Sadhvi

Sadhvi Digital version of Sadhvi, a 121 year old daily Kannada eveninger. Voicing the aspirations of our motherland since 1899. Now at your fingertips

SADHVI is a century old kannada newspaper, started in the year 1899, sadhvi played a very important role in the freedom struggle of our mother land. Its sharp editorials motivated thousands of youth to jump into the freedom struggle. Perturbed by the strong pro-independence policy of sadhvi, the erstwhile British government in India had banned the publication of sadhvi twice, this incident of banning the publication of sadhvi stands as a mile stone in the annals of the history of kannada journalism and Indian freedom movement. Sadhvi was first started by “M. VENKATAKRISHNAIAH” popularly called as “THATHAIAH”, the grand old man of Mysore. He is also known as “father of kannada journalism. Agaram Rangaiah, a renowned freedom fighter tookover as the editor of sadhvi after Thathaiah he published it successfully for 63 years. Sadhvi is now being published as a daily kannada eveninger, known for its commitment to ethical values of journalism, it is voicing the opinions of aspirations of the people. This century old kannada newspaper under the editorship of C.Maheshwarian is a house hold name in Mysore .

08/09/2026

ಶಿಕ್ಷಕನ ಥಳಿತಕ್ಕೆ ವಿದ್ಯಾರ್ಥಿ ತತ್ತರ... ಲಷ್ಕರ್ ಠಾಣೆಯಲ್ಲಿ ಪ್ರಕರಣ...

ಮೈಸೂರು

ಆಂಕರ್ : ವಿಧ್ಯಾರ್ಥಿಗೆ ಥಳಿಸಿದ ಶಿಕ್ಷಕನ ವಿರುದ್ದ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸೆಂಟ್ ಫಿಲೋಮಿನಾ ಶಾಲೆ ಶಿಕ್ಷಕ ಸುರೇಶ್ ವಿರುದ್ದ ಪ್ರಕರಣ ದಾಖಲಾಗಿದೆ.ರೆಹಾನ್ ಷರೀಫ್ (16) ಹಲ್ಲೆಗೆ ಒಳಗಾದ ವಿಧ್ಯಾರ್ಥಿ.ಮುಷ್ಠಿಯಿಂದ ಕಣ್ಣಿಗೆ ಗೂಸ ಕೊಟ್ಟ ಪರಿಣಾಮ ರಕ್ತಹೆಪ್ಪುಗಟ್ಟಿದೆ.ಸಧ್ಯ ರೆಹಾನ್ ಷರೀಫ್ ಅಪಾಯದಿಂದ ಪಾರಾಗಿದ್ದಾನೆ.ಯಾರಿಗಾದ್ರೂ ಹೇಳಿದ್ರೆ ಟಿಸಿ ಕೊಟ್ಟು ಕಳುಹಿಸುವುದಾಗಿ ಹೇಳಿ ಜೀವ ಬೆದರಿಕೆ ಹಾಕಿರುವ ಶಿಕ್ಷಕನ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ತಂದೆ ವಾಸಿಮ್ ಷರೀಫ್ ಪ್ರಕರಣ ದಾಖಲಿಸಿದ್ದಾರೆ.

್ನಡ #ಕನ್ನಡಸುದ್ದಿಗಳು #ಕನ್ನಡವಾರ್ತೆ protest news news elephant 2025Dasara mysuru wildanimals africawildlife Droupadi Murmu Heritage MysuruUpdates ₹IndiaNews Royal karnataka waild elephant waild Umesha Bhatta Chandan Avinash N Damnalli Dr Yathindra Chamaraja ಕರ್ನಾಟಕ ₹ProudMoment PositiveVibes
BusLife
TrendingNews
Kannadiga Mysuru #ಚಿಣ್ಣರಮೇಳ_2026 #ರಂಗಾಯಣ #ಮೈಸೂರು #ಕನ್ನಡಸುದ್ದಿಗಳು #ಕನ್ನಡವಾರ್ತೆ

08/09/2026

ಬೆಂ*ಕಿಯ ಕೆನ್ನಾಲಿಗೆಗೆ ಟ್ರೂ ಸ್ಪಿರಿಟ್ ಮಳಿಗೆ ಸು*ಟ್ಟು ಕರಕಲು...

ಹಠಾತ್ ಹೊತ್ತಿಕೊಂಡ ಬೆಂ*ಕಿ; ಟ್ರೂ ಸ್ಪಿರಿಟ್ ಮಳಿಗೆ ಭ*ಸ್ಮ...

ಮೈಸೂರು.

