IceCream

IceCream Information, News, Music, Masthi and Entertainment information, News, Entertainment, Music, Masthi

28/05/2025

ಇದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇರುವ ಸಣ್ಣ ಊರಿನ ಬಗ್ಗೆ ನಾನು chat gpt ಯಲ್ಲಿ ಕೇಳಿದ ಪ್ರಶ್ನೆಗೆ ದೊರೆತ ಉತ್ತರ...
ಇದೇ ರೀತಿ ನೀವು ಕೂಡ chat gpt ಯಲ್ಲಿ ನಿಮ್ಮ ಊರಿನ ಬಗ್ಗೆ ಇರುವ ಮಾಹಿತಿಯನ್ನು ತಿಳಿದುಕೊಂಡು, ನಮಗೆ ಕಾಮೆಂಟ್ ಮಾಡಿ
ದರಿಬಾಗಿಲು ಎನ್ನುವ ಊರು ಎಲ್ಲಿದೆ...?

ದರಿಬಾಗಿಲು ಎಂಬುದು ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಕಳ್ಳಿಗೆ ಗ್ರಾಮದಲ್ಲಿರುವ ಒಂದು ಸ್ಥಳವಾಗಿದೆ. ಈ ಪ್ರದೇಶವು ಮೈಸೂರು ವಿಭಾಗಕ್ಕೆ ಸೇರಿದೆ ಮತ್ತು ಜೋಡುಮಾರ್ಗಾ ಅಂಚೆ ಕಚೇರಿಯ ವ್ಯಾಪ್ತಿಗೆ ಒಳಪಟ್ಟಿದೆ, ಇದರ ಪಿನ್ ಕೋಡ್ 574219 ಆಗಿದೆ .

ಕಳ್ಳಿಗೆ ಗ್ರಾಮವು ಬಂಟ್ವಾಳ ಪಟ್ಟಣದಿಂದ ಸುಮಾರು 7 ಕಿಲೋಮೀಟರ್ ದೂರದಲ್ಲಿದ್ದು, ಮಂಗಳೂರು ನಗರದಿಂದ ಸುಮಾರು 19 ಕಿಲೋಮೀಟರ್ ದೂರದಲ್ಲಿದೆ . ಈ ಗ್ರಾಮವು ಕೃಷಿ ಮತ್ತು ಗ್ರಾಮೀಣ ಜೀವನಶೈಲಿಗೆ ಪ್ರಸಿದ್ಧವಾಗಿದೆ.

ದರಿಬಾಗಿಲು ಸ್ಥಳವು ಬ್ರಹ್ಮರಕೋಟ್ಲು, ದೇವಂದಬೆಟ್ಟು, ತುಂಬೆ, ಮೋಡಂಕಾಪ್ ಮುಂತಾದ ಸ್ಥಳಗಳಿಗೆ ಸಮೀಪದಲ್ಲಿದೆ. ಇವುಗಳೆಲ್ಲಾ ಬಂಟ್ವಾಳ ಪಟ್ಟಣದ ಸುತ್ತಲಿನ ಪ್ರಮುಖ ಪ್ರದೇಶಗಳಾಗಿವೆ .

ಈ ಪ್ರದೇಶದಲ್ಲಿ ಸ್ವಾಮಿ ಕೊರಗಜ್ಜ ಗುಡಿ, ಮಾಈಸಂದಾಯ ಸಾನ, ಜ್ಯೋತಿಗುಡ್ಡೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಶ್ರೀರಾಮ ಭಜನಾ ಮಂದಿರ ಮುಂತಾದ ಹಿಂದೂ ದೇವಾಲಯಗಳಿವೆ .

ದರಿಬಾಗಿಲು ಎಂಬ ಸ್ಥಳವು ಕಳ್ಳಿಗೆ ಗ್ರಾಮದಲ್ಲಿ ಇರುವುದರಿಂದ, ನೀವು ಈ ಪ್ರದೇಶವನ್ನು ಭೇಟಿ ಮಾಡಲು ಬಂಟ್ವಾಳ ಅಥವಾ ಮಂಗಳೂರು ನಗರದಿಂದ ರಸ್ತೆ ಮಾರ್ಗದಲ್ಲಿ ಪ್ರಯಾಣಿಸಬಹುದು.

