Isiri Media

Isiri Media Contact information, map and directions, contact form, opening hours, services, ratings, photos, videos and announcements from Isiri Media, Media/News Company, Mangalore.

30/01/2023

ತುಳುನಾಡಿನ ಪ್ರಖ್ಯಾತ ಹಾಸ್ಯ ನಟ ಅರವಿಂದ ಬೋಳಾರ್ ಅವರು ಇಂದು ಸಂಜೆ ರಸ್ತೆ ಅಪಘಾತದಲ್ಲಿ‌ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ...

29/05/2021

ಪಂಪ್ವೆಲ್ ಸರ್ವಿಸ್ ರಸ್ತೆಯಲ್ಲಿ ನೀರು ಉಕ್ಕಿದ ಪರಿಣಾಮವಾಗಿ ವಾಹನ ಸಂಚಾರ ಅಸ್ತವ್ಯಸ್ತ...

05/05/2021

ಮಂಗಳೂರಿಗೆ ಬಂದಿಳಿದ ಬೆಹರಿನ್ ನ 40 ಟನ್ ಆಕ್ಸಿಜನ್ ಟ್ಯಾಂಕ್...

ಮಂಗಳೂರುತುಳು ಚಿತ್ರರಂಗದ ಬಹುನಿರೀಕ್ಷೆಯ ತುಳು ಸಿನಿಮಾ ಇಂಗ್ಲಿಷ್ ಮಾರ್ಚ್26 ರಂದು ತೆರೆ ಕಾಣಲಿದೆ..ಹರೀಶ್ ಶೇರಿಗಾರ್ ನಿರ್ಮಾಣ ಮಾಡಿರುವ,ಸೂರಜ್...
23/03/2021

ಮಂಗಳೂರು

ತುಳು ಚಿತ್ರರಂಗದ ಬಹುನಿರೀಕ್ಷೆಯ ತುಳು ಸಿನಿಮಾ ಇಂಗ್ಲಿಷ್ ಮಾರ್ಚ್26 ರಂದು ತೆರೆ ಕಾಣಲಿದೆ..ಹರೀಶ್ ಶೇರಿಗಾರ್ ನಿರ್ಮಾಣ ಮಾಡಿರುವ,ಸೂರಜ್ ಶೆಟ್ಟಿ ನಿರ್ದೇಶನದ ಇಂಗ್ಲೀಷ್ ಸಿನಿಮಾ ಮಂಗಳೂರು-ಉಡುಪಿ,ಬೆಂಗಳೂರು-ಮೈಸೂರು ಸೇರಿದಂತೆ ಕರ್ನಾಟಕ ಹಾಗೂ ಗಲ್ಫ್ ರಾಷ್ಟ್ರಗಳಲ್ಲಿ ಏಕಕಾಲದಲ್ಲಿ ರಿಲೀಸ್ ಆಗಲಿದೆ..ದಿಯಾ ಚಿತ್ರ ಖ್ಯಾತಿಯ ಪೃಥ್ವಿ ಅಂಬರ್ ಚಿತ್ರದಲ್ಲಿ ನಾಯಕನಟನಾಗಿ ಹೊರಹೊಮ್ಮಿದ್ದು,ನವ್ಯಾ ಪೂಜಾರಿ ನಾಯಕಿಯಾಗಿ ಚಿತ್ರದಲ್ಲಿ ಮಿಂಚಲಿದ್ದಾರೆ...ಎಂಕ್ಲೆಗ್ ಇಂಗ್ಲಿಷ್ ಬರ್ಪುಜಿ ಬ್ರೋ ಎಂಬ ಟ್ಯಾಗ್ ಲೈನ್ ನಲ್ಲಿ ಇಂಗ್ಲೀಷ್ ಚಿತ್ರ ಬರಲಿದ್ದು,ತುಳು ಸಿನಿಮಾರಂಗದ ಹಾಸ್ಯ ದಿಗ್ಗಜರ ದಂಡೇ ಚಿತ್ರದಲ್ಲಿ ಇದೆ..ಕೊರೊನಾ ಲಾಕ್ ಡೌನ್ ಮುಂಚೆಯೇ ಚಿತ್ರ ತೆರೆಕಾಣಬೇಕಾಗಿದ ಚಿತ್ರ ಈಗ ಎಲ್ಲಾ ಗೊಂದಲ,ಆತಂಕದ ನಡುವೆಯೇ ಸಿನಿಪ್ರೇಕ್ಷಕರ ಮುಂದೆ ಬರಲಿದ್ದು,ಜನರ ನಿರೀಕ್ಷೆಯ ತಕ್ಕಂತೆಯೇ ಇರುತ್ತಾ ಅನ್ನೋದನ್ನು ಕಾದು ನೋಡಬೇಕಾಗಿದೆ..