ದೇವರಾಜ ಅರಸ್ ರಸ್ತೆಯಲ್ಲಿರುವ ಲಿಕ್ಕರ್ ಶಾಪ್

ಬೆಳಗಿನ ಜಾವ ಕಾಣಿಸಿಕೊಂಡ ಬೆಂ*ಕಿ

ಸಾರ್ವಜನಿಕರ ಮಾಹಿತಿ ಆಧರಿಸಿ ಬೆಂ*ಕಿ ನಂದಿಸಿದ ಅಗ್ನಿ ಶಾಮಕ ಸಿಬ್ಬಂದಿ

ಮಳಿಗೆ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ತಗುಲಿತ್ತು

ಕೆಲವರು ಇದರ ವಿರುದ್ದ ಅಪಪ್ರಚಾರ ಮಾಡ್ತಿದ್ದಾರೆ

ಮುಂಜಾಗ್ರತೆ ತಗೆದುಕೊಂಡಿಲ್ಲ ಅಂತಾ ಆರೋಪಿಸುತ್ತಿದ್ದಾರೆ

ಇಡೀ ಮೈಸೂರು ನಗರದಲ್ಲಿ ಟ್ರೂ ಸ್ಪಿರಿಟ್ ಮಳಿಗೆಗಳು ಚಿನ್ನಾಭರಣ ಮಳಿಗೆಯಂತೆ ಕಂಗೊಳಿಸುತ್ತವೆ

ಲಿಕ್ಕರ್ ಶಾಪ್ ಅನ್ನು ಒಂದು ಮಾಡೆಲ್ ಆಗಿ ಚೇಂಜ್ ಮಾಡಿದ್ದು ಟ್ರೂ ಸ್ಪಿರಿಟ್

ಮುಂಜಾಗ್ರತೆ ವಿಚಾರದಲ್ಲಿ ಎಚ್ಚರ ತಪ್ಪಿಲ್ಲ

ಮಳಿಗೆಗೆ ಬೆಂ*ಕಿ ಬಿದ್ದಿದೆ. ಯಾವುದೇ ರೀತಿಯ ಜೀವ ಹಾನಿಯಾಗಿಲ್ಲ

ಟ್ರೂ ಸ್ಪಿರಿಟ್ ಏಳಿಗೆ ಸಹಿಸದವರು ಹೀಗೆ ಅಪ ಪ್ರಚಾರ ಮಾಡ್ತಿದ್ದಾರೆ

ಇನ್ನು ಹದಿನೈದು ದಿನಗಳಲ್ಲಿ ಈ ಶಾಪ್ ಅನ್ನು ನವೀಕರಿಸಿ ಸೇವೆಗೆ ಒಪ್ಪಿಸುತ್ತೇವೆ

ಟ್ರೂ ಸ್ಪಿರಿಟ್ ಮ್ಯಾನೇಜರ್ ಗಳಾದ ಶ್ರೀನಿವಾಸ್ ಮತ್ತು ಉಮಾಶಂಕರ್ ಹೇಳಿಕೆ.

್ನಡ #ಕನ್ನಡಸುದ್ದಿಗಳು #ಕನ್ನಡವಾರ್ತೆ protest news news elephant 2025Dasara mysuru wildanimals africawildlife Droupadi Murmu Heritage MysuruUpdates ₹IndiaNews Royal karnataka waild elephant waild Umesha Bhatta Chandan Avinash N Damnalli Dr Yathindra Chamaraja ಕರ್ನಾಟಕ ₹ProudMoment PositiveVibes
BusLife
TrendingNews
Kannadiga Mysuru #ಚಿಣ್ಣರಮೇಳ_2026 #ರಂಗಾಯಣ #ಮೈಸೂರು #ಕನ್ನಡಸುದ್ದಿಗಳು #ಕನ್ನಡವಾರ್ತೆ

07/09/2026

ಗ್ಯಾರಂಟಿ ಹಣ ಸುಲಭವಾಗಿ ಸಿಗದಂತೆ ಕ್ರಮ ಕೈಗೊಳ್ಳಿ...

ಮೈಸೂರು

ಗ್ಯಾರಂಟಿ ಸ್ಕೀಂಗಳಿಂದ ಜನರಿಗೆ ಸಲೀಸಾಗಿ ಗಣ ಸಿಗಬಾರದು

ಶ್ರಮವಿಲ್ಲದೆಯೇ ಹಣ ಬಂದರೆ ಸಮಾಜ ಹಾಳಾಗುತ್ತೆ

ಶ್ರಮದ ಮಹತ್ವ ತಿಳಿಸಲು ಉಚಿತವಾಗಿ ಹಣ ಕೊಡಬಾರದು

ಸಮಾಜದಲ್ಲಿ ಅಶಕ್ತರು, ವಿಕಲ‌ ಚೇತನರಿಗಾಗಿ ಸರಕಾರ ಯಾವ ಯೋಜನೆಗಳನ್ನಾದರೂ ತರಲಿ

ಶ್ರಮಿಸುವ ಶಕ್ತಿ ಇರುವವರಿಗೆ ಹಣದ ಬದಲು, ಅವಕಾಶ ಕೊಡಿ

ಮನರೇಗ ಮಾದರಿಯ ಯೋಜನಗಳು ಬೇಕಿದ್ದರೆ ಇರಲಿ

ನೀತಿ ಆಯೋಗದ ವರದಿ ಪ್ರಕಾರ ಶೇ 10ರಷ್ಟು ಯುವಕರಿಗೆ ಸಿಕ್ಕಿರುವ ಉದ್ಯೋಗ ಅವರ ಓದಿಗೆ ಸಾಮ್ಯತೆ ಇಲ್ಲ

ಈ ಪರಿಸ್ಥಿತಿಯನ್ನು ಸುಧಾರಿಸಬೇಕು

ಉದ್ಯೋಗ ಸೃಷ್ಟಿಗೆ ಸರಕಾರ ಹೆಚ್ಚು ಆದ್ಯತೆ ನೀಡಲಿ

ಅನ್ಯ ದೇಶಗಳ ಬಜೆಟ್ ನಲ್ಲಿ ಶಿಕ್ಷಣಕ್ಕೆ ಶೇ 7-8ರಷ್ಟು ಅನುದಾನ ಸಿಗುತ್ತಿದೆ

ಭಾರತದಲ್ಲಿ ಈ ಪ್ರಮಾಣ ಶೇ 2-3 ರಷ್ಟಿದೆ

ಶಿಕ್ಷಣಕ್ಕೆ ಹೆಚ್ಚು ವಿನಿಯೋಗ ಆಗಬೇಕು

ಪದವಿ ಪಡೆದ ಯುವಕರಿಗೆ ಕೌಶಲ್ಯಾಧಾರಿತ ತರಬೇತಿ ನೀಡಬೇಕು

ತನ್ಮೂಲಕ ಕೌಶಲ್ಯಾಧಾರಿತ ಉದ್ಯೋಗಳನ್ನು ಯುವಕರು ಪಡೆಯುವಂತವಾಗಬೇಕು

ಯಾವ ಸಮಾಜದಲ್ಲಿ ಚಾರಿಟಿ ಸಂಸ್ಥೆಗಳನ್ನು ಮುಚ್ಚುವ ಪರಿಸ್ಥಿತಿ ಬಂದಾಗ ಮಾತ್ರ ಸಮಾಜ ಸಬಲಗೊಂಡಿದೆ ಎಂದರ್ಥ