ದರಿಬಾಗಿಲು ಸ್ಥಳವು ಬಂಟ್ವಾಳ ಪಟ್ಟಣದಿಂದ ಸುಮಾರು 10-15 ಕಿಲೋಮೀಟರ್ ದೂರದಲ್ಲಿದ್ದು, ಮಂಗಳೂರು ನಗರದಿಂದ ಸುಮಾರು 30-35 ಕಿಲೋಮೀಟರ್ ದೂರದಲ್ಲಿದೆ. ಇಲ್ಲಿ ಸಾರ್ವಜನಿಕ ಮತ್ತು ಖಾಸಗಿ ಬಸ್ ಸೇವೆಗಳು ಲಭ್ಯವಿದ್ದು, ರೈಲು ನಿಲ್ದಾಣಗಳು ಸಹ ಸಮೀಪದಲ್ಲಿವೆ.

ಈ ಪ್ರದೇಶವು ಕೃಷಿ ಮತ್ತು ಗ್ರಾಮೀಣ ಜೀವನಶೈಲಿಗೆ ಪ್ರಸಿದ್ಧವಾಗಿದೆ. ಇದು ದಕ್ಷಿಣ ಕನ್ನಡ ಜಿಲ್ಲೆಯ ಒಂದು ಶಾಂತ ಮತ್ತು ಸುಂದರ ಸ್ಥಳವಾಗಿದೆ.

15/05/2025

ಬರೊಂದುಲ್ಲೆರ್ " ಗಂಟ್ ಕಲ್ವೆರ್"
ಮೇ 23ಕ್ ನಿಕ್ಲೆನ ಕೈತಲ್ದ ಚಿತ್ರಮಂದಿರೊಡು... ಮೋಕೆ ದೀದ್ ಬಲೆ..
IceCream Highlights Mangalore Raaga Saagar Viral zone Viral video Namma Kfi India

ಮೇ 23ರಿಂದ ರಾಜ್ಯಾದ್ಯಂತ...ಚಿತ್ರಮಂದಿರಗಳಲ್ಲೇ ಚಿತ್ರವನ್ನು ನೋಡಿ, ಹರಸಿ, ಹಾರೈಸಿ...
15/05/2025

ಮೇ 23ರಿಂದ ರಾಜ್ಯಾದ್ಯಂತ...
ಚಿತ್ರಮಂದಿರಗಳಲ್ಲೇ ಚಿತ್ರವನ್ನು ನೋಡಿ, ಹರಸಿ, ಹಾರೈಸಿ...

14/05/2025

ಪೊಲೀಸ್ ಇನ್ ಸ್ಪೆಕ್ಟರ್ ಪಾತ್ರದಲ್ಲಿ ರಾಕೇಶ್ ಪೂಜಾರಿ
IceCream Highlights Mangalore Raaga Saagar Viral zone Viral video India Namma Kfi

14/05/2025

ಅರ್ಜುನ್ ಜನ್ಯ Spoof ಗೆ ಪರ್ಫೆಕ್ಟ್ ಮ್ಯಾಚ್ ಆಗಿದ್ದರು ರಾಕೇಶ್ ಪೂಜಾರಿ...
Miss you boss
IceCream Highlights Mangalore Raaga Saagar Viral zone Viral video Namma Kfi India

ಅಶ್ವಿನ್.. ರೋಹಿತ್ ಶರ್ಮಾ.. ಈಗ ವಿರಾಟ್ ಕೊಹ್ಲಿ.. ಈ ಮೂರು ನಿವೃತ್ತಿಗಳ ಹಿಂದೆ ಒಬ್ಬ ವ್ಯಕ್ತಿ..!ತಮಿಳುನಾಡಿನ ಸ್ಪಿನ್ ಮಾಂತ್ರಿಕ ರವಿಚಂದ್ರನ್...
14/05/2025

ಅಶ್ವಿನ್.. ರೋಹಿತ್ ಶರ್ಮಾ.. ಈಗ ವಿರಾಟ್ ಕೊಹ್ಲಿ.. ಈ ಮೂರು ನಿವೃತ್ತಿಗಳ ಹಿಂದೆ ಒಬ್ಬ ವ್ಯಕ್ತಿ..!