09/01/2021

ಸಂಗೀತ ಸುಧೆ ಹರಿಸಿದ ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್...

26/12/2020

ಕ್ರಿಸ್ಮಸ್ ಹಬ್ಬದ ಸಂಧರ್ಭದಲ್ಲಿ ತೊಕ್ಕೊಟು ಕುಂಪಲ ಪರಿಸರದಲ್ಲಿ ಎಲಿಯಾಸ್ ಮೊಂತೇರೊ ಎಂಬವರ ಮನೆಯಲ್ಲಿ ಮೂಡಿ ಬಂದ ಕ್ರಿಸ್ಮಸ್ ಗೋಧಲಿ..

05/11/2020

ಸಿ ಎಂ ಯಡಿಯೂರಪ್ಪ ಹೇಳಿಕೆ....

21/09/2020

ಉಡುಪಿ

ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಉತ್ತರ ನಕ್ಷತ್ರದ ಮಳೆ. ಪ್ರಸಿದ್ಧ ಶಿರ್ವ ನಡಿಬೆಟ್ಟು ಮನೆಗೆ ನುಗ್ಗಿದ ಪಾಪನಾಶಿನಿ ನದಿ ನೀರು ಮನೆತನದಿಂದ ಬಾಗಿನ ಸಮರ್ಪಣೆ.

ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಶಿರ್ವ ನಡಿಬೆಟ್ಟು ಮನೆ -
70 ವರ್ಷಗಳ ನಂತರ ಬಾಗಿನ ಅರ್ಪಣೆ

ಐತಿಹಾಸಿಕ ಹಿನ್ನಲೆಯಿರುವ ಪುರಾತನ ಶಿರ್ವ ನಡಿಬೆಟ್ಟು ಮನೆ ಇಂದು ಅಪರೂಪದ ವಿದ್ಯಮಾನಕ್ಕೆ ಸಾಕ್ಷಿಯಾಯಿತು. ಸುಮಾರು 70 ವರ್ಷಗಳ ನಂತರ ಪಾಪನಾಶಿನಿ ನದಿಗೆ ರವಿವಾರ ಬಾಗಿನ ಅರ್ಪಿಸಲಾಯಿತು.

ಉಡುಪಿ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಜಿಲ್ಲೆಯ ಎಲ್ಲಾ ನದಿಗಳು ಉಕ್ಕಿ ಹರಿಯುತ್ತಿದೆ. ಶಿರ್ವ ಸಮೀಪ ಹರಿಯುವ ಪಾಪನಾಶಿನಿ ನದಿಯೂ ತುಂಬಿದೆ.

ಪಾಪನಾಶಿನಿಯ ನೆರೆ ನೀರು ಶಿರ್ವ ನಡಿಬೆಟ್ಟು ಮನೆಯ ಚಾವಡಿಯ ಮೆಟ್ಟಿಲುಗಳನ್ನು ಸ್ಪರ್ಶಿಸಿದರೆ ಬಾಗಿನ ಅರ್ಪಿಸುವ ಸಂಪ್ರದಾಯವಿದೆ. ಮುಕ್ಕಾಲು ಶತಮಾನದ ಬಳಿಕ ಇದೀಗ ಮತ್ತೆ ನಡಿಬೆಟ್ಟು ಮನೆಯ ಚಾವಡಿಗೆ ನೀರು ನುಗ್ಗಿದೆ, ಹೀಗಾಗಿ ಇಂದು ಪಾಪನಾಶಿನಿಗೆ ಬಾಗಿನ ಅರ್ಪಿಸಲಾಯಿತು.