ಆರೋಗ್ಯ ಕ್ಷೇತ್ರದಲ್ಲಿ ಸರಕಾರ ಒಂದೇ ಏನನ್ನೂ ಮಾಡಲಾಗದು

ಬಹುದೊಡ್ಡ ದೇಶದಲ್ಲಿ ಆರೋಗ್ಯ ಕ್ಷೇತ್ರ ಸುಧಾರಣೆಗೆ ಎಲ್ಲರೂ ಕೈಜೋಡಿಸಬೇಕು

ಒಂದು ಜಗತ್ತು ಮತ್ತು ಒಂದು ಕುಟುಂಬ ಅಭಿಯಾನದ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ್ ಸಾಯಿ ಹೇಳಿಕೆ...

್ನಡ #ಕನ್ನಡಸುದ್ದಿಗಳು #ಕನ್ನಡವಾರ್ತೆ protest news news elephant 2025Dasara mysuru wildanimals africawildlife Droupadi Murmu Heritage MysuruUpdates ₹IndiaNews Royal karnataka waild elephant waild Umesha Bhatta Chandan Avinash N Damnalli Dr Yathindra Chamaraja ಕರ್ನಾಟಕ ₹ProudMoment PositiveVibes
BusLife
TrendingNews
Kannadiga Mysuru #ಚಿಣ್ಣರಮೇಳ_2026 #ರಂಗಾಯಣ #ಮೈಸೂರು #ಕನ್ನಡಸುದ್ದಿಗಳು #ಕನ್ನಡವಾರ್ತೆ

07/09/2026

ಮರಳು ಮೂಟೆ ಹೊತ್ತು ಆನೆಗಳ ಕಸರತ್ತು...

*ಮೈಸೂರು*

ಮೈಸೂರು ದಸರಾ ಮಹೋತ್ಸವ-2026
ದಸರಾ ಗಜಪಡೆಗೆ ಭಾರದ ತಾಲೀಮು
ಮರಳು ಮೂಟೆ ಹೊರಿಸಿ ತೂಕ ಹೊರುವ ತರಬೇತಿ
ಡಿಸಿಎಫ್ ಪ್ರಭುಗೌಡ ನೇತೃತ್ವದಲ್ಲಿ ಭಾರದ ತಾಲೀಮು
ಅರಮನೆ ಅಂಗಳದಿಂದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದವರೆಗೆ ತಾಲೀಮು
ಒಟ್ಟು700 ಕೆಜಿ ತೂಕ ಹೊರುವ ತಾಲೀಮು
350 ಕೆಜಿ ಮರಳು ಮೂಟೆ 350 ಕೆಜಿ ನಮ್ದ, ಗಾದಿ, ಚಾಪು, ಕಬ್ಬಿಣ ತೊಟ್ಟಿಲು
ಒಟ್ಟು 700 ಕೆಜಿ ತೂಕ ಹೊರಿಸಿ ಅಭ್ಯಾಸ
ಮೊದಲಿಗೆ ಮಹೇಂದ್ರ ಆನೆಗೆ ತೂಕದ ಹೊರುವ ಅಭ್ಯಾಸ
ಚಿನ್ನದ ಅಂಬಾರಿ ಕಟ್ಟುವ ಕ್ರೇನ್ ಬಳಿ ಮರಳು ಮೂಟೆ ಹೊರಿಸಿದ ಮಾವುತರು, ಕಾವಾಡಿಗಳು, ಅರಣ್ಯ ಸಿಬ್ಬಂದಿ
ಬಾರ ಹೊತ್ತ ಮಹೇಂದ್ರನಿಗೆ ಲಕ್ಷ್ಮೀ, ಕಾವೇರಿ ಸಾಥ್
ರಾಜ ಮಾರ್ಗದಲ್ಲಿ ಸದ್ದುಗದ್ದಕ್ಕೆ ಹೊಂದಿಕೊಂಡು ತಾಲೀಮು ಮಾಡಿದ ಆನೆಗಳು
ಅಂಬಾರಿ ಹೊರುವ ಸಾಲಿನಲ್ಲಿರುವ ಮಹೇಂದ್ರ, ಪ್ರಶಾಂತ, ಏಕಲವ್ಯ, ಧನಂಜಯ ಆನೆಗಳಿವೆ.
ಹಂತ ಹಂತವಾಗಿ ನಾಲ್ಕು ಆನೆಗಳಿಗೂ ಬಾರದ ತಾಲೀಮು
ಮೊದಲಿಗೆ ಮಹೇಂದ್ರ ಆನೆಗೆ ತಾಲೀಮು ಶುರು ಮಾಡಿದ್ದೇವೆ
ತರಬೇತಿ ನಂತರ ಅಂಬಾರಿ ಹೊರುವ ಆನೆ ಆಯ್ಕೆ ಆಗುತ್ತದೆ
ಮೊದಲ ತಂಡದ ಎಲ್ಲಾ ಆನೆಗಳು ಆರೋಗ್ಯವಾಗಿವೆ
ಪೌಷ್ಟಿಕ ಆಹಾರ ನೀಡುತ್ತಿದ್ದೇವೆ
ಎರಡನೇ ತಂಡದ ಆನೆಗಳನ್ನ ಕರೆತರಲು ಸದ್ಯದಲ್ಲೇ ದಿನಾಂಕ ನಿಗದಿ ಮಾಡುತ್ತೇವೆ
ಅಭಿಮನ್ಯು ಆನೆ ಕರೆತರುವ ದಿನಾಂಕ ತಿಳಿಸುತ್ತೇವೆ
ಜಂಬೂ ಸವಾರಿ ಮೆರವಣಿಗೆಗೆ ಆನೆಗಳು ತಯಾರಾಗುತ್ತಿವೆ
ಡಿಸಿಎಫ್ ಪ್ರಭುಗೌಡ ಹೇಳಿಕೆ...

