Kodagu Live

Kodagu Live ಕೊಡಗಿನ ತಾಜಾ ಸುದ್ದಿ, ಮಾಹಿತಿಗಳನ್ನು ಜನತೆಗೆ ತಿಳಿಸುವ ಮಾಧ್ಯಮ

07/07/2025

ಅಮ್ಮತ್ತಿ - ಮೂರ್ನಾಡು ರಸ್ತೆಯಲ್ಲಿ ಕಾಡಾನೆಗಳ ಹಿಂಡು..!

2012ರಲ್ಲಿ ತೆಗೆದ ಕೊಡಗಿನ ಪತ್ರಕರ್ತರ ಅಪರೂಪದ ಗ್ರೂಪ್ ಫೋಟೋ..! ಹಲವು ಮಂದಿ ಒಂದೇ ಫೋಟೋದಲ್ಲಿದ್ದಾರೆ.ಯಾರ್ಯಾರಿದ್ದಾರೆ ಗುರುತಿಸಬಹುದಾ 😅ಕೃಪೆ ...
07/07/2025

2012ರಲ್ಲಿ ತೆಗೆದ ಕೊಡಗಿನ ಪತ್ರಕರ್ತರ ಅಪರೂಪದ ಗ್ರೂಪ್ ಫೋಟೋ..! ಹಲವು ಮಂದಿ ಒಂದೇ ಫೋಟೋದಲ್ಲಿದ್ದಾರೆ.

ಯಾರ್ಯಾರಿದ್ದಾರೆ ಗುರುತಿಸಬಹುದಾ 😅

ಕೃಪೆ : ಲಕ್ಷ್ಮೀಶ್

07/07/2025

ಚಾಲಕನ ನಿಯಂತ್ರಣ ತಪ್ಪಿ ಕಾಫಿ ತೋಟಕ್ಕೆ ನುಗ್ಗಿದ ಕೆಎಸ್ಆರ್ ಟಿಸಿ ಬಸ್ ..!

ವಿರಾಜಪೇಟೆ ಕಾವೇರಿ ಕಾಲೇಜು ಬಳಿ ತಿರುವಿನಲ್ಲಿ ನಡೆದ ಘಟನೆ.

ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

ಮಡಿಕೇರಿಯಿಂದ ಕೋಲಾರಕ್ಕೆ ವಿರಾಜಪೇಟೆ ಮಾರ್ಗವಾಗಿ ತೆರಳುತ್ತಿದ್ದ ಬಸ್.

ಮರೆತ ನಟಿಗೊಂದು ನಮನ 🪷🙏ಯಾರು ಮೊದಲ ಕೊಡವ ನಟಿ ಎಂಬ ವಿಚಾರದಲ್ಲಿ ರಶ್ಮಿಕಾ ಮಂದಣ್ಣರ ಹೇಳಿಕೆಯೊಂದಿಗೆ ಪ್ರಾರಂಭವಾದ ಚರ್ಚೆಯ ಈ ಸಂದರ್ಭ, ಮತ್ತೆ ನೆ...
06/07/2025

ಮರೆತ ನಟಿಗೊಂದು ನಮನ 🪷🙏

ಯಾರು ಮೊದಲ ಕೊಡವ ನಟಿ ಎಂಬ ವಿಚಾರದಲ್ಲಿ ರಶ್ಮಿಕಾ ಮಂದಣ್ಣರ ಹೇಳಿಕೆಯೊಂದಿಗೆ ಪ್ರಾರಂಭವಾದ ಚರ್ಚೆಯ ಈ ಸಂದರ್ಭ, ಮತ್ತೆ ನೆನಪಾದವರು ಅನೇಕ ಕನ್ನಡ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಮಿಂಚಿದ್ದ ದಿವಂಗತ ಶಶಿಕಲಾ ಅವರು.

ಅತ್ತೆ, ಸೊಸೆ, ಗಯ್ಯಾಳಿ, ಹಾಸ್ಯ—ಎಲ್ಲಾ ಪಾತ್ರಗಳಲ್ಲಿಯೂ ಸಮರ್ಥ ಅಭಿನಯದೊಂದಿಗೆ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಹೆಜ್ಜೆಗುರುತು ಮೂಡಿಸಿದ್ದವರು ಶಶಿಕಲಾ. ನೂರಾರು ಸಿನಿಮಾಗಳಲ್ಲಿ , ಹಲವು ವರ್ಷಗಳ ಕಾಲ ತಮ್ಮ ಅಭಿನಯದ ಹಿರಿಮೆಯನ್ನು ಉಳಿಸಿಕೊಂಡಿದ್ದ ಮೊದಲ ಕೊಡವತಿ ನಟಿ ಅವರು.

