Coorg Roamer

Coorg Roamer The page that will guide the Tourist who are visiting our kodagu (Madikeri).

25/05/2025

Heavy rainfall in Kodagu

08/05/2025

ರಾಜಸ್ತಾನದ ಜೈಸಲ್ಮೇರ್ ಮೇಲೆ ಕ್ಷಿಪಣಿ ದಾಳಿ ಮಾಡಿದ ಪಾಕಿಸ್ತಾನ... ಎಲ್ಲಾ ಕ್ಷಿಪಣಿಗಳನ್ನು ಹೊಡೆದುರುಳಿಸಿದ ಭಾರತ... ಜೈ ಹೋ...

08/05/2025

ಪಾಕಿಸ್ತಾನದ ಎಲ್ಲಾ ಡ್ರೋನ್‌ಗಳು ಮತ್ತು ರಾಕೆಟ್‌ಗಳನ್ನು ಹೊಡೆದುರುಳಿಸುತ್ತಿರುವ ಭಾರತೀಯ ಸೇನೆ🇮🇳

08/05/2025

"ಪಾಕಿಸ್ತಾನಿ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ವೈರಲ್ ಆಗುತ್ತಿರುವ ವಿಡಿಯೋ.

02/05/2025

Miniature trains

26/04/2025

ನಮ್ಮ ಕೊಡಗು , beauty of Coorg

#ಕೊಡಗು

22/04/2025

Gun shot sound at backyard

ಜಮ್ಮು - ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಬಲಿಯಾದ ಅಮಾಯಕ ಪ್ರವಾಸಿಗರು.

22/04/2025

ಶ್ರೀ ಭಗವತಿ ದೇವಸ್ಥಾನ ಪದಕಲ್ಲು ಗ್ರಾಮ, sri Bhagavathi temple padaklu village

21/04/2025

Sri Kshetrapala temple Heravanadu
ಶ್ರೀ ಕ್ಷೇತ್ರಪಾಲ ದೇವಸ್ಥಾನ ಹೆರವನಾಡು

12/04/2025

ಮಲೆನಾಡ ರೈತನ ತೇರು,
Power tiller Vst tiller

12/04/2025

ಮಡಿಕೇರಿಯ ಚಿಕ್ಕಪೇಟೆ ಹಾಗೂ ಕೆ ಆರ್ ಮಾರ್ಕೆಟ್, ಚೌಕಿ
Chikepete and KR Market of Madikeri, Chowki of Madikeri

 #ತಲಕಾವೇರಿರಾಮ  ನಮ್ಮದು ದೊಡ್ಡ ಕುಟುಂಬ. ಹತ್ತು ಜನ ಅಣ್ಣ ತಮ್ಮಂದಿರ ಪೃಕಿ ನಾನೂ ಒಬ್ಬ. ಕೊಡಗಿನಲ್ಲಿ ಹೆಸರು ಇರುವ ಜನರಿಗೆಲ್ಲ ಮತ್ತೊಂದು ಅಡ್ಡ...
26/03/2025

#ತಲಕಾವೇರಿರಾಮ
ನಮ್ಮದು ದೊಡ್ಡ ಕುಟುಂಬ. ಹತ್ತು ಜನ ಅಣ್ಣ ತಮ್ಮಂದಿರ ಪೃಕಿ ನಾನೂ ಒಬ್ಬ. ಕೊಡಗಿನಲ್ಲಿ ಹೆಸರು ಇರುವ ಜನರಿಗೆಲ್ಲ ಮತ್ತೊಂದು ಅಡ್ಡ ಹಸರು ಇರುವ ವಿಷಯ ನಿಮಗೆ ಗೊತ್ತೇ ಇದೆ. ನನ್ನ ಅಧೀಕೃತ ಹೆಸರು ತಲಕಾವೇರಿ ರಾಮ ಎಂದು. ಎಲ್ಲರ ಪೈಕಿ ನಾನು ಸ್ವಲ ಗಿಡ್ಡ ಇದ್ದ ಕಾರಣ ಭಾಗಮಂಡಲದ ಜನರ ಪಾಲಿಗೆ ನಾನು ಯಾವತ್ತಿದ್ದರೂ ತುಂಡು ರಾಮ.

