರಿ? ನಮ್ಮಲ್ಲಿ ಇವತ್ತು ಕೊರಲೆ ( ಸಿರಿಧಾನ್ಯ ) ಉಪ್ಪಿಟ್ಟು, ಅದರ ಜೊತೆಗೆ ಸ್ವಲ್ಪ ಹಣ್ಣು (ಪಪ್ಪಾಯ, ಬಾಳೆ ಹಣ್ಣು, ಡ್ರೇಗನ್ ಹಣ್ಣು )

ಕೊರಲೆ ಉಪ್ಪಿಟ್ಟು :
ರಾತ್ರಿನೇ ಒಂದು ಕಪ್ ಕೊರಲೆ ಹಾಗೂ 3ದೊಡ್ಡ ಚಮಚದಷ್ಟು ಬಟಾಣಿ ತೊಳೆದು ನೆನೆಯಲು ಹಾಕಿದ್ದೆ.
ಬೆಳಿಗ್ಗೆ ಮತ್ತೊಮ್ಮೆ ತೊಳೆದುಕೊಂಡು ಕುಕ್ಕರ್ ಗೆ ಹಾಕಿ ರುಚಿಗೆ ಉಪ್ಪು, ಸಣ್ಣ ತುಂಡು ಬೆಲ್ಲ, 1 1/2ಕಪ್ ನೀರು ಹಾಕಿ 4 ಸೀಟಿಯಲ್ಲಿ ಬೇಯಿಸಿಕೊಂಡೆ.
ಬಾಣಲೆಗೆ 2ದೊಡ್ಡ ಚಮಚ ತುಪ್ಪ ಹಾಕಿ ಅದಕ್ಕೆ 1ಚಮಚ ಉದ್ದಿನಬೇಳೆ, ಒಂದು ಚಮಚ ಸಾಸಿವೆ, 1ಕೆಂಪು ಮೆಣಸು ಕಟ್ ಮಾಡಿ ಹಾಕಿಕೊಂಡೆ. ಒಂದು ದೊಡ್ಡ ಈರುಳ್ಳಿ ಕಟ್ ಮಾಡಿ ಹಾಕಿ, ಚಿಟಿಕೆ ಉಪ್ಪು, 1/4ಚಮಚ ಅರಶಿನ ಪುಡಿ, ಜೊತೆಗೆ ಎರಡು ದಂಟು ಕರಿಬೇವು ಕೂಡಾ ಹಾಕಿ ಈರುಳ್ಳಿ ಸ್ವಲ್ಪ ಕಂದು ಬಣ್ಣಕ್ಕೆ ತಿರುಗುವ ತನಕ ಸಣ್ಣ ಉರಿಯಲ್ಲಿ ಹುರಿದುಕೊಂಡೆ. ಇದಕೆ ಬೇಯಿಸಿದ ಕೊರಲೆ ಹಾಗೂ ಬಟಾಣಿ, 3/4ಕಪ್ ತೆಂಗಿನತುರಿ, ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಶ್ರ ಮಾಡಿ ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ 2ನಿಮಿಷ ಬಿಸಿಯಾಗಲು ಬಿಡಿ. ರುಚಿಯಾದ ಉಪ್ಪಿಟ್ಟು ರೆಡಿ.
#ಉಪಹಾರ #ಸಿರಿಧಾನ್ಯ #ಕೊರಲೆ

ಈಗಂತೂ ಬಹಳ ಸೆಕೆ ಅಲ್ವಾ ಫ್ರೆಂಡ್ಸ್.. ತಿನ್ನೋಕೆ ಕುಡಿಯೋಕೆ ಏನಾದ್ರೂ ತಂಪು ತಂಪಾಗಿರೋದು ಇದ್ರೆ ಸ್ವಲ್ಪ ಸಮಾಧಾನ.. ಹಾಗಾಗಿ ಮನೆಯಲ್ಲಿ ಕದಲಿ ಬಾ...
12/10/2025