ತಮಿಳುನಾಡಿನ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ಆಸ್ಟ್ರೇಲಿಯಾದಲ್ಲಿ ಇನ್ನೂ ಟೆಸ್ಟ್ ಸರಣಿ ನಡೆಯುತ್ತಿದ್ದಾಗಲೇ ನಿವೃತ್ತಿ ಘೋಷಿಸಿ ವಾಪಸ್ ಚೆನ್ನೈಗೆ ಬಂದು ಬಿಡುತ್ತಾನೆ..

“ನಾನಿನ್ನೂ ಆಡುತ್ತೇನೆ” ಎಂದಿದ್ದ ರೋಹಿತ್ ಶರ್ಮಾ ಇದ್ದಕ್ಕಿದ್ದಂತೆ ಟೆಸ್ಟ್ ಕ್ರಿಕೆಟ್’ಗೆ ವಿದಾಯ ಹೇಳಿ ಬಿಡುತ್ತಾನೆ.

ಟೆಸ್ಟ್ ಕ್ರಿಕೆಟನ್ನು ಅತಿಯಾಗಿ ಪ್ರೀತಿಸುತ್ತಿದ್ದ ವಿರಾಟ್ ಕೊಹ್ಲಿ ಕ್ರಿಕೆಟ್ ಜಗತ್ತೇ ಅಚ್ಚರಿ ಪಡುವ ರೀತಿಯಲ್ಲಿ ವೈಟ್ & ವೈಟ್ ಜರ್ಸಿಯನ್ನು ಕಳಚಿ ಬಿಡುತ್ತಾನೆ..

ಹಾಗಾದರೆ ಭಾರತೀಯ ಕ್ರಿಕೆಟ್’ನ ಈ ಮೂವರು ದಿಗ್ಗಜರು ಹೀಗೆ ಟೆಸ್ಟ್ ಕ್ರಿಕೆಟ್’ನಿಂದ ಒಬ್ಬರ ಹಿಂದೆ ಒಬ್ಬರಂತೆ ನಿವೃತ್ತಿಯಾಗಿರುವುದು ಏಕೆ..?

ಅಶ್ವಿನ್’ನಲ್ಲಿ ಇನ್ನೂ ಒಂದೆರಡು ವರ್ಷ ಚೆಂಡು ತಿರುಗಿಸುವ ಸಾಮರ್ಥ್ಯವಿತ್ತು. ಆದರೂ ಟೆಸ್ಟ್ ಸರಣಿಯೊಂದರ ಮಧ್ಯದಲ್ಲೇ retirement ಘೋಷಣೆ ಮಾಡಿ ವಾಪಸ್ ಬರುತ್ತಾನೆ ಎಂದರೆ ಅವನು ಘಾಸಿಗೊಂಡಿದ್ದ ಎಂದೇ ಅರ್ಥ..

ಅಶ್ವಿನ್ ನಿವೃತ್ತಿ ಘೋಷಿಸಿದಾಗ ಅವನ ತಂದೆ ಹೇಳಿದ್ದ ಮಾತನ್ನೊಮ್ಮೆ ನೆನಪಿಸಿಕೊಳ್ಳಿ.
“ಭಾರತ ತಂಡದಲ್ಲಿ ಅಶ್ವಿನ್’ಗೆ ಅವಮಾನವಾಗುತ್ತಲೇ ಇತ್ತು. ಎಷ್ಟು ಸಮಯ ಅವನು ಇದನ್ನು ಸಹಿಸಿಕೊಳ್ಳಬಲ್ಲ..?” ಎಂದಿದ್ದರು ಅಶ್ವಿನ್ ತಂದೆ ರವಿಚಂದ್ರನ್.

ಇಂಗ್ಲೆಂಡ್’ನಲ್ಲಿ ಕೊನೆಯ ಬಾರಿ ಟೆಸ್ಟ್ ಕ್ರಿಕೆಟ್ ಆಡಲು ಬಯಸಿದ್ದ ರೋಹಿತ್ ಶರ್ಮಾಗೆ ಇತ್ತೀಚೆಗೆ ಬಿಸಿಸಿಐ ಆಯ್ಕೆ ಸಮಿತಿ ಸದಸ್ಯರೊಬ್ಬರಿಂದ ಒಂದು ಸಂದೇಶ ರವಾನೆಯಾಗಿತ್ತು. “ನಿಮ್ಮನ್ನು ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆ ಮಾಡುವುದಿಲ್ಲ” ಎಂಬ ಸಂದೇಶ ಅದು. ಅವಮಾನದ ಮುನ್ಸೂಚನೆ ಅರಿತ ರೋಹಿತ್ ನಿವೃತ್ತಿ ಘೋಷಿಸಿ ಬಿಟ್ಟ.

