Kolar BJP

Kolar BJP Contact information, map and directions, contact form, opening hours, services, ratings, photos, videos and announcements from Kolar BJP, Media/News Company, Kolar.

17/09/2026

ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ ಅವರ ಜನ್ಮದಿನ ಹಾಗೂ ಸಾರ್ವಜನಿಕ ಜೀವನದಲ್ಲಿ 25 ವರ್ಷಗಳನ್ನು ಪೂರೈಸಿರುವ ಈ ಸಾರ್ಥಕ ಸಂದರ್ಭದಲ್ಲಿ, ನಮ್ಮ ಮನೆಯಲ್ಲಿ ಆಶೀರ್ವಾದ ದೀಪ ಬೆಳಗಿಸಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.

ಮೋದಿಜಿಯವರಿಗೆ ದೇವರು ಉತ್ತಮ ಆಯುರಾರೋಗ್ಯ, ದೀರ್ಘಾಯುಷ್ಯ ಹಾಗೂ ಇನ್ನಷ್ಟು ಶಕ್ತಿ-ಚೈತನ್ಯವನ್ನು ಕರುಣಿಸಿ, ದೇಶದ ಸೇವೆಗೆ ಸದಾ ಶಕ್ತಿಯನ್ನು ನೀಡಲಿ. ಅವರ ನೇತೃತ್ವದಲ್ಲಿ ಭಾರತವು ಸರ್ವತೋಮುಖ ಅಭಿವೃದ್ಧಿಯೊಂದಿಗೆ ಮತ್ತಷ್ಟು ಎತ್ತರಕ್ಕೆ ಏರಲಿ ಎಂದು ಪ್ರಾರ್ಥಿಸಲಾಯಿತು.

ಭಾರತ ಮಾತೆಗೆ ಜಯ್

ವಂದೇ ಮಾತರಂ 🇮🇳

ಜನಸೇವೆಗೆ ಸಮರ್ಪಿತ ಕರ್ಮಯೋಗಿ, ದೇಶದ ಶ್ರೇಷ್ಠ ಪ್ರಧಾನ ಸೇವಕ, ದೂರದೃಷ್ಟಿಯ ನಾಯಕತ್ವದೊಂದಿಗೆ ವಿಕಸಿತ ಭಾರತ ಸಂಕಲ್ಪದೆಡೆಗೆ ಅಭಿವೃದ್ಧಿಯ ರಥವನ್...
17/09/2026

ಜನಸೇವೆಗೆ ಸಮರ್ಪಿತ ಕರ್ಮಯೋಗಿ, ದೇಶದ ಶ್ರೇಷ್ಠ ಪ್ರಧಾನ ಸೇವಕ, ದೂರದೃಷ್ಟಿಯ ನಾಯಕತ್ವದೊಂದಿಗೆ ವಿಕಸಿತ ಭಾರತ ಸಂಕಲ್ಪದೆಡೆಗೆ ಅಭಿವೃದ್ಧಿಯ ರಥವನ್ನು ಮುನ್ನಡೆಸುತ್ತಿರುವ ಕಾಯಕ ತಪಸ್ವಿಯಾದ ನಮ್ಮೆಲ್ಲರ ನೆಚ್ಚಿನ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

16/09/2026
16/09/2026

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ 25 ವರ್ಷಗಳ ಅವಿರತ ಜನಸೇವೆಯ ಗೌರವಾರ್ಥವಾಗಿ, ಸೆಪ್ಟೆಂಬರ್ 17ರ ಸಂಜೆ 6 ರಿಂದ 7 ಗಂಟೆಯೊಳಗೆ ಮನೆ-ಮನೆಯಲ್ಲಿ 'ಆಶೀರ್ವಾದದ ದೀಪ' ಬೆಳಗಿಸೋಣ.

ವಿಕಸಿತ ಭಾರತದ ಮಹಾಸಂಕಲ್ಪದ ಯಶಸ್ಸಿಗಾಗಿ ದೀಪ ಹಚ್ಚಿ ನಮ್ಮ ಕೃತಜ್ಞತೆಯನ್ನು ಸಮರ್ಪಿಸೋಣ.

🪔 ಆಶೀರ್ವಾದದ ದೀಪ - ಸೇವೆಯ ಸಂಕಲ್ಪ


ಬಳ್ಳಾರಿ ಚಲೋ ಪಾದಯಾತ್ರೆಯ 10 ನೇ ದಿನದ ಅಂಗವಾಗಿ ಇಂದು ರಾಜ್ಯಾಧ್ಯಕ್ಷರಾದ ಶ್ರೀ ವಿಜಯೇಂದ್ರ ಯಡಿಯೂರಪ್ಪ ಅವರು ಬಳ್ಳಾರಿಯಲ್ಲಿನ ಶ್ರೀ ಕನಕದುರ್ಗ...
10/09/2026