ಈಗಂತೂ ಬಹಳ ಸೆಕೆ ಅಲ್ವಾ ಫ್ರೆಂಡ್ಸ್.. ತಿನ್ನೋಕೆ ಕುಡಿಯೋಕೆ ಏನಾದ್ರೂ ತಂಪು ತಂಪಾಗಿರೋದು ಇದ್ರೆ ಸ್ವಲ್ಪ ಸಮಾಧಾನ.. ಹಾಗಾಗಿ ಮನೆಯಲ್ಲಿ ಕದಲಿ ಬಾಳೆ ಹಣ್ಣು ಇತ್ತು.. ಜೊತೆಗೆ ಸಿಹಿಯಾಳ ಕೂಡಾ ಇತ್ತು.. ಅದರಿಂದಲೇ ಕ್ಯಾಂಡಿ ಮಾಡಿದ್ದೆ. ರಾತ್ರಿ ಮಾಡಿಟ್ರೆ ಬೆಳಿಗ್ಗೆಗೆ ಗಟ್ಟಿಯಾಗಿತ್ತು. ಯಾವಾಗ ಬೇಕಾದ್ರೂ ತಿನ್ನಬಹುದು ಅಲ್ಲವೇ.. ಕ್ಯಾಂಡಿ ಅಂತು ಬಹಳ ರುಚಿ ಇತ್ತು. #ಕ್ಯಾಂಡಿ

ಮಧ್ಯಾಹ್ನಕ್ಕೆ ಹೀಗೊಂದು ಊಟದ ತಯಾರು.. ಗಮ್ಮತ್ತು ಅಂತ ಏನೂ ಇಲ್ಲ.. ಆದ್ರೂ ಗಮ್ಮತ್ತಿನ ಊಟ.. ತುಪ್ಪದ ಅನ್ನ -ಮೊಸರು -ಮೊಟ್ಟೆ - ಪಪ್ಪಾಯ ಪಲ್ಯ ಕ...
12/10/2025

ಮಧ್ಯಾಹ್ನಕ್ಕೆ ಹೀಗೊಂದು ಊಟದ ತಯಾರು.. ಗಮ್ಮತ್ತು ಅಂತ ಏನೂ ಇಲ್ಲ.. ಆದ್ರೂ ಗಮ್ಮತ್ತಿನ ಊಟ..
ತುಪ್ಪದ ಅನ್ನ -ಮೊಸರು -ಮೊಟ್ಟೆ - ಪಪ್ಪಾಯ ಪಲ್ಯ
ಕುಚುಲಕ್ಕಿ ಅನ್ನ - ಬಂಗುಡೆ ಪುಳಿಮುಂಚಿ
ತೆಂಗಿನಕಾಯಿ ದೋಸೆ - ಬಟಾಣಿ ಹಾಗೂ ಆಲೂಗಡ್ಡೆ ಗಸಿ
ಊಟ ಆದ ನಂತರ ಕೊನೆಗೆ ತಿನ್ನಲು ಮನೆಯಲ್ಲಿಯೇ ಮಾಡಿದ ಸಿಹಿಯಾಳ ಹಾಗೂ ಬಾಳೆ ಹಣ್ಣಿನ ಐಸ್ಕ್ರೀಂ ( ಪ್ಲೈನ್ ಐಸ್ಕ್ರೀಂ ಬೇಡ ಎಂದು ಬೌಲ್ ನ ತಳಕ್ಕೆ ಸ್ವಲ್ಪ ಕದಲಿ ಬಾಳೆ ಹಣ್ಣು, ಡ್ರೇಗನ್ ಹಣ್ಣು, ಪಪ್ಪಾಯ ಚಿಕ್ಕದಾಗಿ ಕಟ್ ಮಾಡಿ ಹಾಕಿದ್ದೆ. ಸ್ವಲ್ಪ ಬಾದಾಮು, ಗೋಡಂಬಿ ತುರಿದು ಹಾಕಿದ್ದೆ.. ) ಬಹಳ ರುಚಿಯಾಗಿತ್ತು.
#ಲಂಚ್ಐಡಿಯಾ #ಮಜ್ಜಿಗೆಹುಳಿ #ಸಿಹಿಯಾಳದೋಸೆ