್ನಡ #ಕನ್ನಡಸುದ್ದಿಗಳು #ಕನ್ನಡವಾರ್ತೆ protest news news elephant 2025Dasara mysuru wildanimals africawildlife Droupadi Murmu Heritage MysuruUpdates ₹IndiaNews Royal karnataka waild elephant waild Umesha Bhatta Chandan Avinash N Damnalli Dr Yathindra Chamaraja ಕರ್ನಾಟಕ ₹ProudMoment PositiveVibes
BusLife
TrendingNews
Kannadiga Mysuru #ಚಿಣ್ಣರಮೇಳ_2026 #ರಂಗಾಯಣ #ಮೈಸೂರು #ಕನ್ನಡಸುದ್ದಿಗಳು #ಕನ್ನಡವಾರ್ತೆ

07/09/2026

ಕುಡಿದ ಮತ್ತಿನಲ್ಲಿ ಬೇಲಿ ಹಾರಲು ಹೋಗಿ ದು*ರಂತ ಅಂ*ತ್ಯ..! ಕಬ್ಬಿಣದ ರಾಡು ಚುಚ್ಚಿ ವ್ಯಕ್ತಿ ಸಾ*ವು...

ಸುದ್ದಿ:

ಮೈಸೂರು, ಸೆ.6: ಕುಡಿದ ಮತ್ತಿನಲ್ಲಿ ಉದ್ಯಾನವನದ ಬೇಲಿ ಹಾರಲು ಮುಂದಾದ ವ್ಯಕ್ತಿಯೊಬ್ಬರು ಕಬ್ಬಿಣದ ರಾಡು ಚುಚ್ಚಿಕೊಂಡು ಸ್ಥಳದಲ್ಲೇ ಮೃ*ತಪಟ್ಟಿರುವ ಘಟನೆ ಮೈಸೂರಿನ ನಜರಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ರಾಜೀವ್ ನಗರದ ನಿವಾಸಿ ರವಿ (38) ಮೃ*ತ ದುರ್ದೈವಿ. ಮೈಸೂರು ಮೃಗಾಲಯದ ಬಳಿ ಕಬ್ಬಿನಹಾಲು ವ್ಯಾಪಾರ ಮಾಡುತ್ತಿದ್ದ ರವಿ, ಕಳೆದ ಒಂದು ತಿಂಗಳಿಂದ ಕುಡಿತದ ಚಟಕ್ಕೆ ಒಳಗಾಗಿದ್ದರು ಎನ್ನಲಾಗಿದೆ.

ಮಧ್ಯರಾತ್ರಿ ಮನೆಯಿಂದ ಹೊರಬಂದಿದ್ದ ರವಿ, ಕುಡಿದ ಮ*ತ್ತಿನಲ್ಲಿ ಉದ್ಯಾನವನದ ಬೇಲಿ ಹಾರಲು ಮುಂದಾಗಿದ್ದಾರೆ. ಈ ವೇಳೆ ಬೇಲಿಯಲ್ಲಿದ್ದ ಮೊನಚಾದ ಕಬ್ಬಿಣದ ರಾಡು ತೊಡೆಯ ಭಾಗಕ್ಕೆ ಚುಚ್ಚಿಕೊಂಡಿದ್ದು, ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃ*ತಪಟ್ಟಿದ್ದಾರೆ ಎನ್ನಲಾಗಿದೆ.

ಬೆಳಿಗ್ಗೆ ದಾರಿಹೋಕರು ಮೃ*ತದೇಹವನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ನಜರಬಾದ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

್ನಡ #ಕನ್ನಡಸುದ್ದಿಗಳು #ಕನ್ನಡವಾರ್ತೆ protest news news elephant 2025Dasara mysuru wildanimals africawildlife Droupadi Murmu Heritage MysuruUpdates ₹IndiaNews Royal karnataka waild elephant waild Umesha Bhatta Chandan Avinash N Damnalli Dr Yathindra Chamaraja ಕರ್ನಾಟಕ ₹ProudMoment PositiveVibes
BusLife
TrendingNews
Kannadiga Mysuru #ಚಿಣ್ಣರಮೇಳ_2026 #ರಂಗಾಯಣ #ಮೈಸೂರು #ಕನ್ನಡಸುದ್ದಿಗಳು #ಕನ್ನಡವಾರ್ತೆ

06/09/2026

ನಿಂಬುಜಾ ದೇವಿ ದೇಗುಲದಲ್ಲಿ ಜಟ್ಟಿಗಳ ಮಠಿ ಪೂಜೆ ಸಂಪನ್ನ...

ಮೈಸೂರು

ಜಟ್ಟಿಗಳ ಮಠಿ ಪೂಜೆ ಸಂಪನ್ನ

ನಜರ್ ಬಾದ್ ನಲ್ಲಿರುವ ಶ್ರೀ ನಿಂಬಜಾದೇವಿ ದೇವಾಲಯ

ಕಳೆದ 15 ದಿನಗಳಿಂದ ಬೆಳಿಗ್ಗೆ ಮತ್ತು ಸಂಜೆ ವೇಳೆ ಕಳಶ ಪೂಜೆ

ಶ್ರಾವಣ ಮಾಸದಲ್ಲಿ ಮಠಿ ಕಟ್ಟಿ ಕಳಶ ಪ್ರತಿಷ್ಠಾಪಿಸಿ, ನಿಂಬಜಾದೇವಿ ಆರಾಧಿಸುವ ಜಟ್ಟಿಗಳು

ಶನಿವಾರ ಸಂಜೆ ವಿದ್ಯುಕ್ತವಾಗಿ ಕಳಶ ವಿಸರ್ಜನೆ ಮಾಡಿ, ಮಠಿ ನೆಲಸಮ ಮಾಡಿ ಈ ವರ್ಷದ ಪೂಠಿ ಪೂಜೆ ಸಂಪೂರ್ಣ