ಬಳ್ಳಾರಿ ಚಲೋ ಪಾದಯಾತ್ರೆಯ 10 ನೇ ದಿನದ ಅಂಗವಾಗಿ ಇಂದು ರಾಜ್ಯಾಧ್ಯಕ್ಷರಾದ ಶ್ರೀ ವಿಜಯೇಂದ್ರ ಯಡಿಯೂರಪ್ಪ ಅವರು ಬಳ್ಳಾರಿಯಲ್ಲಿನ ಶ್ರೀ ಕನಕದುರ್ಗ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದು, ವಿವಿಧ ಧಾರ್ಮಿಕ ಕೇಂದ್ರಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಬಳಿಕ ಮೋತಿ ವೃತ್ತದಲ್ಲಿರುವ ಜಗಜ್ಜ್ಯೋತಿ ಬಸವೇಶ್ವರ ಅವರ ಪುತ್ಥಳಿಗೆ ಮಾಲಾರ್ಪಣೆ, ರಂಗಮಂದಿರದ ಎದುರುಗಡೆ ಇರುವ ಡಾ. ಬಾಬು ಜಗಜೀವನ್‌ರಾಮ್‌ ಅವರ ಪುತ್ಥಳಿಗೆ ಮಾಲಾರ್ಪಣೆ, ಅಂಬೇಡ್ಕರ್‌ ಭವನದಲ್ಲಿ ಡಾ. ಬಿ. ಆರ್.‌ ಅಂಬೇಡ್ಕರ್‌ ಅವರ ಪುತ್ಥಳಿಗೆ ಮಾಲಾರ್ಪಣೆ, ಕುಮಾರಸ್ವಾಮಿ ಗುಡಿ ಹತ್ತಿರವಿರುವ ಶ್ರೀ ಭಕ್ತ ಕನಕದಾಸ ಅವರ ಪುತ್ಥಳಿಗೆ ಮಾಲಾರ್ಪಣೆ, ಮಹಾತ್ಮ ಗಾಂಧೀಜಿ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್‌ ವಿಪಕ್ಷ ನಾಯಕರಾದ ಶ್ರೀ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವರಾದ ಶ್ರೀ ಬಿ. ಶ್ರೀರಾಮುಲು, ಶ್ರೀ ಜನಾರ್ದನ್‌ ರೆಡ್ಡಿ, ಶ್ರೀ ಎಂ. ಪಿ. ರೇಣುಕಾಚಾರ್ಯ, ಶಾಸಕರಾದ ಶ್ರೀ ಬಸವರಾಜ ಮತ್ತಿಮೂಡ, ಡಾ. ಶೈಲೇಂದ್ರ ಬೆಲ್ದಾಳೆ, ಶ್ರೀ ದುರ್ಯೋಧನ ಐಹೊಳೆ, ಶ್ರೀ ಬಿ. ಪಿ. ಹರೀಶ್‌, ವಿಧಾನ ಪರಿಷತ್‌ ವಿಪಕ್ಷ ಮುಖ್ಯ ಸಚೇತಕರಾದ ಶ್ರೀ ಎನ್.‌ ರವಿಕುಮಾರ್‌, ಮಾಜಿ ಶಾಸಕರಾದ ಶ್ರೀ ಸೋಮಶೇಖರ್‌ ರೆಡ್ಡಿ, ರಾಜ್ಯ ಕಾರ್ಯದರ್ಶಿಗಳಾದ ಡಾ. ಲಕ್ಷ್ಮೀ ಅಶ್ವಿನ್‌ ಗೌಡ, ಪ್ರಮುಖರಾದ ಶ್ರೀಮತಿ ಅರುಣಾ ಲಕ್ಷ್ಮಿ, ಪದಾಧಿಕಾರಿಗಳು, ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

10/09/2026
ಬಳ್ಳಾರಿಯ ನೆಲಕ್ಕೆ ವಿಜಯನಮನ.ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯಗಳು, ಭ್ರಷ್ಟಾಚಾರ, ಹಗರಣ ಹಾಗೂ ರೈತರ ಸಮಸ್ಯೆಗಳನ್ನು ಖಂಡಿಸಿ ಬಿಜೆಪಿ ...
09/09/2026

ಬಳ್ಳಾರಿಯ ನೆಲಕ್ಕೆ ವಿಜಯನಮನ.

ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯಗಳು, ಭ್ರಷ್ಟಾಚಾರ, ಹಗರಣ ಹಾಗೂ ರೈತರ ಸಮಸ್ಯೆಗಳನ್ನು ಖಂಡಿಸಿ ಬಿಜೆಪಿ ಹಮ್ಮಿಕೊಂಡಿರುವ 10 ದಿನಗಳ ಬಳ್ಳಾರಿ ಚಲೋ ಪಾದಯಾತ್ರೆ ಇಂದು ಬಳ್ಳಾರಿ ಜಿಲ್ಲೆಯ ಗಡಿ ತಲುಪಿದ್ದು, ಉಕ್ಕಿನ ನಗರಿ ಬಳ್ಳಾರಿಗೆ ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ವಿಜಯೇಂದ್ರ ಯಡಿಯೂರಪ್ಪ ಅವರು ಶಿರಬಾಗಿ ನಮಸ್ಕರಿಸಿದರು.

ಬಳ್ಳಾರಿ ಚಲೋ ಪಾದಯಾತ್ರೆಗೆ ಜನರಿಂದ ಅಭೂತಪೂರ್ವ ಬೆಂಬಲ ದೊರಕುತ್ತಿದ್ದು, ದುರಾಡಳಿತ, ಭ್ರಷ್ಟಚಾರ ಹಾಗೂ ದರ್ಪದಿಂದ ಮೆರೆಯುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಅಂತಿಮ‌ಮೊಳೆಯನ್ನು ಹೊಡೆಯಲಿದೆ.

Address

Kolar

Website

Alerts

Be the first to know and let us send you an email when Kolar BJP posts news and promotions. Your email address will not be used for any other purpose, and you can unsubscribe at any time.

Shortcuts

Share