Thank you very much to all dear Admins for this Certificate.❤️ Grateful  to each member for making this journey  so spec...
11/10/2025

Thank you very much to all dear Admins for this Certificate.❤️ Grateful to each member for making this journey so special. 🙏💖🎉


ಮಧ್ಯಾಹ್ನಕ್ಕೊಂದು ತರಕಾರಿ ಅಡುಗೆ ಮಾಡಿಕೊಂಡೆ. ಸರಳ ಊಟ. ಆದ್ರೂ ಐಟಂ ಜಾಸ್ತಿ ಇತ್ತು. ಐಟಂ ಜಾಸ್ತಿ ಇದ್ರೂ ಕೂಡಾ ಎಲ್ಲವೂ ಹದವಾದ ರುಚಿಯಲ್ಲಿ ಇನ್...
10/10/2025

ಮಧ್ಯಾಹ್ನಕ್ಕೊಂದು ತರಕಾರಿ ಅಡುಗೆ ಮಾಡಿಕೊಂಡೆ. ಸರಳ ಊಟ. ಆದ್ರೂ ಐಟಂ ಜಾಸ್ತಿ ಇತ್ತು. ಐಟಂ ಜಾಸ್ತಿ ಇದ್ರೂ ಕೂಡಾ ಎಲ್ಲವೂ ಹದವಾದ ರುಚಿಯಲ್ಲಿ ಇನ್ನೂ ಬೇಕು ಎನ್ನುವಷ್ಟು ರುಚಿಕರ.. 🤩🍴👌
ಮಿಕ್ಸ್ ಉಪ್ಪಿನಕಾಯಿ, ಕುಚುಲಕ್ಕಿ ಅನ್ನ, ಅಲಸಂಡೆ ಪಲ್ಯ, ಪಪ್ಪಾಯ ಮಜ್ಜಿಗೆ ಹುಳಿ, ಬೆಳಿಗ್ಗೆ ದೋಸೆಗೆ ಮಾಡಿದ್ದ ಬೀನ್ಸ್ ಹಾಗೂ ಬಟಾಣಿ ಗಸಿ, ಮೊಸರು, ಕ್ಯಾರಟ್..
ಇದೊಂದು ಆರೋಗ್ಯಕರ ಊಟ ಎಂದು ಹೇಳಬಹುದೇ ನಿಮ್ಮ ಪ್ರಕಾರ..?

ಪಪ್ಪಾಯ ಮಜ್ಜಿಗೆ ಹುಳಿ :