1962ನೇ ಇಸವಿಗೆ ನಾನು ಈ ಪ್ರಪಂಚಕ್ಕೆ ಬಂದೆ.. 2020ರಲ್ಲಿ ಕೋವಿಡ್ ಬರೋತನಕ ದುಡಿಮೆನೇ ದೇವ್ರು ಅಂದುಕೊಂಡು ಜೀವನ ಮಾಡ್ದೆ.. ಈ ರಿಟೈರ್ ಜೀವನ ಮಾಡ್ತಾ ಇದ್ದಿನಿ. ನಾವು ಬಸ್ಸುಗಳಿಗೆ ಮನುಷ್ಯರ ತರಹ ಊರಿಡೀ ಅಸ್ತಿ ಮಾಡಬೇಕು ಅಂತಾನೋ ಅಥವಾ ಮಕ್ಕಳು ಮರಿನಾ ಸಾಕಬೇಕು ಅಂತ ಆಸೆ ಇರಲ್ಲ. ಕೊನೆಯ ದಿನಗಳನ್ನು ಕಳಿಯೋಕೆ ಒಂದು ಎರಡು ಸೆಂಟ್ ಜಾಗ ಸಿಕ್ರೆ ಸಾಕು.. ಅಲ್ಲೆ ನೆಮ್ಮದಿಯಾಗಿ ಇರ್ತಿವಿ.. ನನ್ನ ಜೀವನದ ಕಥೆ ತಿಳಿದ ಯಾರೋ ಪುಣ್ಯಾತ್ಮರು ಈ ತಲಕಾವೇರಿ ರಾಮ ತುಂಬಾ ಶ್ರಮಜೀವಿ ಎಂದು ನಂಗೆ ಹೊಸ ಚೈತನ್ಯ ತುಂಬಿದ್ದಾರೆ.. ಆರು ದಶಕಗಳ ಕಾಲ ಜನರನ್ನು ತುಂಬಿಸಿಕೊಂಡು ಓಡಾಡಿದ್ದ ನನ್ನೊಳಗೆ ಈಗ ಮತ್ತೆ ಜನ ಬಲಗಾಲಿಟ್ಟು ಹತ್ತುತ್ತಿದ್ದಾರೆ. ಹೇಳಿ ಕೇಳಿ ನಾನೊಬ್ಬ ಬಸ್ಸು ಸ್ವಾಮಿ.. ಈ ಭೂಮಿ ಮೇಲೆ ಬಸ್ಸಾಗಿ ಹುಟ್ಟಿದ ನನಗೆ ಹೆಚ್ಚು ಸಂತೋಷ ಆಗೋದು ನನ್ನೊಳಗೆ ಜನ ಓಡಾಡಿದಾಗಲೇ..

ಆಹಾ‌‌... ಆ ಕಾಲ ಎಷ್ಟು ಚೆಂದ ಇತ್ತು... ಆಗಿನ ಕೊಡಗು ನಿಜವಾದ ಕೊಡಗು. ರಿಸಾರ್ಟು.. ಹೋಮ್ ಸ್ಟೇ ಯಾವುದೂ ಇರಲಿಲ್ಲ.. ಎಲ್ಲಿ ನೋಡಿದರೆ ಅಲ್ಲಿ ಬತ್ತದ ಗದ್ದೆಗಳು. ಹಳೇ ಹಂಚಿನ ಮನೆಗಳು. ಆಗಿನ ರಸ್ತೆಗಳಲ್ಲಿ ದಿನಕ್ಕೆ ಒಂದು ಹತ್ತಿಪ್ಪತ್ತು ವಾಹನ ಓಡಾಡಿದರೆ ಅದೇ ಹೆಚ್ಚು. ನಾನು ಬೆಳಿಗ್ಗೆ ಎಂಟುವರೆಗೆ ಸರಿಯಾಗಿ ಮಡಿಕೇರಿ ಬಿಟ್ರೆ ಸುಮಾರು ಹತ್ತುಗಂಟೆಗೆ ಭಾಗಮಂಡಲ ತಲುಪಿಬಿಡ್ತಾ ಇದ್ದೆ. ಆಗಿನ ಕಾಲದಲ್ಲಿ ತಾಯಿ ಕಾವೇರಮ್ಮನ ದರ್ಶನಕ್ಕೆ ಭಾಗಮಂಡಲದಿಂದ ತಲಕಾವೇರಿಗೆ ಯಾವುದೆ ಕೆಂಪು ಬಸ್ಸುಗಳು ಇರಲಿಲ್ಲ. ಜನರ ಬಳಿ ಖಾಸಗಿ ವಾಹನವಾಗಲಿ ಅಥವಾ ಆಟೋರಿಕ್ಷಾಗಳಾಗಲಿ ಇರದ ಕಾಲ ಅದು. ಭಾಗಮಂಡಲದಲ್ಲಿ ಜನರನ್ನು ಹತ್ತಿಸಿಕೊಂಡು ತಲಕಾವೇರಿಗೆ ಹೋದರೆ ಮಧ್ಯಾಹ್ನ ಪೂಜೆ ಮುಗಿಸಿಕೊಂಡು ಸಂಜೆ ಭಾಗಮಂಡಲಕ್ಕೆ ಬರ್ತಾ ಇದ್ದೆ. ಸಂಜೆ ಆರು ಗಂಟೆಗೆ ಮಡಿಕೇರಿಗೆ ವಾಪಸ್ ಬಂದರೆ ಅಂದಿನ ನನ್ನ ಡ್ಯೂಟಿ ಮುಗೀತಾ ಇತ್ತು. ಸಂಜೆ ಇಡೀ ಕೊಡಗು ಸುತ್ತಾಡಿ ಬಂದಿದ್ದ ನನ್ನ ಬೇರೆ ಅಣ್ಣಾ ತಮ್ಮಂದಿರ ಜೊತೆಗೆ ಸ್ವಲ್ಪ ಕಷ್ಟ ಸುಖ ಮಾತಾಡಿ ಬೇಗ ಮಲ್ಕೊತ್ತಿದ್ದೆ.