ಇತ್ತೀಚಿನ ವರ್ಷಗಳಲ್ಲಿ ಇಂತಹ ಮಳೆ ಬಂದಿರಲಿಲ್ಲ. ಬಾಗಿನವನ್ನೂ ಅರ್ಪಿಸಿರಲಿಲ್ಲ. ಸುಮಾರು 70 ವರ್ಷಗಳ ಹಿಂದೆ ಈ ರೀತಿ ಚಾವಡಿವರೆಗೆ ನೀರು ನುಗ್ಗಿ ಬಾಗಿನ ಅರ್ಪಿಸಲಾಗಿತ್ತು ಎಂದು ಮನೆಯ ಹಿರಿಯರು ಹೇಳುತ್ತಾರೆ. ಅಪರೂಪದ ಈ ದೃಶ್ಯ ನೋಡಲು ಶಿರ್ವ ಪರಿಸರದ ಜನರು ಆಗಮಿಸಿದ್ದರು.

*ಆದಷ್ಟು ಬೇಗ ಮಳೆರಾಯ ಶಾಂತತೆಯನ್ನು ತೋರಲಿ*

 #ಅಪ್ಪಣ್ಣನ_ಕಟ್ಟೆ_ಹಂಪನಕಟ್ಟೆ_ಯಾದ_ಕಥೆ #ಅಪ್ಪಣ್ಣನ_ಕಟ್ಟೆಗೂ ನಿನ್ನೆ ಪತ್ತೆಯಾದಬಾವಿಗೂ ಇತ್ತು ಭಾವನಾತ್ಮಕ ನಂಟು...ಮಂಗಳೂರು ನಗರದ ಹೃದಯ ಭಾಗ ...
19/09/2020

#ಅಪ್ಪಣ್ಣನ_ಕಟ್ಟೆ_ಹಂಪನಕಟ್ಟೆ_ಯಾದ_ಕಥೆ

#ಅಪ್ಪಣ್ಣನ_ಕಟ್ಟೆಗೂ ನಿನ್ನೆ ಪತ್ತೆಯಾದ
ಬಾವಿಗೂ ಇತ್ತು ಭಾವನಾತ್ಮಕ ನಂಟು...

ಮಂಗಳೂರು ನಗರದ ಹೃದಯ ಭಾಗ ಹಂಪನಕಟ್ಟೆಯ ಸಿಗ್ನಲ್‌ ಬಳಿಯಿರುವ ರಿಕ್ಷಾ ಪಾರ್ಕಿಂಗ್‌ ಹತ್ತಿರದಲ್ಲಿ ಹಳೆ ಕಾಲದ ಈ ಬಾವಿ ಪತ್ತೆಯಾಗಿದೆ. ಇಲ್ಲಿ ಕೆಲವು ದಿನಗಳಿಂದ ಸ್ಮಾರ್ಟ್‌ಸಿಟಿ ಯೋಜನೆಯಡಿ ಜಂಕ್ಷನ್‌ ಅಭಿವೃದ್ಧಿಪಡಿಸುವ ಹಿನ್ನೆಲೆಯಲ್ಲಿ ರಸ್ತೆ ಅಗೆಯುವ ಕಾಮಗಾರಿ ನಡೆಯುತ್ತಿತ್ತು. ಈ ವೇಳೆ ಕಾಂಕ್ರೀಟ್‌ ಸ್ಲಾಬ್‌ ಕಾಣಿಸಿತ್ತು. ಆಗ ಸ್ಲಾಬ್‌ ಮೇಲೆತ್ತಿ ನೋಡಿದಾಗ ಆಳವಾದ ಬಾವಿ ಇರುವುದು ಗೊತ್ತಾಗಿದೆ. ಈ ವಿಚಾರವನ್ನು ಅಲ್ಲಿ ನೆಲೆಸಿರುವ ಜನರೊಂದಿಗೆ ಚರ್ಚಿಸಿದಾಗ ಶತಮಾನದಷ್ಟು ಹಳೆಯ ಬಾವಿ ಇದು ಎನ್ನುವುದು ಖಚಿತಗೊಂಡಿದೆ.