ಒಂದು ಚಿಕ್ಕ ಗಾತ್ರದ ಪಪ್ಪಾಯ ಸಿಪ್ಪೆ ಹಾಗೂ ಬೀಜ ತೆಗೆದು ಮಧ್ಯಮ ಗಾತ್ರದ ಹೋಳುಗಳಾಗಿ ತುಂಡು ಮಾಡಿಕೊಂಡು (2ಕಪ್ ಆಗುವಷ್ಟು ಇತ್ತು ಹೋಳು ) ಅದಕ್ಕೆ ಸ್ವಲ್ಪ ನೀರು ಹಾಕಿ ದೊಡ್ಡ ಉರಿಯಲ್ಲಿ ಒಂದು ಸಣ್ಣ ಕುದಿ ಬರುವ ತನಕ ಮುಚ್ಚಳ ಮುಚ್ಚಿ ಬೇಯಿಸಿ. ಒಂದು ಕುದಿ ಬಂದಾಗ ಉರಿಯನ್ನು ಮಧ್ಯಮ ಮಾಡಿಕೊಂಡು ರುಚಿಗೆ ಉಪ್ಪು, ಚಿಕ್ಕ ತುಂಡು ಬೆಲ್ಲ, ಚಿಟಿಕೆ ಅರಶಿನ ಹುಡಿ ಸೇರಿಸಿ ಬೇಯಿಸಿ. ಪೂರ್ತಿ ಮೆತ್ತಗೆ ಆಗಬಾರದು ಹೋಳುಗಳು.. ಹದವಾಗಿ ಬೇಯಿಸಿ. ಬೇಯಲು ಇಡುವಾಗ ಮಸಾಲೆ ತಯಾರು ಮಾಡಬೇಕು. ಮಿಕ್ಸಿ ಜಾರಿಗೆ 3/4ಕಪ್ ತೆಂಗಿನ ತುರಿ (ಸ್ವಲ್ಪ ಹಸಿ ತೆಂಗಿನಕಾಯಿ ಆದರೆ ರುಚಿ ಹೆಚ್ಚು ), ಕಾರಕ್ಕೆ ಹಸಿ ಮೆಣಸು (ನಾನು ಗಾಂಧಾರಿ ಮೆಣಸು ಹಾಕಿದ್ದು), 1/4ಚಮಚ ಬೆಳ್ತಿಗೆ ಅಕ್ಕಿ, ಸ್ವಲ್ಪ ನೀರು, ಜೀರಿಗೆ - 1/4ಚಮಚ, 2ಎಸಳು ಬೆಳ್ಳುಳ್ಳಿ, ಒಂದು ಚಿಕ್ಕ ತುಂಡು ಈರುಳ್ಳಿ ಹಾಕಿ ನುಣ್ಣಗೆ ರುಬ್ಬಿ. ( ಜೀರಿಗೆ, ಬೆಳ್ಳುಳ್ಳಿ, ಈರುಳ್ಳಿ ಹಾಕದೆ ಕೂಡಾ ಮಾಡಬಹುದು ). ರುಬ್ಬಿದ ಮಸಾಲೆಯನ್ನು ಪಪ್ಪಾಯ ಹದವಾಗಿ ಬೇಯುತ್ತಾ ಬರುವಾಗ ಅದಕ್ಕೆ ಸೇರಿಸಿ, ಬೇಕಾದಲ್ಲಿ ಸ್ವಲ್ಪ ನೀರು ಸೇರಿಸಿ ಒಂದು ಕುದಿ ಬರಿಸಿ. ಜಾಸ್ತಿ ತೆಳ್ಳಗೆ ಮಾಡಬಾರದು. ಕುದಿ ಬರುವಾಗ 1/2ಕಪ್ ಮೊಸರು ಸೇರಿಸಿ ಜೊತೆಗೆ ಎರಡು ದಂಟು ಕರಿಬೇವು ಸೇರಿಸಿ ಒಮ್ಮೆ ಮಿಶ್ರ ಮಾಡಿ ಮತ್ತೆ ಕುದಿ ಬರುತ್ತಿದೆ ಅಂದಾಗ ಸ್ಟವ್ ಆಫ್ ಮಾಡಿ.. ನಂತರ ಒಗ್ಗರಣೆಗೆ 2ಚಮಚ ತೆಂಗಿನ ಎಣ್ಣೆಗೆ 1/2ಚಮಚ ಸಾಸಿವೆ, 5ಮೆಂತೆ, 1ಕೆಂಪು ಮೆಣಸು ತುಂಡು ಮಾಡಿ ಹಾಕಿ ಸಾಸಿವೆ ಸಿಡಿತಾ ಬರುವಾಗ ಸ್ವಲ್ಪ ಕರಿಬೇವು ಸೇರಿಸಿ ಮಜ್ಜಿಗೆ ಹುಳಿಗೆ ಒಗ್ಗರಣೆ ಮಾಡಿ ಮುಚ್ಚಳ ಮುಚ್ಚಿ ಸ್ವಲ್ಪ ಹೊತ್ತು ಹಾಗೆಯೇ ಬಿಟ್ಟು ನಂತರ ಮಿಶ್ರ ಮಾಡಿಕೊಂಡರೆ ರುಚಿಯಾದ ಪಪ್ಪಾಯ ಮಜ್ಜಿಗೆ ಹುಳಿ ರೆಡಿ.. #ಮಜ್ಜಿಗೆಹುಳಿ