ವಿಜಯದಶಮಿ ದಿನ ಅರಮನೆ ಅಂಗಳದಲ್ಲಿ ವಜ್ರಮುಷ್ಠಿ ಕಾಳಗಕ್ಕೆ ಶ್ರಾವಣ ಮಾಸದ ಪೂಜೆ ವೇಳೆ ಚಾಲನೆ

ಮಠಿ ಪೂಜೆ ನೆರವೇರಿಸಿ ವಜ್ರಮುಷ್ಠಿಗೆ ಅಣಿಯಾಗಲಿರುವ ಜಟ್ಟಿ ಪೈಲ್ವಾನರು

್ನಡ #ಕನ್ನಡಸುದ್ದಿಗಳು #ಕನ್ನಡವಾರ್ತೆ protest news news elephant 2025Dasara mysuru wildanimals africawildlife Droupadi Murmu Heritage MysuruUpdates ₹IndiaNews Royal karnataka waild elephant waild Umesha Bhatta Chandan Avinash N Damnalli Dr Yathindra Chamaraja ಕರ್ನಾಟಕ ₹ProudMoment PositiveVibes
BusLife
TrendingNews
Kannadiga Mysuru #ಚಿಣ್ಣರಮೇಳ_2026 #ರಂಗಾಯಣ #ಮೈಸೂರು #ಕನ್ನಡಸುದ್ದಿಗಳು #ಕನ್ನಡವಾರ್ತೆ

06/09/2026

ಏಷ್ಯನ್ ಗೇಮ್ಸ್‌ಗೆ ಮೈಸೂರಿನ ರಿಷಿತಾ: ಕೋಚ್ ಕಣ್ಣಲ್ಲಿ ಹೆಮ್ಮೆಯ ಕಣ್ಣೀರು...!

ಭಾರತ ತಂಡಕ್ಕೆ ಮೈಸೂರಿನ ಡೆಫ್ ಅಥ್ಲೀಟ್ ರಿಷಿತಾ ಆಯ್ಕೆ...
ಏಷ್ಯನ್ ಗೇಮ್ಸ್ ಪಯಣಕ್ಕೆ ಕೋಚ್ ಹೆಮ್ಮೆ; ‘ಭಾರತಕ್ಕೆ ಚಿನ್ನ ತಂದುಕೊಡಬೇಕು’ ಎಂಬ ಗುರಿ

ಮೈಸೂರು: ಎರಡು ವರ್ಷಗಳ ಹಿಂದೆ ಅಥ್ಲೆಟಿಕ್ಸ್ ತರಬೇತಿಗೆ ಸೇರ್ಪಡೆಗೊಂಡ ಡೆಫ್ ಅಥ್ಲೀಟ್ ರಿಷಿತಾ, ರಾಜ್ಯಮಟ್ಟದ ಪದಕದ ಬಳಿಕ ಇದೀಗ ರಾಷ್ಟ್ರೀಯ ಮಟ್ಟದಲ್ಲಿ ಮಿಂಚಿ, ಏಷ್ಯನ್ ಗೇಮ್ಸ್‌ಗೆ ಅರ್ಹತೆ ಪಡೆದುಕೊಂಡಿರುವುದು ಹೆಮ್ಮೆಯ ಸಂಗತಿ ಎಂದು ಆಕೆಯ ಕೋಚ್ ಪ್ರದೀಪ್ ಹೇಳಿದ್ದಾರೆ.

ರಿಷಿತಾ ತರಬೇತಿಗೆ ಸೇರಿದಾಗಿನಿಂದಲೇ ಮುಂದಿನ ಹಂತದಲ್ಲಿ ರಾಷ್ಟ್ರೀಯ ಪದಕ ಗೆಲ್ಲಿಸುವ ಗುರಿಯನ್ನು ಹೊಂದಲಾಗಿತ್ತು. ಈ ನಿಟ್ಟಿನಲ್ಲಿ ಗುಜರಾತ್‌ನಲ್ಲಿ ನಡೆದ ರಾಷ್ಟ್ರೀಯ ಸ್ಪರ್ಧೆಗೆ ವಿಶೇಷ ತರಬೇತಿ ನೀಡಲಾಗಿತ್ತು. ರಾಷ್ಟ್ರೀಯ ಕೂಟದಲ್ಲಿ ರಿಷಿತಾ ಅತ್ಯುತ್ತಮವಾಗಿ ಓಡಿ, 200 ಮೀಟರ್ ಹಾಗೂ 200 ಮೀಟರ್ ವಿಭಾಗಗಳಲ್ಲಿ ಎರಡು ರಾಷ್ಟ್ರೀಯ ದಾಖಲೆಗಳನ್ನು ಮುರಿದು ಗಮನ ಸೆಳೆದಿದ್ದಾರೆ.

ಇದಾದ ಬಳಿಕ ಏಷ್ಯನ್ ಗೇಮ್ಸ್‌ಗೆ ಅರ್ಹತೆ ಪಡೆಯಲು ನಡೆದ ಮತ್ತೊಂದು ಕ್ವಾಲಿಫಿಕೇಷನ್ ಸುತ್ತಿನಲ್ಲೂ ರಿಷಿತಾ ಉತ್ತಮ ಪ್ರದರ್ಶನ ನೀಡಿ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಇದೀಗ ಭಾರತವನ್ನು ಪ್ರತಿನಿಧಿಸಿ ಏಷ್ಯನ್ ಗೇಮ್ಸ್‌ನಲ್ಲಿ ಸ್ಪರ್ಧಿಸುವ ಅವಕಾಶ ಆಕೆಗೆ ದೊರೆತಿದ್ದು, ಇದು ಕೋಚ್ ಹಾಗೂ ತಂಡಕ್ಕೆ ಅಪಾರ ಹೆಮ್ಮೆಯ ಕ್ಷಣವಾಗಿದೆ.