ಅಂದಹಾಗೆ, ಈ ಬಾವಿಗೂ #ಹಂಪನಕಟ್ಟೆ ಪ್ರದೇಶಕ್ಕೂ ಭಾವನಾತ್ಮಕ ಸಂಬಂಧವಿದೆ. ಶತಮಾನದ ಹಿಂದೆ ಮಂಗಳೂರಿಗೆ ದೂರದಿಂದ ಬಂದವರಿಗೆ ಬಾಯಾರಿಕೆಗಾಗಿ ಸ್ಥಳೀಯರಾದ #ಅಪ್ಪಣ್ಣ ಅವರು ಈಗಿನ #ಹಂಪನಕಟ್ಟೆಯ_ಅಶ್ವತ್ಥ ಮರದ ಕಟ್ಟೆಯ ಮೇಲೆ ಕುಳಿತು ನೀರು ಕೊಡುತ್ತಿದ್ದರು ಎನ್ನುವ ಪ್ರತೀತಿ ಇದೆ. ಆ ಕಾಲದಲ್ಲಿ #ಅಪ್ಪಣ್ಣ ಅವರು ಇದೇ ಬಾವಿಯಿಂದ ನೀರು ತೆಗೆದುಕೊಂಡು ಬಂದು ನೀಡುತ್ತಿದ್ದರು ಎನ್ನಲಾಗುತ್ತಿದೆ. ಈ ರೀತಿ ಹಿಂದೆ #ಅಪ್ಪಣ್ಣ_ಕಟ್ಟೆ ಯಾಗಿದ್ದ ಆ ಪ್ರದೇಶ ಅನಂತರದಲ್ಲಿ #ಹಂಪನಕಟ್ಟೆ ಯಾಗಿ ಹೆಸರು ಪಡೆದುಕೊಂಡಿದೆ. ಹೀಗಿರುವಾಗ ಆ ಕಾಲದಲ್ಲಿ ಈ ಬಾವಿ ಕೂಡ #ಅಪ್ಪಣ್ಣನ_ಬಾವಿ ಎಂದೇ ಪ್ರಸಿದ್ಧಿ ಪಡೆದಿತ್ತು ಎನ್ನುತ್ತಾರೆ ಸ್ಥಳೀಯ ನಿವಾಸಿಗಳು.

#ಸುಮಾರು_ನೂರು_ವರ್ಷಗಳ_ಇತಿಹಾಸ ಹೊಂದಿದ ಈ ಬಾವಿಯ ನೀರನ್ನು ಈ ಹಿಂದೆ ಸುತ್ತಮುತ್ತಲಿನ ಜನರು ಉಪಯೋಗಿಸುತ್ತಿದ್ದರು. 1962ರ ಸಮಯದಲ್ಲಿ ನಗರದಲ್ಲಿ ಸ್ಥಳೀಯಾಡಳಿತದಿಂದ ನೀರು ಸರಬರಾಜು ಆರಂಭವಾಗಿತ್ತು. ಆ ಬಳಿಕ ರಸ್ತೆ ಅಭಿವೃದ್ಧಿ ಕಾಮಗಾರಿ ವೇಳೆ ಈ ಬಾವಿಯನ್ನು ಮುಚ್ಚಲು ನಿರ್ಧರಿಸಲಾಗಿತ್ತು. ಆಗ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರು. ಆ ಕಾರಣದಿಂದ ಬಾವಿ ಮುಚ್ಚದೆ, ಮುನ್ನೆಚ್ಚರಿಕೆ ಕ್ರಮವಾಗಿ ಬಾವಿಗೆ ಕಾಂಕ್ರೀಟ್‌ ಸ್ಲಾಬ್‌ ಹಾಕಿ ಇಡಲಾಗಿದೆ. ಕಾಲ ಕ್ರಮೇಣ ಆ ಸ್ಲಾಬ್‌ ಮೇಲೆ ಡಾಮರು ಹಾಕಲಾಗಿದ್ದು, ಬಾವಿ ಇದ್ದ ಕುರುಹು ಕೂಡ ಕಣ್ಮರೆಯಾಗಿ ಹೋಗಿತ್ತು. ಇದೀಗ ರಸ್ತೆ ಅಗೆಯುವ ವೇಳೆ ಆ ಬಾವಿ ಗೋಚರಿಸಿರುವುದು #ಹಂಪನ_ಕಟ್ಟೆಯ ಇತಿಹಾಸದ ಪುಟಗಳನ್ನು ನೆನಪಿಸುವಂತೆ ಮಾಡಿರುವುದು ವಿಶೇಷ’ ಎನ್ನುತ್ತಾರೆ ಸ್ಥಳೀಯರು.