ಶುಭೋದಯ ಸ್ನೇಹಿತರೇ.. ಹೇಗಿದ್ದೀರಾ ಎಲ್ಲರೂ.. ತಿಂಡಿ ಆಯಿತಾ.. ಏನು ತಿಂಡಿ? ನನಗಿವತ್ತು ಸಿಹಿಯಾಳ, ಮೆಂತೆ, ತೆಂಗಿನಕಾಯಿ ಮೊಳಕೆ ಹಾಕಿ ಮಾಡಿದ ದೋ...
10/10/2025

ಶುಭೋದಯ ಸ್ನೇಹಿತರೇ.. ಹೇಗಿದ್ದೀರಾ ಎಲ್ಲರೂ.. ತಿಂಡಿ ಆಯಿತಾ.. ಏನು ತಿಂಡಿ?
ನನಗಿವತ್ತು ಸಿಹಿಯಾಳ, ಮೆಂತೆ, ತೆಂಗಿನಕಾಯಿ ಮೊಳಕೆ ಹಾಕಿ ಮಾಡಿದ ದೋಸೆ - ಬೀನ್ಸ್ ಹಾಗೂ ಬಟಾಣಿ ಗಸಿ🤗👍💛🥄🥄
ಮತ್ತೆ ಕ್ಯಾರಟ್, ಡ್ರೇಗನ್ ಹಣ್ಣು, ಬಾಳೆ ಹಣ್ಣು..