ಭಾಗಮಂಡಲದಿಂದ ತಲಕಾವೇರಿಗೆ ಹೋಗಲು ಭಕ್ತಾದಿಗಳು ಜಾಸ್ತಿ ಇದ್ದಾಗ ನಾನು ಎರಡು ಮೂರು ಸಲ ಭಾಗಮಂಡಲದಿಂದ ತಲಕಾವೇರಿಗೆ ಓಡಾಡಿದ್ದೂ ಇತ್ತು. ನಾನು ತಾಯಿ ಕಾವೇರಮ್ಮನ ಭಕ್ತನಾದ ಕಾರಣದಿಂದ ನನಗೆ ಜನರ ಭಕ್ತಿ ಬಗ್ಗೆ ಸ್ವಲ ಜಾಸ್ತಿನೆ ಪ್ರೀತಿ. ತಾಯಿಯ ದರ್ಶನಕ್ಕಾಗಿ ಭಾಗಮಂಡಲದ ತನಕ ಬಂದ ಸ್ವಂತ ವಾಹನವಿಲ್ಲದ ಜನರು ತಾಯಿಯನ್ನು ನೋಡದೆ ವಾಪಾಸ್ ಹೋಗಬಾರದು ನೋಡಿ!!

ಈಗ ಎಲ್ಲರ ಹತ್ತಿರ ಮನೆಗೆ ಎರಡರಂತೆ ವಾಹನ ಇದೆ ಮತ್ತು ದೊಡ್ಡ ದೊಡ್ಡ ರಸ್ತೆಗಳಾಗಿವೆ ಆದರೆ ಹೃದಯ ಹೃದಯದ ನಡುವಿನ ಸಂಪರ್ಕಗಳು ಕಡಿಮೆಯಾಗ್ತಾ ಇದೆ. ಎಲ್ಲರ ಕೈಯಲ್ಲಿ ಫೋನುಗಳು ಎರಡೆರಡಿವೆ ಆದರೆ ಮಾತನಾಡಲು ಮಾತ್ರ ಯಾರ ಬಳಿ ಸಮಯವಿಲ್ಲ. ಮಡಿಕೇರಿ ಟು ಭಾಗಮಂಡಲ ಎಲ್ಲರಿಗೂ ಮುಕ್ಕಾಲು ಗಂಟೆಯಲ್ಲಿ ತಲುಪಬೇಕು. ನನ್ನ ಕಾಲದ ಜನರು ಈಗಿನವರಂತೆ ಇರಲಿಲ್ಲ. ನಾನು ಮಡಿಕೇರಿಯಿಂದ ಭಾಗಮಂಡಲ ತಲುಪಲು ಒಂದುವರೆ ಗಂಟೆ ತಗೆದುಕೊಂಡರೂ ಅಕ್ಕ ಪಕ್ಕ ಕೂತ ಜನರ ಮಾತುಕತೆ ಮುಗಿದಿರುತ್ತಿರಲಿಲ್ಲ. ಮುಂದಿನ ಬಾಗಿಲಲ್ಲಿ ಹತ್ತುತ್ತಿದ್ದ ಹುಡುಗಿಯನ್ನು ಹಿಂದಿನ ಸೀಟಿನಲ್ಲಿ ಕುಳಿತು ಹುಡುಗ ಕಣ್ಣಲ್ಲೆ ಪ್ರೀತಿಸಬಹುದಾಗಿದ್ದ ಕಾಲ ಅದು. ಆಗಿನ ಕಾಲದ ಹುಡುಗರ ಕೂಡ ನನ್ನ ಹಾಗೆ ನಿಧಾನವೇ ಪ್ರಧಾನ ಅಂತ ನಂಬ್ತಿದ್ರು. ಇದೇ ಬಸ್ಸಲ್ಲಿ ಒಂದು ವರ್ಷ ಓಡಾಡಿದ ಮೇಲೆ ಹಲೋ ಹೇಳಲು ಧೈರ್ಯ ಮಾಡ್ತಾ ಇದ್ರು. ಆಗಿನ ಕಾಲದ ಎಷ್ಟು ಲವ್ ಸ್ಟೋರಿಗಳನ್ನು ನಾನು ನೋಡಿಲ್ಲ ಹೇಳಿ. ಇಂದು ಪ್ರಪೋಸು ಮಾಡಿ ನಾಳೆ ಬ್ರೇಕಪ್ಪು ಮಾಡಿಕೊಳ್ಳೋದು ನಮ್ಮ ಝಮಾನದವರಿಗೆ ಗೊತ್ತಿಲ್ಲ ಸ್ವಾಮಿ. ನಮಗೆಲ್ಲೆ ಒಬ್ಬರು ಒಮ್ಮೆ ಇಷ್ಟ ಆದ್ರೂ ಅಂದ್ರೆ ರಸ್ತೆ ಎಷ್ಟೇ ಖರಾಬ್ ಇದ್ರೂ ಸುಮ್ನೆ ಟಾಪ್ ಗೇರ್ ಹಾಕೊಂಡು ಹೋಯ್ತಾ ಇರೋದೆ...