ಇನ್ನು ವಿರಾಟ್ ಕೊಹ್ಲಿ..
ದೆಹಲಿ ರಣಜಿ ತಂಡದ ಕೋಚ್ ಶರಣ್’ದೀಪ್ ಸಿಂಗ್ ಹೇಳುವ ಪ್ರಕಾರ ವಿರಾಟ್ ಕೊಹ್ಲಿ ಇಂಗ್ಲೆಂಡ್ ಪ್ರವಾಸಕ್ಕೆ ಸಜ್ಜಾಗುತ್ತಿದ್ದ, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡಲು ಬಯಸಿದ್ದ. ಅದೇ ಯೋಜನೆಯ ಭಾಗವಾಗಿ ದೆಹಲಿ ಪರ ಇತ್ತೀಚೆಗೆ ರಣಜಿ ಪಂದ್ಯವನ್ನೂ ಆಡಿದ್ದ.. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಇಂಗ್ಲೆಂಡ್’ನಲ್ಲಿ ಭಾರತ ‘ಎ’ ಪರ ಎರಡು ಅಭ್ಯಾಸ ಪಂದ್ಯಗಳನ್ನು ಆಡಲಿದ್ದೇನೆ ಎಂದು ಶರಣ್’ದೀಪ್ ಸಿಂಗ್’ಗೆ ವಿರಾಟ್ ಹೇಳಿದ್ದನಂತೆ..

ಹಾಗಾದರೆ ಈ ಅಚ್ಚರಿಯ ನಿವೃತ್ತಿ ನಿರ್ಧಾರವೇಕೆ..?

“ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ನಂತರ ನಿಮ್ಮನ್ನು ಮತ್ತೆ ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಲಾಗುವುದಿಲ್ಲ” ಎಂಬ ಸಂದೇಶವನ್ನು ಯಾವಾಗ ವಿರಾಟ್ ಕೊಹ್ಲಿಗೆ ನೀಡಲಾಯಿತೋ ಕೊಹ್ಲಿ ಕೆರಳಿ ಬಿಟ್ಟ.

ಅಪ್ಪಟ ಸ್ವಾಭಿಮಾನದ ಮನುಷ್ಯ. ಇಷ್ಟು ವರ್ಷ ಕ್ರಿಕೆಟ್ ಆಡಿ ನಿಮ್ಮ ಕ್ರಿಕೆಟ್ ಭವಿಷ್ಯವನ್ನು ಯಾರೋ ನಿರ್ಧರಿಸುತ್ತಾರೆ ಎಂದರೆ..? ಅದನ್ನು ಸಹಿಸಿಕೊಳ್ಳುವುದು ಬಿಡಿ, ಅರಗಿಸಿಕೊಳ್ಳಲೂ ಸಾಧ್ಯವಿಲ್ಲ.. ಅದೂ ವಿರಾಟ್ ಕೊಹ್ಲಿಯಂಥಾ ವ್ಯಕ್ತಿ..? ಸಾಧ್ಯವೇ ಇಲ್ಲ.. ಇನ್ನು ಮುಂದೆ ಟೆಸ್ಟ್ ಕ್ರಿಕೆಟ್ ಆಡಲಾರೆನೆಂದು ಒಂದೇ ಮಾತು ಹೇಳಿ ಬಿಟ್ಟ ಕೊಹ್ಲಿ.
ಹಾಗಾದರೆ ಇದೆಲ್ಲಾ ಯಾಕಾಯಿತು..? ಇದರ ಹಿಂದೆ ಯಾರಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಹುಡುಕಲು ರಾಕೆಟ್ ಸೈನ್ಸ್ ಬೇಕಾಗಿಲ್ಲ, ಜಸ್ಟ್ ಕಾಮನ್ ಸೆನ್ಸ್ ಸಾಕು..