ಹಳೆಯ ಸಿನಿಮಾಗಳನ್ನು ನೋಡುವ ನನಗೆ ಅವರ 'ಬೆಂಕಿಯಲ್ಲಿ ಅರಳಿದ ಹೂವು' ಮತ್ತು ಅಣ್ಣಾವ್ರ ಜತೆ ನಟಿಸಿದ 'ಸಮಯದ ಗೊಂಬೆ' ಪಾತ್ರಗಳು ಇಷ್ಟ.

ಕಾರಣ ತಿಳಿಯದು. ಅಂತಹ ಗಟ್ಟಿಗಿತ್ತಿ ಕಲಾವಿದೆ ಸಣ್ಣುವಂಡ ಶಶಿಕಲಾ ಅವರು ಅಗ್ನಿ ಅನಾಹುತದಲ್ಲಿ ಪ್ರಾಣ ಕಳೆದುಕೊಂಡಿದ್ದು ದುರಂತ.

ನಾನು ಅಗ್ನಿ ಪತ್ರಿಕೆಗೆ ಸಿನಿಮಾ ಕಾಲಂ ಬರೆಯುತ್ತಿದ್ದಾಗ ಸಂಗ್ರಹಿಸಿದ ಕೆಲವು ಹಳೆಯ ಸಿನಿಮಾ ಪತ್ರಿಕೆಗಳಲ್ಲಿ ಶಶಿಕಲಾ ಅವರ ಚಿತ್ರಗಳ ಸ್ಟಿಲ್ಸ್ ಗಳನ್ನು ಕೂಡ ಸಂಗ್ರಹಿಸಿದ್ದೆ. ಅವುಗಳನ್ನು ಈ ಸಂದರ್ಭದಲ್ಲಿ ಹಂಚಿಕೊಳ್ಳುತ್ತಿದ್ದೇನೆ.

ಕೃಪೆ : ಸುಮನ್ ಡಿ ಕಿತ್ತೂರ್ ಅವರ ಪೋಸ್ಟ್




06/07/2025

ಮಳೆ ರಜೆ
ಕೊಡಗು ಜಿಲ್ಲೆಯಲ್ಲಿ ವ್ಯಾಪಕ ಮಳೆ- ಬಿರುಗಾಳಿ ಇರುವ ಹಿನ್ನೆಲೆ ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿಗೆ ನಾಳೆ (ಜುಲೈ 7 ರಂದು) ರಜೆ ನೀಡಿ ಜಿಲ್ಲಾಧಿಕಾರಿ ಅವರು ಆದೇಶಿಸಿದ್ದಾರೆ. ಎಸ್ಸೆಸ್ಸೆಲ್ಸಿ ಪರೀಕ್ಷೆ 3 ನಿಗದಿಯಂತೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಆದೇಶ.

ಮದ್ಯಪಾನ‌ ಮಾಡಿ ವಾಹನ ಚಲಾಯಿಸಿದವ ಅಂದರ್....!ಮದ್ಯಪಾನ ಮಾಡಿ ಅಜಾಗರೂಕತೆಹಾಗೂ ಅತೀ ವೇಗದಿಂದ ಕಾರನ್ನು ಚಾಲನೆ ಮಾಡುವುದರೊಂದಿಗೆಪೊಲೀಸರ ಕರ್ತವ್ಯ...
06/07/2025

ಮದ್ಯಪಾನ‌ ಮಾಡಿ ವಾಹನ ಚಲಾಯಿಸಿದವ ಅಂದರ್....!

ಮದ್ಯಪಾನ ಮಾಡಿ ಅಜಾಗರೂಕತೆ
ಹಾಗೂ ಅತೀ ವೇಗದಿಂದ ಕಾರನ್ನು ಚಾಲನೆ ಮಾಡುವುದರೊಂದಿಗೆ
ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಚಾಲಕನೋರ್ವನನ್ನು ಬಂಧಿಸಲಾಗಿದೆ. ಮೊಣ್ಣಂಗೇರಿ ಗ್ರಾಮದ ನಿವಾಸಿ ಹರೀಶ.ಬಿ.ಕೆ (46) ಎಂಬಾತ ಬಂಧನಕ್ಕೊಳಗಾಗಿರುವ ಆರೋಪಿಯಾಗಿದ್ದಾನೆ.