ಸಿಹಿಯಾಳ ದೋಸೆ ಮಾಡಿದ ವಿಧಾನ :
1 ಕಪ್ ಅಕ್ಕಿ ತೊಳೆದು ನಿನ್ನೆ ಮಧ್ಯಾಹ್ನ ನೆನೆಯಲು ಹಾಕಿದ್ದೆ. ಜೊತೆಗೆ 1 ಚಮಚ ಮೆಂತೆ ಬೀಜ ಕೂಡಾ ತೊಳೆದು ನೆನೆಯಲು ಹಾಕಿದೆ.
ರಾತ್ರಿ ಅಕ್ಕಿಯನ್ನು ಮತ್ತೊಮ್ಮೆ ತೊಳೆದು ಮಿಕ್ಸಿ ಜಾರಿಗೆ ಹಾಕಿದೆ. ಜೊತೆಗೆ ನೆನೆಸಿದ ಮೆಂತೆ ನೀರು ಸಮೇತ ಹಾಕಿದೆ. ಒಂದು ಸಣ್ಣ ತೆಂಗಿನಕಾಯಿ ಮೊಳಕೆ (ತೆಂಗಿನಕಾಯಿ ಒಳಗಡೆ ಕೆಲವೊಮ್ಮೆ ಅದರ ಮೊಳಕೆ ಇರುತ್ತದೆ ಅಲ್ಲವೇ) ಕೂಡಾ ಹಾಕಿದೆ. 1/2ಕಪ್ ಸಿಹಿಯಾಳದ ಗಂಜಿ ಅಥವಾ ಬಾವೆ, ರುಚಿಗೆ ಉಪ್ಪು, ಸ್ವಲ್ಪ ನೀರು ಸೇರಿಸಿ ಚಿರೋಟಿ ರವೆಯ ಹದಕ್ಕೆ ಉದ್ದಿನ ದೋಸೆಯ ಹಿಟ್ಟಿಗಿಂತ ಸ್ವಲ್ಪ ದಪ್ಪ ರುಬ್ಬಿ, ಹಿಟ್ಟನ್ನು ಒಂದು ಪಾತ್ರೆಗೆ ಹಾಕಿ ಮುಚ್ಚಿ ಇಟ್ಟಿದ್ದೆ. ಕಲಸಿಲ್ಲ. ಬೆಳಿಗ್ಗೆ ಎದ್ದು ದೋಸೆ ಮಾಡಿಕೊಂಡೆ. ದೋಸೆಯನ್ನು ತಿರುಗಿಸಿ ಹಾಕಿ ಕೂಡಾ ಬೇಯಿಸಿಕೊಳ್ಳಿ.. ಆಗ ರುಚಿ ಹೆಚ್ಚು.
ಈ ರೆಸಿಪಿ ನಾನು ಯಾಕೆ ಶೇರ್ ಮಾಡಿದೆ ಅಂದ್ರೆ ಯಾವುದನ್ನು ಕೂಡಾ ಹೆಚ್ಚು ಪ್ರಮಾಣದಲ್ಲಿ ಇರುವಾಗ ವೇಸ್ಟ್ ಮಾಡದೆ ಅದನ್ನು ನಿಮ್ಮ ಕ್ರಿಯೇಟಿವಿಟಿ ಯೋಚನೆಯನ್ನು ಬಳಸಿಕೊಂಡು ಹೀಗೆ ರುಚಿಯಾದ ಆರೋಗ್ಯಕರ ಅಡುಗೆಗಳನ್ನು ಮಾಡಬಹುದು. ಭಿನ್ನ ರುಚಿ.. ಹೊಸ ರುಚಿ.. ತಿನ್ನುವ ಎಲ್ಲರಿಗೂ ಖುಷಿಯೋ ಖುಷಿ ಅಲ್ಲವೇ? ಟ್ರೈ ಮಾಡಿ ನೀವು ಕೂಡಾ.. #ಸಿಹಿಯಾಳದೋಸೆ #ಬನ್ನಂಗಾಯಿದೋಸೆ #ಮೆಂತೆದೋಸೆ

ನಮಸ್ಕಾರ ಸ್ನೇಹಿತರೇ.. ಹೇಗಿದ್ದೀರಾ ಎಲ್ಲರೂ.. ರಾತ್ರಿಯ ಊಟ ಆಯಿತಾ.. ಏನು ಊಟಕ್ಕೆ?ನನಗಿವತ್ತು ಬನ್ನಂಗಾಯಿ ದೋಸೆ (ಅಕ್ಕಿ, ರಾಗಿ, ಬನ್ನಂಗಾಯಿ ಹ...
09/10/2025

ನಮಸ್ಕಾರ ಸ್ನೇಹಿತರೇ.. ಹೇಗಿದ್ದೀರಾ ಎಲ್ಲರೂ.. ರಾತ್ರಿಯ ಊಟ ಆಯಿತಾ.. ಏನು ಊಟಕ್ಕೆ?
ನನಗಿವತ್ತು ಬನ್ನಂಗಾಯಿ ದೋಸೆ (ಅಕ್ಕಿ, ರಾಗಿ, ಬನ್ನಂಗಾಯಿ ಹಾಕಿ ಮಾಡಿದ್ದು 👌👌
ಹೆಸರು ಕಾಳು ಹಲಸಿನ ಬೀಜದ ಗಸಿ
ಮೂಲಂಗಿ ಬಟಾಣಿ ಪಲ್ಯ
ಸ್ವಲ್ಪ ಡ್ರೇಗನ್ ಹಣ್ಣು...
ರಾತ್ರಿಯ ಊಟ ಅಂದ್ರೆ ನಾವು 7ಗಂಟೆಗೆ ಹೆಚ್ಚಾಗಿ ಮಾಡುತ್ತೇವೆ.. ಹಾಗಾಗಿ ಸ್ವಲ್ಪ ಡ್ರೇಗನ್ ಹಣ್ಣು ಕೂಡಾ ಸೇವಿಸಿದೆವು..