ಈ ಹಿಂದೆ ಬಾವಿ ಇತ್ತು
ಬಾವಿ ಪತ್ತೆ ಬಗ್ಗೆ ಹಂಪನಕಟ್ಟೆ ಬಳಿಯ ಕೆನರಾ ಜುವೆಲರ್ಸ್‌ ಮಾಲಕ ಧನಂಜಯ ಪಾಲ್ಕೆ ರವರ ಮಳಿಗೆಯ ಎದುರು ಬಾವಿ ಇತ್ತು. ಈ ಬಾವಿ ನೀರನ್ನು ನಾವೂ ಉಪಯೋಗಿಸುತ್ತಿದ್ದೆವು. ಈ ಬಾವಿ ಸುಮಾರು 100 ಅಡಿ ಆಳ ಹೊಂದಿದೆ. ಈ ಹಿಂದೆ ಬಾವಿಯ ಸುತ್ತಲೂ ಕಟ್ಟೆ ಇತ್ತು. ಆ ಬಾವಿಗೆ ಮೂರು ರಾಟೆ ಇದ್ದು, ಹಗ್ಗದ ಮೂಲಕ ಸ್ಥಳೀಯರು ನೀರು ಎಳೆಯುತ್ತಿದ್ದರು. ಅಭಿವೃದ್ಧಿ ಕಾರಣ ಈ ಬಾವಿ ಮುಚ್ಚುವ ಸಂದರ್ಭ ಬಂದಾಗ ನನ್ನ ತಂದೆ ದಿ| ಪಾಲ್ಕೆ ಬಾಬುರಾಯ ಆಚಾರ್ಯ ಅವರು ಬಾವಿಗೆ ಸ್ಲಾ ಬ್‌ ಹಾಕಿ ಮುಚ್ಚಳ ಅಳವಡಿಸಿದ್ದರು. ಬಳಿಕ ಸ್ಲಾಬ್‌ ಮೇಲೆ ಡಾಮರು ಹಾಕಲಾಗಿತ್ತು. ಇದೀಗ ರಸ್ತೆ ಕಾಮಗಾರಿ ವೇಳೆ ಬಾವಿ ಕಂಡಿದೆ. ಈ ಬಾವಿಯಲ್ಲಿನ ನೀರು ಈಗಲೂ ಉತ್ತಮವಾಗಿದ್ದು, ಮುಂದಿನ ಪೀಳಿಗೆ ಈ ಬಾವಿಯನ್ನು ಸಂರಕ್ಷಿಸಬೇಕು’ ಎನ್ನುತ್ತಾರೆ.