“ರಿಷಿತಾ ಡೆಫ್ ಅಥ್ಲೀಟ್ ಎಂಬ ವಿಚಾರ ನನಗೆ ಆರಂಭದಲ್ಲಿ ಹೊಸ ಅನುಭವವಾಗಿತ್ತು. ಆಕೆ ಹೇಗೆ ತರಬೇತಿ ಪಡೆಯಬೇಕು, ಯಾವ ರೀತಿಯಲ್ಲಿ ಮಾರ್ಗದರ್ಶನ ನೀಡಬೇಕು ಎಂಬುದನ್ನು ತಿಳಿದುಕೊಳ್ಳಲು ಸಾಕಷ್ಟು ಅಧ್ಯಯನ ಹಾಗೂ ಸಂಶೋಧನೆ ಮಾಡಬೇಕಾಯಿತು. ಇದು ನನಗೂ ಸವಾಲಿನ ಪ್ರಯಾಣವಾಗಿತ್ತು. ಆದರೆ ರಿಷಿತಾಳ ಪರಿಶ್ರಮ ಮತ್ತು ಬದ್ಧತೆ ನಮ್ಮೆಲ್ಲರಿಗೂ ಪ್ರೇರಣೆಯಾಗಿದೆ,” ಎಂದು ಕೋಚ್ ಪ್ರದೀಪ್ ತಿಳಿಸಿದ್ದಾರೆ.

“ಭಾರತಕ್ಕಾಗಿ ಚಿನ್ನದ ಪದಕ ಗೆಲ್ಲಿಸಬೇಕು ಎನ್ನುವುದೇ ನನ್ನ ಗುರಿ. ರಿಷಿತಾಳಿಂದ ಭಾರತಕ್ಕೆ ಚಿನ್ನದ ಪದಕ ಬರಬೇಕು. ಆ ದಿನವನ್ನು ಕಾಣುವುದು ನನಗೆ ಅತ್ಯಂತ ಹೆಮ್ಮೆಯ ಕ್ಷಣವಾಗಲಿದೆ,” ಎಂದು ಅವರು ಭಾವುಕರಾಗಿ ಹೇಳಿದ್ದಾರೆ.

ರಿಷಿತಾಳ ಏಷ್ಯನ್ ಗೇಮ್ಸ್ ಪಯಣಕ್ಕೆ ಹಲವು ಸಂಸ್ಥೆಗಳು ಹಾಗೂ ದಾನಿಗಳು ಬೆಂಬಲ ನೀಡುತ್ತಿರುವುದಕ್ಕೂ ಕೋಚ್ ಕೃತಜ್ಞತೆ ಸಲ್ಲಿಸಿದ್ದಾರೆ. ಗುಜರಾತ್ ರಾಷ್ಟ್ರೀಯ ಕೂಟಕ್ಕೆ ತೆರಳಲು ಎಂಜಿಡ್ರೋಲಿ ಗ್ರೂಪ್ಸ್ ನೆರವು ನೀಡಿದ್ದು, ಆಕಾಶ್ ಆರ್ಯ ಅವರ ಮೂಲಕ ಕ್ರೌಡ್‌ಫಂಡಿಂಗ್ ಸಹ ದೊರೆತಿತ್ತು ಎಂದು ತಿಳಿಸಿದ್ದಾರೆ.

ಮಲೇಷ್ಯಾದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ಗೆ ರಿಷಿತಾಳನ್ನು ಕಳುಹಿಸಲು ಪ್ರಾಯೋಜಕತ್ವಕ್ಕಾಗಿ ಹಲವು ಕಡೆ ಸಂಪರ್ಕಿಸಲಾಗಿದ್ದು, ಸೈಕಲ್ ಪ್ಯೂರ್ ಅಗರ್‌ಬತ್ತಿ, ಮಣಿಬದ್ರಾ ಜುವೆಲ್ಲರ್ಸ್ ಮ್ಯಾಕ್ಸನ್.ಯಾನ್ ಸಪ್ಲಿಮೆಂಟ್ಸ್ ಹಾಗೂ ರೀಸ್ಪೋರ್ಟ್ . ಇನ್ ಸಂಸ್ಥೆಗಳು ನೆರವಿಗೆ ಬಂದಿವೆ.
“ರಿಷಿತಾಳ ಕನಸಿನ ಪಯಣದಲ್ಲಿ ಕೈಜೋಡಿಸಿರುವ ಪ್ರತಿಯೊಬ್ಬರಿಗೂ ನಮ್ಮ ಹೃತ್ಪೂರ್ವಕ ಧನ್ಯವಾದಗಳು. ಅವರ ಬೆಂಬಲದಿಂದಲೇ ಈ ಪಯಣ ಮತ್ತಷ್ಟು ಬಲ ಪಡೆದುಕೊಂಡಿದೆ. ಭಾರತಕ್ಕೆ ಚಿನ್ನ ತಂದುಕೊಡುವುದು ನಮ್ಮ ಮುಂದಿನ ಗುರಿ,” ಎಂದು ಕೋಚ್ ರಾಧೇಶ್ ತಿಳಿಸಿದ್ದಾರೆ.