ಮಡಿಕೇರಿ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ವಿಜಯಕುಮಾರ್ ಹೊಸಮನಿ, ಕಾಶಿನಾಥ ಜಿ.ಕೆ ಅವರು ಮಡಿಕೇರಿ ನಗರದ ಜಿ.ಟಿ ವೃತ್ತದ ಬಳಿ ಸಂಚಾರಿ ನಿಯಂತ್ರಣದ ಕರ್ತವ್ಯ ನಿರತರಾಗಿದ್ದ ಸಂದರ್ಭ ಕೆಎ-12 ಎಂಸಿ-1753 ವಾಹನವು ಅತಿ ವೇಗದಿಂದ ಬರುತ್ತಿರುವುದನ್ನು ಗಮನಿಸಿದ್ದಾರೆ. ಪರಿಶೀಲನೆಗಾಗಿ ಕಾರನ್ನು ನಿಲ್ಲಿಸಿದಾಗ ಅದರ ಚಾಲಕನಾದ ಹರೀಶ್ ಬಿ.ಕೆ ಎಂಬಾತ ಮದ್ಯಪಾನ ಮಾಡಿರುವುದು ಕಂಡುಬಂದಿದೆ. ಆಲ್ಕೋಮೀಟರ್ ನಲ್ಲಿ ಪರಿಶೀಲಿಸಲು ಪ್ರಯತ್ನಸಿದಾಗ ಕರ್ತವ್ಯದಲ್ಲಿದ್ದ ಅಧಿಕಾರಿ ಹಾಗೂ ಸಿಬಂದಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ದೂಡಿಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ.

ಈ ಕುರಿತು ಮಡಿಕೇರಿ ಸಂಚಾರಿ ಪೊಲೀಸ್ ಠಾಣೆಯ ಪಿಎಸ್‌ಐ ಸಿ.ವಿ. ಶ್ರೀಧರ್ ಅವರು ಕಾರಿನ ಚಾಲಕನಾದ ಹರೀಶ್.ಬಿ.ಕೆ ಎಂಬಾತನ ಮೇಲೆ ಕಾನೂನು ಕ್ರಮ ಕೈಗೊಳ್ಳವಂತೆ ದೂರು ದಾಖಲಿಸಿದ್ದಾರೆ.

ಇದು ಕೊಡಗಿನ ಯಾವ ಪ್ರದೇಶ/ ಊರು ಗೊತ್ತಾ..?
06/07/2025

ಇದು ಕೊಡಗಿನ ಯಾವ ಪ್ರದೇಶ/ ಊರು ಗೊತ್ತಾ..?

05/07/2025

ಕೊಡವ ಸಮುದಾಯದಿಂದ ಫಿಲ್ಮ್‌ ಇಂಡಸ್ಟ್ರಿಗೆ ಬಂದ ಮೊದಲ ಮಹಿಳೆ ನಾನು ಎಂದ ರಶ್ಮಿಕಾ ಮಂದಣ್ಣ..!
ಖಾಸಗಿ ವಾಹಿನಿ ಕಾರ್ಯಕ್ರಮದಲ್ಲಿ ರಶ್ಮಿಕಾ ಮಂದಣ್ಣ ನೀಡಿದ ಈ ಹೇಳಿಕೆ ಈಗ ತೀವ್ರ ವಿವಾದಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಅವ್ರು ಏನ್‌ ಹೇಳಿದ್ರು ಅಂತ ಈ ವೀಡಿಯೋದಲ್ಲಿದೆ ನೋಡಿ.

ವಿದ್ಯುತ್ ಆಘಾತಕ್ಕೆ ಯುವಕ ಬಲಿ.ಮರಗೋಡು ಸಮೀಪದ ಹುಲಿತಾಳ ಗ್ರಾಮದಲ್ಲಿ ಇಂದು ಸಂಜೆ ವಿದ್ಯುತ್ ಆಘಾತಕ್ಕೆ ಯುವಕ ಬಲಿಯಾಗಿದ್ದಾನೆ.ಹೆಚ್.ಪಿ.ಪ್ರತೀಪ...
04/07/2025

ವಿದ್ಯುತ್ ಆಘಾತಕ್ಕೆ ಯುವಕ ಬಲಿ.

ಮರಗೋಡು ಸಮೀಪದ ಹುಲಿತಾಳ ಗ್ರಾಮದಲ್ಲಿ ಇಂದು ಸಂಜೆ ವಿದ್ಯುತ್ ಆಘಾತಕ್ಕೆ ಯುವಕ ಬಲಿಯಾಗಿದ್ದಾನೆ.

ಹೆಚ್.ಪಿ.ಪ್ರತೀಪ್ (32) ಸಾವನ್ನಪ್ಪಿದ ಯುವಕ.

ವಿದ್ಯುತ್ ಕಂಬ ಏರಿ ದುರಸ್ಥಿಗೆ ಯತ್ನಿಸಿದ್ದು, ಕಂಬದಲ್ಲೇ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾನೆ.