ನನ್ನನ್ನು ಭೂಮಿಯ ಮೇಲೆ ತಂದ ಕೋಳಿಬೈಲು ಪೂವಯ್ಯನವರಿಗೆ ಕೂಡ ನನ್ನ ಮೇಲೆ ಉಳಿದವರಿಗಿಂತ ಸ್ವಲ್ಪ ಹೆಚ್ಚೇ ಪ್ರೀತಿ. ಭಕ್ತಾದಿಗಳಿಗೆ ತಾಯಿ ಕಾವೇರಮ್ಮನ ದರ್ಶನ ಮಾಡಿಸುವ ಜವಾಬ್ದಾರಿ ನನ್ನ ಮೇಲಿದ್ದ ಕಾರಣ ನಾನು ದುಡಿದಿದ್ರಲ್ಲಿ ಒಂದು ಪಾಲು ಸದಾ ಕಾವೇರಮ್ಮನ ಹುಂಡಿಗೆ ಹಾಕಿ ಕಾಪಾಡಮ್ಮಾ ಎಂದು ಯಾವತ್ತೂ ಕೈ ಮುಗೀತಾ ಇದ್ರು..

ಕೋವಿಡ್ ಬಂದ ನಂತರ ನಾನು ಕೆಲಸದಿಂದ ರಿಟೈರ್ಮೆಂಟ್ ತೆಗೆದುಕೊಂಡರೂ ಆರು ದಶಕಗಳ ಕಾಲ ಜನರ ಸೇವೆ ಮಾಡಿದ ಸಾರ್ಥಕತೆ ನನ್ನದು. ರಿಟೈರ್ ಆದ ಮೇಲೆ ಸುಮ್ಮನೆ ಮನೇಲಿ ಕೂರಕ್ಕೆ ನಂಗೆ ಮನಸ್ಸು ಬರ್ತಾ ಇಲ್ಲ. ನನ್ನೊಳಗೆ ಮತ್ತೆ ಜನ ಓಡಾಡಿದ್ರೆ ತಾನೆ ನನ್ನ ಮನಸ್ಸು ಮತ್ತೆ ದೇಹ ಚೆನ್ನಾಗಿರೋದು.‌ ನನ್ನನ್ನು ಮತ್ತೆ ನಿಮಗೆ ನೋಡುವ ಆಸೆ ಇದ್ರೆ ಮಡಿಕೇರಿಯ "ಸ್ಟೋನ್ ಹಿಲ್ ಕೆಫೆ -1959" ಗೆ ಬನ್ನಿ..
ನಿಮ್ಮ ಜೊತೆ ಒಂದು ಕಪ್ ಕಾಫಿ ಕುಡಿಯುವ ಆಸೆ ನಂಗೂ ಇದೆ..
ಇಂತಿ ನಿಮ್ಮ ಪ್ರೀತಿಯ
ತಲಕಾವೇರಿ ರಾಮ ಅಲಿಯಾಸ್ ತುಂಡು ರಾಮ !

Editor: Maj Kushvanth Kolibailu

Address

Kodagu

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm
Sunday 9am - 5pm

Telephone

+917259241762

Website

Alerts

Be the first to know and let us send you an email when Coorg Roamer posts news and promotions. Your email address will not be used for any other purpose, and you can unsubscribe at any time.

Share

Category

Tourist Information

We are one who helps Tourist who visit our place