1962 ಸಂದರ್ಭದಲ್ಲಿ ಅಂದಿನ ಪೀಳಿಗೆ ರಸ್ತೆ ನಿರ್ಮಾಣ ಸಂದರ್ಭದಲ್ಲಿ ಬಾವಿ ಮುಚ್ಚುವುದಕ್ಕೆ ವಿರೋಧ ವ್ಯಕ್ತಪಡಿಸಿದ ಕಾರಣ ಪುಣ್ಯಾತ್ಮರೊಬ್ಬರು ಬಾವಿಗೆ ಸ್ಲಾಬ್ ಹಾಕಿ ಉಳಿಸಿದರು.
1975 ರ ಪೀಳಿಗೆ ಅದರ ಮೇಲೆ ಡಾಂಬರ್ ಹಾಕಿ ಬಾವಿ ಇದ್ದ ಕುರುಹು ಸಂಪೂರ್ಣ ಮಾಯ ಮಾಡಲಾಯಿತು ಈಗ 2020 ಪೀಳಿಗೆಯ ನರೇಂದ್ರ ಮೋದಿ ಯವರ ಮಹತ್ವಾಕಾಂಕ್ಷೆ ಯೋಜನೆಯಲ್ಲೊಂದಾದ ಸ್ಮಾರ್ಟ್ ಸಿಟಿ ಯೋಜನೆ ಯ ಕಾಮಗಾರಿ ಸಂದರ್ಭದಲ್ಲಿ ಆ ಬಾವಿ ಮತ್ತೆ ಪತ್ತೆಯಾಗಿದೆ 2020 ರ ಈ ಬಾವಿಯನ್ನು ಏನು ಮಾಡಲಿದೆ ಎಂದು ಕಾದು ನೋಡಬೇಕು🙏🙏🙏

ಮಂಗಳೂರು : ವಿಶ್ವದಲ್ಲೇ ಅತ್ಯಂತ ವೇಗವಾಗಿ ಹಾಗೂ ಸುಂದರವಾಗಿ ಏಕ ಕಾಲದಲ್ಲಿ ಎರಡೂ ಕೈಗಳಿಂದ 10 ರೀತಿಯಲ್ಲಿ ಬರೆಯುವ ಮೂಲಕ, ಇದೀಗ ವಿಶ್ವ ದಾಖಲೆ ಮ...
14/09/2020

ಮಂಗಳೂರು : ವಿಶ್ವದಲ್ಲೇ ಅತ್ಯಂತ ವೇಗವಾಗಿ ಹಾಗೂ ಸುಂದರವಾಗಿ ಏಕ ಕಾಲದಲ್ಲಿ ಎರಡೂ ಕೈಗಳಿಂದ 10 ರೀತಿಯಲ್ಲಿ ಬರೆಯುವ ಮೂಲಕ, ಇದೀಗ ವಿಶ್ವ ದಾಖಲೆ ಮಾಡಿರುವ ಮಂಗಳೂರಿನ ಬಹುಮುಖ ಪ್ರತಿಭೆಯ ಆದಿ ಸ್ವರೂಪಾಳಿಂದ ಪ್ರಪ್ರಥಮವಾಗಿ ಅನಾವರಣಗೊಂಡಿದೆ.

ವೈಜ್ಞಾನಿಕವಾಗಿ ದೃಢವಾಗಿರುವ ಎಡ ಬಲ ಮೆದುಳುಗಳನ್ನು ಪೂರ್ಣ ಏಕ ಕಾಲಕ್ಕೆ ಎಲ್ಲಾ ವಿದ್ಯಾರ್ಥಿಗಳಲ್ಲೂ ಚುರುಕುಗೊಳಿಸಬಲ್ಲ ಈ ತಂತ್ರವು, ರಾಷ್ಟ್ರೀಯ ಹೊಸ ಶಿಕ್ಷಣ ನೀತಿಗೆ ತೆರೆದುಕೊಳ್ಳಲಿರುವ ಶಿಕ್ಷಣ ಕ್ಷೇತ್ರಕ್ಕೊಂದು ಅಪೂರ್ವ ಸಾಧ್ಯತೆಯಾಗಲಿದೆ.

