
28/05/2025
ವಯಸ್ಸಿಗೆ ಮೀರಿದ ಪ್ರತಿಭೆ ಸಂವೃತ ಕಿಶೋರ್, ತುಂಬಿ ತುಳುಕಿದ ಚೈತನ್ಯದಿಂದ ಪ್ರಸ್ತುತಪಡಿಸಿದ ವರ್ಚಸ್ವೀ ನೃತ್ಯ, ಕಣ್ಣೆವೆ ಮಿಟುಕಿಸದೆ ನೋಡುವಂತೆ ಮಾಡಿತ್ತು, ಆ ಬಾಲ ಕಲಾವಿದೆಯ ಅಸ್ಮಿತೆ. ಅಕ್ಷಯ ತೃತೀಯದ ಪ್ರಶಸ್ತ ಸಂದರ್ಭದಲ್ಲಿ ಸಂವೃತ ವಿದ್ಯುಕ್ತವಾಗಿ ತನ್ನ ರಂಗಪ್ರವೇಶವನ್ನು ತುಂಬಿದ ಸಭಾಂಗಣದ ಕಲಾರಸಿಕರೆದುರು ನೆರವೇರಿಸಿಕೊಂಡಳು.
ಬೆಂಗಳೂರಿನ ಚೌಡಯ್ಯ ವಿಶಾಲಾಂಗಣದ ದಿವ್ಯವೇದಿಕೆಯ ಮೇಲೆ ಕೋಲ್ಮಿಂಚಿನ ಪುಟ್ಟ ನಾಟ್ಯಪುತ್ಥಳಿಯೊಂದು ಚಿಗರೆಯಂತೆ ಕುಪ್ಪಳಿಸುತ್ತ, ಕಣ....