ಬನ್ನಂಗಾಯಿ ದೋಸೆ ಇವತ್ತು ಸ್ವಲ್ಪ ಭಿನ್ನವಾಗಿ ಮಾಡೋಣ ಅನಿಸಿತು. ಬೆಳಿಗ್ಗೆನೇ 1ಕಪ್ ಬೆಳ್ತಿಗೆ ಅಕ್ಕಿ ಹಾಗೂ 3 ದೊಡ್ಡ ಚಮಚದಷ್ಟು ಇಡಿ ರಾಗಿ ತೊಳೆದು ನೆನೆಯಲು ಹಾಕಿದ್ದೆ. ಸಂಜೆ ಮತ್ತೊಮ್ಮೆ ತೊಳೆದು ರುಬ್ಬುವ ಕಲ್ಲಿಗೆ ಹಾಕಿ ರುಚಿಗೆ ತಕ್ಕಷ್ಟು ಉಪ್ಪು 3/4ಕಪ್ ಬನ್ನಂಗಾಯಿ (ಸ್ವಲ್ಪ ಪೂರ್ತಿ ಬೆಳೆಯದ ತೆಂಗಿನಕಾಯಿ ) ಹೋಳು ಹಾಗೂ ಸ್ವಲ್ಪ ನೀರು ಸೇರಿಸಿ ಉದ್ದಿನ ದೋಸೆ ಹಿಟ್ಟಿಗಿಂತ ಸ್ವಲ್ಪ ದಪ್ಪ ಇರುವ ರೀತಿಯಲ್ಲಿ ನುಣ್ಣಗೆ ರುಬ್ಬಿ 2ಗಂಟೆ ಮುಚ್ಚಳ ಮುಚ್ಚಿ ಹಾಗೆ ಬಿಟ್ಟೆ. ತಕ್ಷಣ ಕೂಡಾ ಮಾಡಬಹುದು ದೋಸೆ. ಸ್ವಲ್ಪ ಹೊತ್ತು ಇಟ್ಟು ನಂತರ ಮಾಡಿದ್ರೆ ಬೇರೇನೇ ರುಚಿ.
ಬಿಸಿಯಾದ ಕಾವಲಿಗೆ ಎಣ್ಣೆ ಸವರಿ 1/2ಸೌಟು ಹಿಟ್ಟು ಹಾಕಿ ಮಧ್ಯಮ ಉರಿಯಲ್ಲಿ ಮುಚ್ಚಳ ಮುಚ್ಚಿ ಬೇಯಿಸಿಕೊಂಡು ತಿರುವಿ ಹಾಕಿ ಮತ್ತೆ ಸ್ವಲ್ಪ ಬೇಯಿಸಿ ಕಾವಲಿಯಿಂದ ತೆಗೆದು ಬಿಸಿ ಇರುವಾಗ್ಲೇ ತಿನ್ನಲು ಬಹಳ ರುಚಿ.. 👌👌👌🥄🥄
#ಬನ್ನಂಗಾಯಿದೋಸೆ

ವಿಜಯ ದಶಮಿಯಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ 100 ವರ್ಷ ತುಂಬಿದೆ.. ನಿನ್ನೆ ಕಾಸರಗೋಡು, ಅಡ್ಕತ್ ಬೈಲ್ ತಾರಿಪಡುಪ್ಪು ಮೈದಾನದಲ್ಲಿ ನಡೆದ ಶ...
06/10/2025