್ನಡ #ಕನ್ನಡಸುದ್ದಿಗಳು #ಕನ್ನಡವಾರ್ತೆ protest news news elephant 2025Dasara mysuru wildanimals africawildlife Droupadi Murmu Heritage MysuruUpdates ₹IndiaNews Royal karnataka waild elephant waild Umesha Bhatta Chandan Avinash N Damnalli Dr Yathindra Chamaraja ಕರ್ನಾಟಕ ₹ProudMoment PositiveVibes
BusLife
TrendingNews
Kannadiga Mysuru #ಚಿಣ್ಣರಮೇಳ_2026 #ರಂಗಾಯಣ #ಮೈಸೂರು #ಕನ್ನಡಸುದ್ದಿಗಳು #ಕನ್ನಡವಾರ್ತೆ

06/09/2026

ಚಾಮುಂಡೇಶ್ವರಿ ಕ್ಷೇತ್ರದ ಜನರ ಸೇವೆಯೇ ನನ್ನ ಅಂತಿಮ ಉಸಿರು: ಜಿಟಿ ದೇವೇಗೌಡ...

ಮೈಸೂರು.

ಮೈಸೂರಿನಲ್ಲಿ ಶಾಸಕ ಜಿ.ಟಿ ದೇವೇಗೌಡ ಹೇಳಿಕೆ.
ಮೂರು ವರ್ಷದಿಂದ ನನಗೆ ಪಕ್ಷದವರಿಂದ ಜೆಡಿಎಸ್ ನಿಂದ ಅವಮಾನವಾಯ್ತು.
ನಾನು ಜೆಡಿಎಸ್ ಶಾಸಕ.
ಆದರೆ ಜೆಡಿಎಸ್ ಯಾವ ಕಾರ್ಯಕ್ರಮಕ್ಕೂ ನನನ್ನೂ ಕರೆಯಲಿಲ್ಲ.
ಯಾವ ಜೆಡಿಎಸ್ ಸಮಾವೇಶಕ್ಕೆ ಕರೆದಯದೆ ನನ್ನನ್ನ ಅವಮಾನದ ಮಾಡಿದರು.
ಈ ಅವಮಾನಕ್ಕೆ ಉತ್ತರಕ್ಕಾಗಿ ನಮ್ಮ ಜನ ಮೆರವಣಿಗೆ ಮಾಡುತ್ತಿದ್ದಾರೆ.
ಇದು ನನ್ನ ಶಕ್ತಿ ಪ್ರದರ್ಶನ ಅಲ್ಲ.
ಇದು ಜನರು ನನಗೆ ಕೊಟ್ಟಿರುವ ಪ್ರೀತಿಯ ಸಂಕೇತ.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪಕ್ಷ ಮುಖ್ಯ ಅಲ್ಲ.
ಅಲ್ಲಿ ಜಿ.ಟಿ ದೇವೇಗೌಡ ಮಾತ್ರ ಮುಖ್ಯ.
ಪಕ್ಷ ಯಾವುದೇ ಇರಲಿ ಜನಕ್ಕೆ ಜಿ.ಟಿ ದೇವೇಗೌಡ ಮುಖ್ಯ.
ನನ್ನನ್ನು ಏಕಾಂಗಿಯಾಗಲು ಕ್ಷೇತ್ರದ ಜನರು ಬಿಡುವುದಿಲ್ಲ.
ನಾನು ಸಾವುವ ತನಕ ಏಕಾಂಗಿಯಾಗಿ ಈ ಜನರ ಸೇವೆ ಮಾಡುತ್ತೇನೆ.
ನಾನು ಹಿಂದೆ ಬಿಜೆಪಿಗೆ ಹೋಗಿದ್ದಾಗ ಜನರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮೂರನೇ ಸ್ಥಾನಕ್ಕೆ ತಂದರು.
ಇಲ್ಲಿನ ಜನಕ್ಕೆ ಜಿ.ಟಿ ದೇವೇಗೌಡ ಮುಖ್ಯ.
ಮುಂದಿನ ಚುನಾವಣೆಗೆ ಜನರನ್ನ ಕರೆದು ಅವರು ಹೇಳಿದಂತೆ ಕೇಳುತ್ತೇನೆ. ಮಾಧ್ಯಮಗಳಿಗೆ ಮಾತನಾಡುವಾಗ ಭಾವುಕರಾದ ಜಿ.ಟಿ ದೇವೇಗೌಡ.

್ನಡ #ಕನ್ನಡಸುದ್ದಿಗಳು #ಕನ್ನಡವಾರ್ತೆ protest news news elephant 2025Dasara mysuru wildanimals africawildlife Droupadi Murmu Heritage MysuruUpdates ₹IndiaNews Royal karnataka waild elephant waild Umesha Bhatta Chandan Avinash N Damnalli Dr Yathindra Chamaraja ಕರ್ನಾಟಕ ₹ProudMoment PositiveVibes
BusLife
TrendingNews
Kannadiga Mysuru #ಚಿಣ್ಣರಮೇಳ_2026 #ರಂಗಾಯಣ #ಮೈಸೂರು #ಕನ್ನಡಸುದ್ದಿಗಳು #ಕನ್ನಡವಾರ್ತೆ

04/09/2026

ವಿಶ್ವಕರ್ಮ ಸಮಾಜಕ್ಕೆ ಹೊಸ ತಂಡ..!
15 ಮಂದಿ ಪದಾಧಿಕಾರಿಗಳ ಆಯ್ಕೆ...

ಮೈಸೂರು: ಸೆಪ್ಟೆಂಬರ್ 17ರಂದು ನಡೆಯಲಿರುವ ವಿಶ್ವಕರ್ಮ ಜಯಂತಿ ಉತ್ಸವದ ಅಂಗವಾಗಿ ವಿಶ್ವಕರ್ಮ ಸಮುದಾಯದ ವತಿಯಿಂದ ಸಮಿತಿಯನ್ನು ರಚಿಸಲಾಗಿದ್ದು, ವಿವಿಧ ಭಾಗಗಳನ್ನು ಪ್ರತಿನಿಧಿಸುವಂತೆ 15 ಮಂದಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ವಿಶ್ವಕರ್ಮ ಸಮುದಾಯದ ಅಧ್ಯಕ್ಷ ಸಿದ್ದಪ್ಪಾಜಿ ತಿಳಿಸಿದ್ದಾರೆ.