ಕರ್ನಾಟಕದ ಹವಾಮಾನ ಮುನ್ಸೂಚನೆ :ದಕ್ಷಿಣ ದ್ರವದ ಕಡೆಯಿಂದ ಬೀಸುತ್ತಿರುವ ಪ್ರಭಲ ಗಾಳಿಯ ಪ್ರಭಾವದಿಂದ (ಸೊಮಾಲಿಯಾನ್ ಜಟ್ ವೇವ್ಸ್ ರೀತಿಯ) ಕಳೆದ ಮೂ...
04/07/2025

ಕರ್ನಾಟಕದ ಹವಾಮಾನ ಮುನ್ಸೂಚನೆ :

ದಕ್ಷಿಣ ದ್ರವದ ಕಡೆಯಿಂದ ಬೀಸುತ್ತಿರುವ ಪ್ರಭಲ ಗಾಳಿಯ ಪ್ರಭಾವದಿಂದ (ಸೊಮಾಲಿಯಾನ್ ಜಟ್ ವೇವ್ಸ್ ರೀತಿಯ) ಕಳೆದ ಮೂರು ದಿನಗಳಿಂದ ಮುಂಗಾರು ಜೊತೆಗೂಡಿ ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಉತ್ತಮ ಹಾಗೂ ಕೆಲವು ಭಾಗಗಳಲ್ಲಿ ಭಾರಿ ಮಳೆಯಾಗುತ್ತಿದೆ.
ಕೇರಳದಲ್ಲಿ ಈಗಾಗಲೇ ಮುಂಗಾರು ದುರ್ಬಲಗೊಳ್ಳುತ್ತಿದೆ.

ಕರಾವಳಿ : ಕಾಸರಗೋಡು ಸೇರಿದಂತೆ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಬಿಟ್ಟು ಬಿಟ್ಟು ಮಳೆಯ ಮುನ್ಸೂಚೆನೆ ಇದೆ.
ಈಗಿನಂತೆ ಮುಂದಿನ 10 ದಿನಗಳವರೆಗೂ ಸಾಮಾನ್ಯ ಮಳೆ ಮುಂದುವರಿಯುವ ಲಕ್ಷಣಗಳಿವೆ. ತೋಟಗಳಿಗೆ ಔಷಧಿ ಸಿಂಪಡಿಸಲು ಸಣ್ಣ ಸಣ್ಣ ಅವಕಾಶಗಳು ಮಾತ್ರ ಸಿಗಬಹುದು.

ಮಲೆನಾಡು : ಕೊಡಗು, ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಸ್ವಲ್ಪ ಜಾಸ್ತಿ ಇರಬಹುದು.
ಈಗಿನಂತೆ ಜುಲೈ 6ರಿಂದ ಔಷಧಿ ಸಿಂಪಡಿಸಲು ಸಣ್ಣ ಅವಕಾಶಗಳು ಸಿಗಬಹುದು.

ಒಳನಾಡು : ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಹಾವೇರಿ, ಬಾಗಲಕೋಟೆ, ಗದಗ ಜಿಲ್ಲೆಗಳ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ. ಉಳಿದ ಭಾಗಗಳಲ್ಲಿ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ.
ದಕ್ಷಿಣ ಒಳನಾಡಿನಲ್ಲಿ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದ್ದು, ಮಳೆಯ ಸಾಧ್ಯತೆಗಳು ಕಾಣುತ್ತಿಲ್ಲ.

04/07/2025

ಕೊಡಗು ಜಿಲ್ಲೆಯಲ್ಲಿ ಬಾಂಗ್ಲಾ ಪ್ರಜೆಗಳ ಆತಂಕ... ಜಿಲ್ಲಾ ಎಸ್ಪಿ ಕೆ. ರಾಮರಾಜನ್‌ ಪ್ರತಿಕ್ರಿಯೆ.

04/07/2025

ಗೋಣಿಕೊಪ್ಪ- ಪೊನ್ನಂಪೇಟೆ ಮುಖ್ಯರಸ್ತೆಯ ಹಿಂದೂ ರುದ್ರಭೂಮಿಯ ಮೂಲಕ ತೆರಳಿರಿಯುವ ಕಾಡಾನೆ...

Address


Website

Alerts

Be the first to know and let us send you an email when Kodagu Live posts news and promotions. Your email address will not be used for any other purpose, and you can unsubscribe at any time.

Contact The Business

Send a message to Kodagu Live:

Shortcuts

  • Address
  • Alerts
  • Contact The Business
  • Claim ownership or report listing
  • Want your business to be the top-listed Media Company?

Share