ವಿಜಯ ದಶಮಿಯಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ 100 ವರ್ಷ ತುಂಬಿದೆ.. ನಿನ್ನೆ ಕಾಸರಗೋಡು, ಅಡ್ಕತ್ ಬೈಲ್ ತಾರಿಪಡುಪ್ಪು ಮೈದಾನದಲ್ಲಿ ನಡೆದ ಶತಮಾನೋತ್ಸವದ ಸಂಭ್ರಮಕ್ಕೆ ರೆಡಿಯಾಗಿರುವ ನಮ್ಮ ಕುಟುಂಬ.. ಇವರು ಕಾಸರಗೋಡು, ಅಡ್ಕತ್ ಬೈಲ್ RSS ಶಾಖೆಯ ಸ್ವಯಂ ಸೇವಕರು.. #ರಾಷ್ಟ್ರೀಯಸ್ವಯಂಸೇವಕಸಂಘ

ಮುದ್ದು ಕಂದಮ್ಮಗಳಿಗೆ ಎರಡನೇ ವರ್ಷದ ಹುಟ್ಟು ಹಬ್ಬದ ಶುಭಾಶಯಗಳು 🎂🎁🎉ನಿಮ್ಮಿಬ್ಬರ ಬಂಧವು ದಿನದಿಂದ ದಿನಕ್ಕೆ ಬಲಗೊಳ್ಳಲಿ, ನಿಮ್ಮ ಜೀವನವು ದ್ವಿಗು...
06/10/2025

ಮುದ್ದು ಕಂದಮ್ಮಗಳಿಗೆ ಎರಡನೇ ವರ್ಷದ ಹುಟ್ಟು ಹಬ್ಬದ ಶುಭಾಶಯಗಳು 🎂🎁🎉
ನಿಮ್ಮಿಬ್ಬರ ಬಂಧವು ದಿನದಿಂದ ದಿನಕ್ಕೆ ಬಲಗೊಳ್ಳಲಿ, ನಿಮ್ಮ ಜೀವನವು ದ್ವಿಗುಣ ಸಂತೋಷ, ಪ್ರೀತಿ ಮತ್ತು ಯಶಸ್ಸಿನಿಂದ ತುಂಬಿರಲಿ.
ಈ ವಿಶೇಷ ದಿನವನ್ನು ಆನಂದಿಸಿ ಮತ್ತು ನಿಮ್ಮಿಬ್ಬರ ಭವಿಷ್ಯವು ಇನ್ನಷ್ಟು ಪ್ರಕಾಶಮಾನವಾಗಿರಲಿ.
ಶುಭವಾಗಲಿ..
ಮತ್ತೊಮ್ಮೆ ಮುದ್ದು ಅವಳಿ ಕಂದಮ್ಮಗಳಿಗೆ ಜನುಮ ದಿನದ ಶುಭಾಶಯಗಳು.. ❤️

ಕಾಸರಗೋಡು ಅಡ್ಕತ್ ಬೈಲ್ ಸುಬ್ರಹ್ಮಣ್ಯ ಶಾಖೆ ರಾಷ್ಟ್ರೀಯ ಸ್ವಯಂ ಸೇವಕರು      #ರಾಷ್ಟ್ರೀಯಸ್ವಯಂಸೇವಕಸಂಘ
05/10/2025

ಕಾಸರಗೋಡು ಅಡ್ಕತ್ ಬೈಲ್ ಸುಬ್ರಹ್ಮಣ್ಯ ಶಾಖೆ ರಾಷ್ಟ್ರೀಯ ಸ್ವಯಂ ಸೇವಕರು #ರಾಷ್ಟ್ರೀಯಸ್ವಯಂಸೇವಕಸಂಘ

Address

Kasaragod

Alerts

Be the first to know and let us send you an email when Radhas Thulunada Channel posts news and promotions. Your email address will not be used for any other purpose, and you can unsubscribe at any time.

Contact The Business

Send a message to Radhas Thulunada Channel:

Share