ನಿನ್ನೆ ನಡೆದ ಸಭೆಯಲ್ಲಿ ಸಿದ್ದಪ್ಪಾಜಿ ಅವರನ್ನು ವಿಶ್ವಕರ್ಮ ಜಯಂತಿ ಸಮಿತಿ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿತ್ತು. ಇಂದು ನಡೆದ ಸಭೆಯಲ್ಲಿ ಸಮಿತಿಯ ವಿವಿಧ ಜವಾಬ್ದಾರಿಗಳಿಗೆ 15 ಮಂದಿಯನ್ನು ಆಯ್ಕೆ ಮಾಡಲಾಗಿದೆ. ನಗರದ ವಿವಿಧ ಭಾಗಗಳಿಗೆ ಪ್ರಾತಿನಿಧ್ಯ ನೀಡುವ ಉದ್ದೇಶದಿಂದ ಪ್ರತಿಯೊಂದು ಭಾಗದಿಂದ ಒಬ್ಬರನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ಹೇಳಿದರು.

ಅಮರಶಿಲ್ಪಿ ವೇದಿಕೆ ಅಧ್ಯಕ್ಷರಾದ ಮಹೇಶ್, ಇಲವಾಲ ಭಾಗದಿಂದ ರುದ್ರೇಶ್, ಕುಂಬಾರಕೊಪ್ಪಲಿನಿಂದ ಚಂದ್ರು, ರವಿ ಟೈಲರ್, ಕ್ಯಾತಮಾರನಹಳ್ಳಿ ಭಾಗದಿಂದ ಸ್ವಾಮಿದೇವರು, ಹಲಸಿನಕೆರೆ ಜಯಪುರ ಹೋಬಳಿಯಿಂದ ರಾಜೇಶ್, ವಲ್ಲಾಬಾಯಿ ಪಟೇಲ್ ನಗರದಿಂದ ಶ್ರೀಮತಿ ಲಕ್ಷ್ಮಿ, ಯರಗನಹಳ್ಳಿ ಭಾಗದಿಂದ ಸಿದ್ದಪ್ಪ ಹಾಗೂ ಕೆಂಪರಾಜ್, ಟಿಕೆ ಲೇಔಟ್ ಜನತಾ ನಗರದಿಂದ ಮೀನಮ್ಮ, ಹೆಬ್ಬಾಳು ಭಾಗದಿಂದ ಸರಸ್ವತಿ, ಮಂಚೇಗೌಡನ ಕೊಪ್ಪಲು ಬಾಗದಿಂದ ಜನಾರ್ದನ್, ಶೋಭಾ, ಆಯರಹಳ್ಳಿ ಭಾಗದಿಂದ ಸತೀಶ್ ಅವರನ್ನು ಆಯ್ಕೆ ಮಾಡಲಾಗಿದೆ.

“ಸಮಿತಿಯಲ್ಲಿ ಯಾವುದೇ ಒಂದು ಭಾಗ ಅಥವಾ ಗುಂಪಿಗೆ ಮಾತ್ರ ಆದ್ಯತೆ ನೀಡಿಲ್ಲ. ನಗರದ ಎಲ್ಲ ಭಾಗಗಳಿಗೂ ಪ್ರಾತಿನಿಧ್ಯ ನೀಡುವ ಮೂಲಕ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಆಯ್ಕೆಯಾದ ಎಲ್ಲರೂ ತಮ್ಮ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಿ ವಿಶ್ವಕರ್ಮ ಜಯಂತಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕೈಜೋಡಿಸಲಿದ್ದಾರೆ,” ಎಂದು ಸಿದ್ದಪ್ಪಾಜಿ ತಿಳಿಸಿದರು.

ನಾಳೆಯಿಂದಲೇ ವಿಶ್ವಕರ್ಮ ಜಯಂತಿ ಉತ್ಸವದ ಸಿದ್ಧತಾ ಕಾರ್ಯಚಟುವಟಿಕೆಗಳು ವೇಗ ಪಡೆದುಕೊಳ್ಳಲಿದ್ದು, ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲು ಅಗತ್ಯ ರೂಪುರೇಷೆಗಳನ್ನು ಸಿದ್ಧಪಡಿಸಲಾಗುವುದು ಎಂದು ಅವರು ಹೇಳಿದರು.

್ನಡ #ಕನ್ನಡಸುದ್ದಿಗಳು #ಕನ್ನಡವಾರ್ತೆ protest news news elephant 2025Dasara mysuru wildanimals africawildlife Droupadi Murmu Heritage MysuruUpdates ₹IndiaNews Royal karnataka waild elephant waild Umesha Bhatta Chandan Avinash N Damnalli Dr Yathindra Chamaraja ಕರ್ನಾಟಕ ₹ProudMoment PositiveVibes
BusLife
TrendingNews
Kannadiga Mysuru #ಚಿಣ್ಣರಮೇಳ_2026 #ರಂಗಾಯಣ #ಮೈಸೂರು #ಕನ್ನಡಸುದ್ದಿಗಳು #ಕನ್ನಡವಾರ್ತೆ

Address

#402/1, K41/1Devamba Agrahara
Mysore

Opening Hours

Monday 9am - 5pm
6pm - 7pm
Tuesday 9am - 5pm
6pm - 7pm
Wednesday 9am - 5pm
6pm - 7pm
Thursday 9am - 5pm
6pm - 7pm
Friday 9am - 5pm
6pm - 7pm
Saturday 9am - 5pm
6pm - 7pm

Telephone

+919901553520

Alerts

Be the first to know and let us send you an email when Sadhvi posts news and promotions. Your email address will not be used for any other purpose, and you can unsubscribe at any time.

Contact The Business

Send a message to Sadhvi:

Shortcuts

Share

Category