ಆದಿ ಎರಡು ಕೈಗಳಲ್ಲಿ ಅತಿ ವೇಗದ ಬರಹಗಾರ್ತಿ ಎಂಬ ಎಕ್ಸ್ ಕ್ಲೂಸಿವ್ ವಲ್ಡ್ ರೆಕಾರ್ಡ್ ಅನ್ನು ಮಾಡಿದ್ದಾಳೆ. ದಾಖಲೆಯು ಈ ರೀತಿಯಲ್ಲದೆ ಇನ್ನು ಹತ್ತು ಶೈಲಿಗಳಲ್ಲಿ ಎರಡೂ ಕೈಗಳಲ್ಲಿ ಬರೆಯಬಲ್ಲ ಈಕೆ ಬಹುಮುಖ ಪ್ರತಿಭೆ. ಈಕೆಯ ತಾಯಿ ತಂದೆ ಸ್ವರೂಪ ಅಧ್ಯಯನ ಕೇಂದ್ರದ ಗೋಪಾಡ್ಕರ್ ಹಾಗೂ ಸುಮಾಡ್ಕರ್.

ಇನ್ನು, ತನ್ನ ಎರಡುವರೆ ವರ್ಷ ವಯಸ್ಸಿನಲ್ಲೆ ರಾಜ್ಯಾದಾದ್ಯಂತ ಶಿಕ್ಷಣ ಜಾಗೃತಿ ಜಾಥಾದಲ್ಲಿ ಭಾಗವಹಿಸಿದ ಆದಿ 2019ರ ತನಕ 1600ಕ್ಕಿಂತ ಹೆಚ್ಚು ಜಾಥಾ ಕಾರ್ಯಕ್ರಮಗಳಲ್ಲಿ ವಿಶೇಷ ಪ್ರತಿಭಾ ಪ್ರದರ್ಶನವನ್ನು ನೀಡಿದ್ದಾಳೆ. ಕಲಿಸದೆ ಕಲಿಯುವ ಸ್ವರೂಪ ಶಿಕ್ಷಣ ಸ್ವಕಲಿಕಾ ವಿಧಾನದಂತೆ ಒಂದುವರೆ ವರ್ಷ ಪ್ರಾಯದಲ್ಲೆ ಓದಲು, ಎರಡುವರೆ ವರ್ಷ ಪ್ರಾಯದಲ್ಲಿ ದಿನಕ್ಕೆ 30 ಪುಟಗಳಷ್ಟು ಬರೆಯುತ್ತಿದ್ದ ಆದಿ ಎಂದೂ ಶಾಲೆಗೆ ಹೋಗದೆ ಸ್ವಯಂ ಆಸಕ್ತಿಯಿಂದ ಅಭ್ಯಾಸ ಮಾಡಿದ್ದಾಳೆ. ಸದ್ಯ ಇದೀಗ 10ನೇ ತರಗತಿಯ ಪರೀಕ್ಷೆಯನ್ನು ಖಾಸಗಿಯಾಗಿ 2 ಕೈಯಿಂದ ಬರೆಯಲು ಸಿದ್ಧಳಾಗಿದ್ದಾಳೆ.

31/08/2020

ಧರ್ಮಸ್ಥಳ ಆನೆಮರಿ..

ಕಡಲಬ್ಬರದ ನಡುವೆ  ಪುಣ್ಯ ತೀರ್ಥ ಸ್ನಾನ; ಕೃತಿಕ್ ಕೃಪಾಲಿಯ ಹೊಸ ಐಡಿಯಾ
19/08/2020

ಕಡಲಬ್ಬರದ ನಡುವೆ ಪುಣ್ಯ ತೀರ್ಥ ಸ್ನಾನ; ಕೃತಿಕ್ ಕೃಪಾಲಿಯ ಹೊಸ ಐಡಿಯಾ

Address

Mangalore

Alerts

Be the first to know and let us send you an email when Isiri Media posts news and promotions. Your email address will not be used for any other purpose, and you can unsubscribe at any time.

Contact The Business

Send a message to Isiri Media:

Share