ಅಶ್ವಿನ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಯ ಅಚ್ಚರಿಯ ಟೆಸ್ಟ್ ನಿವೃತ್ತಿಗಳ ಹಿಂದಿರುವ ವ್ಯಕ್ತಿ ಭಾರತ ಕ್ರಿಕೆಟ್ ತಂಡದ ಕೋಚ್ ಗೌತಮ್ ಗಂಭೀರ್.

2027ರ ಏಕದಿನ ವಿಶ್ವಕಪ್ ಮುಗಿಯುವ ಹೊತ್ತಿಗೆ ಗೌತಮ್ ಗಂಭೀರ್ ಯಶಸ್ವಿ ಕೋಚ್ ಆಗಬಹುದು, ಆಗದೆಯೂ ಇರಬಹುದು. ಆದರೆ ಒಬ್ಬ ವ್ಯಕ್ತಿಯಾಗಿ ಗಂಭೀರ್’ನಲ್ಲಿ ಮೆಚ್ಚಿಕೊಳ್ಳಬಹುದಾದ ಗುಣ ಯಾವುದೂ ಇಲ್ಲ. ಜಗತ್ತಿನ ಅಷ್ಟೂ ಅಹಂಗಳನ್ನು ತನ್ನೊಳಗೆ ತುಂಬಿಕೊಂಡಿರುವ ವ್ಯಕ್ತಿ ಆತ.
ತನ್ನ ಯೋಜನೆಗಳಿಗೆ ಅಡ್ಡಿಯಾಗಿರುವ ಹಿರಿಯ ಆಟಗಾರರು ತಂಡದಲ್ಲಿರುವುದು ಅವನಿಗೆ ಬೇಕಾಗಿರಲಿಲ್ಲ. ಪರಿಣಾಮ ಕಣ್ಣ ಮುಂದೆಯೇ ಇದೆ. ಗಂಭೀರ್ ಅಭಿಮಾನಿಗಳು ಇದನ್ನು ಒಪ್ಪಲಿ, ಬಿಡಲಿ.. ಆದರೆ ಇದೇ ಸತ್ಯ.

ಇನ್ನು ವಿರಾಟ್ ಕೊಹ್ಲಿಯ ನಿವೃತ್ತಿ ನಿರ್ಧಾರ..

ತೆರೆಯ ಹಿಂದಿನ ಕಾರಣಗಳೇನೇ ಇರಲಿ.. ಕೊಹ್ಲಿಯದ್ದು ಸರಿಯಾದ ನಿರ್ಧಾರ.. Once again he has set the benchmark..!

ಕೊಹ್ಲಿಯ ಟೆಸ್ಟ್ ನಿವೃತ್ತಿ ತುಂಬಾ ಸಮಯದವರೆಗೆ ನೆನಪಿನಲ್ಲಿ ಉಳಿಯುತ್ತದೆ. ಕಾರಣ, ಇಡೀ ಕ್ರಿಕೆಟ್ ಜಗತ್ತೇ ಕೊಹ್ಲಿ ಟೆಸ್ಟ್ ಕ್ರಿಕೆಟ್ ಆಡುವುದನ್ನು ಬಯಸಿತ್ತು. ಆದರೆ ಆತ ವಿದಾಯ ಘೋಷಿಸಿ ಬಿಟ್ಟ.
ಇಂತಹ ನಿವೃತ್ತಿ ಭಾರತೀಯ ಕ್ರಿಕೆಟ್’ನಲ್ಲಿ ಕಾಣ ಸಿಗುವುದು ತುಂಬಾ ವಿರಳ..

“ನಿನ್ನ ಕೈಯಲ್ಲಿ ಆಗುತ್ತಿಲ್ಲ, ಸಾಕು ಮಾಡು ನಿನ್ನ ಆಟ” ಎಂದು ಹೇಳಿಸಿಕೊಂಡು ಹೊರ ನಡೆಯುವುದಕ್ಕೂ, “ನೀನು ಇನ್ನೂ ಆಡಬೇಕು” ಎಂಬ ಧ್ವನಿ ಕೇಳುತ್ತಿರುವಾಗಲೇ ನಿವೃತ್ತಿಯಾಗುವುದಕ್ಕೂ ವ್ಯತ್ಯಾಸವಿದೆ.

(ಖ್ಯಾತ ಕ್ರೀಡಾ ಪತ್ರಕರ್ತ ಸುದರ್ಶನ್ ಅವರ ಗೋಡೆಯಿಂದ )


Highlights IceCream Mangalore Raaga Saagar Viral zone Viral video India Indian Cricket Team

13/05/2025

ಈ ವಿಡಿಯೋ ಪಾಕಿಸ್ತಾನದ್ದು, ಈ ಆಂಬುಲೆನ್ಸ್ ನಲ್ಲಿ ಮೊನ್ನೆ ಭಾರತದ ದಾಳಿಗೆ ಸಿಲುಕಿ ಹತರಾದವರ ಮೃತದೇಹಗಳಿವೆ...
ಭಾರತದ ಸೈನಿಕರು ಮೊನ್ನೆ ಏನು ಮಾಡಿದರು ಎಂದು ಕೇಳುವವರಿಗೆ ಸಾಕ್ಷಿ ಇದಾಗಿದೆ.
Highlights IceCream Mangalore Raaga Saagar Viral zone Viral video ADGPI - Indian Army

12/05/2025

ಕಾಮಿಡಿ ಕಿಲಾಡಿ ರಾಕೇಶ್ ಪೂಜಾರಿ ಕೊನೆಯ ಸಂಭ್ರಮ
IceCream Highlights Mangalore Raaga Saagar Viral zone Viral video India

12/05/2025

ಕಾಮಿಡಿ ಕಿಲಾಡಿ ರಾಕೇಶ್ ಅವರ ಸಂಭ್ರಮದ ಕೊನೆಯ ಕ್ಷಣಗಳು...
ಕಾಂತಾರ ಚಾಪ್ಟರ್ 1 ಸಿನಿಮಾದ ಶೂಟಿಂಗ್ನಲ್ಲಿ ನಿನ್ನೆ ಇಡೀ ದಿನ ಭಾಗವಹಿಸಿದ ರಾಕೇಶ್ ಪೂಜಾರಿಯವರು ರಾತ್ರಿ ಸ್ನೇಹಿತನ ಭಾಗವಹಿಸಿ ಸ್ನೇಹಿತರ ಜೊತೆಗೂಡಿ ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದರು. ಅದಾಗಿ ಕೆಲಸ ಸಮಯದ ನಂತರ ಲೋ ಬಿಪಿಯಾಗಿ ಹಾರ್ಟ್ ಅಟ್ಯಾಕ್ ಆದ ಕಾರಣ ಅವರು ನಿಧನ ಹೊಂದಿದ್ದಾರೆ.... ಹೋಗಿ ಬನ್ನಿ ರಾಕೇಶ್
ಓಂ ಶಾಂತಿ....
IceCream Highlights Mangalore Raaga Saagar Viral zone

09/05/2025

ತಾಳಿ ಕಟ್ಟುವ ವೇಳೆಯಲ್ಲಿ ಗಳಗಳನೆ ಅತ್ತ ಚೈತ್ರ ಕುಂದಾಪುರ
IceCream Highlights Mangalore Raaga Saagar Viral zone Viral video Namma Kfi

09/05/2025

ಭಾರತದ ದಾಳಿಯ ಹೊಡೆತಕ್ಕೆ ಸಿಲುಕಿದ ಪಾಕಿಸ್ತಾನದ ವಾಣಿಜ್ಯ ನಗರಿ ಕರಾಚಿಯ ಸ್ಥಿತಿಯನ್ನು ನೋಡಿ
IceCream Highlights Mangalore Raaga Saagar India Viral zone Viral video ADGPI - Indian Army

09/05/2025

ಭಾರತದ ಸೇನೆಯು ಪಾಕಿಸ್ತಾನದ ಫೈಟರ್ ಜೆಟ್ಟನ್ನು ಹೊಡೆದುರುಳಿಸಿದ ಪ್ರೀತಿ ನೋಡಿ
IceCream Highlights Mangalore Raaga Saagar India Viral zone Viral video ADGPI - Indian Army

Address

Konchady
Mangalore
575008

Opening Hours

10am - 6pm

Telephone

+919845613315

Website

Alerts

Be the first to know and let us send you an email when IceCream posts news and promotions. Your email address will not be used for any other purpose, and you can unsubscribe at any time.

Share

Category